CoolCoder44 commited on
Commit
5dcf281
·
verified ·
1 Parent(s): 93ac9f1

2083e73a0056401afafb19d6776b66246a3a4a8e5685ce7168629da25c3e089c

Browse files
Files changed (50) hide show
  1. eesanje/url_46_28_1.txt +7 -0
  2. eesanje/url_46_28_10.txt +10 -0
  3. eesanje/url_46_28_11.txt +11 -0
  4. eesanje/url_46_28_12.txt +7 -0
  5. eesanje/url_46_28_2.txt +11 -0
  6. eesanje/url_46_28_3.txt +9 -0
  7. eesanje/url_46_28_4.txt +7 -0
  8. eesanje/url_46_28_5.txt +11 -0
  9. eesanje/url_46_28_6.txt +5 -0
  10. eesanje/url_46_28_7.txt +6 -0
  11. eesanje/url_46_28_8.txt +8 -0
  12. eesanje/url_46_28_9.txt +10 -0
  13. eesanje/url_46_290_1.txt +12 -0
  14. eesanje/url_46_290_10.txt +4 -0
  15. eesanje/url_46_290_11.txt +10 -0
  16. eesanje/url_46_290_12.txt +6 -0
  17. eesanje/url_46_290_2.txt +10 -0
  18. eesanje/url_46_290_3.txt +11 -0
  19. eesanje/url_46_290_4.txt +12 -0
  20. eesanje/url_46_290_5.txt +7 -0
  21. eesanje/url_46_290_6.txt +5 -0
  22. eesanje/url_46_290_7.txt +7 -0
  23. eesanje/url_46_290_8.txt +6 -0
  24. eesanje/url_46_290_9.txt +7 -0
  25. eesanje/url_46_291_1.txt +5 -0
  26. eesanje/url_46_291_10.txt +9 -0
  27. eesanje/url_46_291_11.txt +9 -0
  28. eesanje/url_46_291_12.txt +6 -0
  29. eesanje/url_46_291_2.txt +8 -0
  30. eesanje/url_46_291_3.txt +6 -0
  31. eesanje/url_46_291_4.txt +7 -0
  32. eesanje/url_46_291_5.txt +11 -0
  33. eesanje/url_46_291_6.txt +6 -0
  34. eesanje/url_46_291_7.txt +11 -0
  35. eesanje/url_46_291_8.txt +8 -0
  36. eesanje/url_46_291_9.txt +6 -0
  37. eesanje/url_46_292_1.txt +14 -0
  38. eesanje/url_46_292_10.txt +6 -0
  39. eesanje/url_46_292_11.txt +6 -0
  40. eesanje/url_46_292_12.txt +5 -0
  41. eesanje/url_46_292_2.txt +14 -0
  42. eesanje/url_46_292_3.txt +7 -0
  43. eesanje/url_46_292_4.txt +6 -0
  44. eesanje/url_46_292_5.txt +8 -0
  45. eesanje/url_46_292_6.txt +6 -0
  46. eesanje/url_46_292_7.txt +7 -0
  47. eesanje/url_46_292_8.txt +9 -0
  48. eesanje/url_46_292_9.txt +6 -0
  49. eesanje/url_46_293_1.txt +8 -0
  50. eesanje/url_46_293_10.txt +5 -0
eesanje/url_46_28_1.txt ADDED
@@ -0,0 +1,7 @@
 
 
 
 
 
 
 
 
1
+ ರಾಜ್ಯದಲ್ಲಿ ಅರಣ್ಯ ಅಪರಾಧ ಪ್ರಕರಣಗಳಲ್ಲಿ ಭಾರಿ ಏರಿಕೆ
2
+
3
+ ಬೆಂಗಳೂರು,ಸೆ.2-ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಅರಣ್ಯ ಅಪರಾಧ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಅರಣ್ಯ ಇಲಾಖೆಯಲ್ಲಿ ಬರೊಬ್ಬರಿ 5,866 ಪ್ರಕರಣಗಳು ದಾಖಲಾಗಿವೆ. ಮಾತ್ರವಲ್ಲ ಇದುವರೆಗೂ 17 ಸಾವಿರಕ್ಕೂ ಹೆಚ್ಚಿನ ಅರಣ್ಯ ಅಪರಾಧ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿರುವುದು ತಲೆನೋವಾಗಿ ಪರಿಣಮಿಸಿದೆ.
4
+ ಅರಣ್ಯ ಸಂರಕ್ಷಣೆಗೆ ಧಕ್ಕೆ, ವನ್ಯಜೀವಿಗಳಿಗೆ ಹಾನಿ ಮಾಡುವವರ ವಿರುದ್ದ ಕೇಸ್‌‍ ದಾಖಲಿಸಿರುವ ಅರಣ್ಯ ಇಲಾಖೆಯ ಭದ್ರತಾ ಪಡೆಗಳು ನಿರ್ದಾಕ್ಷಿಣ್ಯವಾಗಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುತ್ತ ಬಂದಿದೆ.ಇಲಾಖೆಯಲ್ಲಿ ಇತ್ಯರ್ಥವಾಗದೆ ಬಾಕಿ ಉಳಿದಿರುವ 17 ಸಾವಿರ ಪ್ರಕರಣಗಳಲ್ಲಿ ಅರಣ್ಯ ಭೂಮಿ ಅತಿಕ್ರಮಣ ಪ್ರಕರಣಗಳೇ ಹೆಚ್ಚು ಇರುವುದು ವಿಶೇಷವಾಗಿದೆ.
5
+ ಶ್ರೀಗಂಧ, ಬೀಟೆ, ರಕ್ತ ಚಂದನ ಮರಗಳ ಕಳ್ಳ ಸಾಗಣೆ, ವನ್ಯ ಜೀವಿಗಳಿಗೆ ಸುರಕ್ಷತೆಗೆ ಧಕ್ಕೆಯನ್ನುಂಟು ಮಾಡಿದ ಪ್ರಕರಣಗಳಲ್ಲೂ ಏರಿಕೆ ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
6
+ ರಾಜ್ಯ ದಲ್ಲಿ ಪ್ರತಿವರ್ಷ ಸರಾಸರಿ 4,500ರಿಂದ 5 ಸಾವಿರ ಅರಣ್ಯ ಅಪರಾಧ ಪ್ರಕರಣಗಳು ದಾಖಲಾಗುತ್ತಿದೆ. ಅರಣ್ಯ ಭೂಮಿಯನ್ನು ಅತಿಕ್ರಮಿಸಿದ್ದಕ್ಕೆ ದಾಖಲಿಸಲಾದ ಪ್ರಕರಣಗಳ ಸಂಖ್ಯೆ 44,608 ಆದರೆ, 2,840 ಶ್ರೀಗಂಧ ಕಳ್ಳಸಾಗಣೆ, 63 ರಕ್ತಚಂದನ, 1,544 ಬೀಟೆ ಮರ ತುಂಡು ಕಳ್ಳ ಸಾಗಣೆ ಪ್ರಕರಣಗಳನ್ನು ದಾಖಲಿಸಲಾಗಿದೆ.
7
+ ಪ್ರಸಕ್ತ ಸಾಲಿನ ಪ್ರಕರಣಗಳ ಸಂಖ್ಯೆ:ಅರಣ್ಯ ಭೂಮಿ ಒತ್ತುವರಿ- 1,385ಶ್ರೀಗಂಧ ಕಳ್ಳಸಾಗಣೆ – 237ರಕ್ತಚಂದನ ಕಳ್ಳಸಾಗಣೆ – 07ಬೀಟೆ ಕಳ್ಳಸಾಗಣೆ- 1,326ವನ್ಯಜೀವಿ ಸಂಬಂಧಿತ ಪ್ರಕರಣ-429ಇತರೆ- 2,482ಒಟ್ಟು- 5,866
eesanje/url_46_28_10.txt ADDED
@@ -0,0 +1,10 @@
 
 
 
 
 
 
 
 
 
 
 
1
+ ಕೆಎಸ್‌‍ಆರ್‌ಟಿಸಿಗೆ 16 ರಾಷ್ಟ್ರದ ಮಟ್ಟದ ಪ್ರಶಸ್ತಿಗಳ ಗರಿ
2
+ 16
3
+ ಬೆಂಗಳೂರು, ಆ.31– ದೇಶದಲ್ಲಿ ಉತ್ತಮ ಸಾರಿಗೆ ಸೇವೆಗೆ ಹೆಸರಾಗಿರುವ ಕೆಎಸ್‌‍ಆರ್‌ಟಿಸಿಗೆ ರಾಷ್ಟ್ರ ಮಟ್ಟದ ಎಂಟು ವೀಡಿಯಾ, ಐದು ಎಮ್ಕ್ಯೂಬ್‌, ಎರಡು ಸ್ಕೋಚ್‌ ಆರ್ಡರ್‌ ಆಫ್‌ ಮೆರಿಟ್‌ ಹಾಗೂ ಒಂದು ಸ್ಕೋಚ್‌ ಪ್ರಶಸ್ತಿಗಳು ಲಭಿಸಿವೆ.
4
+ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನೂತನ ತಂತ್ರಜ್ಞಾನ ಉತ್ತಮ ಸೇವೆ ನೀಡುತ್ತಾ ದೇಶದೆಲ್ಲೆಡೆ ಮನೆ ಮಾತಾಗಿದ್ದು, ಒಂದಿಲ್ಲೊಂದು ಸಾಧನೆಯ ಮೂಲಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುತ್ತಲೇ ಬರುತ್ತಿದೆ. ಅದರಂತೆ ಇದೀಗ ರಾಷ್ಟ್ರಮಟ್ಟದ 16 ಪ್ರಶಸ್ತಿಗಳು ಲಭಿಸಿರುವುದು ಹೆಮೆಯ ವಿಷಯ.
5
+ ಪಲ್ಲಕ್ಕಿ ಬ್ರಾಂಡಿಂಗ್‌ಗಾಗಿ ಪ್ರಾಡಕ್ಟ್‌ ಪ್ಲೇಸೆಂಟ್‌ನಲ್ಲಿ ಅತ್ಯುತ್ತಮ ವೀಡಿಯೋ ಕಂಟೆಂಟ್‌ ಪ್ರಶಸ್ತಿ.ಅಶ್ವಮೇಧ ಬ್ರಾಂಡಿಂಗ್‌ಗಾಗಿ ಕಡಿಮೆ ಬಜೆಟ್‌ ಮಾರ್ಕೆಂಟಿಂಗ್‌. ಕ್ಯಾಂಪೇನ್‌(ಆಫ್ಲೈನ್‌) ನಲ್ಲಿ ಅತ್ಯುತ್ತಮ ವೀಡಿಯೋ ಕಂಟೆಂಟ್.
6
+ ಶಕ್ತಿ ಯೋಜನೆಗೆ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಪಾರಂಪರಿಕ ಮಾಧ್ಯಮ ಪ್ರಚಾರಕ್ಕಾಗಿ ಅತ್ಯುತ್ತಮ ವೀಡಿಯೊ ಕಂಟೆಂಟ್.ಅಶ್ವಮೇಧ ಬ್ರಾಂಡಿಂಗ್‌ಗಾಗಿ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಬಹುಮಾಧ್ಯಮ ಪ್ರಚಾರಕ್ಕಾಗಿ ಅತ್ಯುತ್ತಮ ವೀಡಿಯೊ ಕಂಟೆಂಟ್.
7
+ ಪಲ್ಲಕ್ಕಿ ಬ್ರಾಂಡಿಂಗ್‌ಗಾಗಿ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಡಿಜಿಟಲ್‌ ಕ್ಯಾಂಪೇನ್‌ನಲ್ಲಿ ಅತ್ಯುತ್ತಮ ವೀಡಿಯೊ ಕಂಟೆಂಟ್.ಅಂಬಾರಿ ಉತ್ಸವದ ಬ್ರಾಂಡಿಂಗ್‌ಗಾಗಿ ಇನ್ಸ್ಟಾಗ್ರಾಮ್‌ ಕ್ಯಾಂಪೇನ್‌ನಲ್ಲಿ ಅತ್ಯುತ್ತಮ ವೀಡಿಯೊ ಕಂಟೆಂಟ್.
8
+ ಅಶ್ವಮೇಧ ಬ್ರಾಂಡಿಂಗ್‌ಗಾಗಿ ಮೊಬೈಲ್‌ ಮಾರ್ಕೆಂಟಿಂಗ್‌ ಕ್ಯಾಂಪೇನ್‌- ಒಟ್ಟಾರೆ ಅತ್ಯುತ್ತಮ ವೀಡಿಯೊ ಕಂಟೆಂಟ್.ಶ್ರೇಷ್ಠ ವೀಡಿಯೊ ಕಂಟೆಂಟ್‌ ಬ್ರಾಂಡ್ಸ್ ಎಂಟರ್‌ಪ್ರೈಸಸ್‌‍- ಕೆಎಸ್‌‍ಆರ್‌ಟಿಸಿ ಲಭಿಸಿವೆ.
9
+ ಎಮ್ಕ್ಯೂಬ್‌ ಪ್ರಶಸ್ತಿಗಳು:ಬ್ರಾಂಡಿಂಗ್‌ಗಾಗಿ ಶ್ರೇಷ್ಠ ಪಿಆರ್‌ ಕ್ಯಾಂಪೇನ್.ಬ್ರಾಂಡಿಂಗ್‌ಗಾಗಿ ಕಡಿಮೆ ಬಜೆಟ್‌ ಮಾರ್ಕೆಂಟಿಂಗ್‌ ಕ್ಯಾಂಪೇನ್‌ (ಆಫ್ಲೈನ್).ಪ್ರವಾಸ ಮತ್ತು ಪ್ರಯಾಣದ ಶ್ರೇಷ್ಠ ಎಟಿಎಲ್‌ ಕ್ಯಾಂಪೇನ್.ಶಕ್ತಿ ಯೋಜನೆಗಾಗಿ ಶ್ರೇಷ್ಠ ಬ್ರಾಂಡ್‌ ಕಂಟೆಂಟ್.ಬ್ರಾಂಡಿಂಗ್‌ಗಾಗಿ ಶ್ರೇಷ್ಠ ಆನ್‌ಲೈನ್‌ ಪಿಆರ್‌ ಕ್ಯಾಂಪೇನ್‌ ಪ್ರಶಸ್ತಿಗಳು ದೊರೆತಿವೆ.
10
+ ನಿಗಮವು ಸಾರಿಗೆ ಸಂಜೀವಿನಿ- ನೌಕರರ ಹೃದಯ ರೋಗ ತಪಾಸಣೆಗಾಗಿ ಮತ್ತು ರಸ್ತೆ ಸುರಕ್ಷತೆ ಉಪಕ್ರಮಗಳಿಗಾಗಿ 2 ಸ್ಕೋಚ್‌ ಆರ್ಡರ್‌ ಆಫ್‌ ಮೆರಿಟ್‌ ಪ್ರಶಸ್ತಿಗಳು ಮತ್ತು ಒಂದು ಸ್ಕೋಚ್‌ ಪ್ರಶಸ್ತಿಯನ್ನು ಪಡೆದಿದೆ. ವೀಡಿಯೊ ಪ್ರಶಸ್ತಿ ಮತ್ತು ಎಮ್ಕ್ಯೂಬ್‌ ಪ್ರಶಸ್ತಿಗಳನ್ನು ಗುರುಗಾಂವ್‌ನಲ್ಲಿ ಪ್ರಧಾನ ಮಾಡಲಾಯಿತು. ಸ್ಕೋಚ್‌ ಆರ್ಡರ್‌ ಆಫ್‌ ಮೆರಿಟ್‌ ಪ್ರಶಸ್ತಿಗಳನ್ನು ಆನ್‌ಲೈನ್‌ನಲ್ಲಿ ನೀ��ಲಾಯಿತು. ಇನ್ನು ಸ್ಕೋಚ್‌ ಪ್ರಶಸ್ತಿ ಸಮಾರಂಭವು ಸೆ. 21ರಂದು ನವದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
eesanje/url_46_28_11.txt ADDED
@@ -0,0 +1,11 @@
 
 
 
 
 
 
 
 
 
 
 
 
1
+ ಅಕ್ಕ ಸಮ್ಮೇಳನ : ಅಮೆರಿಕದಲ್ಲಿ ಮೊಳಗಿದ ಕನ್ನಡ ಕಹಳೆ
2
+
3
+ ಬೆಂಗಳೂರು,ಆ.31-ಅಮೆರಿಕದ ಕನ್ನಡ ಕೂಟಗಳ ಆಗರ (ಅಕ್ಕ) ನಡೆಸುವ 12ನೇ ವಿಶ್ವ ಕನ್ನಡ ಸಮೇಳನ ಅಮೆರಿಕದ ವರ್ಜಿನಿಯಾ ರಾಜ್ಯದ ಗ್ರೇಟರ್‌ ರಿಚಂಡ್‌ ಕನ್ವೆನ್ಷನ್ ಸೆಂಟರ್‌ನಲ್ಲಿ ಇಂದು ಅದ್ಧೂರಿಯಾಗಿ ಆರಂಭಗೊಂಡಿದೆ.
4
+ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರು ಒಗ್ಗೂಡಿ ನಡೆಸುತ್ತಿರುವ ಈ ವಿಶ್ವ ಕನ್ನಡ ಸಮೇಳನಕ್ಕೆ ಅತ್ಯಂತ ಉತ್ಸಾಹ ಕಂಡುಬಂದಿದ್ದು, ಕನ್ನಡ ನಾಡಿನ ಹಿರಿಮೆ, ಗರಿಮೆ, ಸಾಹಿತ್ಯ, ಸಂಗೀತದ ಮತ್ತು ಸಂಸ್ಕೃತಿ ಅನಾವರಣಗೊಂಡಿದೆ.
5
+ ಎಲ್ಲೆಡೆ ಕನ್ನಡ ಬಾವುಟ ರಾರಾಜಿಸುತ್ತಿದ್ದು, ಉದ್ಘಾಟನೆಗೆ ಮುನ್ನ ನಡೆದ ಮೆರವಣಿಗೆಯಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ನೂರಾರು ಮಂದಿ ಕನ್ನಡಿಗರು ಭಾಗವಹಿಸಿದ್ದು ಎಲ್ಲರನ್ನೂ ಚಕಿತಗೊಳಿಸಿತು.
6
+ ಮಾಯಾನಗರಿ ಎಂದೇ ಬಿಂಬಿತವಾಗಿರುವ ವಿಶ್ವದ ಶ್ರೀಮಂತ ರಾಷ್ಟ್ರ ಅಮೆರಿಕದಲ್ಲಿ ನಡೆಯುತ್ತಿರುವ ಮೂರು ದಿನಗಳ ಈ ಕನ್ನಡ ಸಮೇಳನಕ್ಕೆ ರಾಜ್ಯದಿಂದಲೂ ಕಲಾವಿದರು, ಸಾಹಿತಿಗಳು, ಜನಪ್ರತಿನಿಧಿಗಳು ತೆರಳಲಿದ್ದಾರೆ.
7
+ ಸಭಾಪತಿ ಬಸವರಾಜ ಹೊರಟ್ಟಿ, ಕೃಷಿ ಸಚಿವ ಚೆಲುವರಾಯಸ್ವಾಮಿ, ಮಾಜಿ ಸಚಿವ ಆಂಜನೇಯ ಸೇರಿದಂತೆ ಹಲವು ಗಣ್ಯರು ಅಮೆರಿಕಕ್ಕೆ ಆಗಮಿಸಿದ್ದಾರೆ. ನಾವು ಅಮೆರಿಕದಲ್ಲಿ ನೆಲೆಸಿದ್ದರೂ ನಮ ತಾಯ್ನಾಡಿನ ಬೇರು ಮರೆಯುವಂತಿಲ್ಲ. ನಾವು ಹುಟ್ಟಿದ ಸ್ಥಳವನ್ನು ಸದಾ ನೆನೆದು ಕರ್ಮಭೂಮಿಯಾದ ಭಾರತದ ಬಗ್ಗೆ ನಮಗೆ ಅಪಾರ ಗೌರವವಿದೆ.
8
+ ಇಂದು ವಿಶ್ವದಲ್ಲಿ ಅತಿ ಎತ್ತರಕ್ಕೆ ಬೆಳೆಯುತ್ತಿರುವ ಭಾರತದ ಬಗ್ಗೆ ನಮಗೆ ಅತೀವ ಹೆಮೆಯಿದೆ. ನಮ ಕನ್ನಡ ಭಾಷೆಯನ್ನು ಅಮೆರಿಕದಲ್ಲಿ ಪಸರಿಸುವಂತಹ ಜವಾಬ್ದಾರಿ ನನ್ನ ಮೇಲಿದೆ. ಇದನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ ಎಂಬ ವಿಶ್ವಾಸವಿದೆ ಎಂದು ರವಿ ಬೋರೇಗೌಡ ಹೇಳಿದರು.
9
+ ಇದೇ ವೇಳೆ ಅಕ್ಕ ಸಂಸ್ಥಾಪಕ ಅಧ್ಯಕ್ಷ ಡಾ.ಅಮರನಾಥ್‌ ಗೌಡ, ಖ್ಯಾತ ಉದ್ಯಮಿ ವಿಶ್ವಾಮಿತ್ರ ಸೇರಿದಂತೆ ಹಲವು ಕನ್ನಡಿಗರು ನಾಲ್ಕು ವರ್ಷದ ಬಳಿಕ ಮತ್ತೆ ಅಮೆರಿಕದಲ್ಲಿ ಅಕ್ಕ ವಿಶ್ವ ಕನ್ನಡ ಸಮೇಳನ ನಡೆಯುತ್ತಿದೆ. ಅಚ್ಚುಕಟ್ಟಾಗಿ ಎಲ್ಲರೂ ಒಂದಾಗಿ ನಮ ಕನ್ನಡದ ಸಿರಿಯನ್ನು ಎಲ್ಲೆಡೆ ಹರಡುತ್ತಿದ್ದೇವೆ.
10
+ ಸುಮಾರು 5 ಸಾವಿರಕ್ಕೂ ಹೆಚ್ಚು ಕನ್ನಡಿಗರು ಅಮೆರಿಕದ ವಿವಿಧ ರಾಜ್ಯಗಳಿಂದ ರಿಚಂಡ್‌ಟೌನ್‌ಗೆ ಬಂದಿದ್ದಾರೆ. ಇಲ್ಲಿನ ಸರ್ಕಾರ ಕೂಡ ನಮಗೆ ಸ್ಪಂದಿಸಿದೆ. ನಮ ಸಂಸ್ಕೃತಿಯಲ್ಲಿ ಅವರೂ ಕೂಡ ಬೆರೆತಿದ್ದಾರೆ.ಕರ್ನಾಟಕ ಸರ್ಕಾರ ಕೂಡ ಸಹಕಾರ ನೀಡುತ್ತಿದ್ದು, ಉದ್ಘಾಟನೆ ನೆರವೇರಿದ್ದು, ಇನ್ನೂ ಹಲವಾರು ಕಾರ್ಯ ಕ್ರಮಗಳು ನಡೆಯುತ್ತಿದ್ದು, ಸುಸೂತ್ರವಾಗಿ ನಡೆಯಲು ಎಲ್ಲಾ ಸಿದ್ಧತೆಗಳು ನಡೆದಿವೆ ಎಂದು ತಿಳಿಸಿದರು.
11
+ ರಾಷ್ಟ್ರಕವಿ ಕುವೆಂಪು ಅವರ ಬಾರಿಸು ಕನ್ನಡ ಡಿಂ ಡಿಂ ಡಮವ ಹಾಡಿನ ಜೊತೆಗೆ ಎಲ್ಲಾದರೂ ಇರು, ಎಂತಾದರೂ ಇರು, ನೀ ಕನ್ನಡವಾಗಿರು ಸೇರಿದಂತೆ ಹಲವಾರು ಕನ್ನಡ ಗೀತೆಗಳನ್ನು ಹಾಡುವ ಮೂಲಕ ಕಲಾವಿದರು ಅಮೆರಿಕದ ರಿಚಂಡ್‌ಟೌನ್‌ನಲ್ಲಿ ಕನ್ನಡದ ವಾತಾವರಣವನ್ನು ಮೂಡಿಸಿದ್ದಾರೆ. ವಿದ್ಯಾಭೂಷಣ್‌ ಅವರ ಗೀತಗಾಯನ, ಗುರುಕಿರಣ್‌ ಅವರ ಪುನೀತ್‌ ನೈಟ್‌್ಸ ಸೇರಿದಂತೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು.
eesanje/url_46_28_12.txt ADDED
@@ -0,0 +1,7 @@
 
 
 
 
 
 
 
 
1
+ ತಿಂಗಳೊಳಗೆ ದರ್ಶನ್‌ ರಾಜಾತಿಥ್ಯ ಪ್ರಕರಣದ ತನಿಖೆ ಪೂರ್ಣಗೊಳಿಸಲು ಸೂಚನೆ
2
+
3
+ ಬೆಂಗಳೂರು,ಆ.31-ನಟ ದರ್ಶನ್‌ ಹಾಗೂ ಕುಖ್ಯಾತ ರೌಡಿಗಳಿಗೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ರಾಜಾತಿಥ್ಯ ನೀಡಿದ ಬಗ್ಗೆ ದಾಖಲಾಗಿರುವ ಮೂರು ಪ್ರಕರಣಗಳ ತನಿಖೆಯನ್ನು ಒಂದು ತಿಂಗಳೊಳಗೆ ಮುಗಿಸಬೇಕೆಂದು ತಂಡಗಳಿಗೆ ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ಆದೇಶಿಸಿದ್ದಾರೆ.
4
+ ಈ ಹಿನ್ನೆಲೆಯಲ್ಲಿ ಮೂರು ತನಿಖಾ ತಂಡಗಳೂ ತನಿಖೆಯನ್ನು ಚುರುಕುಗೊಳಿಸಿದ್ದು, ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ, ಹೇಳಿಕೆ ಪಡೆದುಕೊಳ್ಳುತ್ತಿವೆ.
5
+ ನಟ ದರ್ಶನ್‌ ಹಾಗೂ ಕುಖ್ಯಾತ ರೌಡಿಗಳಿಗೆ ಯಾವ ಯಾವ ರೀತಿಯ ಸೌಲಭ್ಯಗಳನ್ನು ನೀಡುತ್ತಿದ್ದೀರಾ, ಎಷ್ಟು ದಿನಗಳಿಂದ ಈ ಎಲ್ಲಾ ಸವಲತ್ತುಗಳನ್ನು ಕೊಟ್ಟಿದ್ದೀರಾ, ಬೇರೆ ಖೈದಿ, ವಿಚಾರಣಾ ಖೈದಿಗಳಿಗೂ ಈ ರೀತಿಯ ಸೌಲಭ್ಯಗಳನ್ನು ನೀಡಿದ್ದೀರಾ? ಎಂಬೆಲ್ಲಾ ಬಗ್ಗೆ ಮೂರು ತನಿಖಾ ತಂಡಗಳು ಅಲ್ಲಿನ ಸಿಬ್ಬಂದಿಗಳು, ಹಿರಿಯ ಅಧಿಕಾರಿಗಳಿಂದ ಮಾಹಿತಿಯನ್ನು ಸಂಗ್ರಹಿಸುತ್ತಿವೆ.
6
+ ನಟ ದರ್ಶನ್‌ ಹಾಗೂ ರೌಡಿಗಳಿಗೆ ರಾಜಾತಿಥ್ಯ ನೀಡುತ್ತಿದ್ದ ಫೋಟೊಗಳು ವೈರಲ್‌ ಆಗುತ್ತಿದ್ದಂತೆ ಪರಪ್ಪನ ಅಗ್ರಹಾರ ಪೊಲೀಸ್‌‍ ಠಾಣೆಯಲ್ಲಿ ಒಟ್ಟು ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
7
+ ಜೈಲಧಿಕಾರಿಗಳು ಕರ್ತವ್ಯಲೋಪ ಎಸಗಿರುವ ಬಗ್ಗೆ ಎಲೆಕ್ಟ್ರಾನ್‌ ಸಿಟಿ ಉಪವಿಭಾಗದ ಎಸಿಪಿಯವರು, ಉಳಿದ ಎರಡು ಪ್ರಕರಣಗಳನ್ನು ಪರಪ್ಪನ ಅಗ್ರಹಾರ ಹಾಗೂ ಬಂಡೆಪಾಳ್ಯ ಠಾಣೆಯ ಇನ್‌್ಸಪೆಕ್ಟರ್‌ಗಳು ತನಿಖೆ ನಡೆಸುತ್ತಿದ್ದಾರೆ.
eesanje/url_46_28_2.txt ADDED
@@ -0,0 +1,11 @@
 
 
 
 
 
 
 
 
 
 
 
 
1
+ ಉತ್ತರ ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ, ಕೆಲವು ಗ್ರಾಮಗಳಿಗೆ ಜಲದಿಗ್ಬಂಧನ
2
+ ಯಾದಗಿರಿ/ಬೆಳಗಾವಿ,ಸೆ.2-ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೆ ವರುಣನ ಆರ್ಭಟ ಜೋರಾಗಿದ್ದು, ಭಾರಿ ಮಳೆಗೆ ಜಿಲ್ಲೆಯ ಗುರುಮಟ್ಕಲ್‌ ತಾಲ್ಲೂಕಿನ ನಂದೆಪಲ್ಲಿ ಸೇತುವೆ ಸಂಪೂರ್ಣವಾಗಿ ಜಲಾವೃತಗೊಂಡಿದೆ.
3
+ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ವರುಣನ ಆರ್ಭಟ ಜೋರಾಗಿದ್ದು, ತೆಲಂಗಾಣಕ್ಕೆ ಸಂಪರ್ಕ ಕಲ್ಪಿಸುವ ನಂದೆಪಲ್ಲಿ ಸೇತುವೆ ಮುಳುಗಡೆಯಾಗಿದ್ದು, ಸಂಚಾರ ಸಂಪರ್ಕ ಕಡಿತಗೊಂಡು ಸಾರ್ವಜನಿಕರು ಪರದಾಡುವಂತಾಗಿದೆ.
4
+ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಮೋಟನಹಳ್ಳಿ ಗ್ರಾಮದಲ್ಲಿ ಸುಮಾರು 15ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ರಾತ್ರಿಯಿಡೀ ಜಾಗರಣೆ ಮಾಡುವಂತಾಗಿದೆ.
5
+ ಅದೇ ರೀತಿ ಹುಬ್ಬಳ್ಳಿಯಲ್ಲೂ ಭಾರಿ ಮಳೆಯಾಗುತ್ತಿದ್ದು, ಕಮಲಾವತಿ ನದಿ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಕೆಲವು ಗ್ರಾಮಗಳು ಜಲದಿಗ್ಬಂಧನವಾಗಿವೆ. ಕಲಬುರಗಿ ಜಿಲ್ಲೆಯ ಚಿಂಚೋಳಿಯ ಬೆನಕನಹಳ್ಳಿ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ತೆಲಂಗಾಣಕ್ಕೆ ಸಂಪರ್ಕ ಕಲ್ಪಿಸುವ ಮಿರಿಯಾಣ ಸೇತುವೆ ಮುಳುಗಡೆಯಾಗಿದೆ.
6
+ ಕಳೆದ ಕೆಲವು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಮೂರ್ನಾಲ್ಕು ದಿನಗಳಿಂದ ಅಬ್ಬರಿಸುತ್ತಿದ್ದು, ಅಕ್ಷರಸಹ ಜನರು ಪರದಾಡುವಂತಾಗಿದೆ. ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ನಾಶವಾಗಿವೆ.
7
+ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್‌, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಹಲವು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.
8
+ ಮಲಪ್ರಭಾ, ಘಟಪ್ರಭಾ ನದಿ ಮತ್ತೆ ಉಕ್ಕಿ ಹರಿಯತೊಡಗಿದೆ. ಕಾಗಿಣ ನದಿ ಪ್ರವಾಹದಿಂದ ಸೇಡಂ ತಾಲ್ಲೂಕಿನ ಹಳೆಯ ಸೇತುವೆ ಮುಳುಗಡೆಯಾಗಿದೆ. ಉತ್ತರ ಕರ್ನಾಟಕ ಭಾಗದ ಹಲವು ಜಲಾಶಯಗಳು ಭರ್ತಿಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅಪಾರ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದ್ದು, ನದಿಪಾತ್ರದ ಜನ ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಲಾಗಿದೆ.
9
+ ಕಾಳಗಿಯ ಐತಿಹಾಸಿಕ ನೀಲಕಂಠ ಕಾಳೇಶ್ವರ ದೇವಸ್ಥಾನ, ಮುಳಕೇಡದ ಉತ್ತರಾದಿಮಠ, ಜಯತೀರ್ಥ ಮೂಲ ವೃಂದಾವನ, ಸಂಗಮೇಶ್ವರ ದೇವಾಲಯ ಜಲಾವೃತಗೊಂಡಿವೆ.
10
+ ಕಲಬುರಗಿಯ ಕಿರು ಮೃಗಾಲಯಕ್ಕೆ ನೀರು ನುಗ್ಗಿ ಮೃಗಾಲಯದಲ್ಲಿರುವ ಪ್ರಾಣಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಕೊಪ್ಪಳದಲ್ಲೂ ಭಾರಿ ಮಳೆಯಾಗಿದೆ. ಅಬ್ಬರದ ಮಳೆ-ಗಾಳಿಗೆ ಹತ್ತಾರು ಮನೆಗಳಿಗೆ ಹಾನಿಯಾಗಿದೆ. ಬೆಳಗಾವಿ, ಗದಗ ಜಿಲ್ಲೆಯಲ್ಲೂ ಕೂಡ ಮಳೆ ಹೆಚ್ಚಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
11
+ ಒಟ್ಟಾರೆ ಹಲವು ದಿನಗಳಿಂದ ಬಿಡುವು ಕೊಟ್ಟಿದ್ದ ವರುಣ ಕಳೆದೆರಡು ದಿನಗಳಿಂದ ಮತ್ತೆ ಅಬ್ಬರಿಸತೊಡಗಿದ್ದು, ಉತ್ತರ ಕರ್ನಾಟಕದ ಜನ ತತ್ತರಿಸತೊಡಗಿದ್ದಾರೆ.
eesanje/url_46_28_3.txt ADDED
@@ -0,0 +1,9 @@
 
 
 
 
 
 
 
 
 
 
1
+ ಬಿಜೆಪಿ ವಿರುದ್ಧ ಹೋರಾಟ ತೀವ್ರಗೊಳಿಸಲು ಸಿಎಂ ಸಿದ್ದರಾಮಯ್ಯ ಕರೆ
2
+
3
+ ಬೆಂಗಳೂರು,ಸೆ.1-ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣಗಳನ್ನು ಸಮರ್ಥವಾಗಿ ಜನರ ಮುಂದಿಡುವ ಮೂಲಕ ಕಾನೂನಾತಕ ಹಾಗೂ ರಾಜಕೀಯ ಹೋರಾಟಗಳನ್ನು ಮುಂದುವರೆಸಲು ಆಯಾ ಜಿಲ್ಲೆಗಳಲ್ಲಿ ಜನಜಾಗೃತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
4
+ ನಿನ್ನೆ ತಮ ನಿವಾಸದಲ್ಲಿ ಸಂಪುಟದ ಸಚಿವರೊಂದಿಗೆ ಔತಣಕೂಟ ನಡೆಸಿದ ಸಿದ್ದರಾಮಯ್ಯ, ಮುಡಾ ಪ್ರಕರಣದಲ್ಲಿನ ವಾಸ್ತವಾಂಶಗಳನ್ನು ಮತ್ತೊಮೆ ಸಂಪುಟದ ಸದಸ್ಯರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಇದರಲ್ಲಿ ತಮದು ಯಾವುದೇ ಪಾತ್ರವಿಲ್ಲ ಎಂದು ಪುನರುಚ್ಚರಿಸಿದ್ದಾರೆ.
5
+ ಮುಡಾದಿಂದ 14 ನಿವೇಶನಗಳನ್ನು ಪಡೆಯಲು ತಾವು ಯಾವುದೇ ಪ್ರಭಾವ ಬಳಕೆ ಮಾಡಿಲ್ಲ. ಜಮೀನಿಗೆ ಪರ್ಯಾಯವಾಗಿ ಭೂಮಿ ನೀಡಲಾಗಿದೆ. ಬಿಜೆಪಿಯವರು ಇದನ್ನು ದುರುದ್ದೇಶಪೂರಿತವಾಗಿ ಹಗರಣ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.
6
+ ಬಿಜೆಪಿ ಅವಧಿಯಲ್ಲಿನ ಲೆಕ್ಕಾಚಾರಗಳನ್ನು ಬಯಲಿಗೆಳೆಯಲು ಹೈಕಮಾಂಡ್ ಸೂಚನೆ ನೀಡಿದೆ. ಅದೇ ಸಂದರ್ಭದಲ್ಲಿ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ನಡೆಸುತ್ತಿರುವ ಹುನ್ನಾರಗಳ ವಿರುದ್ಧವೂ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಆಪರೇಷನ್ ಕಮಲದ ವಿಚಾರವಾಗಿ ಎಚ್ಚರಿಕೆ ವಹಿಸಬೇಕು.
7
+ ಸಚಿವರುಗಳು ತಮ ಜಿಲ್ಲಾ ಸಚಿವರ ಜೊತೆಗೆ ಸೌಹಾರ್ದಯುತ ಸಂಪರ್ಕವನ್ನು ರೂಢಿಸಿಕೊಳ್ಳ ಬೇಕು. ಬಿಜೆಪಿ ಕೋಟ್ಯಂತರ ರೂಪಾಯಿ ಹಣದ ಆಮಿಷ ತೋರಿಸಿ ಶಾಸಕರನ್ನು ಸೆಳೆಯುವ ಯತ್ನ ನಡೆಸುತ್ತಿದೆ.ಇದಕ್ಕೆ ಅವಕಾಶ ನೀಡದಂತೆ ಪದೇಪದೇ ಪಕ್ಷದ ಶಾಸಕರ ಜೊತೆ ಸಭೆ ನಡೆಸುವುದು, ಸಮಾಲೋಚನೆಗಳನ್ನು ಮುಂದುವರೆಸುವಂತೆ ತಾಕೀತು ಮಾಡಿದ್ದಾರೆ.
8
+ ಮಹಾತ ಗಾಂಧೀಜಿ ಎಐಸಿಸಿ ಅಧ್ಯಕ್ಷರಾಗಿ ಬೆಳಗಾವಿಯಲ್ಲಿ ಮಹಾ ಅಧಿವೇಶನ ನಡೆಸಿ 100 ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಶತಮಾನೋತ್ಸವ ಆಚರಣೆಗೆ ತಯಾರಿ ನಡೆದಿದ್ದು, ಈ ಕಾರ್ಯಕ್ರಮದ ಉಸ್ತುವಾರಿಯನ್ನು 15 ಸಚಿವರು ವಹಿಸಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
9
+ ಈ ಮೂಲಕ ಪಕ್ಷದ ಸಂಘಟನೆಗೂ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಬಿಬಿಎಂಪಿ ಸೇರಿದಂತೆ ನಗರ , ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ, ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ತಯಾರಿ ನಡೆಸುವಂತೆಯೂ ಹೈಕಮಾಂಡ್ ಸೂಚನೆ ನೀಡಿದೆ.ಸಭೆಯಲ್ಲಿ ಆಯ್ದ ಸಚಿವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
eesanje/url_46_28_4.txt ADDED
@@ -0,0 +1,7 @@
 
 
 
 
 
 
 
 
1
+ ಮುಡಾ ಹಗರಣಕ್ಕೆ ದಿನಕ್ಕೊಂದು ಟ್ವಿಸ್ಟ್, ಹಿಂದಿನ ಆಯುಕ್ತರ ವಿರುದ್ಧ `ಲೋಕಾ’ಗೆ ದೂರು
2
+ :
3
+ ಮೈಸೂರು,ಸೆ.1-ಮುಡಾ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಮುಡಾ ಆಯುಕ್ತರಾಗಿದ್ದ ಇಬ್ಬರ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.ಕೆಎಎಸ್ ಅಧಿಕಾರಿಗಳಾದ ನಟೇಶ್, ದಿನೇಶ್ ಕುಮಾರ್ ಅವರ ವಿರುದ್ಧ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.ಈ ಇಬ್ಬರೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಕೂಡಲೇ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಬಂಧಿಸಬೇಕು.
4
+ ಇದಲ್ಲದೆ ಭೂಸ್ವಾಧೀನ ಅಧಿಕಾರಿಗಳು, ಸರ್ಕಾರದ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ ಅಧಿಕಾರಿಗಳಿಂದಲೇ ಹಣ ವಸೂಲಿ ಮಾಡಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
5
+ ಅಕ್ರಮವಾಗಿ 50:50 ಅನುಪಾತದಲ್ಲಿ ಸರಿ ಸುಮಾರು 5.00 ಲಕ್ಷ ಚ.ಅ. ಗೂ ಹೆಚ್ಚಿನ ನಿವೇಶನಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿರುವುದು ಕಂಡುಬಂದ ಹಿನ್ನಲೆಯಲ್ಲಿ ಅಂತಹ ಆದೇಶಗಳನ್ನು ರದ್ದುಗೊಳಿಬೇಕು.
6
+ ಈ ಹಿಂದಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ, ಕೆಎಎಸ್ ಅಧಿಕಾರಿ ದಿನೇಶ್ ಕುಮಾರ್ ಜಿ.ಟಿರವರ ವಿರುದ್ಧ ಮತ್ತು ಇಂತಹ ಪ್ರಕರಣಗಳಲ್ಲಿ ಭಾಗಿಯಾದಂತಹ ಇತರೆ ಅಧಿಕಾರಿ ವರ್ಗದವರ ಮೇಲೆ ಸೂಕ್ತ ತನಿಖೆ ನಡೆಸಿ ಸರಿಯಾದ ಶಿಸ್ತು ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಮಾನ್ಯ ಪ್ರಧಾನ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ ಇವರಿಗೆ ಸೂಕ್ತ ದಾಖಲೆಗಳೊಂದಿಗೆ ಪತ್ರ ಬರೆದಿದ್ದರೂ ಸಹ ಈ ತನಕ ಇವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
7
+ ಅಕ್ರಮಗಳಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 5,000 ಕೋಟಿಗಳಷ್ಟು ನಷ್ಟ ಉಂಟಾಗಿದೆ.ಈ ಕೂಡಲೇ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿ ವರ್ಗದವರನ್ನು ಬಂಧಿಸಿ ಸರ್ಕಾರಕ್ಕೆ ಆಗಿರುವ ನಷ್ಟವನ್ನು ಸದರಿ ಅಧಿಕಾರಿಗಳಿಂದಲೇ ಭರಿಸುವಂತೆ ಸೂಕ್ತ ಆದೇಶ ಹೊರಡಿಸಬೇಕೆಂದು ಮನವಿ ಮಾಡಿದ್ದಾರೆ.
eesanje/url_46_28_5.txt ADDED
@@ -0,0 +1,11 @@
 
 
 
 
 
 
 
 
 
 
 
 
1
+ ಕ್ರಸ್ಟ್ ಗೇಟ್ ತುಂಡಾಗಿ ಖಾಲಿಯಾಗಿದ್ದ ತುಂಗಭದ್ರಾ ಜಲಾಶಯ ಮತ್ತೆ ಭಾರ್ತಿ
2
+ 92tmcft
3
+ ಬೆಂಗಳೂರು,ಸೆ.1-ಕ್ರಸ್ಟ್ ಗೇಟ್ವೊಂದರ ಚೈನ್ ಲಿಂಕ್ ತುಂಡಾಗಿ ಆತಂಕ ಉಂಟು ಮಾಡಿದ್ದ ತುಂಗಭದ್ರಾ ಜಲಾಶಯ ಮತ್ತೆ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವ ಆಶಾಭಾವನೆ ಮೂಡಿಸಿದೆ. ಜಲಾನಯನ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ ಶೇ.92ರಷ್ಟು ನೀರು ಹರಿದುಬಂದಿದೆ.
4
+ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, 105.79 ಟಿಎಂಸಿ ಅಡಿ ಗರಿಷ್ಠ ಸಾಮರ್ಥ್ಯವಿರುವ ಈ ಜಲಾಶಯದಲ್ಲಿ ಇಂದು 96.84 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. 40 ಸಾವಿರ ಕ್ಯೂಸೆಕ್ಗೂ ಹೆಚ್ಚಿನ ಒಳಹರಿವಿದ್ದು, 13 ಸಾವಿರ ಕ್ಯೂಸೆಕ್ಗೂ ಹೆಚ್ಚಿನ ಹೊರಹರಿವಿದೆ. ಶೇ.92ರಷ್ಟು ಭರ್ತಿಯಾಗಿದೆ.
5
+ 1633 ಅಡಿ ಎತ್ತರದ ಈ ಜಲಾಶಯದಲ್ಲಿ ಈಗಾಗಲೇ 1630.73 ಅಡಿಯಷ್ಟು ನೀರು ಸಂಗ್ರಹವಾಗಿದ್ದು, ಒಳಹರಿವು ಸಾಕಷ್ಟು ಪ್ರಮಾಣದಲ್ಲಿದೆ. ಹೀಗಾಗಿ ಜಲಾಶಯ ಭರ್ತಿಯಾಗುವುದು ಬಹುತೇಕ ಖಚಿತವಾಗಿದೆ.ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವ ಮುನ್ಸೂಚನೆಯನ್ನು ತುಂಗಭದ್ರಾ ಮಂಡಳಿ ನೀಡಿದ್ದು, ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಸೂಚನೆ ರವಾನಿಸಿದೆ.
6
+ ಜಲಾಶಯದ 19ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಮುರಿದು ಸುಮಾರು 35 ಸಾವಿರ ಟಿಎಂಸಿಗೂ ಅಧಿಕ ನೀರು ಹರಿದುಹೋಗಿತ್ತು. ಮತ್ತೆ ಜಲಾಶಯ ಭರ್ತಿಯಾಗುತ್ತೋ ಇಲ್ಲವೋ ಎಂಬ ಆತಂಕ ಮನೆ ಮಾಡಿತ್ತು.ಸರ್ಕಾರ ಮುರಿದು ಹೋಗಿದ್ದ ಗೇಟ್ ಅನ್ನು ಬದಲಿಸಿ ತುರ್ತಾಗಿ ಹೊಸ ಗೇಟ್ ಅಳವಡಿಸಿದ್ದರಿಂದ ಜಲಾಶಯದಲ್ಲಿ ನೀರಿನ ಸಂಗ್ರಹ ಗಣನೀಯವಾಗಿ ಏರಿಕೆಯಾಗುತ್ತಾ ಬಂದಿದೆ.
7
+ ರಾಜ್ಯದ ಪ್ರಮುಖ 14 ಜಲಾಶಯಗಳ ಗರಿಷ್ಠ ನೀರಿನ ಪ್ರಮಾಣ 895.62 ಟಿಎಂಸಿ ಆಗಿದ್ದು, ಇದುವರೆಗೂ 831.95 ಟಿಎಂಸಿ ಸಂಗ್ರಹವಾಗಿದೆ. ಕಾವೇರಿ ಜಲಾನಯನ ಭಾಗದ ಹಾರಂಗಿ, ಹೇಮಾವತಿ, ಕಬಿನಿ ಹಾಗೂ ಕೆಆರ್ಎಸ್ ಜಲಾಶಯಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿವೆ.
8
+ ಅದೇ ರೀತಿ ಕೃಷ್ಣಾ ಕೊಳ್ಳದ ಭದ್ರಾ, ಘಟಪ್ರಭ, ಮಲಪ್ರಭ, ಆಲಮಟ್ಟಿ, ನಾರಾಯಣಪುರ ಜಲಾಶಯಗಳು ಈಗಾಗಲೇ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿವೆ. ತುಂಗಭದ್ರ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿತ್ತು. ಆದರೆ ಗೇಟ್ ಚೈನ್ಲಿಂಕ್ ಕಟ್ಟಾದ ಪರಿಣಾಮ ನೀರು ಪೋಲಾಗಿತ್ತು. ಈಗ ಮತ್ತೆ ಜಲಾಶಯದಲ್ಲಿ ನೀರು ಸಂಗ್ರಹವಾಗಿರುವುದರಿಂದ ನದಿಪಾತ್ರದ ಜನರಲ್ಲಿ ಸಂತಸ ಉಂಟಾಗಿದೆ.
9
+ ವಾಣಿವಿಲಾಸ ಸಾಗರದ ಜಲಾಶಯದಲ್ಲಿ ಶೇ.70ರಷ್ಟು ಮಾತ್ರ ನೀರು ಸಂಗ್ರಹವಾಗಿದೆ. ಗರಿಷ್ಠ 30.42 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯವಿರುವ ಈ ಜಲಾಶಯದಲ್ಲಿ ಇದುವರೆಗೂ 21.22 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಾಗಿದೆ. ಒಳ ಹರಿವು 693 ಕ್ಯೂಸೆಕ್ನಷ್ಟಿದ್ದು, ಹೊಳಹರಿವು 135 ಕ್ಯೂಸೆಕ್‌್ಸನಷ್ಟಿದೆ.
10
+ ಜಲ ವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ ಹಾಗೂ ಸೂಪಾ ಜಲಾಶಯಗಳು ಕೂಡ ಭರ್ತ���ಯಾಗುವ ಹಂತದಲ್ಲಿವೆ. ಲಿಂಗನಮಕ್ಕಿ ಜಲಾಶಯಕ್ಕೆ 151.75 ಟಿಎಂಸಿ ಗರಿಷ್ಠ ಸಂಗ್ರಹ ಸಾಮರ್ಥ್ಯವಿದ್ದು, ಈಗಾಗಲೇ 146.75 ಟಿಎಂಸಿ ನೀರಿದೆ.17 ಸಾವಿರ ಕ್ಯೂಸೆಕ್ಗೂ ಹೆಚ್ಚು ಕ್ಯೂಸೆಕ್ ನೀರಿನ ಒಳಹರಿವಿದ್ದು, 12 ಸಾವಿರಕ್ಕೂ ಹೆಚ್ಚು ಹೊರಹರಿವಿದೆ. ಶೇ. 97ರಷ್ಟು ಈಗಾಗಲೇ ಭರ್ತಿಯಾಗಿದೆ.
11
+ ಸೂಪಾ ಜಲಾಶಯವು 145.3 ಟಿಎಂಸಿ ಗರಿಷ್ಠ ಸಾಮರ್ಥ್ಯವಿದ್ದು, ಈಗಾಗಲೇ 131.08 ಟಿಎಂಸಿ ನೀರು ಸಂಗ್ರಹವಾಗಿದ್ದು, ಶೇ.90ರಷ್ಟು ಭರ್ತಿಯಾಗಿದೆ.10 ಸಾವಿರ ಕ್ಯೂಸೆಕ್ಗೂ ಹೆಚ್ಚು ಒಳಹರಿವು, 4.5 ಸಾವಿರ ಕ್ಯೂಸೆಕ್ಗೂ ಹೆಚ್ಚು ಹೊರಹರಿವಿದೆ. ವಾರಾಹಿ ಜಲಾಶಯದ ಗರಿಷ್ಠ ಸಾಮರ್ಥ್ಯ 31.10 ಟಿಎಂಸಿ ಆಗಿದ್ದು, 23.65 ಟಿಎಂಸಿ ನೀರು ಸಂಗ್ರಹವಿದ್ದು, ಶೇ.76ರಷ್ಟು ಭರ್ತಿಯಾಗಿದೆ. 1800 ಕ್ಯೂಸೆಕ್ಗೂ ಹೆಚ್ಚು ಒಳ ಹರಿವಿದೆ.
eesanje/url_46_28_6.txt ADDED
@@ -0,0 +1,5 @@
 
 
 
 
 
 
1
+ ದಸರಾ ಗಜಪಡೆಗೆ ಭಾರ ಹೊರುವ ತಾಲೀಮು ಆರಂಭ
2
+
3
+ ಮೈಸೂರು,ಸೆ.1-ವಿಶ್ವ ವಿಖ್ಯಾತ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಆನೆಗಳಿಗೆ ಭಾರ ಹೊರುವ ತಾಲೀಮು ಇಂದಿನಿಂದ ಆರಂಭಿಸಲಾಗಿದೆ.ದಸರಾ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಕ್ಯಾಪ್ಟನ್ ಅಭಿಮನ್ಯು 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಯನ್ನು ಹೊತ್ತು 5 ಕಿಲೋಮೀಟರ್ ಹೆಜ್ಜೆ ಹಾಕಲಿದ್ದಾನೆ.
4
+ ಈ ಹಿನ್ನೆಲೆಯಲ್ಲಿ ಅಭಿಮನ್ಯು ಸೇರಿದಂತೆ ಇತರೆ ಆನೆಗಳಿಗೆ ಇಂದಿನಿಂದ ಭಾರ ಹೊರುವ ತಾಲೀಮು ಆರಂಭಿಸಲಾಗಿದೆ.ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಗಜಪಡೆ ಶೆಡ್ನಲ್ಲಿ ಇಂದು ಬೆಳಿಗ್ಗೆ 7.30 ಸುಮಾರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಅಭಿಮನ್ಯುವಿನ ಹೆಗಲ ಮೇಲೆ 600 ಕೆ.ಜಿ. ತೂಕದ ಮರಳಿನ ಮೂಟೆಗಳನ್ನು ಹೊರಿಸಿ ಅರಮನೆಯಿಂದ ಬನ್ನಿಮಂಟಪದವರೆಗೂ ತಾಲೀಮು ನಡೆಸಲಾಯಿತು.
5
+ ಈ ವೇಳೆ ಗಾಂಭೀರ್ಯದಿಂದಲೇ ಅಭಿಮನ್ಯು ಹೆಜ್ಜೆ ಹಾಕಿದ್ದು, ಜನರು ವೀಕ್ಷಿಸಿದರು. ಉಳಿದ ಆನೆಗಳಿಗೆ ಹಂತಹಂತವಾಗಿ ಭಾರ ಹೊರುವ ತಾಲೀಮು ನಡೆಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಮಾವುತರು ತಿಳಿಸಿದ್ದಾರೆ.
eesanje/url_46_28_7.txt ADDED
@@ -0,0 +1,6 @@
 
 
 
 
 
 
 
1
+ ಬ್ಲ್ಯಾಕ್‌ ಮೇಲ್‌ಗೆ ಯತ್ನಿಸಿದ ಬಳ್ಳಾರಿ ವೈದ್ಯೆಗೆ ಹೈಕೋರ್ಟ್‌ ತರಾಟೆ
2
+
3
+ ಬೆಂಗಳೂರು :ಕೊಟ್ಟ ಸಾಲ ವಾಪಾಸ್‌ ಕೇಳಿದ ಕಾರಣಕ್ಕೆ ಬಿಜೆಪಿ ಮುಖಂಡನ ವಿರುದ್ಧ ದೈಹಿಕ ಹಾಗೂ ಮಾನಸಿಕ ಕಿರುಕುಳದ ಸುಳ್ಳು ದೂರು ನೀಡಿದ ಬಳ್ಳಾರಿ ಮೂಲದ ವೈದ್ಯೆ ಡಾ.ಶಶಿಕಲಾ ಹೊನ್ನಾಳಿ ಎಂಬವರಿಗೆ ಹೈಕೋರ್ಟ್ ಪೀಠ ತರಾಟೆಗೆ ತೆಗೆದುಕೊಂಡು ಛೀಮಾರಿ ಹಾಕಿದೆ.
4
+ ಬಳ್ಳಾರಿ ಜಿಲ್ಲೆಯ ಹೊನ್ನಾಳಿ ಗ್ರಾಮದ ಡಾ.ಶಶಿಕಲಾ ಹೊನ್ನಾಳಿ ಅವರ ಈ ವರ್ತೆನೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ನ್ಯಾಯಾಲಯ, ಸಿವಿಲ್‌ ಸ್ವರೂಪದ ಈ ಪ್ರಕರಣಕ್ಕೆ ಅನಗತ್ಯವಾಗಿ ಕ್ರಿಮಿನಲ್‌ ರೂಪ ನೀಡಲಾಗಿದೆ. ಇದೊಂದು ಉತ್ಪೇಕ್ಷೆ ಹಾಗೂ ಕಟ್ಟುಕತೆಯಿಂದ ಕೂಡಿದ ಪ್ರಕರಣ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ದೂರುದಾರರ ವಿರುದ್ಧ ಹಣದ ಬೇಡಿಕೆಗಾಗಿ ಕ್ರಿಮಿನಲ್‌ ಪ್ರಕರಣ ದಾಖಲಿಸುವ ಬೆದರಿಕೆ ಹಾಗೂ ಒತ್ತಡ ತಂತ್ರವನ್ನು ಅನುಸರಿಸಿರುವುದು ಕಂಡು ಬರುತ್ತಿದೆ ಎಂದು ಹೇಳಿ ಪ್ರಕರಣವನ್ನು ವಜಾಗೊಳಿಸಿದೆ.
5
+ ಅರ್ಜಿದಾರರು ದೂರುದಾರರ ಜತೆಗೆ ಪಾಲುದಾರಿಕೆಯಲ್ಲಿ ಪ್ರಾರಂಭಿಸಿದ ಕಂಪನಿಯೊಂದರಲ್ಲಿ ನಿರ್ದೇಶಕರಾಗಿದ್ದರು. ವ್ಯಾಪಾರ ಉದ್ದೇಶಕ್ಕಾಗಿಯೇ ವೈದ್ಯೆ ಶಶಿಕಲಾ ಹೊನ್ನಾಳಿ ಸಾಲ ಪಡೆದಿದ್ದರು. ಕೊಟ್ಟ ಸಾಲ ವಾಪಾಸ್‌ ಕೇಳಿದ ಕಾರಣಕ್ಕಾಗಿ “ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದಾರೆʼ ಎಂದು ಆರೋಪಿಸಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.
6
+ ಇದನ್ನು ಪ್ರಶ್ನಿಸಿ ಬಿಜೆಪಿ ಮುಖಂಡ ಹೈಕೋರ್ಟ್‌ ಧಾರವಾಡ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಒತ್ತಡದ ಮೂಲಕ ಸಿವಿಲ್‌ ಪ್ರಕರಣಕ್ಕೆ ಕ್ರಿಮಿನಲ್‌ ಸ್ವರೂಪ ನೀಡಿದ್ದು ತಪ್ಪೆಂದು ಡಾ.ಶಶಿಕಲಾಗೆ ಛೀಮಾರಿ ಹಾಕಿ ಪ್ರಕರಣ ವಜಾಗೊಳಿಸಿದೆ. ಸುಳ್ಳು ಪ್ರಕರಣ ದಾಖಲಿಸಿದ ಶಶಿಕಲಾ ವಿರುದ್ಧ ಬೆಂಗಳೂರಿನ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಮಾನಹಾನಿ ಹಾಗೂ ಸಾಲ ವಸೂಲಾತಿಗೆ ದಾವೆ ಹೂಡಲಾಗಿದೆ.
eesanje/url_46_28_8.txt ADDED
@@ -0,0 +1,8 @@
 
 
 
 
 
 
 
 
 
1
+ ಚನ್ನಪಟ್ಟಣ ಚುನಾವಣೆಯನ್ನು ಪ್ರತಿಷ್ಠೆಯಾಗಿಸಿಕೊಂಡ ಡಿಕೆಶಿ, ರಜಾ ದಿನವೂ ಫುಲ್ ಬ್ಯುಸಿ
2
+
3
+ ಬೆಂಗಳೂರು, ಸೆ.1-ಚನ್ನಪಟ್ಟಣ ವಿಧಾನ ಸಭೆ ಉಪಚುನಾವಣೆಯನ್ನು ಸವಲಾಗಿ ಸ್ವೀಕರಿಸುವ ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್‌ ಇಂದು ರಜಾ ದಿನವೂ ವಿಶ್ರಾಂತಿ ಪಡೆಯದೆ ಜನಸ್ಪಂದನ ಸಭೆ ನಡೆಸಿದ್ದಾರೆ.ಚನ್ನಪಟ್ಟಣ ಕ್ಷೇತ್ರದಿಂದ ಶಾಸಕರಾಗಿದ್ದ ಎಚ್‌.ಡಿ. ಕುಮಾರಸ್ವಾಮಿ, ಸಂಡೂರು ಕ್ಷೇತ್ರದ ಇ. ತುಕರಾಂ, ಶಿಗ್ಗಾಂವಿ ಕ್ಷೇತ್ರದ ಬಸವರಾಜ ಬೊಮಾಯಿ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾಗಿರುವುದರಿಂದ ತೆರವಾಗಿರುವ ಈ ಮೂರು ಕ್ಷೇತ್ರಗಳಿಗೆ ವಿಧಾನ ಸಭೆ ಉಪಚುನಾವಣೆ ನಡೆಯಬೇಕಿದೆ.
4
+ ಅದರಲ್ಲೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತರದಲ್ಲಿ ಡಿ.ಕೆ. ಸುರೇಶ್‌ ಸೋಲುಕಂಡ ಬಳಿಕ ಡಿ.ಕೆ. ಶಿವಕುಮಾರ್‌ ಚನ್ನಪಟ್ಟಣದ ಕ್ಷೇತ್ರವನ್ನು ಪ್ರತಿಷ್ಠೆಯನ್ನಾಗಿ ಪರಿಗಣಿಸಿದ್ದಾರೆ. ಉಪಚುನಾವಣೆಯಲ್ಲಿ ಜೆಡಿಎಸ್‌‍ ಹಾಗೂ ಬಿಜೆಪಿಯ ಮೈತ್ರಿ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ತಮ ಸಹೋದರನ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದ್ದಾರೆ.
5
+ ಈಗಾಗಿ ಚನ್ನಪಟ್ಟಣ ಕ್ಷೇತ್ರಕ್ಕೆ ಪದೆ ಪದೆ ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ನಾಲ್ಕು ಜನಸ್ಪಂದನ ಸಭೆಗಳನ್ನು, ಒಂದು ಬೃಹತ ಉದ್ಯೋಗ ಮೇಳವನ್ನು ನಡೆಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸ್ವಕ್ಷೇತ್ರ ರಾಮನಗರ ಬಿಟ್ಟು, ಕನಕಪುರದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಡಿ.ಕೆ ಶಿವಕುಮಾರ್‌ ಅಚ್ಚರಿ ಮೂಡಿಸಿದರು. ಇದು ವಿಧಾನ ಸಭೆಯ ಉಪಚುನಾವಣೆ ಹಿನ್ನಲೆಯಲ್ಲಿ ತೆಗೆದುಕೊಳ್ಳಲಾಗುತ್ತಿರಯವ ಕ್ರಮಗಳು ಎಂಬ ವ್ಯಾಖಾನಿಗಳಿಗೆ ಕಾರಣವಾಯಿತು.
6
+ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಈವರೆಗೂ ಕಾಂಗ್ರೆಸ್‌‍ ಯಾವುದೇ ನಿಧಾರಗಳನ್ನು ತೆಗೆದುಕೊಂಡಿಲ್ಲ ಒಂದು ಹಂತದಲ್ಲಿ ಡಿ.ಕೆ. ಶಿವಕುಮಾರ್‌ ನಾನೆ ಅಭ್ಯರ್ಥಿ ಯಾರೇ ಸ್ಪರ್ಧೆ ಮಾಡಿದ್ದರೂ ಜನ ನನಗೆ ಮತ ಹಾಕಬೇಕು ಎಂದು ಹೇಳುವ ಮೂಲಕ ಪ್ರತಿಷ್ಟೆಯನ್ನು ಪಣಕ್ಕೆ ಹೊಡ್ಡಿದ್ದಾರೆ.
7
+ ಇತ್ತ ಜೆಡಿಎಸ್‌‍ ಮತ್ತು ಬಿಜೆಪಿಯಿಂದ ಮೈತ್ರಿ ಅಭ್ಯರ್ಥಿಯ ಆಯ್ಕೆ ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿವೆ. ಕೇಂದ್ರ ಸಚಿವ ಎಚ್‌.ಡಿ. ಕುಮಾರ ಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಕುಮಾರ ಸ್ವಾಮಿ ಕೂಡ ಚನ್ನಪಟ್ಟಣ ಕ್ಷೇತ್ರವನ್ನು ಪ್ರತಿಷ್ಠೆಯನ್ನಾಗಿ ಪರಿಗಣಿಸುವ ಸಾದ್ಯತೆ ಇದೆ.
8
+ ಈಗಾಗಿ ಡಿ.ಕೆ ಶಿವಕುಮಾರ್‌ಅವರು ಆರಂಭದಿಂದಲೂ ಅಖಾಡಕ್ಕೆ ಇಳಿದಿದ್ದು, ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಿದ್ದಾರೆ. ಹಲವಾರು ಸರ್ಕಾರಿ ಕ್ರಮಗಳನ್ನು ಆಯೋಜಿಸಿದ್ದಾರೆ. ಇಂದು ರಜಾದಿನ ಭಾನುವಾರವು ಜನಸ್ಪಂದನ ನಡೆಸುತ್ತಿರುವುದು ಕುತೂಹಲ ಕೆರಳಿಸಿದೆ. ಸರ್ಕಾರಿ ಕಾರ್ಯಕ್ರಮಗಳ ನೆಪದಲ್ಲಿ ಡಿ.ಕೆ. ಶಿವಕುಮಾರ್‌ ರಾಜಕೀಯ ಶಕ್ತಿ��ಯನ್ನು ಕ್ರೋಢೀಕರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಟೀಕೆಗಳು ಕೇಳಿಬರುತ್ತಿವೆ.
eesanje/url_46_28_9.txt ADDED
@@ -0,0 +1,10 @@
 
 
 
 
 
 
 
 
 
 
 
1
+ ಸಿಎಂ ಸಿದ್ದರಾಮಯ್ಯ-ಕೇಂದ್ರ ಸಚಿವ ಎಚ್‌ಡಿಕೆ ನಡುವೆ ಸಭೆಗಳ ಸಂಘರ್ಷ
2
+
3
+ ಬೆಂಗಳೂರು, ಸೆ.1– ರಾಜಮನೆತನದ ವಿರೋಧ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಮೈಸೂರಿನಲ್ಲಿ ಶ್ರೀ ಚಾಮುಂಡಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಲು ಮುಂದಾಗಿರುವುದು ಕುತೂಹಲ ಕೆರಳಿಸಿದೆ. ಈ ನಡುವೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆಯಬೇಕಿದ್ದ ದಿಶಾ ಸಭೆ ರದ್ದುಗೊಂಡಿರುವುದು ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.
4
+ ಇತ್ತ ಹೈಕೋರ್ಟ್‌ನಲ್ಲಿ ಮುಡಾ ಪ್ರಕರಣದ ಕುರಿತಂತೆ ವಾದವಿವಾದಗಳು ತೀವ್ರಗೊಂಡಿದ್ದು, ನಾಳೆ ಹೈಕೋರ್ಟ್‌ನಲ್ಲಿ ಮಹತ್ವದ ವಿಚಾರಣೆಯಾಗಲಿದೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿದ್ದು, ಬೆಳಗ್ಗೆ ಚಾಮುಂಡಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆಯಲಿದ್ದಾರೆ.
5
+ ಬಳಿಕ ಬೆಟ್ಟದಲ್ಲೇ ಇರುವ ದಾಸೋಹ ಭವನದಲ್ಲಿ ಚಾಮುಂಡಿ ಕ್ಷೇತ್ರದ ಪ್ರಾಧಿಕಾರದ ಸಭೆ ನಡೆಸಲಿದ್ದಾರೆ. ಇದು ರಾಜಕೀಯವಾಗಿ ಇದು ಚರ್ಚೆಗೆ ಗ್ರಾಸವಾಗಿದೆ. ಚಾಮುಂಡಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ಮೈಸೂರಿನ ರಾಜ ಮನೆತನ ವಿರೋಧಿಸಿತ್ತು. ಈ ಕುರಿತು ಬಹಿರಂಗ ಹೇಳಿಕೆ ನೀಡಿದ್ದಷ್ಟೇ ಅಲ್ಲದೇ ನ್ಯಾಯಾಲಯದಲ್ಲೂ ಪ್ರಶ್ನಿಸಲಾಗಿದೆ.
6
+ ಪ್ರಾಧಿಕಾರ ರಚನೆಗಾಗಿ ವಿಧಾನ ಮಂಡಲದಲ್ಲಿ ಅಂಗೀಕಾರ ಪಡೆಯಲಾಗಿರುವ ಮಸೂದೆ ಆಧರಿತವಾಗಿ ಸದ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳಬಾರದೆಂದು ನ್ಯಾಯಾಲಯದ ನಿರ್ದೇಶನ ಇದೆ. ಚಾಮುಂಡಿ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರ ಮೊದಲಿನಿಂದಲೂ ಅಸ್ತಿತ್ವದಲ್ಲಿದ್ದು, ಸಿದ್ದರಾಮಯ್ಯ ಈ ಮೊದಲಿನ ಪ್ರಾಧಿಕಾರದ ಪ್ರಮುಖರ ಜೊತೆ ನಾಳೆ ಚರ್ಚೆ ನಡೆಸಲಿದ್ದಾರೆ.
7
+ ಸಿದ್ದರಾಮಯ್ಯ ರಾಜಕೀಯವಾಗಿ ವಿರೋಧ ಪಕ್ಷಗಳ ಜೊತೆ ಮುಖಾಮುಖಿಯಾಗಿದ್ದು, ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅದರಲ್ಲಿ ತವರು ಜಿಲ್ಲೆ ಮೈಸೂರಿನಲ್ಲಿ ಚಾಮುಂಡಿ ಅಭಿವೃದ್ಧಿ ಪ್ರಾಧಿಕಾರ ಸಭೆ ನಡೆಸಿ, ತಮ ಸರ್ಕಾರ ನಿಲುವನ್ನು ಸಮರ್ಥಿಸಿಕೊಳ್ಳಲು ಮುಂದಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ. ಇದೇ ವೇಳೆ ಮತ್ತೊಂದು ಬೆಳವಣಿಗೆಯಲ್ಲಿ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆಯಬೇಕಿದ್ದ ದಿಶಾ ಸಭೆ ರದ್ದುಗೊಂಡಿದೆ.
8
+ ಕೇಂದ್ರ ಸಚಿವರು ಹಾಗೂ ಸಂಸದರಿಗೆ ಡೆವಲಪ್‌ಮೆಂಟ್‌ ಕೋಆರ್ಡಿನೇಷನ್‌ಅಂಡ್‌ ಮಾನಿಟರಿಂಗ್‌ ಕಮಿಟಿ (ದಿಶಾ) ಸಭೆಗಳನ್ನು ನಡೆಸಲು ಅವಕಾಶ ಇದೆ. ಕೇಂದ್ರ ಸಚಿವರಾದ ಕುಮಾರ ಸ್ವಾಮಿ ಹಾಗೂ ಮೈಸೂರಿನ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ನಾಳೆ ಮೈಸೂರಿನಲ್ಲಿ ದಿಶಾ ಸಭೆಗಳನ್ನು ನಡೆಸಬೇಕಿತ್ತು.
9
+ ಮುಖ್ಯಮಂತ್ರಿ ಸಿದ್ದರಾಮಯಯ್ಯ ಅವರು, ಜಿಲ್ಲೆಗೆ ಭೇಟಿ ನೀಡುತ್ತಿರುವುದರಿಂದಾಗಿ ದಿಶಾ ಸಭೆಗಳನ್ನು ರದ್ದುಗೊಳಿಸಲಾಗಿದೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಮತ್ತೊಂದು ರೀತಿಯ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.
10
+ ಕುಮಾರಸ್ವಾಮಿ ಅವರು ಈ ಮೊದಲು ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಧಿಕಾರಿಗಳ ಸಭೆ ಕರೆದಾಗ ಅದರಲ್ಲಿ ಅಧಿಕಾರಿಗಳು ಭಾಗವಹಿಸದಂತೆ ರಾಜ್ಯ ಸರ್ಕಾರ ತಡೆ ಹಿಡಿದಿತ್ತು ಎಂಬ ಆರೋಪಗಳಿವೆ. ಈಗ ಕೇಂದ್ರ ಸಚಿವರಿಗೆ ಮತ್ತು ಸಂಸದರಿಗೆ ಪ್ರದತ್ತವಾಗಿರುವ ದಿಶಾ ಸಭೆ ನಡೆಸಲು ಸಿದ್ದರಾಮಯ್ಯ ಅವರ ಪ್ರವಾಸ ಅಡ್ಡಿಯಾಗಿರುವುದು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗಿದೆ.
eesanje/url_46_290_1.txt ADDED
@@ -0,0 +1,12 @@
 
 
 
 
 
 
 
 
 
 
 
 
 
1
+ ಪ್ರಾದೇಶಿಕ ತಾರತಮ್ಯ ನಿವಾರಿಸಿ ಪ್ರತ್ಯೇಕ ರಾಜ್ಯದ ಕೂಗು ತಪ್ಪಿಸಿ : ಯತ್ನಾಳ್
2
+ ಬೆಳಗಾವಿ, ಡಿ.12- ಅಭಿವೃದ್ಧಿ ಹಾಗೂ ಸ್ಥಾನಮಾನಗಳ ಹಂಚಿಕೆಯಲ್ಲಿ ಪ್ರಾದೇಶಿಕ ತಾರತಮ್ಯವನ್ನು ನಿವಾರಿಸುವ ಮೂಲಕ ಪ್ರತ್ಯೇಕ ರಾಜ್ಯದ ಕೂಗು ಸೃಷ್ಟಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅವೇಶದಲ್ಲಿ ಇಂದಿನಿಂದ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತು ಚರ್ಚೆ ಆರಂಭವಾಯಿತು. ಅದರಲ್ಲಿ ಭಾಗವಹಿಸಿದ್ದ ಯತ್ನಾಳ್ ಅವರು, ಬೆಳಗಾವಿ ಸುವರ್ಣ ಸೌಧ ನಿರ್ಮಾಣ ಆದ ಮೇಲೆ ಇದು 11 ನೇ ಸದನವಾಗಿದೆ. ಉತ್ತರ ಕರ್ನಾಟಕದ ಬಗ್ಗೆ ಮೊದಲ ದಿನವೇ ಇಲ್ಲಿ ಚರ್ಚೆಯಾಗಬೇಕಿತ್ತು, ಆದರೆ ಈವರೆಗೂ ಆಗಲಿಲ್ಲ. ಹಾಗಿದ್ದರೆ ಈ ಭಾಗದಲ್ಲಿ ಸದನ ಮಾಡುವ ಉದ್ದೇಶವೇನು ಎಂದು ಪ್ರಶ್ನಿಸಿದರು.
3
+ ಬೆಳಗಾವಿ ಸಮಸ್ಯೆ ಮಹಾರಾಷ್ಟ್ರ ಗಡಿ, ಉತ್ತರಕನ್ನಡ ಅಭಿವೃದ್ಧಿ ಚರ್ಚೆ ಆಗಬೇಕೆಂದು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಸುವರ್ಣ ಸೌಧ ನಿರ್ಮಿಸಿದ್ದಾರೆ. ಆದರೆ ಲಾಭವೇನು, ಸಮಸ್ಯೆಗಳೆ ಚರ್ಚೆಯಾಗುತ್ತಿಲ್ಲ. ನಾನು ಸಮಗ್ರ ಕರ್ನಾಟಕ ದ ಪರವಾಗಿದ್ದೇನೆ, ಕರ್ನಾಟಕ ಪ್ರತ್ಯೇಕತೆಗೆ ಎಂದಿಗೂ ಬೆಂಬಲ ಕೊಟ್ಟಿಲ್ಲ, ಎಲ್ಲರೂ ಒಂದಾಗಿ ಚಾಮರಾಜನಗರದಿಂದ ಬೀದರ್, ಕೋಲಾರದಿಂದ ಕೊಡಗುವರಿಗೂ ಒಂದೇ ಎಂಬ ಭಾವನೆ ಗಟ್ಟಿಗೊಳಿಸಬೇಕು. ಅಭಿವೃದ್ಧಿ ಮತ್ತು ಸ್ಥಾನಮಾನಗಳಲ್ಲಿ ಸಮಾನ ಅವಕಾಶ ನೀಡುವ ಮೂಲಕ ಪ್ರತ್ಯೇಕ ರಾಜ್ಯದ ಕೂಗಿಗೆ ಅವಕಾಶ ನೀಡಬಾರದು ಎಂದರು.
4
+ ಬೆಂಗಳೂರಿನಲ್ಲಿ ಒಂದು ಸಚಿವ ಸಂಪುಟ ಸಭೆ ನಡೆದರೆ, ಇನ್ನೊಂದು ಸಭೆ ಸುವರ್ಣ ಸೌಧದಲ್ಲಿ ನಡೆಸಬೇಕು. ವರ್ಷದಲ್ಲಿ 100 ದಿನ ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನ ಮಂಡಲ ಕಲಾಪ ನಡೆಸಬೇಕು. ಸುವರ್ಣ ಸೌಧಕ್ಕೆ ಕೇವಲ ಲೈಟಿಂಗ್ ಮಾಡಿದರೆ ಉತ್ತರ ಕರ್ನಾಟಕ ಭಾಗ ಅಭಿವೃದ್ಧಿಯಾಗುವುದಿಲ್ಲ. ಎರಡನೇ ಹಂತದ ಕಾರ್ಯದರ್ಶಿ ಹು್ದÉಗಳನ್ನು ಇಲ್ಲಿಗೆ ಸ್ಥಳಾಂತರಿಸಿ. ಸಕ್ಕರೆ ನಿರ್ದೇಶನಾಲಯ ಇಲ್ಲಿದೆ ಆದರೆ ಕಚೇರಿಯಲ್ಲಿ ಮೂವರು ಸಿಬ್ಬಂದಿಗಳಲ್ಲ. ಎಲ್ಲಾ ಹು್ದÉಗಳು ಮಧ್ಯ ಕರ್ನಾಟಕ, ಹಳೆ ಮೈಸೂರು ಭಾಗಕ್ಕೆ ಸಿಕ್ಕಿವೆ. ಉತ್ತರ ಕರ್ನಾಟಕ ಭಾಗಕ್ಕೆ ಭಾರೀ ಅನ್ಯಾಯವಾಗಿದೆ. ಏನು ಮಾಡಿದರೂ ನಡೆಯುತ್ತದೆ ಎಂಬ ಭಾವನೆ ಸರಿಯಲ್ಲ. ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.
5
+ ಇನ್ಷ್ಯೂರೆನ್ಸ್ ಕಂಪೆನಿ ಹೆಸರಲ್ಲಿ ಯಾಮಾರಿಸ್ತಾರೆ ಹುಷಾರ್..!
6
+ ಆಹಾರದ ಕೊರತೆ ಇದ್ದಾಗ ಜೈ ಜವಾನ್, ಜೈ ಕಿಸಾನ್ ಎಂದು ಕರೆ ಕೊಟ್ಟ ಲಾಲ್ ಬಹುದ್ದೂರ್ ಶಾಸ್ತ್ರಿ 1964ರಲ್ಲಿ ಆಲಮಟ್ಟಿಗೆ ಶಿಲಾನ್ಯಾಸ ಮಾಡಿದ್ದರು. ಜನರ ಬದುಕು ಸುಧಾರಣೆಗೆ ಇರುವ ಭೌತಿಕ ಸೌಕರ್ಯಗಳನ್ನು ಹೆಚ್ಚಿಸಬೇಕು. ಉತ್ಪಾದನೆಯನ್ನು ವೃದ್ಧಿಸಬೇಕು. ಪ್ರತಿಯೊಂದು ರಾಜ್ಯದ ಧ್ಯೇಯವೇ ಆರ್ಥಿಕ ವರಮಾನವನ್ನು ಹೆಚ್ಚಿಸಿಕೊಳ್ಳುವುದು. ಎಲ���ಲ ಜನಾಂಗಗಳ, ಎಲ್ಲ ಭಾಗಗಳ ಸಮಗ್ರ ಅಭಿವೃದ್ಧಿಯಾಗಬೇಕು. ಜನರ ಆದಾಯ ಹೆಚ್ಚಾಗಬೇಕು ಎಲ್ಲರಿಗೂ ನ್ಯಾಯ ಸಿಗಬೇಕು. ಮೈಸೂರು ಕರ್ನಾಟಕ ಉತ್ತಮ ಅಭಿವೃದ್ಧಿ ಸಾಸಿದೆ. ಮೈಸೂರು ಮಹಾರಾಜರು ನೀರಾವರಿಗೆ ಆದ್ಯತೆ ನೀಡಿದರು, ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದರು. ನಾಲ್ವಡಿ ಕೃಷ್ಣ ಒಡೆಯರ್ ಮಹಾರಾಜರು ಏಷ್ಯಾ ಖಂಡದಲ್ಲೇ ಮೊದಲ ವಿದ್ಯುತ್ ಘಟಕ ಸ್ಥಾಪಿಸಿದರು. ಆದರೆ ಉತ್ತರ ಕರ್ನಾಟಕ ಭಾಗದ ದುರ್ದೈವ ಕಲ್ಯಾಣ ಕರ್ನಾಟಕ , ಮುಂಬೈ ಕರ್ನಾಟಕ ದಲ್ಲಿ ನವಾಬರ ಆಡಳಿತವಿತ್ತು. ನಿಜಾಂ ಶಾಹಿ, ಆದಿಲ್ ಶಾಹಿ ಸೇರಿದಂತೆ ಹಲವು ರಾಜರು ಗೋರಿಗಳನ್ನು ಅಭಿವೃದ್ಧಿಪಡಿಸಿಕೊಂಡರು. ಆ ರಾಣಿ, ಈ ರಾಣಿ ಎಂದು ಗೋರಿಗಳನ್ನು ಕಟ್ಟಿಕೊಂಡರು. ಕಲಬುರಗಿ, ಬೀದರ್ , ವಿಜಯಪುರ ಸೇರಿದಂತೆ ಎಲ್ಲ ಕಡೆ ಗೋರಿಗಳೇ ಹೆಚ್ಚಾಗಿ ಕಾಣುತ್ತವೆ ಎಂದರು.
7
+ ಈ ಹಂತದಲ್ಲಿ ಕಾಂಗ್ರೆಸಿಗರು ಆಕ್ಷೇಪ ವ್ಯಕ್ತಪಡಿಸಿದ್ದಾಗ, ನಿಜಾಮರನ್ನು ಸಮರ್ಥಿಸಿಕೊಳ್ಳುವುದೇ ನಿಮ್ಮ ಉದ್ಯೋಗ ಕುಳಿತುಕೊಳ್ಳಿ ಎಂದು ತಿರುಗೇಟು ನೀಡಿದ ಯತ್ನಾಳ್, ಆ ಭಾಗ ಅಭಿವೃದ್ಧಿಯಾಗಿದೆ, ನಮ್ಮ ಭಾಗ ಅಭಿವೃದ್ಧಿಯಾಗಿಲ್ಲ ಎಂಬ ಹೊಟ್ಟೆ ಕಿಚ್ಚಿಲ್ಲ. ಹಳೆ ಮೈಸೂರು ಭಾಗವನ್ನು ಆದರ್ಶವಾಗಿಟ್ಟುಕೊಂಡು ನಾವು ಬದ್ಧತೆ ಪ್ರದರ್ಶಿಸಬೇಕಿದೆ ಎಂದರು.ಉತ್ತರ ಕರ್ನಾಟಕ ಭಾಗ ಹಿಂದುಳಿಯಲು ನಮ್ಮ ಭಾಗದ ಜನಪ್ರತಿನಿಗಳು ಕಾರಣರಾಗಿದ್ದಾರೆ. ಕಾಲಕಾಲಕ್ಕೆ ಧ್ವನಿ ಎತ್ತಿದ್ದರೆ 100 ರೂಪಾಯಿನಲ್ಲಿ 20 ರೂಪಾಯಿಗಳಾದರೂ ನಮ್ಮ ಭಾಗಕ್ಕೆ ಸಿಗುತ್ತಿತ್ತು. ಅದರೆ ಜನಪ್ರತಿನಿಗಳು ಗಂಭೀರವಾಗಿ ಕೆಲಸ ಮಾಡಲಿಲ್ಲ ಎಂದು ಆರೋಪಿಸಿದರು.
8
+ ಎಚ್.ಕೆ ಪಾಟೀಲ್ , ಎಂ. ಬಿ ಪಾಟೀಲ್ , ಬಸವರಾಜ ಬೊಮ್ಮಾಯಿ ಬಿಟ್ಟರೆ ಉಳಿದೆಲ್ಲಾ ನೀರಾವರಿ ಮಂತ್ರಿಗಳು ಹಳೆ ಮೈಸೂರು ಭಾಗದವರೇ ಹೆಚ್ಚಾಗಿದ್ದಾರೆ. ರಮೇಶ ಜಾರಕಿಹೊಳಿಯವರು ಏನೋ ಮಾಡಬೇಕೆಂದು ಹೊರಟರು. ಅವರ ವಿರುದ್ಧ ಕುತಂತ್ರ ರಾಜಕಾರಣ ಮಾಡಿ ಮುಗಿಸಿದರು. ಇಂತಹ ಹಲ್ಕಾ ರಾಜಕಾರಣ ಬೇಕಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಲ್ಕಾ ಪದ ಬಳಕೆ ಸರಿಯಲ್ಲ. ಅದನ್ನು ಹಿಂಪಡೆಯಿರಿ ಎಂದು ಸಭಾಧ್ಯಕ್ಷ ಪೀಠದಲ್ಲಿದ್ದ ಉಪಸಭಾಪತಿ ರುದ್ರಪ್ಪ ಲಮಾಣಿ ಸಲಹೆ ನೀಡಿದರು. ನೀವು ಬೇಕಾದರೆ ಕಡತದಿಂದ ತೆಗೆಯಿರಿ ನಾನು ಹಿಂಪಡೆದುಕೊಳ್ಳುವುದಿಲ್ಲ ಎಂದು ಯತ್ನಾಳ್ ಪಟ್ಟು ಹಿಡಿದರು.
9
+ ಎಲ್ಲಾ ಅಭಿವೃದ್ಧಿಯೂ ಬೆಂಗಳೂರು ಕೇಂದ್ರೀಕೃತವಾಗಿದೆ. ಬಿಜಾಪುರ, ಬೀದರ್ ಗಳಿಂದ ಬರುವ ಹುಡುಗರು 120-15 ಸಾವಿರಕ್ಕೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದು ಕೊಠಡಿಯಲ್ಲಿ 4-5 ಜನ ಇದ್ದುಕೊಂಡು, ತಲಾ 3 ಸಾವಿರ ರೂಪಾಯಿ ಬಾಡಿಗೆ ಹಂಚಿಕೊಳ್ಳುತ್ತಿದ್ದಾರೆ. ಶನಿವಾರ ಬಟ್ಟೆ ಹೊಗೆದು, ಒಂದು ಸಿನಿಮಾ ನೋಡಿದರೆ 12 ಸಾವಿರ ಆಗುತ್ತದೆ. ಇನ್ನು ಆರ್ಥಿಕವಾಗಿ ಉದ್ಧಾರವಾಗುವುದು ಹೇಗೆ ಎಂದು ಪ್ರಶ್ನಿಸಿದರು.ನೆರೆಯ ಮಹಾರಾಷ್ಟ್ರದಲ್ಲಿ 3-4 ನಗರಗಳನ್ನು ನಿರ್ಮಾಣ ಮಾಡಿದ್ದಾರೆ. ಮುಂಬೈ, ಪುಣೆ ಸೇರಿ ಪ್ರತಿ ಜಿಲ್ಲೆಯಲ್ಲೂ ಕೈಗಾರಿಕೆ ಮಾಡಲಾಗುತ್ತಿದೆ. ನಾಗ್ಪುರ ಎಂದು ಮಾಡಿ, ವರ್ಷಕ್ಕೆ ಎರಡು ಬಾರಿ ಅವೇಶನ ನಡೆಸುತ್ತಾರೆ. ಇಲ್ಲಿ 10 ದಿನವೂ ಅವೇಶನ ನಡೆಯುವುದಿಲ್ಲ ಎಂದರು.
10
+ ನಮ್ಮ ಅಶೋಕ್ ವಿರುದ್ಧ ಪಕ್ಷ ನಾಯಕರಾಗಿದ್ದಾರೆ, ನಮಗೆ ಬೇಜಾರಿಲ್ಲ, ಅವರು ಯಾವ ರೀತಿ ನಡೆದುಕೊಂಡಿದ್ದಾರೆ ಎಂದು ಉತ್ತರ ಕರ್ನಾಟಕದ ಜನರಿಗೆ ಗೊತ್ತಾಗಿದೆ.ಯತ್ನಾಳ್ ಬಾಯಿ ಸರಿಯಿದ್ದರೆ ರಾಜ್ಯದ ಮುಖ್ಯಮಂತ್ರಿ ಯಾಗುತ್ತಿದ್ದರು ಎಂದು ಕೆಲವರು ಹೇಳುತ್ತಾರೆ. ನನ್ನ ಬಾಯಿ ಸರಿ ಇರಲಿ, ಬಿಡಲಿ. ಆದರೆ ವಿಜಯಪುರದಲ್ಲಿ ಒಂದು ರಸ್ತೆ ಸರಿ ಇರಲಿಲ್ಲ. ನಾನು ಹೋರಾಟ ಮಾಡಿ ಕುಮಾರಸ್ವಾಮಿಯಿಂದ 1500 ಕೋಟಿ ಪಡೆದುಕೊಂಡಿದ್ದೆ. ನಾವು ಜನರ ಸಲುವಾಗಿ ಮಾತನಾಡಲೇಬೇಕು.
11
+ ಉಸಿರಾಯಿತು ಕನ್ನಡ, ಹೆಸರಾಯಿತು ಕರ್ನಾಟಕ ಎಂದು ಕಾರ್ಯಕ್ರಮ ಮಾಡಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ಜನರು ಕನ್ನಡ ಬಳಸುತ್ತಿದ್ದೇವೆ. ಆದರೆ ಪ್ರಾದೇಶಿಕ ಅಸಮಾನತೆ ಬಹಳ ಇದೆ , ಕೈಗಾರಿಕೆ, ಮೂಲಭೂತ ಸೌಕರ್ಯ, ಕೃಷಿ, ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ನಾವು ಹಿಂದೆ ಉಳಿಸಿದ್ದೇವೆ.ಡಾ ನಂಜುಂಡಪ್ಪ ವರದಿ ಪ್ರಕಾರ ಕಳೆದ 25 ವರ್ಷಗಳಿಂದಲೂ ಅಸಮಾನತೆ ನಿರ್ವಹಣೆಯಾಗಿಲ್ಲ. ಭೌಗೊಳಿಕವಾಗಿ ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕ 8916 ಚದರ ಕಿಲೋ ಮೀಟರ್ ಹೆಚ್ಚು ವಿಸ್ತೀರ್ಣ ಹೊಂದಿದೆ. ಶೇ.58ರಷ್ಟು ನೀರಿನ ಸಂಪನ್ಮೂಲವಿದೆ. ಆದರೆ ನೀರಾವರಿ ಯೋಜನೆಗಳು ಕುಂಠಿತವಾಗಿವೆ ಎಂದರು.
12
+ ಕಳೆದ 30-40 ವರ್ಷಗಳಿಂದ ಯೋಜನೆಗಳು ಮುಗಿದಿಲ್ಲ. ಕೃಷ್ಣ ಮೇಲ್ದಂಡೆ ಯೋಜನೆ 16 ಸಾವಿರ ಕೋಟಿ ನಿಗದಿಪಡಿಸಲಾಗಿತ್ತು, ಈಗ 80 ಸಾವಿರ ಕೋಟಿ ದಾಟಿದೆ, ಶೀಘ್ರ ಪೂರ್ಣಗೊಳಿಸಬೇಕು. ಬರಗಾಲದಿಂದ ಮುಕ್ತಿ ಸಿಗಬೇಕೆಂದರೆ ಕೆರೆಗಳಿಗೆ ನೀರು ತುಂಬಿಸಬೇಕು. ಮಹದಾಯಿ, ನವಲಿ ಜಲಾಶಯಗಳನ್ನು ಹೊಸದಾಗಿ ನಿರ್ಮಿಸಿ 31 ಟಿಎಂಸಿ ನೀರು ಸಂಗ್ರಹಿಸಬೇಕು ಎಂದು ಆ
eesanje/url_46_290_10.txt ADDED
@@ -0,0 +1,4 @@
 
 
 
 
 
1
+ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷರಾಗಿ ಶಾಸಕ ಸಿ.ಸಿ.ಪಾಟೀಲ್ ನೇಮಕ
2
+ ಬೆಂಗಳೂರು. ಡಿ.12- ಪ್ರಸಕ್ತ ಸಾಲಿನ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಅಧ್ಯಕ್ಷರಾಗಿ ಶಾಸಕ ಸಿ.ಸಿ.ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ. 2023-24ನೇ ಸಾಲಿನ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಅಧ್ಯಕ್ಷರಾಗಿದ್ದ ಶಾಸಕ ಆರ್.ಅಶೋಕ್ ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿರುವುದರಿಂದ ಅವರ ಬದಲಿಗೆ ಸಮಿತಿಯ ಸದಸ್ಯರಾದ ಸಿ.ಸಿ.ಪಾಟೀಲ್ ಅವರನ್ನು ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ನಾಮ ನಿರ್ದೇಶನ ಮಾಡಿದ್ದಾರೆ.
3
+ ಕೆಂಪು ಸಮುದ್ರದಲ್ಲಿ ತೈಲ ಸಾಗಿಸುತ್ತಿದ್ದ ಹಡಗಿನ ಮೇಲೆ ದಾಳಿ
4
+ ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮಾವಳಿಗಳ ನಿಯಮ 211(2)ರ ಮೇರೆಗೆ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಅಧ್ಯಕ್ಷರನ್ನಾಗಿ ಸಿ.ಸಿ.ಪಾಟೀಲ್ ಅವರನ್ನು ಸಭಾಧ್ಯಕ್ಷರು ನಾಮನಿರ್ದೇಶನ ಮಾಡಿದ್ದಾರೆ ಎಂದು ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
eesanje/url_46_290_11.txt ADDED
@@ -0,0 +1,10 @@
 
 
 
 
 
 
 
 
 
 
 
1
+ ವಿಧಾನಸಭೆಯಲ್ಲಿ ಧರಣಿ ಮಧ್ಯೆಯೂ 5 ವಿಧೇಯಕಗಳ ಅಂಗೀಕಾರ
2
+ ಬೆಳಗಾವಿ,ಡಿ.11- ವಸತಿ, ಅಲ್ಪಸಂಖ್ಯಾತ ಸಚಿವರು ತೆಲಂಗಾಣ ಚುನಾವಣಾ ಕಣದಲ್ಲಿ ನೀಡಿದ್ದ ಹೇಳಿಕೆಯನ್ನು ಮುಂದಿಟ್ಟುಕೊಂಡು ಬಿಜೆಪಿಯ ಶಾಸಕರು ಧರಣಿ ನಡೆಸುತ್ತಿದ್ದ ವೇಳೆಯಲ್ಲೇ 5 ವಿಧೇಯಕಗಳನ್ನು ಬಹುತೇಕ ಚರ್ಚೆ ಇಲ್ಲದೆ ಅಂಗೀಕರಿಸಲಾಯಿತು.ಇಂದು ಬೆಳಿಗ್ಗೆ ವಿಧಾನಸಭೆಯ ಪ್ರಶ್ನೋತ್ತರದ ವೇಳೆಯಲ್ಲಿ ಸಚಿವ ಜಮೀರ್ ಅಹಮ್ಮದ್ ಖಾನ್ರ ಉತ್ತರವನ್ನು ತಿರಸ್ಕರಿಸುವುದಾಗಿ ಹೇಳಿದ ಬಿಜೆಪಿ ಸದಸ್ಯರು ವಿವಾದಿತ ಹೇಳಿಕೆ ನೀಡಿದ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಪಟ್ಟುಹಿಡಿದರು.
3
+ ಸರ್ಕಾರ ಬಿಜೆಪಿ ಶಾಸಕರ ಬೇಡಿಕೆಗೆ ಸೊಪ್ಪು ಹಾಕದಿದ್ದಾಗ ಸದನದ ಬಾವಿಗಿಳಿದು ಧರಣಿ ಆರಂಭಿಸಿದರು. ಅದರ ನಡುವೆಯೇ ಪ್ರಶ್ನೋತ್ತರ ಕಲಾಪ ನಡೆಯಿತು. ಶಾಸನ ರಚನೆಯ ಕಲಾಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಜಿಎಸ್ಟಿ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು.ಆನ್ಲೈನ್ ಗೇಮ್ಗಳನ್ನು ಜಿಎಸ್ಟಿ ತೆರಿಗೆ ವ್ಯಾಪ್ತಿಗೊಳಪಡಿಸಲು ವಿಧೇಯಕ ರೂಪಿಸಲಾಗಿದೆ. ಅಂದ ಮಾತ್ರಕ್ಕೆ ಆನ್ಲೈನ್ ಗೇಮ್ಗಳನ್ನು ಕಾನೂನುಬದ್ಧಗೊಳಿಸಲಾಗಿದೆ ಎಂದರ್ಥವಲ್ಲ. ಈ ಹಿಂದೆ ಕೇಂದ್ರ ಸರ್ಕಾರದ ಕಾಯ್ದೆಗನುಗುಣವಾಗಿ ರಾಜ್ಯಸರ್ಕಾರ ತಿದ್ದುಪಡಿಯನ್ನು ರೂಪಿಸಿದೆ ಎಂದು ಹೇಳಿದರು.
4
+ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಪರವಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ 2023 ನೇ ಸಾಲಿನ ಕರ್ನಾಟಕ ವೈದ್ಯಕೀಯ ಕೋರ್ಸ್ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತಿದ್ದುಪಡಿ ವಿಧೇಯಕಗಳನ್ನು ಪರ್ಯಾಲೋಚನೆಗೆ ಮಂಡಿಸಿದರು. ಈ ವಿಧೇಯಕದಿಂದ ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರ ಕೊರತೆ ನೀಗಲಿದೆ ಎಂದು ಹೇಳಿದರು.
5
+ ಸ್ಪೀಕರ್ ಸ್ಥಾನದ ಕುರಿತು ಹೇಳಿಕೆ, ಜಮೀರ್ ವಜಾಕ್ಕೆ ಪಟ್ಟು, ವಿಧಾನಸಭೆಯಲ್ಲಿ ವಾಕ್ಸಮರ
6
+ ಸಚಿವ ಕೃಷ್ಣಭೈರೇಗೌಡ, ತಮ್ಮ ಇಲಾಖೆಗೆ ಸೇರಿದ ಕರ್ನಾಟಕ ಸ್ಟಾಂಪ್ ತಿದ್ದುಪಡಿ ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿದರು. ಈ ವಿಧೇಯಕ ನೋಂದಣಿ ಸ್ಟಾಂಪ್ ಶುಲ್ಕವನ್ನು ಹೆಚ್ಚಿಸುವುದಲ್ಲ. ಬದಲಾಗಿ ವಿವಿಧ ಸೇವೆಗಳನ್ನು ಪಡೆಯಲು ಸಾರ್ವಜನಿಕರು ಖರೀದಿಸುವ ಸ್ಟಾಂಪ್ಗಳ ದರವನ್ನು ಹೆಚ್ಚಿಸಲಾಗಿದೆ. 5, 10, 20 ರೂ.ಗಳಿದ್ದ ದರವನ್ನು ಕಾಲಕ್ಕನುಗುಣವಾಗಿ ಹೆಚ್ಚಿಸಲಾಗಿದೆ. ಈ ಮೊದಲು 1994 ಮತ್ತು 2002 ರಲ್ಲಿ ಮಾತ್ರ ಕೆಲ ಸ್ಟಾಂಪ್ಗಳ ಮೇಲೆ ದರ ಪರಿಷ್ಕರಣೆಯಾಗಿತ್ತು ಎಂದು ವಿವರಿಸಿದರು.
7
+ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪರವಾಗಿ ಸಚಿವ ಕೃಷ್ಣಭೈರೇಗೌಡ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕಗಳನ್ನು ಮಂಡಿಸಿದರು. ಮಲೆನಾಡು ಭಾಗದಲ್ಲಿ ಜಿಲ್ಲಾ ಪಂಚಾಯತ್ ಕ್ಷೇತ್ರಗಳು ವಿಸ್ತೀರ್ಣ ವಿಶಾಲ���ಾಗಿರುತ್ತದೆ. ಜನಸಂಖ್ಯೆ ಕಡಿಮೆಯಿರುತ್ತದೆ. ಮಲೆನಾಡಿನ ಭದ್ರಾವತಿ, ಶಿವಮೊಗ್ಗ, ಶಿಕಾರಿಪುರ ತಾಲೂಕುಗಳನ್ನು ಹೊರತುಪಡಿಸಿ ವಿವಿಧ ಮಲೆನಾಡು ಭಾಗದಲ್ಲಿ ಪ್ರತಿಕ್ಷೇತ್ರದ ಜನಸಂಖ್ಯೆಯನ್ನು 18 ರಿಂದ 25 ಸಾವಿರಕ್ಕೆ ಮರುನಿಗದಿ ಮಾಡಲು ಈ ಕಾಯ್ದೆ ಅವಕಾಶ ಕಲ್ಪಿಸಲಿದೆ.
8
+ ರಾಜ್ಯದ ಉಳಿದ ಭಾಗಗಳಲ್ಲಿ ಪ್ರತಿಕ್ಷೇತ್ರದ ಜನಸಂಖ್ಯೆ 35 ರಿಂದ 45 ಸಾವಿರದಷ್ಟಿದೆ ಎಂದು ವಿವರಿಸಿದರು.ಶಾಸಕರಾದ ಎ.ಎಸ್.ಪನ್ನಣ್ಣ, ಮಂತರ್ಗೌಡ ಸೇರಿದಂತೆ ಕೆಲವು ಆಡಳಿತ ಪಕ್ಷದ ಶಾಸಕರು ಮಾತ್ರ ಚರ್ಚೆಯಲ್ಲಿ ಭಾಗವಹಿಸಿದ್ದರು.ಈ ನಾಲ್ಕು ವಿಧೇಯಕಗಳು ಯಾವುದೇ ಚರ್ಚೆಯಿಲ್ಲದೆ ಧ್ವನಿ ಮತದ ಮೂಲಕ ಅಂಗೀಕಾರಗೊಂಡವು. ನಂತರ ಯೋಜನೆ ಮತ್ತು ಸಾಂಖ್ಯಿಕ ಸಚಿವ ಸುಧಾಕರ್, ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕವನ್ನು ಮಂಡಿಸಿದರು.
9
+ ಈ ಹಂತದಲ್ಲಿ ಸಭಾಧ್ಯಕ್ಷರು, ಇದೇ ಪ್ರಮುಖ ವಿಚಾರ. ಕರಾವಳಿ ಭಾಗದ ಶಾಸಕರು ಚರ್ಚೆಯಲ್ಲಿ ಭಾಗವಹಿಸಿ ಎಂದು ಸಲಹೆ ನೀಡಿದರು. ಆದರೂ ಬಿಜೆಪಿಯ ವತಿಯಿಂದ ನಡೆಯುತ್ತಿದ್ದ ಧರಣಿ , ಸತ್ಯಾಗ್ರಹ, ಘೋಷಣೆಗಳ ಕೂಗಾಟ ಮುಂದುವರೆದಿತ್ತು. ಹೀಗಾಗಿ ಮತ್ತೊಮ್ಮೆ ಯಾವುದೇ ಚರ್ಚೆಯಿಲ್ಲದೆ ಒಟ್ಟು 5 ವಿಧೇಯಕಗಳು ಅಂಗೀಕಾರಗೊಂಡವು. ಸದನವನ್ನು ಈ ರೀತಿ ನಡೆಸುವುದು ಸರಿಯಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಚರ್ಚೆಯಿಲ್ಲದೆ ವಿಧೇಯಕಗಳನ್ನು ಅಂಗೀಕರಿಸುವುದು ಇಷ್ಟವಿಲ್ಲ. ಆದರೆ ಅಂತಹ ಪರಿಸ್ಥಿತಿಯನ್ನು ಇಲ್ಲಿ ನಿರ್ಮಿಸಲಾಗಿದೆ ಎಂದು ವಿಷಾದಿಸಿದರು.
10
+ ವಿಧೇಯಕಗಳನ್ನು ಪರ್ಯಾಲೋಚನೆಪಡಿಸಿದ ವೇಳೆ ಹಲವಾರು ಬಾರಿ ಚರ್ಚೆಯಲ್ಲಿ ಭಾಗವಹಿಸುವಂತೆ ಶಾಸಕರಿಗೆ ಮನವಿ ಮಾಡಲಾಯಿತು. ಗದ್ದಲದ ವಾತಾವರಣದಿಂದಾಗಿ ಆಡಳಿತ ಮತ್ತು ಪ್ರತಿಪಕ್ಷ ಎರಡೂ ಕಡೆಯಿಂದಲೂ ಚರ್ಚೆಗೆ ಆಸಕ್ತಿ ಕಂಡುಬರಲಿಲ್ಲ. ವಿರೋಧಪಕ್ಷದ ನಾಯಕರು ಶುಕ್ರವಾರದ ಕಲಾಪದ ದಿನ ಸೋಮವಾರ ವಿಧೇಯಕಗಳ ಅಂಗೀಕಾರಕ್ಕೆ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿ ಏಕಾಏಕಿ ಧರಣಿ ನಡೆಸಲಾಗುತ್ತಿದೆ. ಇದು ಸರಿಯಲ್ಲ ಎಂದು ವಿಧಾನಸಭಾಧ್ಯಕ್ಷರು ಅಸಮಾಧಾನ ಹೊರಹಾಕಿದರು.
eesanje/url_46_290_12.txt ADDED
@@ -0,0 +1,6 @@
 
 
 
 
 
 
 
1
+ ಮಂಗನ ಕಾಯಿಲೆ ತಡೆಗೆ ಶೀಘ್ರ ಹೊಸ ಲಸಿಕೆ : ದಿನೇಶ್ ಗುಂಡೂರಾವ್
2
+ ಬೆಳಗಾವಿ, ಡಿ.11- ಮಂಗನ ಕಾಯಿಲೆ ತಡೆಗೆ ಶೀಘ್ರದಲ್ಲೇ ಹೊಸ ಲಸಿಕೆ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನ ಪರಿಷತ್ತಿಗೆ ತಿಳಿಸಿದರು.
3
+ ಶೂನ್ಯ ವೇಳೆಯಲ್ಲಿ ಬಿಜೆಪಿ ಸದಸ್ಯ ಬಿ.ಎಸ್.ಅರುಣ್ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಮಲೆನಾಡಿಗರನ್ನು ಬಿಟ್ಟು ಬಿಡದೆ ಕಾಡುತ್ತಿರುವ ಕೆಎಫ್ ಡಿ ಸಮಸ್ಯೆಯನ್ನು ಸರ್ಕಾರ ಗಂಭೀರ ಪರಿಗಣಿಸಿದೆ. ಹಾಗಾಗಿ, ಐಸಿಎಂಆರ್ ನೊಂದಿಗೆ ಚರ್ಚೆ ನಡೆಸಿದ್ದು, ಹೊಸ ಲಸಿಕೆ ಸಂಶೋಧನೆ ನಡೆಸಲಾಗುತ್ತಿದೆ ಎಂದರು.
4
+ ಸ್ಪೀಕರ್ ಸ್ಥಾನದ ಕುರಿತು ಹೇಳಿಕೆ, ಜಮೀರ್ ವಜಾಕ್ಕೆ ಪಟ್ಟು, ವಿಧಾನಸಭೆಯಲ್ಲಿ ವಾಕ್ಸಮರ
5
+ ಮಂಗನ ಕಾಯಿಲೆ ತಡೆಗೆ ನೀಡುತ್ತಿದ್ದ ಲಸಿಕೆ ವಿತರಣೆಯನ್ನು ಸ್ಥಗಿತ ಮಾಡಲಾಗಿದೆ. ಏಕೆಂದರೆ ಈ ಲಸಿಕೆ ಯಾವುದೇ ರೀತಿಯ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಹೀಗಾಗಿ, ಖಾಸಗಿ ಕಂಪನಿಯ ಸಹಯೋಗದೊಂದಿಗೆ ಸಂಶೋಧನೆ ನಡೆಸಲಾಗುತ್ತಿದೆ ಎಂದು ಹೇಳಿದರು.
6
+ ಮಂಗನ ಕಾಯಿಲೆ ಅತೀ ಕಡಿಮೆ ಜನರಿಗೆ ಬಾಸುತ್ತಿರುವ ಕಾರಣದಿಂದಲೇ ಇತರೆ ಕಂಪನಿಗಳು ಈ ಲಸಿಕೆ ಕಂಡು ಹಿಡಿಯಲು ಮುಂದಾಗುತ್ತಿಲ್ಲ.ಆದರೂ, ಸರ್ಕಾರ ಸಂಶೋಧನೆ ಗೆ ಧನ ಸಹಾಯ ನೀಡುವುದಾಗಿಯೂ ತಿಳಿಸಿದ್ದು, ಶೀಘ್ರವಾಗಿ ಹೊಸ ಲಸಿಕೆಯನ್ನು ರೋಗಿಗಳಿಗೆ ನೀಡಲಾಗುವುದು ಎಂದೂ ಸಚಿವರು ತಿಳಿಸಿದರು.
eesanje/url_46_290_2.txt ADDED
@@ -0,0 +1,10 @@
 
 
 
 
 
 
 
 
 
 
 
1
+ ಜಮೀರ್ ವಿರುದ್ಧದ ಪ್ರತಿಭಟನೆ ಹಿಂಪಡೆದ ಪ್ರತಿಪಕ್ಷಗಳು
2
+ ಬೆಳಗಾವಿ, ಡಿ.12- ಸಚಿವ ಜಮೀರ್ ಅಹಮ್ಮದ್ಖಾನ್ ರ ಹೇಳಿಕೆಯನ್ನು ವಿರೋಸಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ನಿನ್ನೆಯಿಂದ ನಡೆಸುತ್ತಿದ್ದ ಧರಣಿಯನ್ನು ಇಂದು ಹಿಂಪಡೆದರು. ವಿಧಾನಸಭೆಯ ಕಲಾಪದ ಆರಂಭದಲ್ಲೇ ವಿಪಕ್ಷಗಳ ಶಾಸಕರು ಧರಣಿಯನ್ನು ಮುಂದುವರೆಸಿದರು. ಗೃಹಸಚಿವ ಪರಮೇಶ್ವರ್ ಅವರು ಎದ್ದು ನಿಂತು, ಇಡೀ ದೇಶವೇ ನಮ್ಮನ್ನು ನೋಡುತ್ತಿದೆ.
3
+ ಇಲ್ಲಿ ಗಂಭೀರ ಚರ್ಚೆಗಳು ನಡೆಯಬೇಕು. ನಿನ್ನೆಯಿಂದಲೂ ಧರಣಿ ನಡೆಸುತ್ತಿದ್ದೀರ. ಇದರಿಂದಾಗಿ ಪ್ರಶ್ನೋತ್ತರ ಕಲಾಪ, ಶೂನ್ಯವೇಳೆ ಗಮನ ಸೆಳೆಯುವ ಸೂಚನೆ. ಶಾಸನ ರಚನೆ ಸೇರಿದಂತೆ ಮಹತ್ವದ ಕಲಾಪಗಳಲ್ಲಿ ಪ್ರತಿಪಕ್ಷಗಳ ಶಾಸಕರು ಭಾಗವಹಿಸಿರಲಿಲ್ಲ ಎಂದು ವಿಷಾದಿಸಿದರು.
4
+ ಬರದ ಮೇಲೆ ಚರ್ಚೆಯಾಗಿದೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತು ಚರ್ಚೆಗಳು ನಡೆಯಬೇಕಿದೆ. ಅದರಲ್ಲಿ ಅವರು ಭಾಗವಹಿಸಬೇಕು. ರಾಜ್ಯದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕಿದೆ. ಈ ನಿಟ್ಟಿನಲ್ಲಿ ಧರಣಿ ಕೈಬಿಟ್ಟು ಕಲಾಪದಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು.
5
+ ವಿಪಕ್ಷ ನಾಯಕ ಆರ್.ಅಶೊಕ್ ಮಾತನಾಡಲು ಎದ್ದು ನಿಂತಾಗ ಸಭಾಧ್ಯಕ್ಷರು ಮಧ್ಯಪ್ರವೇಶಿಸಲು ಯತ್ನಿಸಿದರು. ನಮಗೂ ಮಾತನಾಡಲು ಅವಕಾಶ ನೀಡಬೇಕು. ಸಭಾಧ್ಯಕ್ಷರು ಆಡಳಿತ ಪಕ್ಷದ ಕಡೆಗಷ್ಟೇ ನೋಡಬಾರದು, ನಮ್ಮನ್ನೂ ಗಮನಿಸಬೇಕು. ಗೃಹಸಚಿವರು ಮಾತನಾಡಲು ಅವಕಾಶ ಕೊಟ್ಟಿದ್ದೀರ. ನಾನು ಮಾತನಾಡಲು ಎದ್ದು ನಿಲ್ಲುತ್ತಿದ್ದಂತೆ ಮಧ್ಯಪ್ರವೇಶ ಮಾಡುವುದು ಬೇಡ ಎಂದರು.
6
+ ಇನ್ಷ್ಯೂರೆನ್ಸ್ ಕಂಪೆನಿ ಹೆಸರಲ್ಲಿ ಯಾಮಾರಿಸ್ತಾರೆ ಹುಷಾರ್..!
7
+ ಗೃಹಸಚಿವರು ಇದೇ ಮಾತುಗಳನ್ನು ನಿನ್ನೆಯೇ ಹೇಳಬಹುದಿತ್ತು. ಆದರೆ ನಮ್ಮನ್ನು ಸತಾಯಿಸಿ ಕಾಲಾಹರಣ ಮಾಡಲಾಗಿದೆ. ಸರ್ಕಾರದ ದೌರ್ಜನ್ಯಗಳು ಹೆಚ್ಚಾಗಿವೆ. ಕೂಗಾಡಿ ನಮ್ಮ ಗಂಟಲು ಒಣಗಿದೆ. ಸದನದ ಯಾವುದೇ ಕಲಾಪಗಳಲ್ಲೂ ತಾವು ಭಾಗವಹಿಸಲಾಗಿಲ್ಲ. ಸರ್ಕಾರ ನಿನ್ನೆ ಮಂಡಿಸಿದ ವಿವಿಧ ಮಸೂದೆಗಳಲ್ಲಿ ಜನರ ಮೇಲೆ 2500 ಕೋಟಿ ರೂ. ತೆರಿಗೆ ವಿಸಿದೆ. ಇದರ ಬಗ್ಗೆ ನಾವು ಪ್ರಸ್ತಾಪಿಸಬೇಕಿದೆ ಎಂದು ಅವರು ಹೇಳಿದರು.
8
+ ಸಂವಿಧಾನಬದ್ಧವಾದ ಸಭಾಧ್ಯಕ್ಷರ ಪೀಠಕ್ಕೆ ಅಗೌರವ ಆಗಿದೆ ಎಂಬುದಷ್ಟೇ ನಮ್ಮ ಕಳಕಳಿ. ಇದರಲ್ಲಿ ವೈಯಕ್ತಿಕ ವಿಚಾರಗಳಿಲ್ಲ ಎಂದರು.ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಚರ್ಚೆಯಾಗಬೇಕೆಂಬುದು ನಮ್ಮ ಕಾಳಜಿ. ಬಸನಗೌಡ ಪಾಟೀಲ್ ಯತ್ನಾಳ್ ಅವರು ಈ ಬಗ್ಗೆ ತಮ್ಮೊಂದಿಗೆ ಚರ್ಚೆ ಮಾಡಿದ್ದಾರೆ. ನಾವು ಧರಣಿಯನ್ನು ಹಿಂಪಡೆಯುತ್ತಿದ್ದೇವೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗಳ ಕುರಿತು ಚರ್ಚೆಯನ್ನು ಆದ್ಯತೆ ಮೇರೆಗೆ ತೆಗೆದುಕೊಳ್ಳಬೇಕು. ಅಗತ್ಯವಾದರೆ ಪ್ರಶ್ನೋತ್ತರ ಸೇರಿದಂತೆ ಎಲ್ಲಾ ಕಲಾಪಗಳನ್ನೂ ಬದಿಗಿರಿಸಿ ಎಂದು ಸಲಹೆ ನೀಡಿದರು.
9
+ ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ಜಮೀರ್ ಅವರ ಹೇಳಿಕೆ ಬಗ್���ೆ ಈಗಾಗಲೇ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಅದರ ಹೊರತಾಗಿಯೇ ಸರ್ಕಾರ, ವಿಪಕ್ಷಗಳು ಮತ್ತು ತನ್ನ ಪೀಠದ ಪ್ರತ್ಯೇಕ ಅಭಿಪ್ರಾಯಗಳನ್ನು ಹೊಂದಿರುವುದು ಸರಿಯಲ್ಲ. ಹೇಳಿಕೆ ನೀಡಿ ಒಂದು ತಿಂಗಳು ಕಳೆದಿವೆ. ಕಳೆದ ಒಂದು ವಾರದಿಂದ ಸದನ ಉತ್ತಮವಾಗಿ ನಡೆಯುತ್ತಿತ್ತು. ವಿಪಕ್ಷ ನಾಯಕರು ನಿನ್ನೆ ಏಕಾಏಕಿ ವಿಷಯ ಪ್ರಸ್ತಾಪಿಸಿ ಧರಣಿ ನಡೆಸುವುದು ಸರಿಯಲ್ಲ.
10
+ ನಿಯಮಾನುಸಾರ ನೋಟಿಸ್ ಕೊಟ್ಟರೆ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು. ಸಭಾಧ್ಯಕ್ಷ ಪೀಠ, ಸದನ, ಶಾಸಕರ ಗೌರವ ತಿಳಿಯಬೇಕು ಎಂಬುದು ಎಲ್ಲರ ಕಾಳಜಿಯಾಗಿದೆ. ನಿಯಮಬದ್ಧವಾಗಿ ಕಾರ್ಯಕಲಾಪ ನಡೆಸುವುದು ನಮ್ಮ ಬದ್ಧತೆ ಎಂದು ಹೇಳಿದರು.ಬಳಿಕ ವಿಪಕ್ಷಗಳ ಶಾಸಕರು ಧರಣಿಯನ್ನು ಹಿಂಪಡೆದರು.
eesanje/url_46_290_3.txt ADDED
@@ -0,0 +1,11 @@
 
 
 
 
 
 
 
 
 
 
 
 
1
+ ರಾಜ್ಯದಲ್ಲಿ ಹುಕ್ಕಾ ಬಾರ್‌ಗಳ ನಿಯಂತ್ರಣಕ್ಕೆ ಕ್ರಮ : ಗೃಹಸಚಿವ ಪರಮೇಶ್ವರ್
2
+ ಬೆಳಗಾವಿ, ಡಿ.12- ರಾಜ್ಯದಲ್ಲಿ ಹುಕ್ಕಾ ಬಾರ್‌ಗಳನ್ನು ನಿಯಂತ್ರಿಸಲು ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಶಾಸಕರಾದ ಸಿ.ಕೆ.ರಾಮಮೂರ್ತಿ ಅವರ ತಡೆಹಿಡಿಯಲಾದ ಪ್ರಶ್ನೆ ಇಂದು ಸದನದಲ್ಲಿ ಗಂಭೀರ ಚರ್ಚೆಗೆ ಕಾರಣವಾಯಿತು.
3
+ ಬೆಂಗಳೂರಿನಲ್ಲಿ ಇತ್ತೀಚೆಗೆ ಹುಕ್ಕಾಬಾರ್ಗಳ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ. ದೆಹಲಿಯ ನಂತರ ಅತೀ ಹೆಚ್ಚು ಹುಕ್ಕಾಬಾರ್ಗಳ ಸಂಖ್ಯೆ ಬೆಂಗಳೂರಿನಲ್ಲಿ ಇದೆ ಎಂದು ಆಕ್ಷೇಪಿಸಿದರು.ಬಿಜೆಪಿ ಶಾಸಕ ಸುರೇಶ್ಕುಮಾರ್ ಮಧ್ಯಪ್ರವೇಶಿಸಿ ಪಂಜಾಬ್, ಗುಜರಾತ್, ರಾಜಸ್ಥಾನ, ಉತ್ತರಾಖಾಂಡ್, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ 10 ರಾಜ್ಯಗಳಲ್ಲಿ ಹುಕ್ಕಾಬಾರ್ಗಳನ್ನು ನಿಷೇಸಲಾಗಿದೆ. ಹುಕ್ಕಾಬಾರ್ಗಳಲ್ಲಿನ ಧೂಮಪಾನ, ಸಿಗರೇಟ್ ಸೇವನೆಗಿಂತಲೂ ಇನ್ನೂರು ಪಟ್ಟು ಹೆಚ್ಚು ಹಾನಿಕರ. ಹೀಗಾಗಿ ಸಂಪೂರ್ಣ ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.
4
+ ಅರವಿಂದ್ ಬೆಲ್ಲದ್ ಮಾತನಾಡಿ, ಪಂಜಾಬಿನಲ್ಲಿ ತಮ್ಮ ಮಕ್ಕಳು ಅಮಲಿಗೆ ಸಿಲುಕಬಾರದು ಎಂಬ ಕಾರಣಕ್ಕೆ 15, 16 ವರ್ಷಕ್ಕೆ ರಾಜ್ಯದಿಂದ ಹೊರಗೆ ಕಳುಹಿಸುತ್ತಿದ್ದಾರೆ. ಹುಕ್ಕಾಬಾರ್ಗಳು ಮಾದಕವಸ್ತುವಿನ ಆರಂಭಿಕ ಹಂತ. ಇದನ್ನು ಸಂಪೂರ್ಣ ನಿಷೇಧ ಮಾಡಬೇಕು ಎಂದು ಒತ್ತಾಯಿಸಿದರು.
5
+ ಹೊಸ ವರ್ಷಕ್ಕೆ ಸಂಗ್ರಹಿಸಿದ್ದ 21ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ
6
+ ಗೃಹಸಚಿವ ಡಾ.ಜಿ.ಪರಮೇಶ್ವರ್, ಬೆಂಗಳೂರು ಹಾಗೂ ಬೇರೆ ಪ್ರದೇಶಗಳಲ್ಲಿ ಹುಕ್ಕಾಬಾರ್ಗಳ ಪ್ರಮಾಣ ಹೆಚ್ಚಾಗಿದೆ. ದೊಡ್ಡ ಪೈಪ್ನಲ್ಲಿ ಬೇರೆ ಬೇರೆ ರೀತಿಯ ಫ್ಲೇವರ್ಗಳನ್ನು ಸೇರಿಸಿ ಧೂಮಪಾನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಇವುಗಳಿಗೆ ಬಿಬಿಎಂಪಿ ಟ್ರೇಡ್ ಲೈಸೆನ್ಸ್ ನೀಡುತ್ತಿಲ್ಲ. ಹುಕ್ಕಾಬಾರ್ಗಳ ಮಾಲಿಕರು 2022 ರಿಂದಲೂ ರಾಷ್ಟ್ರೀಯ ಆಹಾರ ಸುರಕ್ಷತಾ ಪ್ರಾಕಾರ (ಫುಡ್ ಸೇಫ್ಟಿ ಅಥಾರಿಟಿ ಆಫ್ ಇಂಡಿಯಾ) ದಿಂದ ಅನುಮತಿ ಪಡೆದು ಹುಕ್ಕಾಬಾರ್ಗಳನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ನ್ಯಾಯಾಲಯ ಈ ಕುರಿತು ತೀರ್ಪು ನೀಡಿದ್ದು, ಕಾಫಿ ಬಾರ್, ಟೀ ಬಾರ್ನಂತಹ ವಾಣಿಜ್ಯ ಪ್ರದೇಶಗಳಲ್ಲೇ ಪ್ರತ್ಯೇಕವಾದ ಜಾಗ ಮೀಸಲಿರಿಸಿ ಹುಕ್ಕಾಬಾರ್ ನಡೆಸಬಹುದು ಎಂದು ತಿಳಿಸಿದರು.
7
+ ನಿಯಮಗಳನ್ನು ಪಾಲನೆ ಮಾಡದೇ ಇದ್ದ ವೇಳೆ ದೂರು ಬಂದರೆ ಪೊಲೀಸರು ಸ್ಥಳ ಪರಿಶೀಲನೆ ಮಾಡಲು ಅವಕಾಶವಿದೆ. ಆದರೆ ಹುಕ್ಕಾಬಾರ್ಗಳ ಮೇಲೆ ನಿಯಂತ್ರಣ ಸಾಸಲು ನಮಗೆ ಅವಕಾಶಗಳಿಲ್ಲವಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.ಕಳೆದ ಅಕ್ಟೋಬರ್ 19 ರಂದು ಕೋರಮಂಗಲದಲ್ಲಿ ಬೆಂಕಿ ಅನಾಹುತ ಸಂಭವಿಸಿತ್ತು. ಅದರಲ್ಲಿ ಮೂರನೇ ಮಹಡಿಯಲ್ಲಿ 14 ಗ್ಯಾಸ್ ಸಿಲಿಂಡರ್ಗಳನ್ನು ಇರಿಸಲಾಗಿತ್ತು. ಬೆಂಕಿ ಅನಾಹುತ ಸಂಭವಿಸಿದಾಗ ಅದೃಷ್ಟವಶಾತ್ ಯಾವುದೇ ಪ��ರಾಣಹಾನಿಯಾಗಿಲ್ಲ. ಕೆಲವರಿಗೆ ಗಾಯಗಳಾಗಿವೆ.
8
+ ವ್ಯಕ್ತಿಯೊಬ್ಬರು ಮೂರನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾರೆ. ಆತ ಮರದ ಮೇಲೆ ಬಿದ್ದಿರುವುದರಿಂದ ಅವರು ಪವಾಡದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹುಕ್ಕಾಬಾರ್ಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಯುವಕರ ಭವಿಷ್ಯದ ದೃಷ್ಟಿಯಿಂದ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಹೀಗಾಗಿ ವಿವಿಧ ಇಲಾಖೆಗಳೊಂದಿಗೆ ಚರ್ಚಿಸಿ ಪ್ರತ್ಯೇಕ ಕಾನೂನು ರೂಪಿಸಲಾಗುವುದು ಎಂದು ಹೇಳಿದರು. ಈ ಹಿಂದೆ 4 ವರ್ಷ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಹುಕ್ಕಾಬಾರ್ಗಳನ್ನು ನಿಷೇಸಿದ್ದರೆ ಇಂದು ಸಮಸ್ಯೆಯೇ ಇರುತ್ತಿರಲಿಲ್ಲ. ನನ್ನ ಬಗ್ಗೆ ನಿಷೇಧ ಸಮಸ್ಯೆಗೆ ಪರಿಹಾರ ಅಲ್ಲ. ಅದನ್ನು ನಿಯಂತ್ರಣ ಮಾಡುವುದು ಸೂಕ್ತ ಎಂದರು.
9
+ 20 ಕೋಟಿ ರೂ. ಮೌಲ್ಯದ ಡ್ರಗ್ ವಶ :ಮಾದಕವಸ್ತುಗಳು ಹಾಗೂ ಹುಕ್ಕಾಬಾರ್ಗಳ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಪೊಲೀಸರು ಸಾಮಾಜಿಕವಾದ ಈ ಪಿಡುಗುಗಳ ವಿರುದ್ಧ ನಿರಂತರವಾದ ಕಾರ್ಯಾಚರಣೆ ನಡೆಸುತ್ತಲೇ ಬಂದಿದ್ದಾರೆ.
10
+ ಬೆಂಗಳೂರಿನಲ್ಲಿ ನಿನ್ನೆ 20 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ನೈಜೀರಿಯಾ ಮೂಲದ ವ್ಯಕ್ತಿಯೊಬ್ಬ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ದಾಸ್ತಾನು ಮಾಡಿಕೊಂಡಿದ್ದ. ಪೊಲೀಸರು ಕ್ರಮ ಕೈಗೊಂಡು 20 ಕೋಟಿ ರೂ. ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿಸಿದರು.
11
+ ಕಳೆದ 4 ವರ್ಷಗಳಲ್ಲಿ ನಿಯಮ ಉಲ್ಲಂಘನೆ ಮಾಡಿದ 102 ಪ್ರಕರಣಗಳನ್ನು ದಾಖಲಿಸಲಾಗಿದೆ. 2020 ರಲ್ಲಿ 14, 2021 ರಲ್ಲಿ 25, 2022 ರಲ್ಲಿ 38, 2023 ರಲ್ಲಿ 25 ಪ್ರಕರಣಗಳು ದಾಖಲಾಗಿವೆ ಎಂದು ವಿವರಣೆ ನೀಡಿದರು.
eesanje/url_46_290_4.txt ADDED
@@ -0,0 +1,12 @@
 
 
 
 
 
 
 
 
 
 
 
 
 
1
+ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಪ್ರಕರಣ
2
+ ಬೆಳಗಾವಿ, ಡಿ.12- ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣದಲ್ಲಿ ರಾಜ್ಯಸರ್ಕಾರ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಭರ ವಸೆ ನೀಡಿದ್ದಾರೆ.ವಿಧಾನಸಭೆಯ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ವಿ.ಸುನಿಲ್ಕುಮಾರ್ ಅವರು ಘಟನೆಯನ್ನು ಖಂಡಿಸಿದರು.
3
+ ನಮ್ಮ ರಾಜ್ಯದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿದ ಪ್ರಕರಣಗಳು ನಡೆದಿರಲಿಲ್ಲ. ಇತ್ತೀಚೆಗೆ ಜನರಿಗೆ ಪೊಲೀಸರ ಮೇಲಿನ ಭಯ ಕಡಿಮೆಯಾಗಿದೆ. ಅದಕ್ಕಾಗಿ ಇಂತಹ ಘಟನೆಗಳು ನಡೆಯುತ್ತಿವೆ. ಸರ್ಕಾರ ಆರೋಪಿಗಳ ವಿರುದ್ಧ ಉಗ್ರ ಕ್ರಮ ಕೈಗೊಳ್ಳಬೇಕು. ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
4
+ ಬೆಳಗಾವಿ ಜಿಲ್ಲೆ ಶಾಸಕರಾದ ಶಶಿಕಲಾ ಜೊಲ್ಲೆ ಮತ್ತು ಕಾಂಗ್ರೆಸ್ನ ಅಶೋಕ್ ಪಟ್ಟಣ್ ಅವರು ಇದಕ್ಕೆ ಬೆಂಬಲ ವ್ಯಕ್ತಪಡಿಸಿದರು.ಇದಕ್ಕೆ ಉತ್ತರ ನೀಡಿದ ಸಚಿವ ಡಾ.ಜಿ.ಪರಮೇಶ್ವರ್, ಸದಸ್ಯರಿಗೆ ಲಿಖಿತ ಉತ್ತರವನ್ನು ಕಳುಹಿಸಿಕೊಡುತ್ತೇನೆ. ಆದರೆ ಸದ್ಯಕ್ಕೆ ಸದಸ್ಯರ ಪ್ರಸ್ತಾಪಕ್ಕೆ ಮೌಖಿಕ ಮಾಹಿತಿ ನೀಡುವುದಾಗಿ ತಿಳಿಸಿದರು.
5
+ ಮೊನ್ನೆ ರಾತ್ರಿ 12.30 ರ ಸುಮಾರಿಗೆ ಬೆಳಗಾವಿಯಿಂದ 15 ಕಿ.ಮೀ. ದೂರದಲ್ಲಿರುವ ಗ್ರಾಮದಲ್ಲಿ ಘಟನೆ ನಡೆದಿದೆ. ಅಶೋಕ್ ಗಟ್ಕರಿ 24 ವರ್ಷದ ಯುವಕ ಪ್ರಿಯಾಂಕ ಎಂಬುವರನ್ನು ಪ್ರೀತಿಸಿದ್ದಾರೆ. ಮದುವೆಗೆ ಕುಟುಂಬಗಳಿಂದ ಅನುಮತಿ ಸಿಕ್ಕಿಲ್ಲ. ಹೀಗಾಗಿ ಮೊನ್ನೆ 12.30 ಕ್ಕೆ ಅವರಿಬ್ಬರೂ ಓಡಿಹೋಗಿದ್ದಾರೆ.
6
+ ಹೊಸ ವರ್ಷಕ್ಕೆ ಸಂಗ್ರಹಿಸಿದ್ದ 21ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ
7
+ ಪ್ರಿಯಾಂಕ ಕುಟುಂಬದ 15 ರಿಂದ 20 ಜನರು ಹುಡುಗನ ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿರುವ ಯುವಕನ ತಾಯಿ 55 ವರ್ಷದ ಕಮಲಮ್ಮ ಒಂಟಿಯಾಗಿದ್ದರು. ಆಕೆಯ ಪತಿ ಚಾಲಕರಾಗಿದ್ದು, ಮಹಾರಾಷ್ಟ್ರದಲ್ಲಿದ್ದಾರೆ. ಇವರೆಲ್ಲರೂ ಮಹಿಳೆಯನ್ನು ಹೊರಗೆಳೆದುಕೊಂಡು ಬಂದು ವಿವಸ್ತ್ರಗೊಳಿಸಿ, ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ.
8
+ ಪೊಲೀಸರಿಗೆ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಧಾವಿಸಿ ಮಹಿಳೆಗೆ ಬಟ್ಟೆ ಕೊಟ್ಟು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಾನು ಆಸ್ಪತ್ರೆಗೆ ಹಾಗೂ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಅಮಾನವೀಯವಾಗಿ ನಡೆಸಿಕೊಂಡವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಇದರ ಜೊತೆಗೆ ಓಡಿ ಹೋಗಿರುವ ಆ ಇಬ್ಬರನ್ನೂ ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಘಟನೆಯಿಂದ ಆಘಾತಕ್ಕೊಳಗಾಗಿ ಅವರು ಆತ್ಮಹತ್ಯೆ ಮಾಡಿಕೊಳ್ಳಬಾರದೆಂಬ ಕಾಳಜಿ ವಹಿಸಿದ್ದೇನೆ ಎಂದರು.
9
+ ಪ್ರೀತಿ, ಪ್ರೇಮ ಸಹಜವಾದ ಪ್ರಕ್ರಿಯೆಗಳು. ಇಷ್ಟವಾದವರನ್ನು ಮದುವೆಯಾಗಲು ಹಲವು ಸಂದರ್ಭಗಳಲ್ಲಿ ಕುಟುಂಬದವರು ಒಪ್ಪಿಕೊಳ್ಳುತ್ತಾರೆ. ಇನ್ನೂ ಕ���ಲವು ಪ್ರಕರಣಗಳಲ್ಲಿ ವಿರೋಧಗಳಿರುತ್ತವೆ. ಮರ್ಯಾದೆಯ ಹೆಸರಿನಲ್ಲಿ ಸ್ವಂತ ಮಗಳನ್ನೇ ಕತ್ತರಿಸಿ ಹಾಕಿರುವ ಪ್ರಕರಣಗಳೂ ಇವೆ. ಸಮಾಜದ ಮನಸ್ಥಿತಿ ಬದಲಾಗಬೇಕು. ಪೊಲೀಸರು, ಕಾನೂನಿನಿಂದಲೇ ಎಲ್ಲವನ್ನೂ ಸರಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
10
+ ಮಹಿಳೆ ಮೇಲೆ ದೌರ್ಜನ್ಯ : ಕಠಿಣ ಕ್ರಮಕ್ಕೆ ಆಗ್ರಹಬೆಳಗಾವಿ,ಡಿ.12 – ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣ ಖಂಡನೀಯ. ಇಂಥ ಪ್ರಕರಣಗಳು ಮತ್ತೆ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮನವಿ ಮಾಡಿದರು.
11
+ ಮಾಧ್ಯಮ ಪ್ರತಿನಿಗಳ ಜೊತೆ ಮಾತನಾಡಿದ ಅವರು, ವಂಟಮೂರಿಯ ಘಟನೆ ಬಗ್ಗೆ ನಾವು ಪ್ರತಿಯೊಬ್ಬರೂ ತಲೆತಗ್ಗಿಸುವಂತೆ ಮಾಡಿದೆ. ನಾಗರಿಕ ಸಮಾಜದಲ್ಲಿ ಈ ರೀತಿ ಅಮಾನವೀಯವಾಗಿ ಆ ತಾಯಿಯನ್ನು ಗಂಟೆಗಟ್ಟಲೆ ಕಟ್ಟಿಹಾಕಿ ಇಂಥ ಘಟನೆ ನಡೆದುದು ಖಂಡನಾರ್ಹ ಎಂದರು.
12
+ ಇಂಥ ಘಟನೆ ಪುನರಾವರ್ತನೆ ಆಗಬಾರದು. ದೇಶದ ಜನರ ಮುಂದೆ ತಲೆತಗ್ಗಿಸುವಂಥ ಇಂಥ ಘಟನೆ ಮರುಕಳಿಸದಂತೆ ರಾಜ್ಯ ಸರಕಾರ ಮತ್ತು ಗೃಹ ಸಚಿವರು, ಪೊಲೀಸ್ ಇಲಾಖೆಗೆ ಸ್ಪಷ್ಟ ಸಂದೇಶ ಕೊಡಬೇಕು ಎಂದು ಅವರು ಮನವಿ ಮಾಡಿದರು. ಈ ರೀತಿಯ ಘಟನೆ ಕುರಿತು ಯಾರೂ ಯೋಚಿಸದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
eesanje/url_46_290_5.txt ADDED
@@ -0,0 +1,7 @@
 
 
 
 
 
 
 
 
1
+ ರಾಜಭವನಕ್ಕೆ ಬಾಂಬ್ ಬೆದರಿಕೆ ಕರೆ
2
+
3
+ ಬೆಂಗಳೂರು, ಡಿ.12- ಭಾರೀ ಭದ್ರತೆಯಿರುವ ರಾಜಭವನದಲ್ಲಿ ಬಾಂಬ್ ಇಡಲಾಗಿದೆ ಎಂಬ ಅನಾಮಧೇಯ ಕರೆಯಿಂದ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು. ನಗರದಲ್ಲಿ 60 ಕ್ಕೂ ಹೆಚ್ಚು ಖಾಸಗಿ ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎಂಬ ಇ-ಮೇಲ್ ಸಂದೇಶ ಕಳುಹಿಸಿ ಆತಂಕವನ್ನುಂಟು ಮಾಡಿದ್ದ ಘಟನೆ ಮಾಸುವ ಮುನ್ನವೇ ಇಂದು ರಾಜಭವನದಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ಕರೆಬಂದಿರುವುದು ಪೊಲೀಸರ ನಿದ್ದೆಗೆಡೆಸಿದೆ.
4
+ ರಾತ್ರಿ 11.30 ರ ಸುಮಾರಿನಲ್ಲಿ ಎನ್‍ಐಎ ಕಂಟ್ರೋಲ್ ರೂಂಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ರಾಜಭವನದಲ್ಲಿ ಬಾಂಬ್ ಇಟ್ಟಿರುವುದಾಗಿ ತಿಳಿಸಿದ್ದಾನೆ. ತಕ್ಷಣ ಕಂಟ್ರೋಲ್ ರೂಂ ಸಿಬ್ಬಂದಿ ನಗರ ಪೊಲೀಸರಿಗೆ ಕರೆ ಮಾಡಿ ಮಾಹಿತಿ ರವಾನಿಸಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದರೂ ಯಾವುದೇ ಬಾಂಬ್ ಪತ್ತೆಯಾಗದಿದ್ದಾಗ ನಿಟ್ಟುಸಿರು ಬಿಟ್ಟರು.
5
+ ಬೆಂಗಳೂರಲ್ಲಿ ಅಕ್ರಮ ನೀರು ಸಂಪರ್ಕ ಹೊಂದಿದ್ದರೆ ಜೈಲು ಗ್ಯಾರಂಟಿ..!
6
+ ಇದೊಂದು ಹುಸಿ ಕರೆ ಎಂಬುದು ಖಚಿತವಾಗುತ್ತಿದ್ದಂತೆ ಎನ್‍ಐಎ ಕಂಟ್ರೋಲ್ ರೂಂ ಸಿಬ್ಬಂದಿಯಿಂದ ಕರೆ ಮಾಡಿದ ನಂಬರ್ ಪಡೆದು ವಿಧಾನಸೌಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಸಿ ಕರೆ ಮಾಡಿದ ವ್ಯಕ್ತಿಗಾಗಿ ಶೋಧ ನಡೆಸುತ್ತಿದ್ದಾರೆ.ಡಿ.1 ರಂದು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಸುಮಾರು 60 ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಹುಸಿ ಬಾಂಬ್ ಸಂದೇಶ ಬಂದಿದ್ದವು.
7
+ ಅಂದಿನ ಘಟನೆಗೆ ಸಂಬಂಸಿದಂತೆ ಆಯಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಇ-ಮೇಲ್ ರಿಜಿಸ್ಟ್ರೇಶನ್ ಲಾಗಿನ್ ಐಪಿ ಮಾಹಿತಿ, ಇ-ಮೇಲ್ ಚಾಟ್ ಸೇರಿದಂತೆ ಹಲವು ಮಾಹಿತಿ ನೀಡುವಂತೆ ಗೂಗಲ್‍ಗೆ ಪತ್ರ ಬರೆದು ವಿವರಣೆ ಕೇಳಿದ್ದಾರೆ. ಹುಸಿ ಬಾಂಬ್ ಸಂದೇಶ ಕಳುಹಿಸಿದ್ದ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಪೊಲೀಸ್ ಇಲಾಖೆ ಸರ್ವರ್ ಪ್ರೊವೈಡರ್‍ಗಳಿಗೆ ಪತ್ರ ಬರೆದು ಮಾಹಿತಿ ಕೇಳಿದ್ದಾರೆ.
eesanje/url_46_290_6.txt ADDED
@@ -0,0 +1,5 @@
 
 
 
 
 
 
1
+ ಬೀದಿ ನಾಯಿಗಳ ಸಮೀಕ್ಷೆ ಮಾಡಿ ಸಂತಾನಹರಣ ಶಸ್ತ್ರ ಚಿಕಿತ್ಸೆ : ಸಚಿವ ರಹೀಂ ಖಾನ್
2
+ ಬೆಳಗಾವಿ, ಡಿ.12- ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬೀದಿ ನಾಯಿಗಳ ಸಮೀಕ್ಷೆಯನ್ನು ಕೈಗೊಂಡು, ಸಂತಾನಹರಣ ಶಸ್ತ್ರ ಚಿಕಿತ್ಸೆ ಹಾಗೂ ರೋಗನಿರೋಧಕ ಲಸಿಕೆಯನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.
3
+ ಪ್ರಶ್ನೋತ್ತರ ಕಲಾಪದಲ್ಲಿಂದು ಬಿಜೆಪಿ ಸದಸ್ಯ ಡಿ.ಎಸ್.ಅರುಣ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬೀದಿನಾಯಿಗಳ ಸಂತಾನಹರಣ ಚಿಕಿತ್ಸೆಗೆ ನಗರ ಸ್ಥಳೀಯ ಸಂಸ್ಥೆಗಳು ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸೂಚಿಸಲಾಗಿದೆ ಎಂದರು.
4
+ ವಾಹನಗಳಿಗೆ ಹೈಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಕೆಗೆ ಫೆಬ್ರವರಿವರಿಗೆ ಕಾಲಾವಕಾಶ
5
+ ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟಲು ಸೂಕ್ತವಾದ ಪ್ರಮಾಣಿತ ಕಾರ್ಯಾಚರಣೆ ಅನುಷ್ಠಾನಗೊಳಿಸುವ ವಿಧಾನವನ್ನು ಕುರಿತು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಹಾಗೂ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ವತಿಯಿಂದ ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟುವ ಕಾಯ್ದೆ 2001 ರಡಿ ಪ್ರಾಣಿಗಳನ್ನು ರಕ್ಷಿಸಲು, ವಶಪಡಿಸಿಕೊಳ್ಳಲು ಮತ್ತು ಪ್ರಾಣಿಗಳ ಪಾಲನೆಗಾಗಿ ಶಿಷ್ಟಾಚಾರವನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.
eesanje/url_46_290_7.txt ADDED
@@ -0,0 +1,7 @@
 
 
 
 
 
 
 
 
1
+ ಆರ್ಟಿಕಲ್ 370 ಕುರಿತ ಸುಪ್ರೀಂ ಆದೇಶ ಸ್ವಾಗತಾರ್ಹ : ದೇವೇಗೌಡರು
2
+ ಹಾಸನ,ಡಿ.12- ಜಮ್ಮು ಮತ್ತು ಕಾಶ್ಮೀರಕ್ಕೆ 370 ನೇ ವಿಯಿಂದ ನೀಡಲಾದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ಅಸ್ತು ನೀಡಿರುವುದು ಸಂತಸ ತಂದಿದ್ದು, ಸುಪ್ರೀಂ ಆದೇಶವನ್ನು ಸ್ವಾಗತಿಸುತ್ತೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ .ದೇವೇಗೌಡ ತಿಳಿಸಿದರು.
3
+ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಟಿಕಲ್ 370 ಯಾವಾಗ ಕಾಶ್ಮೀರ ಕ್ಕೆ ಕೊಟ್ಟಿದ್ದಂತಹ ವಿಶೇಷ ಸವಲತ್ತು ಇದೆಯೋ ಅದನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ತಿದ್ದುಪಡಿ ತರುವುದರ ಮುಖೇನ ಆ ಒಂದು ಸವಲತ್ತನ್ನು ರದ್ದು ಮಾಡಿದೆ.
4
+ ಅದರಿಂದ ಬೇರೆ ರಾಜ್ಯಗಳಿಗೆ ಏನು ಅನುಕೂಲ ಆಗುತ್ತದೆಯೋ, ಅನ್ವಯ ಆಗುತ್ತದೆಯೋ, ಅದೇ ಕಾಶ್ಮೀರಕ್ಕೂ ಜಮ್ಮುಗೂ ಅನ್ವಯವಾಗಲಿದೆ ಎಂದು ಹೇಳಿದರು.ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಒಂದು ಕಡೆ ಮತ್ತೊಂದು ಕಡೆ ಎನ್‍ಡಿಎ ಇದ್ದು ನಾವು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಈ ರಾಷ್ಟ್ರದ ಮಹಾ ಜನತೆ ಇಂಡಿಯಾಗೆ ತೀರ್ಪು ಕೊಡುತ್ತಾರೋ ಅಥವಾ ಎನ್‍ಡಿಎ ಮೈತ್ರಿಕೂಟಕ್ಕೆ ತೀರ್ಪು ಕೊಡುತ್ತಾರೋ ಕಾದು ನೋಡಬೇಕು ಎಂದರು.
5
+ ವಾಹನಗಳಿಗೆ ಹೈಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಕೆಗೆ ಫೆಬ್ರವರಿವರಿಗೆ ಕಾಲಾವಕಾಶ
6
+ ಹಾಸನದಿಂದ ಲೋಕಸಭೆ ಚುನಾವಣೆಗೆ ಸ್ರ್ಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಹಾಸನದಲ್ಲಿ ಸಿಟ್ಟಿಂಗ್ ಎಂಪಿ ಇದ್ದು ಅವರೇ ಮುಂದುವರೆಯಲಿದ್ದಾರೆ ಎಂದು ಸ್ಪಷ್ಟಪಡಿಸಿದರು.ಮೇ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಅದಕ್ಕೆಲ್ಲ ಉತ್ತರ ಕೊಡುವುದಿಲ್ಲ ಎಂದು ಪ್ರತಿಕ್ರಿಯಿಸಿದರು.
7
+ ಕಡೆ ಕಾರ್ತಿಕ: ವಿಶೇಷ ಪೂಜೆಜಿಲ್ಲೆ ಹೊಳೆನರಸೀಪುರದ ಹರದನಹಳ್ಳಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ದಂಪತಿ ಸಮೇತರಾಗಿ ಹುಟ್ಟೂರಿನಲ್ಲಿ ಮನೆ ದೇವರ ಪೂಜೆ ನೆರವೇರಿಸಿ, ಕಾರ್ತಿಕ ಮಾಸದ ಕಡೇ ಸೋಮವಾರ ಹಿನ್ನೆಲೆಯಲ್ಲಿ ವಿಶೇಷ ಪೂಜೆ, ಹೋಮ ಹವನದಲ್ಲಿ ಭಾಗಿಯಾಗಿದ್ದರು.ಪುತ್ರ ರೇವಣ್ಣ ಹಾಗು ಪತ್ನಿ ಚೆನ್ನಮ್ಮ ಜೊತೆ ಹೆಚ್.ಡಿ.ದೇವೇಗೌಡರು ಪೂಜೆ ಸಲ್ಲಿಸಿದ್ದಾರೆ.
eesanje/url_46_290_8.txt ADDED
@@ -0,0 +1,6 @@
 
 
 
 
 
 
 
1
+ ಸರ್ಕಾರಿ ಜಾಗಕ್ಕೆ ‘ಈ ಜಾಗ ನಮ್ಮದು’ ಎಂದು ಬೋರ್ಡ್ ಹಾಕಿದ್ದಾರೆ : ಶಾಸಕ ಮುನಿರತ್ನ
2
+ ಬೆಳಗಾವಿ,ಡಿ.12-ರಾಜರಾಜೇಶ್ವರಿ ನಗರದಲ್ಲಿ ನಾವು ಎರಡು ಎಕರೆ ಜಾಗ ಸರ್ಕಾರಿ ಜಾಗದಲ್ಲಿ ಉದ್ಯಾನವನ ನಿರ್ಮಿಸಲು ಗುದ್ದಲಿ ಪೂಜೆ ಮಾಡಲಾಗಿತ್ತು ಆದರೆ ಈಗ ಯಾರೊ ಈ ಜಾಗ ನಮ್ಮದು ಎಂದು ಬೋರ್ಡ್ ಹಾಕಿದ್ದಾರೆ ಎಂದು ಬಿಜೆಪಿ ಶಾಸಕ ಮುನಿರತ್ನ ವಿಧಾನಸಭೆಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಬಗ್ಗೆ ಪ್ರಸ್ತಾಪಿಸಿದ್ದಾರೆ.
3
+ ನನ್ನ ಕ್ಷೇತ್ರದಲ್ಲಿ ನಾವು ಹಿಂದೆ ಪಾರ್ಕ್ ನಿರ್ಮಿಸಲು ಗುದ್ದಲಿ ಪೂಜೆ ಮಾಡಲಾಗಿತ್ತು ನಂತರ ಕಾಮಗಾರಿ ಆರಂಭಿಸಲು ಹೋದಾಗ ಚುನಾವಣೆ ನೀತಿಸಂಹಿತೆ ಇತ್ತು ಆದರೆ ಹೊಸ ಸರ್ಕಾರ ಬಂದ ಮೇಲೆ ಅಲ್ಲಿ ಖಾಸಗಿ ಸ್ವತ್ತು ಎಂದು ಬೋರ್ಡ್ ಹಾಕಿದ್ದಾರೆ. ನಾನು ಬಿಬಿಎಂಪಿ ಅಧಿಕಾರಿಗಳನ್ನು ಕರೆದು ಮಾತನಾಡಿದೆ ಆದರೆ ಕೋರ್ಟ್‍ನಲ್ಲಿ ಜಾಗ ಅವರಿಗೆ ಆಗಿದೆ ಅಂತ ಅಧಿಕಾರಿಗಳು ಹೇಳುತ್ತಿದ್ದಾರೆ. ಬೆಂಗಳೂರು ರಕ್ಷಣೆ ಮಾಡಬೇಕಾದದ್ದು ಉಸ್ತುವಾರಿ ಸಚಿವರ ಜವಾಬ್ದಾರಿ ,ಸರ್ಕಾರಿ ಭೂಮಿ ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು.
4
+ ಕೆಂಪು ಸಮುದ್ರದಲ್ಲಿ ತೈಲ ಸಾಗಿಸುತ್ತಿದ್ದ ಹಡಗಿನ ಮೇಲೆ ದಾಳಿ
5
+ ಡಿಸಿಎಂ ಡಿ ಕೆ ಶಿವಕುಮಾರ್ ಉತ್ತರಿಸಿ ಯಾವ ವಾರ್ಡ್‍ನಲ್ಲಿ ಹಿಗಾಗಿದೆ ಎಂದಾಗ ವಾರ್ಡ್ ನಂಬರ್ 73 ಕೊಟ್ಟಿಗೆಪಾಳ್ಯ ಎಂದು ಶಾಸಕ ಮುನಿರತ್ನ ಹೇಳಿದರು ಇದಕ್ಕೆ ಸರ್ಕಾರದ ಜಮೀನು ಕಬಳಿಕೆಗೆ ನಾವು ಬಿಡಲ್ಲ ನಾವು ತೆರವು ಗೋಳಿಸುವ ಪ್ರಯತ್ನ ಮಾಡುತ್ತೇವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
6
+ ಮತ್ತೆ ಎದ್ದು ನಿಂತ ಮುನಿರತ್ನ ಅವರು ಪ್ರಭಾವಿ ನಾಯಕರ ಹೆಸರು ಹೇಳಿ ಭೂಮಿ ಕಬಳಿಕೆ ಮಾಡಿದ್ದಾರೆ ಅವರ ಹೆಸರು ಹೇಳಲ್ಲ ಎಂದು ಕೇಳಿದರು ರಾಜರಾಜೇಶ್ವರಿ ನಗರದಲ್ಲಿ ನಿನಿಗಿಂತ ಯಾರಪ್ಪ ಪ್ರಭಾವಿ ಇದ್ದಾರೆ ಎಂದು ಹೇಳಿ ಡಿಸಿಎಂ ಡಿ ಕೆ ಶಿವಕುಮಾರ್ ಹಾಸ್ಯ ಚಟಾಕಿ ಹಾರಿಸಿದರು.
eesanje/url_46_290_9.txt ADDED
@@ -0,0 +1,7 @@
 
 
 
 
 
 
 
 
1
+ ವಾಹನಗಳಿಗೆ ಹೈಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಕೆಗೆ ಫೆಬ್ರವರಿವರಿಗೆ ಕಾಲಾವಕಾಶ
2
+
3
+ ಬೆಳಗಾವಿ : ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟರ್ ನಂಬರ್ ಪ್ಲೇಟ್ () ಕಡ್ಡಾಯಗೊಳಿಸಲಾಗಿದ್ದು, ಹಳೆ ವಾಹನಗಳಿಗೆ ನಂಬರ್ ಪ್ಲೇಟ್ ಬದಲಾಹಿಸಲು 2024ರ ಫೆಬ್ರವರಿವರಿಗೆ ಕಾಲಾವಕಾಶ ನೀಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ. ಶಾಸಕ ಯಶವಂತರಾಯ ಗೌಡ ಪಾಟೀಲ್ ರವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ಕೇಂದ್ರ ಸರ್ಕಾರದ ಆದೇಶದ ಅನುಸಾರ ರಾಜ್ಯದಲ್ಲಿ ೧-೦೪-೧೯ ನಂತರ ಮಾರಾಟವಾಗುವ ಎಲ್ಲ ವಾಹನಗಳಿಗೂ ನಂಬರ್ ಪ್ಲೇಟ್ ಕಡ್ಡಾಯ ವಾಗಿದ್ದು, ಹಳೆ ವಾಹನಗಳಿಗೆ ನಂಬರ್ ಪ್ಲೇಟ್ ಬದಲಾಯಿಸಲು 17-02-24 ವರಿಗೆ ಕಾಲಾವಕಾಶ ನೀಡಲಾಗಿದೆ.
4
+ ಹೆಚ್. ಎಸ್. ಆರ್.ಪಿ ಅಥವಾ ಹೈ ಸೆಕ್ಯುರಿಟಿ ರಿಜಿಸ್ಟರ್ ಪ್ಲೇಟ್ ಟ್ಯಾಮ್ ಪರ್ ಪ್ರೂಫ್ ಮತ್ತು ಮರುಬಳಕೆ ಮಾಡಲಾಗದ ಲಾಕ್‌ಗಳನ್ನು ಹೊಂದಿರುವ ನಂಬ‌ರ್ ಪ್ಲೇಟ್‌ನ ಹೊಸ ರೂಪವಾಗಿದೆ. ಒಮ್ಮೆ ನಂಬರ್ ಪ್ಲೇಟ್ ಅನ್ನು ಅಳವಡಿಸಿದರೆ, ಅದನ್ನು ಸುಲಭವಾಗಿ ತೆಗೆದುಹಾಕಲು ಸಾಧ್ಯವಾಗುವುದಿ. ನಂಬರ್ ಪ್ಲೇಟ್‌ನ್ನು ಬದಲಾಯಿಸಲು ಪ್ರಯತ್ನಿಸಿದಲ್ಲಿ ಅದು ನಾಶವಾಗುತ್ತದೆ.
5
+ ಕೇರಳದಲ್ಲಿ ಎಲ್ಲೆಂದರಲ್ಲಿ ಕಸ ಎಸೆದರೆ 50 ಸಾವಿರ ದಂಡ, ತಪ್ಪಿದರೆ 1ವರ್ಷ ಜೈಲು
6
+ ಪ್ಲೇಟ್‌ಗಳು ಒಂದೇ ರೀತಿಯ ಫಾಂಟ್ ಮತ್ತು ವಿನ್ಯಾಸವನ್ನು ಹೊಂದಿರುತ್ತದೆ ಮತ್ತು ನಂಬರ್ ಪ್ಲೇಟ್‌ ಎಡಭಾಗದಲ್ಲಿ ನೀಲಿ ಬಣ್ಣದ ಚಕ್ರವನ್ನು ಹೊಂದಿರುತ್ತದೆ. ಪ್ಲೇಟ್‌ನ ಉಳಿದ ಭಾಗದಲ್ಲಿ ವಾಹನ ವರ್ಗದ ಆಧಾರದ ಮೇಲೆ బణ ನಿರ್ಧರಿಸಲಾಗುತ್ತದೆ. ಉದಾಹರಣೆಗೆ ಖಾಸಗಿ ವಾಹನಗಳಿಗೆ ಬಣ್ಣದ ಹಿನ್ನೆಲೆಯಲ್ಲಿ ಕಪ್ಪು ಬಣ್ಣದ ಸಂಖ್ಯೆಗಳಿರುತ್ತವೆ. ನಂಬರ್ ಪ್ಲೇಟ್‌ನಲ್ಲಿ “ಇಂಡಿಯಾ” ಎಂಬ ಹಾಟ್ ಸ್ಟ್ಯಾಂಪ್ ಕೂಡ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
7
+ ಕಳೆದ ಮೂರು ವರ್ಷಗಳಲ್ಲಿ ದೋಷ ಪೂರಿತ ನಂಬ‌ರ್ ಪ್ಲೇಟ್ ಹೊಂದಿರುವ ವಾಹನಗಳ ವಿರುದ್ಧ ಒಟ್ಟು 71,796 ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ. ಮುಂದಿನ ಕಾಲಾವಕಾಶದ ವರಿಗೆ ದಂಡ ವಿಧಿಸದಂತೆ ಪೊಲೀಸ್ ಪತ್ರ ಬರೆಯಲಾಗಿದೆ ಎಂದು ಉತ್ತರ ನೀಡಿದ್ದಾರೆ. ಸಾರಿಗೆ ಇಲಾಖೆಯು ಹೆಚ್. ಎಸ್. ಆರ್.ಪಿ ನಂಬರ್ ಪ್ಲೇಟ್ ಗಳಿಗೆ ದರ ನಿಗದಿ ಮಾಡಿರುವುದಿಲ್ಲ, ಸದರಿ ದರವನ್ನು ಹೆಚ್. ಎಸ್. ಆರ್.ಪಿ ತಯಾರಿಕಾ ನಿಗದಿಪಡಿಸುತ್ತಾರೆ ಎಂದು ಸಚಿವರು ತಿಳಿಸಿದ್ದಾರೆ
eesanje/url_46_291_1.txt ADDED
@@ -0,0 +1,5 @@
 
 
 
 
 
 
1
+ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಸೋಲಾರ್ ತಂತಿ ಬೇಲಿ ಅಳವಡಿಕೆಗೆ ನಿರ್ಧರಿಸಿಲ್ಲ : ಖಂಡ್ರೆ
2
+ ಬೆಳಗಾವಿ, ಡಿ.11-ಆನೆ ಸೇರಿದಂತೆ ವನ್ಯ ಜೀವಿಗಳ ದಾಳಿ ಸಂಬಂಧ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಸೋಲಾರ್ ತಂತಿ ಬೇಲಿಯನ್ನು ಅಳವಡಿಸಲು ಸದ್ಯಕ್ಕೆ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.ಪ್ರಶ್ನೋತ್ತರ ಕಲಾಪದಲ್ಲಿಂದು ಕಾಂಗ್ರೆಸ್ ಸದಸ್ಯ ಕೆ.ಹರೀಶ್ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವನ್ಯಪ್ರಾಣಿಗಳಿಗಾಗಿ ಅರಣ್ಯ ಪ್ರದೇಶಗಳ ಒಳಗೆ ನೀರಿನ ಲಭ್ಯತೆ ಹೆಚ್ಚಿಸಲು ರಕ್ಷಿತಾರಣ್ಯಗಳಲ್ಲಿ ಕೆರೆಗಳ ನಿರ್ಮಾಣ ಹಾಗೂ ಪುನಶ್ಚೇತನ ಗೊಳಿಸಿ ವನ್ಯಪ್ರಾಣಿಗಳ ಆವಾಸ ಸ್ಥಾನವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಇದರಿಂದ ಕಾಡಾನೆ ಹಾಗೂ ವನ್ಯಪ್ರಾಣಿಗಳು ಕಾಡಿನಿಂದ ಹೊರಗೆ ಬಾರದಂತೆ ತಡೆಯಲಾಗುತ್ತಿದೆ ಎಂದರು.
3
+ ಅರಣ್ಯ ಪ್ರದೇಶಗಳಲ್ಲಿ ಹುಲ್ಲುಗಾವಲು ಸಂರಕ್ಷಣೆ ಹಾಗೂ ಅಭಿವೃದ್ಧಿಗೊಳಿಸಲು ಹೆಚ್ಚಿನ ಅರಣ್ಯ ಪ್ರದೇಶಗಳಲ್ಲಿ ದಟ್ಟವಾಗಿ ಬೆಳೆದ ಲಂಟಾನ ಮತ್ತು ಯುಪಟೋರಿಯಂ ಕಳೆಗಳಿಂದಾಗಿ ಹುಲ್ಲಿನ ಬೆಳವಣಿಗೆಗೆ ತೀವು ಅಡಚಣೆಯಾಗಿದೆ. ಅರಣ್ಯದಲ್ಲಿ ಹುಲ್ಲಿನ ಲಭ್ಯತೆ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಹುಲ್ಲು ಬೆಳೆಯುವ ಪ್ರದೇಶಗಳಲ್ಲಿ ಬೆಳದಿರುವ ಲಂಟಾನ ಮತ್ತು ಯುಪಟೋರಿಯಂ ಕಳೆಗಳನ್ನು ಕಿತ್ತು ಸ್ವಚ್ಛಗೊಳಿಸಿ ಅರಣ್ಯಕ್ಕೆ ಪೂರಕವಾದ ಹುಲ್ಲು ಬೆಳೆಯಲು ಅನುವು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
4
+ ಈರುಳ್ಳಿ ನಂತರ ಈಗ ಬೆಳ್ಳುಳ್ಳಿ ಬೆಲೆ ಏರಿಕೆ
5
+ ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ತಡೆಗಟ್ಟಲು ಅರಣ್ಯದಂಚಿನಲ್ಲಿ ಸೌರಶಕ್ತಿ ಬೇಲಿ ನಿರ್ಮಾಣ, ನಿರ್ವಹಣೆ, ಆನೆ ಕಂದಕ ನಿರ್ಮಾಣ, ನಿರ್ವಹಣೆ ಮಾಡಲಾಗಿದ್ದು, ರೈಲ್ವೆ ಹಳಿಗಳನ್ನು ಉಪಯೋಗಿಸಿ ಬ್ಯಾರಿಕೇಡ್ ನಿರ್ಮಿಸುವ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಅದೇ ರೀತಿ, ಕಾಡಾನೆ ಹಾವಳಿ ತುರ್ತು ನಿರ್ವಹಣೆಗಾಗಿ ಕ್ಷಿಪ್ರ ಕಾರ್ಯಪಡೆ ತಂಡಗಳನ್ನು ರಚಿಸಿ ನಿರ್ವಹಿಸಲಾಗುತ್ತಿದೆ. ಕಾಡಾನೆ ಹಿಮ್ಮೆಟ್ಟಿಸುವ ತಂಡಗಳನ್ನು ರಚಿಸಿ ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
eesanje/url_46_291_10.txt ADDED
@@ -0,0 +1,9 @@
 
 
 
 
 
 
 
 
 
 
1
+ ರಾಜ್ಯ ರಾಜಕೀಯದಲ್ಲಿ ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ..!
2
+ ಹಾಸನ,ಡಿ.10- ಕಾಂಗ್ರೆಸ್‍ನ ನಾಯಕರೊಬ್ಬರು 50 ಜನರನ್ನು ಕರೆದುಕೊಂಡು ಬರುವುದಾಗಿ ಕೇಂದ್ರದ ಬಿಜೆಪಿ ನಾಯಕರ ಬಳಿ ಹೋಗಿದ್ದ ಮಾಹಿತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 50 ಜನರನ್ನು ಕರೆದುಕೊಂಡು ಸಣ್ಣಪುಟ್ಟವರು ಬಿಜೆಪಿ ನಾಯಕರ ಬಳಿಗೆ ಹೋಗಲು ಆಗುತ್ತದೆಯೇ? ಐದಾರು ತಿಂಗಳು ರಿಲೀಫ್ ಕೊಡಿ ಎಂದು ಕೇಂದ್ರದ ಬಿಜೆಪಿ ನಾಯಕರ ಬಳಿಗೆ ಹೋಗಿದ್ದಾರೆ ಎಂದು ಆರೋಪಿಸಿದರು.
3
+ ಮಾಡಿರುವ ಅಕ್ರಮಗಳನ್ನು ಸರಿಪಡಿಸಿಕೊಳ್ಳಲು ಹೋಗಿರುವ ಮಾಹಿತಿ ಇದೆ. ಬಿಜೆಪಿ ನಾಯಕರ ಬಳಿ ವ್ಯಾಪಾರ ಮಾಡಲು ಹೋಗಿದ್ದಾರೆ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೆ ಕುಮಾರಸ್ವಾಮಿ ಆರೋಪ ಮಾಡಿದರು. ಯಾರು ಯಾರಿಗೂ ನಿಷ್ಠೆ, ಪ್ರಾಮಾಣಿಕತೆ ಇಲ್ಲ. ಅವರವರ ಅನುಕೂಲಕ್ಕೆ ತಕ್ಕಂತೆ ಮಾಡುತ್ತಾರೆ.
4
+ ಲೋಕಸಭೆ ಚುನಾವಣೆ ಬಳಿಕ ಈ ಸರ್ಕಾರ ಏನಾಗಲಿದೆ ಎಂಬುದು ಗೊತ್ತಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಮಹಾರಾಷ್ಟ್ರದಲ್ಲಿ ನಡೆದ ರೀತಿಯಲ್ಲಿ ಕರ್ನಾಟಕದಲ್ಲೂ ಯಾರು ಹುಟ್ಟಿಕೊಳ್ಳುತ್ತಾರೋ ಗೊತ್ತಿಲ್ಲ. ಇವತ್ತಿನ ರಾಜಕಾರಣ ನೋಡಿದರೆ ದೇಶದಲ್ಲಿ ಏನು ಬೇಕಾದರೂ ನಡೆಯಬಹುದು. ಯಾರಿಗೂ ಪ್ರಾಮಾಣಿಕತೆ ನಿಷ್ಠೆ ಎಂಬುದು ಉಳಿದಿಲ್ಲ ಎಂದರು.
5
+ ರಾಜ್ಯ ಸರ್ಕಾರದ ವಿರುದ್ಧ ಮಾಡಿರುವ ಆರೋಪಗಳಿಂದ ಹಿಂದೆ ಸರಿಯುವುದಿಲ್ಲ. ದಾಖಲೆಗಳನ್ನು ಇಟ್ಟುಕೊಂಡೇ ಮಾತನಾಡುತ್ತೇನೆ ಎಂದರು. ಬೆಳಗಾವಿಯ ಅವೇಶನದಲ್ಲಿ ಒಳ್ಳೆಯ ಚರ್ಚೆಯಾಗಲಿ ಎಂಬ ಉದ್ದೇಶದಿಂದ ಸುಮ್ಮನಿದ್ದೇನೆ. ಪೆನ್‍ಡ್ರೈವ್ ಸೇರಿದಂತೆ ಹಲವು ವಿಚಾರಗಳನ್ನು ಬದಿಗಿಟ್ಟು, ಬಲಗಾಲ ಹಾಗೂ ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಆದ್ಯತೆ ನೀಡಲಾಗುವುದು. ಆದರೆ ಮಾಡಿರುವ ಆರೋಪಗಳಿಂದ ಪಲಾಯನ ಮಾಡುವುದಿಲ್ಲ ಎಂದು ಹೇಳಿದರು.
6
+ ಸ್ವಪಕ್ಷದವರ ವಿರುದ್ದ ವಾಗ್ದಾಳಿ ನಡೆಸಿದವರಲ್ಲಿ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಒಬ್ಬರೇ ಅಲ್ಲ ಇನ್ನು ಸಾಕಷ್ಟು ಮಂದಿ ಕಾಂಗ್ರೆಸ್‍ನಲ್ಲಿದ್ದಾರೆ. ಒಂದೊಂದೇ ಧ್ವನಿ ಹೊರಬರಲಿದೆ ಎಂದು ಮಾರ್ಮಿಕವಾಗಿ ನುಡಿದರು. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಟ್ಟು ಹೋರಾಟ ಮಾಡುತ್ತೇವೆ ಎಂದ ಅವರು, 2ನೇ ಬಾರಿ ಕಷ್ಟಪಟ್ಟು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಮುಸ್ಲಿಂ ಸಮುದಾಯವನ್ನು ಓಲೈಸಲು ಹೇಳಿಕೆ ನೀಡಿ ಜನರಲ್ಲಿ ಕೆಟ್ಟ ರೀತಿಯ ಭಾವನೆ ಮೂಡುವ ಪರಿಸ್ಥಿತಿಯನ್ನು ಅವರೇ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
7
+ ಛತ್ತೀಸ್‍ಗಢ ಮುಖ್ಯಮಂತ್ರಿ ಆಯ್ಕೆ ಇಂದು ಫೈನಲ್
8
+ ನಿಮಗೆ ಜಾತಿ ಗಣತಿ ಯಾಕೆ ಬೇಕು. ರಾಜ್ಯ, ದೇಶ ಉದ್ದಾರವಾಗಬೇಕಾದರೆ ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ ಜಾತಿ ಗಣತಿ ಮಾಡಿ ಜಾತಿ ಜಾತಿಗಳ ನಡುವೆ ವಿಷಯ ಬೀಜ ಬಿತ್ತುತ್ತೀರ, ��ಲ್ಲೂ ಕಮೀಷನ್ ಎಷ್ಟಿದೆ ಎಂದು ಗೊತ್ತಿದೆ ಎಂದು ಆರೋಪಿಸಿದರು.
9
+ ಕಾಡಾನೆಗಳ ಕಾದಾಟದಲ್ಲಿ ಅರ್ಜುನ ಆನೆ ವೀರ ಮರಣವನ್ನಪ್ಪಿರುವುದು ದುರದೃಷ್ಟಕರ ಸಂಗತಿ. ಆ ಆನೆಯನ್ನು ಮನೆಯ ಮಗುವಿನ ರೀತಿ ನೋಡುತ್ತಿದ್ದರು. ಮೊದಲೆ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದರೆ ಆನೆ ಜೀವಂತ ಇರುತ್ತಿತ್ತು ಎಂದು ಹೇಳಿದರು.
eesanje/url_46_291_11.txt ADDED
@@ -0,0 +1,9 @@
 
 
 
 
 
 
 
 
 
 
1
+ ಕಾಂಗ್ರೆಸ್ಸಿಗರನ್ನು ಮಾತ್ರ ಟಾರ್ಗೆಟ್ ಮಾಡಿ ಐಟಿ ದಾಳಿ ಮಾಡಲಾಗುತ್ತಿದೆ : ಸಿಎಂ ಸಿದ್ದರಾಮಯ್ಯ
2
+ ಬೆಂಗಳೂರು, ಡಿ.10- ಕಾಂಗ್ರೆಸ್‍ನವರನ್ನೇ ಗುರಿಯಾಗಿಸಿಕೊಂಡು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು. ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪನವರ ಜನ್ಮ ದಿನಾಚರಣೆ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
3
+ ಐಟಿ ಅಧಿಕಾರಿಗಳು ಕಾಂಗ್ರೆಸ್‍ನವರ ಮನೆಗಳ ಮೇಲೆ ದಾಳಿ ಮಾಡುವಂತೆ ಬಿಜೆಪಿಯವರ ಮನೆಗಳ ಮೇಲೆ ಏಕೆ ದಾಳಿ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಜಾರ್ಖಂಡ್ ಸಂಸದರ ಮನೆಯಲ್ಲಿ ಐಟಿ ದಾಳಿಯಾಗಿ ಸಾಕಷ್ಟು ಹಣ ದೊರೆತಿದ್ದು, ಅಲ್ಪಸಂಖ್ಯಾತರಿಗೆ ಆರ್ಥಿಕ ಸೌಲಭ್ಯವಿಲ್ಲವೆನ್ನುವ ಕಾಂಗ್ರೆಸ್‍ನವರ ಮನೆಯಲ್ಲಿಯೇ ಅಪಾರ ಹಣ ದೊರೆಯುತ್ತಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಸಿದ ಸಿಎಂ, ಯಾರ ಬಳಿ ಬೇನಾಮಿ ಹಣ ದೊರೆತರೂ ಅದು ಕಾನೂನು ರೀತಿ ತಪ್ಪು. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲೇಬೇಕು ಎಂದರು.
4
+ ಆದರೆ ಕಾಂಗ್ರೆಸ್ ಪಕ್ಷದವರನ್ನೇ ಗುರಿಯಾಗಿಸಿಕೊಂಡು ಐಟಿ ದಾಳಿಗಳನ್ನು ಮಾಡಲಾಗುತ್ತಿದೆ. ಬಿಜೆಪಿ ಪಕ್ಷದವರ ಮೇಲೆ ದಾಳಿಗಳು ಆಗುತ್ತಿಲ್ಲ. ಬಿಜೆಪಿಯವರ ಮನೆಗಳ ಮೇಲೂ ಐಟಿ ದಾಳಿ ನಡೆದರೆ ಬೇನಾಮಿ ಹಣ ದೊರೆಯಬಹುದು ಎಂದು ಹೇಳಿದರು.
5
+ ನಾಳೆಯಿಂದ ಮತ್ತಷ್ಟು ರಂಗೇರಲಿದೆ ಬೆಳಗಾವಿ ಅಧಿವೇಶನ
6
+ ಬಿಜೆಪಿಯವರ ಮನೆಗಳ ಮೇಲೆ ದಾಳಿ ಮಾಡಿದರೆ ಬೇಕಾದಷ್ಟು ಹಣ ಸಿಗಬಹುದು ಎಂದ ಅವರು, ಕರ್ನಾಟಕದಿಂದ ಕಾಂಗ್ರೆಸ್‍ನ ರಾಹುಲ್ ಗಾಂಧಿ ಸ್ಪರ್ಧೆ ಮಾಡಲಿದ್ದಾರೆಯೇ ಎಂಬುದರ ಬಗ್ಗೆ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಹಾಗೆಯೇ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರಿಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೂ ಮುಖ್ಯಮಂತ್ರಿ ಉತ್ತರಿಸಲಿಲ್ಲ.
7
+ ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ, ಐವತ್ತು ವರ್ಷಗಳ ಕಾಲ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ತೊಡಗಿದ್ದ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರು ಕರ್ನಾಟಕದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದರು. ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣವಾದ ಬಳಿಕ ಎಸ್.ನಿಜಲಿಂಗಪ್ಪನವರು ಮೊದಲ ಮುಖ್ಯಮಂತ್ರಿಯಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅವರು ಮಹಾತ್ಮಾ ಗಾಂಧಿ ಹಾಗೂ ವಿನೋಬಾ ಭಾವೆಯವರ ಆದರ್ಶಗಳಿಂದ ಪ್ರೇರಿತರಾಗಿದ್ದರು, ಕರ್ನಾಟಕದ ಏಕೀಕರಣದಲ್ಲಿ ಭಾಗಿಯಾಗಿದ್ದರು.
8
+ ಅಪರೂಪದ ‘ರೆಡ್ ಸ್ಟ್ರೆಟ್’ ಸೆರೆ ಹಿಡಿದ ಯುರೋಪಿಯನ್ ಸ್ಪೇಸ್ ಏಜೆನ್ಸಿ
9
+ ರೈತರ ಒಳಿತಿಗಾಗಿ ರಾಜ್ಯದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿದ್ದರು. ಅವಿಭಜಿತ ಕಾಂಗ್ರೆಸ್‍ನ ಅಧ್ಯಕ್ಷರ��ಗಿ ಕಾರ್ಯ ನಿರ್ವಹಿಸಿದ್ದರು. ಅವರ ಆದರ್ಶಗಳು ಎಲ್ಲರಿಗೂ ದಾರಿದೀಪವಾಗಲಿ ಎಂದು ಹಾರೈಸಿದರು. ಕನ್ನಡ ಮತ್ತು ಸಂಸ್ಕøತಿ ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
eesanje/url_46_291_12.txt ADDED
@@ -0,0 +1,6 @@
 
 
 
 
 
 
 
1
+ ತೆಂಗು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಎಚ್‍ಡಿಕೆ ಪಾದಯಾತ್ರೆ
2
+ ಹಾಸನ, ಡಿ.10- ತೆಂಗು ಬೆಳೆಗಾರರ ಸಮಸ್ಯೆಗಳ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಣ್ಣು ತೆರೆಸಲು ಅರಸೀಕರೆಯಿಂದ ತುಮಕೂರಿನವರೆಗೂ ಪಾದಯಾತ್ರೆ ಮಾಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
3
+ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಜೆಡಿಎಸ್ ಹೋರಾಟ ನಡೆಸಲಿದ್ದು, ಜನವರಿಯಲ್ಲಿ ಪಾದಯಾತ್ರೆ ನಡೆಸುವುದಾಗಿ ಹೇಳಿದರು. ತೀವ್ರವಾದ ಬರಗಾಲದಿಂದ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕೊಬ್ಬರಿ ಬೆಲೆ ಕುಸಿತವಾಗಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಒಂದು ವೇಳೆ ನಾನು ಈ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದರೆ ಕೊಬ್ಬರಿ ಖರೀದಿಯ ಬೆಂಬಲ ಬೆಲೆಯನ್ನು ಕ್ವಿಂಟಾಲ್‍ಗೆ 15000 ರೂ. ನಿಗದಿ ಮಾಡುತ್ತಿದ್ದೆ ಎಂದರು.
4
+ ಭಾರತ-ಪ್ಯಾಲೇಸ್ತೀನ್‍ ದೀರ್ಘಕಾಲದ ಸಂಬಂಧ ಮುಂದುವರೆಯಲಿದೆ : ಜೈಶಂಕರ್
5
+ ಬರ ಪರಿಸ್ಥಿತಿಯಿಂದಾಗಿ ರಾಜ್ಯದಲ್ಲಿ 35 ಸಾವಿರ ಕೋಟಿ ರೂ.ನಷ್ಟು ಬೆಳೆ ನಷ್ಟವಾಗಿದೆ. 18 ಸಾವಿರ ಕೋಟಿ ರೂ. ಬೆಳೆ ಹಾನಿಯ ಬಗ್ಗೆ ವರದಿ ಸಲ್ಲಿಸಿದೆ. ಹೀಗಾಗಿ ಕೇಂದ್ರ ಸರ್ಕಾರ ಪರಿಹಾರ ಕೊಡಲು ಸಾಧ್ಯವಾಗುವುದಿಲ್ಲ. ಬರ ಪರಿಹಾರ ನೀಡಲು ರಾಜ್ಯ ಸರ್ಕಾರದಲ್ಲಿ ಹಣದ ಕೊರತೆ ಇದೆ. ಆದರೆ, ಹೊಸ ಕಾರು ಖರೀದಿ, ಮನೆ ನವೀಕರಣಕ್ಕೆ ಹಣದ ಕೊರತೆ ಇಲ್ಲ ಎಂದು ಟೀಕಿಸಿದರು.
6
+ ಕಳೆದ ಆರು ತಿಂಗಳಿಂದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಜಪ ಮಾಡುತ್ತಿದೆ. ಬೇರೆ ಯಾವುದೇ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ. ಸರ್ಕಾರದ ಸಾಧನೆಯ ಪ್ರಚಾರಕ್ಕೆ ನೀಡಿದ ಜಾಹೀರಾತು 140 ಕೋಟಿ ರೂ. ಬಿಡುಗಡೆ ಮಾಡಿಲ್ಲ. ರೈತರಿಗೆ ನೆರವು ನೀಡಲು ಸರ್ಕಾರ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
eesanje/url_46_291_2.txt ADDED
@@ -0,0 +1,8 @@
 
 
 
 
 
 
 
 
 
1
+ ಹೊಸಕೋಟೆ : ಮನೆಗೆ ನುಗ್ಗಿ ವೃದ್ಧ ದಂಪತಿ ಭೀಕರ ಹತ್ಯೆ
2
+
3
+ ಬೆಂಗಳೂರು, ಡಿ.11- ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ವೃದ್ಧ ದಂಪತಿ ಯನ್ನು ಬರ್ಬರವಾಗಿ ಕೊಲೆ ಮಾಡಿ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿರುವ ಘಟನೆ ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಹೊಸಕೋಟೆ ತಾಲೂಕಿನ ಸೂಲಿಬೆಲೆ ಸಮೀಪದ ವಾಲ್ಮಿಕಿ ನಗರದ ನಿವಾಸಿಗಳಾದ ರಾಮಕೃಷ್ಣಪ್ಪ(70) ಮತ್ತು ಮುನಿರಾಮಕ್ಕ(65) ಕೊಲೆಯಾದ ವೃದ್ಧ ದಂಪತಿ.
4
+ ವ್ಯವಸಾಯ ಮಾಡಿಕೊಂಡಿದ್ದ ಈ ದಂಪತಿಗೆ ಐದು ಮಂದಿ ಮಕ್ಕಳು. ನಾಲ್ಕು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗ. ಎಲ್ಲರಿಗೂ ಮದುವೆಯಾಗಿದ್ದು, ಮಗ ಬೇರೆ ವಾಸವಿದ್ದಾರೆ.ದಂಪತಿಗೆ ಎರಡು ಎಕರೆ ಜಮೀನು ಹಾಗೂ ಸೂಲಿಬೆಲೆಯಲ್ಲಿ ಸೈಟುಗಳಿದ್ದು, ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಪಾಲು ಕೊಡಬೇಕೆಂದು ಮಗನಿಗೆ ಹೇಳಿದ್ದರು. ಇದೇ ವಿಚಾರಕ್ಕೆ ತಂದೆ-ತಾಯಿ ಜೊತೆ ಮಗ ಜಗಳ ಮಾಡಿಕೊಂಡಿದ್ದನು.
5
+ ಶನಿವಾರ ರಾತ್ರಿ ಇವರ ಮನೆಗೆ ನುಗ್ಗಿದ ದುಷ್ಕರ್ಮಿಗಳು ರಾಡಿನಿಂದ ದಂಪತಿ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿ ನಂತರ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾರೆ. ಹೆಣ್ಣು ಮಕ್ಕಳು ಆಗಾಗ್ಗೆ ತಂದೆ- ತಾಯಿಗೆ ಪೊನ್ ಮಾಡಿ ಆರೋಗ್ಯ ವಿಚಾರಿಸಿಕೊಳ್ಳುತ್ತಿದ್ದರು. ಅದರಂತೆ ಭಾನುವಾರ ಬೆಳಗ್ಗೆ ಒಬ್ಬ ಮಗಳು ಪೊನ್ ಮಾಡಿದಾಗ ಕರೆ ಸ್ವೀಕರಿಸಿಲ್ಲ. ಹಲವಾರು ಬಾರಿ ಮಾಡಿದರೂ ಪೊನ್ ತೆಗೆಯದಿದ್ದಾಗ ಅನುಮಾನಗೊಂಡು ಸಂಜೆ ಮನೆ ಬಳಿ ಬಂದು ನೋಡಿದಾಗ ಮನೆ ಬೀಗ ಹಾಕಿರುವುದು ಕಂಡು ಬಂದಿದೆ.
6
+ ಈರುಳ್ಳಿ ನಂತರ ಈಗ ಬೆಳ್ಳುಳ್ಳಿ ಬೆಲೆ ಏರಿಕೆ
7
+ ಮನೆ ಹೊರಗಡೆ ಚಪ್ಪಲಿಗಳಿರುವುದು ಗಮನಿಸಿ ಮಗಳು ಅನುಮಾನಗೊಂಡು ಕಿಟಕಿ ಮೂಲಕ ನೋಡಿದಾಗ ಅಪ್ಪ- ಅಮ್ಮ ಕೊಲೆಯಾಗಿರುವುದು ಕಂಡು ಬಂದಿದೆ. ತಕ್ಷಣ ಪೊಲೀಸರಿಗೆ ಹಾಗೂ ಅಕ್ಕ-ಪಕ್ಕದವರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸೂಲಿಬೆಲೆ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಮನೆಯ ಬೀಗ ಒಡೆದು ಒಳಗೆ ಹೋಗಿ ಪರಿಶೀಲಿಸಿದಾಗ ದಂಪತಿ ಕೊಲೆಯಾಗಿರುವುದು ಕಂಡು ಬಂದಿದೆ.
8
+ ಮೃತದೇಹಗಳನ್ನು ಎಂವಿಜೆ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಶೋಧ ಕೈಗೊಂಡಿದ್ದಾರೆ. ಆಸ್ತಿ ವಿಚಾರಕ್ಕೆ ದಂಪತಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಸಂಬಂಕರಿಂದ ಹಲವು ಮಾಹಿತಿಗಳನ್ನು ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
eesanje/url_46_291_3.txt ADDED
@@ -0,0 +1,6 @@
 
 
 
 
 
 
 
1
+ 6 ತಿಂಗಳು ಪರಿಷತ್ ವಿಪಕ್ಷ ನಾಯಕ ಸ್ಥಾನ ಖಾಲಿ ಇರುವುದು ದುರಂತ : ಗುಂಡೂರಾವ್
2
+ ಬೆಳಗಾವಿ,ಡಿ.11- ಇತಿಹಾಸದಲ್ಲೇ 6 ತಿಂಗಳ ಕಾಲ ವಿಧಾನಪರಿಷತ್ನ ವಿರೋಧಪಕ್ಷದ ನಾಯಕ ಸ್ಥಾನವನ್ನು ಖಾಲಿ ಬಿಟ್ಟಿರುವುದು ದುರಂತದ ವಿಚಾರ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
3
+ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗಿದೆ. ಆದರೆ ಅದರ ಹಿಂದೆಯೇ ಭಿನ್ನಾಭಿಪ್ರಾಯಗಳು ಕೇಳಿಬರುತ್ತಿವೆ. ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತಿದೆ. ಅವುಗಳನ್ನೆಲ್ಲಾ ಸರಿಪಡಿಸಿಕೊಂಡು ಬಿಜೆಪಿ ಪರಿಣಾಮಕಾರಿಯಾಗಿ ವಿರೋಧಪಕ್ಷದಲ್ಲಿ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.
4
+ ವಿಧಾನಪರಿಷತ್ನ ನಾಯಕನ ಸ್ಥಾನವನ್ನು 6 ತಿಂಗಳ ಕಾಲ ಖಾಲಿ ಬಿಟ್ಟಿರುವುದು ತಪ್ಪು ಸಂದೇಶ ರವಾನಿಸುತ್ತದೆ. ವಿರೋಧಪಕ್ಷವನ್ನು ಅವರದೇ ಪಕ್ಷ ಅವಮಾನ ಮಾಡಿದಂತಾಗಿದೆ. ಇದು ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದರು.
5
+ 50 ಅಧಿಕಾರಿಗಳು, 40 ಎಣಿಕೆ ಯಂತ್ರ, ಎಣಿಸಿದಷ್ಟು ಹೆಚ್ಚುತ್ತಲೆ ಇದೆ ಸಾಹು ಸಂಪತ್ತು
6
+ ವಿಧಾನಮಂಡಲದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಗಂಭೀರವಾದ ಚರ್ಚೆಯಾಗಬೇಕು. ಅದನ್ನು ಬಿಟ್ಟು ಬಿಜೆಪಿ ಅನಗತ್ಯ ವಿಷಯಗಳನ್ನು ಪ್ರಸ್ತಾಪಿಸಿ ಕಾಲಾಹರಣ ಮಾಡುತ್ತಿದೆ. ರಾಜ್ಯದ ಪ್ರಮುಖ ವಿಚಾರಗಳು ವಿಧಾನಮಂಡಲದಲ್ಲಿ ಚರ್ಚೆಯಾಗಬೇಕು. ಆದರೆ ಬೆಳಗಾವಿಯಲ್ಲಿ ಅವೇಶನ ನಡೆಯುತ್ತಿರುವುದರಿಂದ ಈ ಭಾಗಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ತಿಳಿಸಿದರು.
eesanje/url_46_291_4.txt ADDED
@@ -0,0 +1,7 @@
 
 
 
 
 
 
 
 
1
+ ವಿಧಾನಸಭೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ವಿಷಯ ಪ್ರಸ್ತಾಪಿಸಲು ಮುಂದಾದ ಪ್ರತಿಪಕ್ಷಗಳು
2
+ ಬೆಳಗಾವಿ, ಡಿ.11- ರಾಜ್ಯದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿರುವ ಹೆಣ್ಣು ಭ್ರೂಣ ಹತ್ಯೆ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಲು ಪ್ರತಿಪಕ್ಷಗಳು ಜಂಟಿಯಾಗಿ ನಿಲುವಳಿ ಸೂಚನೆ ನೋಟಿಸ್ ನೀಡಿವೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನಿಲುವಳಿ ಸೂಚನೆ ನೋಟಿಸ್ ಅನ್ನು ವಿಧಾನಸಭೆ ಕಾರ್ಯದರ್ಶಿ ಅವರಿಗೆ ನೀಡಿದ್ದಾರೆ. ನೋಟಿಸ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಬಿಜೆಪಿ, ಜೆಡಿಎಸ್ನ ಹಲವು ಸದಸ್ಯರು ಸಹಿ ಹಾಕಿದ್ದಾರೆ.
3
+ ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 60ನೇ ನಿಯಮದ ಮೇರೆಗೆ ಇಂದು ವಿಧಾನಸಭೆಯ ಅವೇಶನದಲ್ಲಿ ಪ್ರಶ್ನೋತ್ತರ ಮತ್ತು ಶೂನ್ಯವೇಳೆಯ ತರುವಾಯ ಹೆಣ್ಣು ಭ್ರೂಣ ಹತ್ಯೆ ವಿಚಾರವನ್ನು ಪ್ರಸ್ತಾಪಿಸಲು ಅವಕಾಶ ಕೋರಲಾಗಿದೆ.ರಾಜ್ಯದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿರುವ ಹೆಣ್ಣು ಭ್ರೂಣ ಹತ್ಯೆ ಪ್ರಕರಣವು ನಾಗರೀಕ ಸಮಾಜ ತಲೆತಗ್ಗಿಸುವ ಘಟನೆಯಾಗಿದೆ. ಕಳೆದ 2 ವರ್ಷಗಳಲ್ಲಿ ಮೊಬೈಲ್ ಸ್ಕ್ಯಾನಿಂಗ್ ಯಂತ್ರ ಬಳಸಿ, 900 ಕ್ಕೂ ಹೆಚ್ಚು ಹೆಣ್ಣು ಭ್ರೂಣಗಳನ್ನು ಹತ್ಯೆ ಮಾಡಿ ಕಾನೂನುಬಾಹಿರವಾಗಿ ಗರ್ಭಪಾತ ಮಾಡಿರುವುದು ಈ ಕರಾಳ ದಂಧೆ ವ್ಯಾಪಕವಾಗಿ ಹರಡಿರುವುದರ ಸೂಚನೆಯಾಗಿದೆ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
4
+ ಮಂಡ್ಯ ಜಿಲ್ಲೆಯ ಆಲೆ ಮನೆಯಲ್ಲಿ ಭ್ರೂಣ ಲಿಂಗ ಪರೀಕ್ಷೆಗೆ ಸ್ಕ್ಯಾನಿಂಗ್ ಪ್ರಯೋಗಾಲಯವನ್ನು ಸಿದ್ಧಪಡಿಸಿ ಅಲ್ಲಿ ಲಿಂಗ ಪರೀಕ್ಷೆ ನಡೆಸಿ ನಂತರ ಮೈಸೂರಿನಲ್ಲಿ ನಡೆಯುತ್ತಿದ್ದ ಅನಧಿಕೃತ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಲಾಗುತ್ತಿತ್ತು. ಹಣದಾಸೆಗೆ ಪ್ರಪಂಚಕ್ಕೆ ಕಾಲಿಡುವ ಮೊದಲೇ ಭ್ರೂಣಗಳ ಹತ್ಯೆ ಮಾಡಲಾಗಿದೆ.
5
+ 50 ಅಧಿಕಾರಿಗಳು, 40 ಎಣಿಕೆ ಯಂತ್ರ, ಎಣಿಸಿದಷ್ಟು ಹೆಚ್ಚುತ್ತಲೆ ಇದೆ ಸಾಹು ಸಂಪತ್ತು
6
+ ಈ ಪ್ರಕರಣದ ಆರೋಪಿಗಳೆಲ್ಲರೂ ವೈದ್ಯರೇ ಅಲ್ಲ. ಭ್ರೂಣ ಲಿಂಗ ಪತ್ತೆ ಪರೀಕ್ಷೆಯನ್ನು ನಿಷೇಸುವ ಕಾಯ್ದೆಯು ಜಾರಿಗೆ ಬಂದು 29 ವರ್ಷಗಳು ಕಳೆದಿದ್ದರೂ ರಾಜ್ಯದಲ್ಲಿ ಈ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿಲ್ಲ ಎಂದು ಆರೋಪಿಸಲಾಗಿದೆ.ರಾಜ್ಯದಲ್ಲಿ ಅವ್ಯಾಹತವಾಗಿ ಭ್ರೂಣಲಿಂಗ ಪತ್ತೆ ಪರೀಕ್ಷೆ ಮತ್ತು ಹೆಣ್ಣು ಭ್ರೂಣಗಳ ಹತ್ಯೆ ನಡೆಯುತ್ತಲೇ ಇದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲದಿರುವುದು ಈ ಕೃತ್ಯದಲ್ಲಿ ಅವರ ಪಾತ್ರದ ಬಗ್ಗೆ ಸಂಶಯ ಮೂಡುವಂತೆ ಮಾಡಿದೆ.
7
+ ಹೆಣ್ಣಿನ ಮೇಲೆ ಅನೇಕ ರೀತಿಯ ದೌರ್ಜನ್ಯಗಳು ನಡೆಯುತ್ತಲೇ ಇದೆ. ಇದರಲ್ಲಿ ಅತ್ಯಂತ ಭೀಕರ ಹಾಗೂ ಪ್ರಮುಖವಾದದ್ದು ಈ ಹೆಣ್ಣು ಭ್ರೂಣ ಹತ್ಯೆಯಾಗಿದೆ. ಬೆಳಕಿಗೆ ಬಂದಿರುವ ಈ ಕರಾಳ ದಂಧೆಯ ಕುರಿತು ಚರ್ಚಿಸಲು ಅವಕಾಶ ನೀಡಬೇಕೆಂದು ಕೋರಿದ್ದಾರೆ.
eesanje/url_46_291_5.txt ADDED
@@ -0,0 +1,11 @@
 
 
 
 
 
 
 
 
 
 
 
 
1
+ ನಾಳೆಯಿಂದ ಬಸವನಗುಡಿ ಕಡಲೆಕಾಯಿ ಪರಿಷೆ, ಇಂದೇ ಹರಿದುಬಂದ ಜನಸಾಗರ
2
+ ಬೆಂಗಳೂರು, ಡಿ.10- ಐತಿಹಾಸಿಕ ಬಸವನಗುಡಿಯ ಕಡಲೆಕಾಯಿ ಪರಿಷೆಗೆ ನಾಳೆ ವಿದ್ಯುಕ್ತ ಚಾಲನೆ ದೊರೆಯಲಿದ್ದು, ಮದುವಣಗಿತ್ತಿಯಂತೆ ರಸ್ತೆ ಸಿಂಗಾರಗೊಂಡಿದೆ. ಗ್ರಾಮೀಣ ಸೊಗಡಿನ ಪರಿಷೆಯನ್ನು ಈ ಬಾರಿ ಪ್ಲಾಸ್ಟಿಕ್ ಮುಕ್ತವಾಗಿಸುವ ಘೊಷಣೆಯೊಂದಿಗೆ ಪರಿಷೆಗೆ ಬನ್ನಿ ಕೈ ಚೀಲ ತನ್ನಿ ಎಂದು ಸಂಕಲ್ಪ ಮಾಡಲಾಗಿದೆ.
3
+ ಪರಿಷೆ ಹಿನ್ನೆಲೆಯಲ್ಲಿ ಬಸವನ ಗುಡಿಯ ರಸ್ತೆಗಳು ತಳಿರುತೋರಣ ಲೈಟಿಂಗ್‍ನಿಂದ ಮದುವಣ ಗಿತ್ತಿಯಂತೆ ಸಿಂಗಾರಗೊಂಡಿದ್ದು, ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರಿಗಳು, ರೈತರು ಮಳಿಗೆಗಳನ್ನು ತೆರೆದು ಕಡಲೆಕಾಯಿ ವ್ಯಾಪಾರ ಆರಂಭಿಸಿದ್ದಾರೆ. ಹಸಿ, ಹುರಿದ, ಬೇಯಿಸಿದ ಕಡಲೆಕಾಯಿಯ ಘಮ ಆವರಿಸಿದ್ದು, ವಾರಾಂತ್ಯದ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಜನರು ಭೇಟಿ ನೀಡಿ ಕಡಲೆ ಖರೀದಿಸಿ ಸಂಭ್ರಮಿಸುತ್ತಿದ್ದಾರೆ.
4
+ ಬೆಲೆ ಏರಿಕೆ: ಈ ಬಾರಿ ರಾಜ್ಯಾದ್ಯಂತ ಬರ ಆವರಿಸಿದ್ದು, ಕಡಲೆಕಾಯಿ ಬೆಳೆ ಬಾರದ ಹಿನ್ನಲೆಯಲ್ಲಿ ಮಳೆಯಾಶ್ರಿದಲ್ಲಿ ಬೆಳೆದ ಕಡಲೆಗಿಂತ ನೀರಾವರಿಯಲ್ಲಿ ಬೆಳೆದ ಕಡಲೆಕಾಯಿಯನ್ನೇ ತಂದು ಮಾರಾಟ ಮಾಡಲಾಗುತ್ತಿದ್ದು, ಬೆಲೆ ಏರಿಕೆಯಾಗಿದೆ.
5
+ ತುಮಕೂರು, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಾಗಡಿ, ಬೆಂಗಳೂರು ಗ್ರಾಮಾಂತರ , ನೆರೆಯ ತಮಿಳುನಾಡು, ಆಂಧ್ರ ಪ್ರದೇಶದಿಂದ ನಾಟಿ, ಮೂರು ಪಪ್ಪಿನ ಕಾಯಿ, ಕೆಂಪು ಕಡಲೆ, ಕಲ್ಯಾಣಿ ಸೇರಿದಂತೆ ವಿವಿಧ ತಳಿಯ ಕಡಲೆ ಮಾರಾಟಕ್ಕೆ ಬಂದಿವೆ ಆದರೆ ಬೆಲೆ ದುಬಾರಿಯಾಗಿದೆ.
6
+ ಒಂದು ಸೇರು 60 ರಿಂದ 80 ರೂ. ಕೆಜಿಯಾದರೆ 100 ರೂ.ಗೆ ಮರಾಟ ಮಾಡಲಾಗುತ್ತಿದ್ದು, ಬಡವರ ಬಾದಾಮಿ ಅಂದ್ರೆ ಯಾರಿಗೆ ತಾನೆ ಇಷ್ಟವಿರುವುದಿಲ್ಲ ಹೇಳಿ, ಬೆಲೆ ಹೆಚ್ಚಾದರೂ ಪರವಾಗಿಲ್ಲ ಎಂದು ನಗರವಾಸಿಗಳು ಖರೀದಿಯಲ್ಲಿ ತೊಡಗಿದ್ದ ದೃಶ್ಯಗಳು ಕಂಡುಬಂದವು.
7
+ ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ : ಡಿ.ಕೆ.ಶಿವಕುಮಾರ್
8
+ ಜಾತ್ರೆ ಅಂದರೆ ಬರೀ ಕಡಲೆಕಾಯಿ ಅಲ್ಲ, ಮಕ್ಕಳ ಆಟಿಕೆಗಳು, ಗೃಹೋಪಯೋಗಿ ವಸ್ತುಗಳು, ಅಲಂಕಾರಿಕ ಸಾಮಗ್ರಿಗಳ ಮರಾಟವೂ ಸಹ ಜೋರಾಗಿದೆ. ಉದ್ಯಾನನಗರಿ ಜನತೆ ಇಂದು ವೀಕೆಂಡ್‍ಅನ್ನು ಬಸವನಗುಡಿಗೆ ಟ್ರಿಪ್ ಹಾಕಿಕೊಂಡು ಕಡಲೆ ಕೊಂಡು ಸೊಬಗನ್ನು ಸವಿದು ಸಂಭ್ರಮಿಸಿದ್ದಾರೆ.
9
+ ಕಾರ್ತಿಕ ಸೋಮವಾರದ ಪ್ರಯುಕ್ತ ನಾಳೆ ಬೆಳಗ್ಗೆ ದೊಡ್ಡಬಸವಣ್ಣ ಹಾಗೂ ದೊಡ್ಡಗಣಪತಿಗೆ ವಿಶೇಷ ಪೂಜೆ, ಕಡಲೆಕಾಯಿ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಅಭಿಷೇಕದ ನಂತರ ಭಕ್ತರಿಗೆ ಕಡಲೆಕಾಯಿಯನ್ನು ಪ್ರಸಾದವಾಗಿ ನೀಡಲಾಗುವುದು.
10
+ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪರಿಷೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದು, 10 ಗಂಟೆಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಪರಿಷೆಗೆ ಚಾಲನೆ ನೀಡಲಿದ್ದಾರೆ.ಇಂದು ಬೆಳಗ್ಗೆ ಸಚಿವರು ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿ ಕಡಲೆಕಾಯಿಯನ್ನು ಸವಿದರು. ಸಂಜೆ ಆರು ಗಂಟೆಗೆ ಕೆಂಪಾಂಬುದಿ ಕರೆಯಲ್ಲಿ ತೆಪ್ಪೋತ್ಸವ ನಡೆಯಲಿದೆ.
11
+ ಸಿಸಿ ಕ್ಯಾಮೆರಾ: ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು, ಭದ್ರತಾ ದೃಷಿಯಿಂದ 200ಕ್ಕೂ ಹೆಚ್ಚಿನ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇನ್ನು ಸಂಚಾರ ದಟ್ಟಣೆಯಾಗದಂತೆ ಕೆಲ ಮಾರ್ಗ ಬದಲಾವಣೆ ಮಾಡಲಾಗಿದ್ದು, ಸಂಚಾರಿ ಪೊಲೀಸರು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
eesanje/url_46_291_6.txt ADDED
@@ -0,0 +1,6 @@
 
 
 
 
 
 
 
1
+ ಮಗಳನ್ನು ಕೊಂದು ತಂದೆ-ತಾಯಿ ಆತ್ಮಹತ್ಯೆ
2
+ ಮಡಿಕೇರಿ, ಡಿ.10- ಹನ್ನೆರಡು ವರ್ಷದ ಮಗಳನ್ನು ಕೊಂದು ತಂದೆ- ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರ ಹೊರವಲಯದ ಕಗ್ಗೋಡ್ಲುವಿನ ಹೋಂಸ್ಟೇನಲ್ಲಿ ನಡೆದಿದೆ. ಕೇರಳದ ವಿನೋದ್(30), ಜೀವಿ ಅಬ್ರಹಮ್(28) ಆತ್ಮಹತ್ಯೆ ಮಾಡಿಕೊಂಡ ದಂಪತಿ.
3
+ ಹಣಕಾಸು ವಿಚಾರದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕೇರಳದಿಂದ ಕಳೆದ ಶುಕ್ರವಾರ ಮಗಳೊಂದಿಗೆ ಈ ದಂಪತಿ ಕಗ್ಗೋಡ್ಲುವಿನ ಹೋಂ ಸ್ಟೇಗೆ ಬಂದು ನೆಲೆಸಿದ್ದರು. ಈ ನಡುವೆ ತಮ್ಮ 12 ವರ್ಷದ ಮಗಳನ್ನು ಕೊಲೆ ಮಾಡಿ ದಂಪತಿ ಹೋಂಸ್ಟೇನ ಹುಕ್‍ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
4
+ ನಿನ್ನೆ ಬಹಳ ಹೊತ್ತಾದರೂ ಹೋಂಸ್ಟೇನಿಂದ ಯಾರೂ ಹೊರಗೆ ಬರದಿದ್ದಾಗ ಅನುಮಾನಗೊಂಡ ಹೋಂಸ್ಟೇ ಸಿಬ್ಬಂದಿ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅನುಮಾನಗೊಂಡು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
5
+ ಕಾಂಗ್ರೆಸ್ಸಿಗರನ್ನು ಮಾತ್ರ ಟಾರ್ಗೆಟ್ ಮಾಡಿ ಐಟಿ ದಾಳಿ ಮಾಡಲಾಗುತ್ತಿದೆ : ಸಿಎಂ ಸಿದ್ದರಾಮಯ್ಯ
6
+ ಸುದ್ದಿ ತಿಳಿದು ಸ್ಥಳಕ್ಕೆ ದಾವಿಸಿ ಬಂದ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಬಾಗಿಲು ಒಡೆದು ನೋಡಿದಾಗ ಶವಗಳು ಪತ್ತೆಯಾಗಿವೆ. ಸ್ಥಳ ಪರಿಶೀಲಿಸಿದಾಗ ಡೆತ್‍ನೋಟ್ ಸಹ ಸಿಕ್ಕಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.
eesanje/url_46_291_7.txt ADDED
@@ -0,0 +1,11 @@
 
 
 
 
 
 
 
 
 
 
 
 
1
+ ಈಡಿಗರಿಗೆ 2 ಸಚಿವ ಸ್ಥಾನ, 500 ಕೋಟಿ ರೂ. ಅನುದಾನಕ್ಕೆ ಬೇಡಿಕೆ
2
+ ಬೆಂಗಳೂರು,ಡಿ.10- ಈಡಿಗ ಮತ್ತು ಅದರ ಉಪಪಂಗಡಗಳಿಗೆ ಎರಡು ಸಚಿವ ಸ್ಥಾನಗಳನ್ನು ನೀಡಬೇಕು ಮತ್ತು ನಿಗಮಕ್ಕೆ 500 ಕೋಟಿ ಅನುದಾನ ಒದಗಿಸಬೇಕೆಂಬ ಹಕ್ಕೋತ್ತಾಯ ಕೇಳಿಬಂತು. ನಗರದಲ್ಲಿಂದು ನಡೆದ ಈಡಿಗ ಹಾಗೂ ಅದರ ಉಪಪಂಗಡಗಳ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿದ ಬಹುತೇಕ ನಾಯಕರು ಎರಡು ಸಚಿವ ಸ್ಥಾನಗಳಿಗೆ ಬೇಡಿಕೆ ಇಟ್ಟರು.
3
+ ಆರಂಭದಲ್ಲಿ ಮಾತನಾಡಿದ ಸಂಘದ ಮುಖಂಡರು ಕೂಡ ಸಮುದಾಯಕ್ಕಾಗಿ ಎರಡು ಸಚಿವ ಸ್ಥಾನಗಳನ್ನು ನೀಡಬೇಕು ಎಂದರು. ಇದಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ದನಿಗೂಡಿಸಿದರು. ನಿಗಮ ಮಂಡಳಿ ಮತ್ತು ಸಚಿವ ಸಂಪುಟದಲ್ಲಿ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆಯಬೇಕು. ಒಂದು ವೇಳೆ ಸಚಿವ ಸ್ಥಾನ ನೀಡುತ್ತಾರೋ ಬಿಡುತ್ತೀರೊ ನಿಮಗೆ ಸೇರಿದ್ದು ಆದರೆ ಆರ್ಯ-ಈಡಿಗರ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ.ಗಳ ಅನುದಾನವನ್ನಂತೂ ಕೊಡಲೇಬೇಕು. ಇದು ನಮ್ಮ ಒಕ್ಕೊರಲ ಆಗ್ರಹ ಎಂದರು.
4
+ ಆನಂತರ ಮಾತನಾಡಿದ ಸಮುದಾಯದ ಶಾಸಕ ಹರತಾಳ್ ಹಾಲಪ್ಪ, ರಾಜ್ಯದಲ್ಲಿ ಈಡಿಗ ಸಮುದಾಯ 50 ಲಕ್ಷಕ್ಕಿಂತಲೂ ಹೆಚ್ಚಿನ ಜನಸಂಖ್ಯೆ ಹೊಂದಿದೆ ಎಂಬುದು ಕಾಂತರಾಜ್ ಆಯೋಗದ ವರದಿಯಲ್ಲಿನ ಮಾಹಿತಿಗಳು ಹೇಳುತ್ತಿವೆ. ಈಗಾಗಲೇ ಮಧುಬಂಗಾರಪ್ಪ ಸಚಿವರಾಗಿದ್ದಾರೆ. ಮತ್ತೊಂದು ಸಚಿವ ಸ್ಥಾನವನ್ನು ನೀಡಬೇಕು, ದಟ್ಟದ ಮೇಲೆ ಮತ್ತು ದಟ್ಟದ ಕೆಳಗೆ ಎಂಬ ಎರಡು ಭೌಗೋಳಿಕ ಆದ್ಯತೆ ಆಧಾರದಲ್ಲಿ ಸಚಿವ ಸ್ಥಾನ ಹಂಚಿಕೆ ಮಾಡಬೇಕು. ವಿಧಾನಪರಿಷತ್‍ಗೂ ಒಂದು ಸಚಿವ ಸ್ಥಾನ ನೀಡಬೇಕು ಎಂದು ಹೇಳುವ ಮೂಲಕ ಬಿ.ಕೆ.ಹರಿಪ್ರಸಾದ್ ಪರವಾಗಿ ವಕಾಲತ್ತು ವಹಿಸಿದರು.
5
+ ಕಾಂಗ್ರೆಸ್ಸಿಗರನ್ನು ಮಾತ್ರ ಟಾರ್ಗೆಟ್ ಮಾಡಿ ಐಟಿ ದಾಳಿ ಮಾಡಲಾಗುತ್ತಿದೆ : ಸಿಎಂ ಸಿದ್ದರಾಮಯ್ಯ
6
+ ಬಿಜೆಪಿಯ ಶಾಸಕ ಮಾಲೀಕಯ್ಯಗುತ್ತೇದಾರ್ ಮಾತನಾಡಿ, ಬಿ.ಕೆ.ಹರಿಪ್ರಸಾದ್ ಅವರು ಸಮಾವೇಶದಲ್ಲಿ ಭಾಗಿಯಾಗಬೇಕಿತ್ತು. ಆದರೆ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ಮುಂದಿನ ದಿನಗಳಲ್ಲಿ ಸಂಘ ಹಾಗೂ ಧಾರ್ಮಿಕ ಮುಖಂಡರ ಸಮ್ಮುಖದಲ್ಲಿ ಹರಿಪ್ರಸಾದ್ ಅವರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಅವರಲ್ಲಿರುವ ಅಸಮಾಧಾನವನ್ನು ನಿವಾರಣೆ ಮಾಡಲು ಪ್ರಯತ್ನಿಸುವುದಾಗಿ ಹೇಳಿದರು.
7
+ ಎರಡು ಸಚಿವ ಸ್ಥಾನದ ಕೂಗಿಗೆ ಮಾಲೀಕಯ್ಯ ಗುತ್ತೇದಾರ್ ಕೂಡ ಬೆಂಬಲ ವ್ಯಕ್ತಪಡಿಸಿದರು. ಉಳಿದಂತೆ ಸಮುದಾಯದ ಹೆಣ್ಣುಮಕ್ಕಳ ವಿದ್ಯಾರ್ಥಿನಿಲಯಗಳಿಗೆ ನಿವೇಶನ ಮತ್ತು ಅನುದಾನ ಒದಗಿಸುವಂತೆ ಮನವಿ ಮಾಡಲಾಯಿತು.
8
+ ಕಾಂತರಾಜ್ ಆಯೋಗದ ವರದಿಯನ್ನು ಕೂಡಲೇ ಬಹಿರಂಗಗೊಳಿಸಿ ಎಂದು ಬಹುತೇಕ ನಾಯಕರು ಆಗ್ರಹಿಸಿದರು. ನಿಗಮದ ಅಭಿವೃದ್ಧಿ ಚಟುವಟಿಕೆಗಳಿಗೆ 500 ಕೋಟಿ ರೂ. ಅನುದಾನದ ನೀಡುವುದು, ಸಮುದಾಯದ ನಾಯಕರಿಗೆ ರಾಜಕೀಯ ಸ್ಥಾನಮಾನ ಸೇರಿದಂತೆ ಹಲವು ಹಕ್ಕೋತ್ತಾಯಗಳು ಕೇಳಿಬಂದವರು.ಹೆಂಡ, ಸಾರಾಯಿ ನಿಷೇಧದ ಬಳಿಕ ಅದರ ವ್ಯಾಪಾರದಲ್ಲಿ ತೊಡಗಿದ್ದವರು ನಿರುದ್ಯೋಗಿಗಳಾಗಿದ್ದು ಅವರ ಪುನರ್ವಸತಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
9
+ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ಮಾತನಾಡಿ, ಸಣ್ಣ ಪ್ರಮಾಣದಲ್ಲಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಹಿಡುವಳಿ ಮಾಡುತ್ತಿರುವ ರೈತರಿಗೆ ಜಮೀನುಗಳನ್ನು ಸಕ್ರಮ ಮಾಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಸಿದ್ದರಾಮಯ್ಯ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆಗೆ ಸರ್ಕಾರಿ ಆದೇಶ ಹೊರಡಿಸಿದರು. ನಾರಾಯಣ ಗುರುಗಳ ಅಧ್ಯಯನ ಪೀಠಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕು ಮತ್ತು ಶಾಲಾ ಪಠ್ಯದಲ್ಲಿ ನಾರಾಯಣ ಗುರುಗಳ ವಿಷಯ ಸೇರಿಸಬೇಕೆಂದು ಕೋರಿದರು.
10
+ ತೆಂಗು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಎಚ್‍ಡಿಕೆ ಪಾದಯಾತ್ರೆ
11
+ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ವಿನಯ್‍ಕುಮಾರ್ ಸೊರಕೆ, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ನಟ ಶ್ರೀಮುರುಳಿ ಸೇರಿದಂತೆ ಹಲವರು ಸಮಾವೇಶದಲ್ಲಿ ಭಾಗವಹಿಸಿದ್ದರು.
eesanje/url_46_291_8.txt ADDED
@@ -0,0 +1,8 @@
 
 
 
 
 
 
 
 
 
1
+ ದಾಳಿ ಪ್ರಕರಣಗಳಲ್ಲಿ ಬೆಂಗಳೂರೇ ನಂ.1
2
+ ಬೆಂಗಳೂರು,ಡಿ.10- ಕಳೆದ 2022ರಲ್ಲಿ ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ಅತಿ ಹೆಚ್ಚು ಆ್ಯಸಿಡ್ ದಾಳಿಗಳು ನಡೆದಿದ್ದು, ನಗರ ಪೊಲೀಸರು ಎಂಟು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‍ಸಿಆರ್‍ಬಿ) ಬಿಡುಗಡೆ ಮಾಡಿರುವ ಇತ್ತೀಚಿನ ವರದಿ ತಿಳಿಸಿದೆ.
3
+ ಅಂಕಿಅಂಶಗಳ ಪ್ರಕಾರ, ಎನ್‍ಸಿಆರ್‍ಬಿ ಡೇಟಾದಲ್ಲಿ ಪಟ್ಟಿ ಮಾಡಲಾದ 19 ಮೆಟ್ರೋಪಾಲಿಟನ್ ನಗರಗಳ ಪೈಕಿ, ಕಳೆದ ವರ್ಷ ಎಂಟು ಮಹಿಳೆಯರು ಆಸಿಡ್ ದಾಳಿಗೆ ಬಲಿಯಾದ ಒಟ್ಟಾರೆ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ದೆಹಲಿಯು 2022 ರಲ್ಲಿ ಏಳು ಮಹಿಳೆಯರು ಆಸಿಡ್ ದಾಳಿಗೆ ಬಲಿಯಾದರು, ನಂತರ ಅಹಮದಾಬಾದ್ ಮೂರನೇ ಸ್ಥಾನದಲ್ಲಿ ಅಂತಹ ಐದು ಪ್ರಕರಣಗಳು ದಾಖಲಾಗಿವೆ ಎಂದು ಅಂಕಿಅಂಶಗಳು ತೋರಿಸಿವೆ.
4
+ ಎನ್‍ಸಿಆರ್‍ಬಿ ದತ್ತಾಂಶದ ವಿಶ್ಲೇಷಣೆಯು ರಾಷ್ಟ್ರೀಯ ರಾಜಧಾನಿ (ದೆಹಲಿ) 7 ದಾಳಿಯ ಯತ್ನ ಪ್ರಕರಣಗಳನ್ನು ವರದಿ ಮಾಡಿದೆ ಮತ್ತು ಬೆಂಗಳೂರಿನಲ್ಲಿ ಕಳೆದ ವರ್ಷ ಅಂತಹ 3 ಪ್ರಕರಣಗಳು ದಾಖಲಾಗಿವೆ ಎಂದು ತೋರಿಸಿದೆ.
5
+ ಕಾಂಗ್ರೆಸ್ಸಿಗರನ್ನು ಮಾತ್ರ ಟಾರ್ಗೆಟ್ ಮಾಡಿ ಐಟಿ ದಾಳಿ ಮಾಡಲಾಗುತ್ತಿದೆ : ಸಿಎಂ ಸಿದ್ದರಾಮಯ್ಯ
6
+ ಏತನ್ಮಧ್ಯೆ, ಹೈದರಾಬಾದ್ ಮತ್ತು ಅಹಮದಾಬಾದ್‍ನಂತಹ ಮೆಟ್ರೋಪಾಲಿಟನ್ ನಗರಗಳು 2022 ರಲ್ಲಿ ದಾಳಿಯ ಪ್ರಯತ್ನದ ಎರಡು ಪ್ರಕರಣಗಳನ್ನು ದಾಖಲಿಸಿವೆ. ಕಳೆದ ವರ್ಷ ಬೆಂಗಳೂರನ್ನು ಬೆಚ್ಚಿಬೀಳಿಸಿದ ಆಸಿಡ್ ದಾಳಿಯ ಪ್ರಮುಖ ಪ್ರಕರಣಗಳಲ್ಲಿ ಒಂದಾದ 24 ವರ್ಷದ ಎಂ.ಕಾಂ ಪದವೀಧರ ಮಹಿಳೆ ಏಪ್ರಿಲ್ 28 ರಂದು ಕೆಲಸಕ್ಕೆ ಹೋಗುತ್ತಿದ್ದಾಗ ದಾಳಿಗೊಳಗಾದಳು. ಪೊಲೀಸರ ಪ್ರಕಾರ ಆರೋಪಿಯು ಹಲವು ವರ್ಷಗಳಿಂದ ಮಹಿಳೆಯನ್ನು ಹಿಂಬಾಲಿಸುತ್ತಿದ್ದ.
7
+ ಮದುವೆಗೆಂದು ಆಕೆಯನ್ನು ಸಂಪರ್ಕಿಸಿದ್ದು ಆಕೆ ತನ್ನ ಪ್ರಸ್ತಾವನೆಯನ್ನು ತಿರಸ್ಕರಿಸಿದಾಗ ಆಕೆಯ ಮೇಲೆ ಆ್ಯಸಿಡ್ ಎರಚಿದ್ದಾನೆ. ಈ ವ್ಯಕ್ತಿಯನ್ನು ಮೇ ತಿಂಗಳಲ್ಲಿ ತಿರುವಣ್ಣಾಮಲೈ ಆಶ್ರಮದಿಂದ ಬಂಧಿಸಲಾಯಿತು, ಅಲ್ಲಿ ಅವರು ಸ್ವಾಮಿ ವೇಷದಲ್ಲಿ ಅಡಗಿಕೊಂಡಿದ್ದರು. ಜೂನ್ 2023 ರಲ್ಲಿ, ಸಂತ್ರಸ್ತರಿಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಲ್ಲಿ ಅವರ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಲಾಯಿತು.
8
+ ಇದೇ ರೀತಿಯ ಮತ್ತೊಂದು ಪ್ರಕರಣವು ಜೂನ್ 10, 2022 ರಂದು ವರದಿಯಾಗಿದೆ, ಇದರಲ್ಲಿ ಪುರುಷನು ತನ್ನ ಮಹಿಳಾ ಸ್ನೇಹಿತೆ ತನ್ನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ ನಂತರ ಆಕೆಯ ಮುಖದ ಮೇಲೆ ಆಸಿಡ್ ಎರಚಿದ್ದನ್ನು.
eesanje/url_46_291_9.txt ADDED
@@ -0,0 +1,6 @@
 
 
 
 
 
 
 
1
+ ವಿಜ್ಞಾನದ ಕುತೂಹಲ ಹೆಚ್ಚಿಸಲು ಹೊಸ ನೀತಿ : ಭೋಸ್‍ರಾಜ್
2
+ ಬೆಂಗಳೂರು, ಡಿ.10- ವೈಜ್ಞಾನಿಕ ಮನೋಭಾವವನ್ನು ಪ್ರೋತ್ಸಾಹಿಸಲು ಹಾಗೂ ಎಲ್ಲರಿಗೂ ವಿಜ್ಞಾನ ಎಂಬ ಉದ್ದೇಶವನ್ನು ಸಾಧಿಸುವ ನಿಟ್ಟಿನಲ್ಲಿ ಹೊಸ ನೀತಿ ರಚಿಸುವಂತೆ ಸಚಿವ ಎನ್.ಎಸ್‍ಭೋಸರಾಜ್ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.
3
+ ಚಂದ್ರಯಾನ – 3ರ ಯಶಸ್ಸಿನ ನಂತರ ಮಕ್ಕಳಲ್ಲಿ ಬಾಹ್ಯಾಕಾಶದ ಬಗ್ಗೆ ಆಸಕ್ತಿ ಹೆಚ್ಚಾಗಿದೆ. ಇದಕ್ಕೆ ಪ್ರೋತ್ಸಾಹದ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯದ ಶಾಲಾ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ವಿಜ್ಞಾನದ ಕುತೂಹಲವನ್ನು ಉತ್ತೇಜಿಸುವ ಸಲುವಾಗಿ ದೂರದರ್ಶಕಗಳನ್ನು ಒದಗಿಸುವುದು ಸೂಕ್ತವಾಗಿದೆ. ಈ ನಿಟ್ಟಿನಲ್ಲಿ ಪ್ರತ್ಯೇಕ ನೀತಿಯನ್ನು ರೂಪಿಸುವಂತೆ ಸೂಚನೆ ನೀಡಿದ್ದೇನೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.
4
+ ನಾಳೆಯಿಂದ ಮತ್ತಷ್ಟು ರಂಗೇರಲಿದೆ ಬೆಳಗಾವಿ ಅಧಿವೇಶನ
5
+ ರಾಜ್ಯದಲ್ಲಿ 2 ಪ್ರಾದೇಶಿಕ ವಿಜ್ಞಾನ ಕೇಂದ್ರಗಳು, 2 ತಾರಾಲಯಗಳು, 08 ಉಪಪ್ರಾದೇಶಿಕ ವಿಜ್ಞಾನ ಕೇಂದ್ರಗಳಿವೆ. 11 ಸಂಚಾರಿ ತಾರಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ರಾಜ್ಯದ ವಿದ್ಯಾರ್ಥಿಗಳಲ್ಲಿ ಬಾಲ್ಯಾವಸ್ಥೆಯಿಂದಲೇ ವೈಜ್ಞಾನಿಕ ವಿಷಯಗಳಲ್ಲಿ ಆಸಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ನೂತನ ಯೋಜನೆಯೊಂದನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ ಎಂದು ಹೇಳಿದ್ದಾರೆ.
6
+ ಈ ಯೋಜನೆಯಡಿ ರಾಜ್ಯದ ಸರಕಾರಿ ಪ್ರೌಢ ಶಾಲೆಗಳಲ್ಲಿ ಟೆಲಿಸ್ಕೋಪ್ ಮತ್ತು ಮೈಕ್ರೋಸ್ಕೋಪ್‍ಗಳನ್ನು ನೀಡಲು ಹಾಗೆಯೇ, ಈ ಉಪಕರಣಗಳ ನಿರ್ವಹಣೆ ಮತ್ತು ಅವುಗಳನ್ನು ಬಳಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಶಿಕ್ಷಕರುಗಳಿಗೆ ತರಬೇತಿಯನ್ನು ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಪ್ರಕ್ರಿಯೆ ಪ್ರಾರಂಭಿಸುವಂತೆ ಅವರು ಸೂಚನೆ ನೀಡಿದ್ದಾರೆ.
eesanje/url_46_292_1.txt ADDED
@@ -0,0 +1,14 @@
 
 
 
 
 
 
 
 
 
 
 
 
 
 
 
1
+ ಈಡಿಗ ಸಮುದಾಯ ಒಡೆಯುವ ಹುನ್ನಾರ ನಡೆಯುತ್ತಿದೆ : ಹರಿಪ್ರಸಾದ್ ಆಕ್ರೋಶ
2
+ ಬೆಂಗಳೂರು,ಡಿ.10- ಆರ್ಯ ಈಡಿಗರ ಸಂಘದ ವತಿಯಿಂದ ನಡೆಯುತ್ತಿರುವ ಸುವರ್ಣ ಮಹೋತ್ಸವ ಹಾಗೂ ಸ್ವಾಭಿಮಾನ ಸಮಾವೇಶದಿಂದ ತಮ್ಮನ್ನು ದೂರ ಇಡಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಸಮುದಾಯದ ಮುಖಂಡ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ.
3
+ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ಅವರ ನೇತೃತ್ವದಲ್ಲಿಂದು ನಗರದಲ್ಲಿ ಆರ್ಯ ಈಡಿಗರ ಸಂಘದ ವತಿಯಿಂದ ಈಡಿಗ, ಬಿಲ್ಲವ, ನಾಮದಾರಿ ಸೇರಿದಂತೆ 26 ಉಪಪಂಗಡಗಳ ಸ್ವಾಭಿಮಾನಿ ಸಮಾವೇಶ ನಡೆದಿತ್ತು. ಆದರೆ ಉದ್ದೇಶಪೂರ್ವಕವಾಗಿಯೇ ಬಿ.ಕೆ.ಹರಿಪ್ರಸಾದ್ ಅವರನ್ನು ಕಡೆಗಣಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದಕ್ಕೆ ಸ್ಪಷ್ಟನೆ ನೀಡಿರುವ ಹರಿಪ್ರಸಾದ್, ಇದು ರಾಜಕೀಯಪ್ರೇರಿತ ಸಮಾವೇಶ. ಆರ್ಯ ಈಡಿಗ ಸಂಘ ಸಮುದಾಯವನ್ನು ಒಳಗೊಳ್ಳುವುದಿಲ್ಲ ಎಂದಿದ್ದಾರೆ.
4
+ 26 ಉಪಪಂಗಡಗಳಿರುವ ಸುಮಾರು 50ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದ ಆರ್ಯ ಈಡಿಗ ಸಂಘದಲ್ಲಿ 12 ಸದಸ್ಯರು ಮಾತ್ರ. ಹೀಗಾಗಿ ಸಂಘ ಸಮುದಾಯದ ಪ್ರತಿನಿಧಿಗಳು ಅಲ್ಲ ಎಂದು ತಿರುಗೇಟು ನೀಡಿದ್ದಾರೆ. ತಮ್ಮನ್ನು ಉದ್ದೇಶಪೂರ್ವಕವಾಗಿ ಸಮಾವೇಶದಿಂದ ದೂರ ಇಡಲಾಗಿದೆ. ಅದೇ ರೀತಿ ಸಮಾಜದಲ್ಲಿ ಐದು ಮಂದಿ ಸ್ವಾಮೀಜಿಗಳಿದ್ದಾರೆ. ಅವರಲ್ಲಿ ಪ್ರಣವಾನಂದ ಸ್ವಾಮೀಜಿಯವರನ್ನು ಹೊರಗಿಡಲಾಗಿದೆ.
5
+ ಇದೇ ಸಂಘದವರೇ ಅವರನ್ನು ಕರೆತಂದು ಸ್ವಾಮೀಜಿ ಮಾಡಿದರು. ಅವರು ಉಗ್ರ ಹಿಂದುತ್ವವಾದಿಯಾಗಿದ್ದರು. ಹಿಂದುಳಿದ ಬಿಲ್ಲವ ಸಮುದಾಯದ ವಿಷಯದಲ್ಲಿ ಆ ರೀತಿಯ ಸಿದ್ದಾಂತಗಳು ಸೂಕ್ತವಲ್ಲ ಎಂದು ಸಲಹೆ ನೀಡಿ ಸ್ವಾಮೀಜಿಗಳು ಸುಧಾರಿಸುವ ಹಂತದಲ್ಲಿ ಅವರನ್ನು ದೂರ ಇಡಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
6
+ ಕಳೆದ ಸೆಪ್ಟೆಂಬರ್ 9ರಂದು ತಾವು ಹಿಂದುಳಿದ ವರ್ಗಗಳು ಹಾಗೂ ಬಿಲ್ಲವರ ಸಮಾವೇಶ ನಡೆಸಿದ ಬಳಿಕ ರಾಜ್ಯದಲ್ಲಿ ಅಹಿಂದ ಸಮಾವೇಶಗಳು ಹೆಚ್ಚಾಗುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ತತ್ವದಲ್ಲಿ ನಂಬಿಕೆ ಇಟ್ಟಿರಬಹುದು. ಆದರೆ ಕಾಂಗ್ರೆಸ್ ಸಿದ್ದಾಂತವನ್ನು ಪಾಲಿಸುತ್ತೇನೆ.
7
+ ಹಿಂದುಳಿದ, ದಲಿತ, ಅಲ್ಪಸಂಖ್ಯಾತ, ಮೇಲ್ವರ್ಗ ಸೇರಿದಂತೆ ಎಲ್ಲರನ್ನೂ ಒಳಗೊಳ್ಳುವುದು ಕಾಂಗ್ರೆಸ್‍ನ ಸಿದ್ದಾಂತ. ತಾವು ಅದರ ಪರವಾಗಿರುವುದಾಗಿ ಹೇಳುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಹರಿಪ್ರಸಾದ್ ಟಾಂಗ್ ನೀಡಿದ್ದಾರೆ.
8
+ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ಹರಿಪ್ರಸಾದ್ ಅವರನ್ನು ಸಂಪುಟದಿಂದ ದೂರ ಇರಿಸಿದ್ದಾರೆ. ಮಧುಬಂಗಾರಪ್ಪ ಅವರಿಗೆ ಹೆಚ್ಚಿನ ಮಣೆ ಹಾಕಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದೆ.ಕಳೆದ ಸೆಪ್ಟೆಂಬರ್‍ನಲ್ಲಿ ನಡೆಸಿದ್ದ ಸಮಾವೇಶದಲ್ಲಿ ಬಿ.ಕೆ.ಹರಿಪ್ರಸಾದ್ ಸಿದ್ದರಾಮಯ್ಯ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದರು. ಇದಕ್ಕೆ ತಿರುಗೇಟು ನೀಡಲೆಂದೇ ಮಧುಬಂಗಾರಪ್ಪ ನೇತೃತ್ವದಲ್ಲಿ ಸ್ವಾಭಿಮಾನಿ ಸಮಾವೇಶ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.
9
+ ಭಾರತ-ಪ್ಯಾಲೇಸ್ತೀನ್‍ ದೀರ್ಘಕಾಲದ ಸಂಬಂಧ ಮುಂದುವರೆಯಲಿದೆ : ಜೈಶಂಕರ್
10
+ ಇದನ್ನು ಪುಷ್ಟೀಕರಿಸಿರುವ ಸಮುದಾಯದ ಪ್ರಣವಾನಂದ ಸ್ವಾಮೀಜಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಬಿ.ಕೆ.ಹರಿಪ್ರಸಾದ್ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವ ಸಲುವಾಗಿಯೇ ಸಂಚು ರೂಪಿಸಿದ್ದಾರೆ. ಈ ಹಿಂದೆ ಲಿಂಗಾಯಿತ-ವೀರಶೈವ ಸಮುದಾಯವನ್ನು ಒಡೆಯಲು ಇದೇ ರೀತಿಯ ಸಂಚು ನಡೆದಿತ್ತು. ಈಗ ಬಿಲ್ಲವ, ಈಡಿಗ ಸಮುದಾಯದವರ ನಡುವೆ ಒಡಕು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
11
+ ಸಮುದಾಯದ ಪ್ರಮುಖ ನಾಯಕರಾದ ಬಿ.ಕೆ.ಹರಿಪ್ರಸಾದ್ ಇಂದಿನ ಸಮಾವೇಶದಲ್ಲಿ ಗೈರು ಹಾಜರಾಗುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಬಜೆಟ್‍ನಲ್ಲಿ ತಮಗೆ ಬೇಕಾದ ಜಾತಿಗಳಿಗೆ ನೂರಾರು ಕೋಟಿ ರೂ.ಗಳನ್ನು ಹಂಚಿಕೆ ಮಾಡುತ್ತಾರೆ. ಅದೇ ಕೋಟಿ ಚೆನ್ನಯ್ಯ ಪ್ರತಿಷ್ಠಾನಕ್ಕೆ ಮತ್ತು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬಿಲ್ಲವರ ಅಧ್ಯಯನ ಪೀಠಕ್ಕೆ 6 ಕೋಟಿ ರೂ.ಗಳ ನೀಡಲು ಸರ್ಕಾರದ ಬಳಿ ಹಣ ಇಲ್ಲ. ಸಮುದಾಯಗಳೆಂದರೆ ಅಷ್ಟು ಕೀಳೇ ಎಂದು ಪ್ರಶ್ನಿಸಿದರು.
12
+ ಟ್ರಕ್‍ಗೆ ಅಪ್ಪಳಿಸಿ ಹೊತ್ತಿ ಉರಿದ ಕಾರು, 8 ಮಂದಿ ಸಜೀವ ದಹನ
13
+ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿದಕ್ಕಾಗಿ ಹಿಂದುಳಿದ ವರ್ಗದವನು ಎಂಬ ಕಾರಣಕ್ಕೆ ನನಗೆ ನೋಟಿಸ್ ನೀಡಲಾಯಿತು. ಆದರೆ ಹೈಕಮಾಂಡ್‍ನನ್ನು ಪ್ರಶ್ನಿಸಿದ ಹಲವು ನಾಯಕರ ವಿರುದ್ಧ ಕ್ರಮಗಳಾಗಿಲ್ಲ. ನಾನು ಹೈಕಮಾಂಡ್‍ನನ್ನು ಪ್ರಶ್ನಿಸುವುದಿಲ್ಲ. ರಾಜ್ಯದ ಕೆಲವು ನಾಯಕರು ಈ ರೀತಿಯ ತಾರತಮ್ಯ ಮಾಡುತ್ತಿದ್ದಾರೆ. ಪಕ್ಷದಲ್ಲಿ ಮನಸ್ಸಿಗೆ ಬಂದಂತೆ ನಡೆದುಕೊಳ್ಳಲು ಅವಕಾಶ ಇಲ್ಲ.
14
+ ನನಗೆ ಕೊಟ್ಟ ನೋಟಿಸ್‍ಗೆ ಉತ್ತರ ನೀಡಿದ್ದೇನೆ. ಅದರ ನಂತರ ರಾಷ್ಟ್ರೀಯ ಕಾರ್ಯಕಾರಣಿಯ ಎರಡು ಸಭೆಗಳಲ್ಲೂ ಭಾಗವಹಿಸಿದ್ದೇನೆ. ಹೀಗಾಗಿ ನನಗೆ ಪಕ್ಷದ ಶಿಸ್ತಿನ ಬಗ್ಗೆ ಹೆಚ್ಚಿನ ಆತಂಕ ಇಲ್ಲ ಎಂದು ಹೇಳಿದರು.
eesanje/url_46_292_10.txt ADDED
@@ -0,0 +1,6 @@
 
 
 
 
 
 
 
1
+ 3 ತಿಂಗಳಿಗೊಮ್ಮೆ ರೈತರಿಗೆ ತರಬೇತಿ ಶಿಬಿರ
2
+ ಬೆಂಗಳೂರು, ಡಿ.9- ರೈತರಿಗೆ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಫಲವತ್ತತೆ ಪರೀಕ್ಷಿಸಿ ಅದಕ್ಕನುಗುಣವಾಗಿ ತೋಟಗಾರಿಕಾ ಬೆಳೆಗಳನ್ನು ಬೆಳೆಯುವಂತೆ ರೈತರಿಗೆ ಮನವರಿಕೆ ಮಾಡಿಕೊಡಲು ಪ್ರತಿ 3 ತಿಂಗಳಿಗೊಮ್ಮೆ ತರಬೇತಿ ಶಿಬಿರಗಳನ್ನು ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಗಣಿ-ಭೂವಿಜ್ಞಾನ ಮತ್ತು ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
3
+ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಸುಲಿದ ತೆಂಗಿನಕಾಯಿ ಮತ್ತು ಒಣಕೊಬ್ಬರಿಗೆ ಪ್ರತಿ ವರ್ಷ ಬೆಂಬಲ ಬೆಲೆ ನಿಗದಿಪಡಿಸಲಾಗುತ್ತಿದೆ. ಉಳಿದ ತೋಟಗಾರಿಕೆ ಬೆಳೆಗಳಿಗೆ ಸಂದರ್ಭಾನುಸಾರ ಬೆಲೆ ನೀಡಲಾಗುವುದು ಎಂದು ಹೇಳಿದರು.
4
+ ಲೀಲಾವತಿ ಅವರ ಅಂತಿಮ ದರ್ಶನ ಪಡೆದ ಗಣ್ಯರು, ಸಾರ್ವಜನಿಕರು
5
+ ಕೇಂದ್ರ ಸರ್ಕಾರದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಪರಂಪರಾಗತ. ಕೃಷಿ ವಿಕಾಸ್ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ, ತಾಳೆ ಬೆಳೆ ಹಾಗೂ ರಾಜ್ಯಸರ್ಕಾರದ ಯೋಜನೆಗಳಾದ ಸಮಗ್ರ ತೋಟಗಾರಿಕೆ ಅಭಿವೃದ್ಧಿ, ಜಿಲ್ಲಾವಲಯ ಯೋಜನೆಯಲ್ಲಿ ರೈತರಿಗೆ ತರಬೇತಿ ಹಾಗೂ ಮಾಹಿತಿ ನೀಡಲಾಗುತ್ತಿದೆ. ಕ್ಷೇತ್ರೋತ್ಸವ ವಿಚಾರ ಸಂಕಿರಣ ಹಾಗೂ ಅಧ್ಯಯನ ಪ್ರವಾಸಗಳನ್ನು ಆಯೋಜಿಸಲಾಗುತ್ತಿದೆ.
6
+ ಇಲಾಖೆಯ ಸಂಪನ್ಮೂಲ ಕೇಂದ್ರಗಳಾದ ಜೈವಿಕ ಕೇಂದ್ರ, ಉತ್ಕøಷ್ಟ ಕೇಂದ್ರ, ಮಣ್ಣು ಮತ್ತು ನೀರು ವಿಶ್ಲೇಷಣಾ ಪ್ರಯೋಗಶಾಲೆಗಳಲ್ಲಿ ಮಣ್ಣಿನ ಫಲವತ್ತತೆ ವರದಿ ಆಧಾರದ ಮೇಲೆ ಸೂಕ್ತ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಮಾಹಿತಿ ನೀಡಲಾಗುತ್ತಿದೆ. ವಿಸ್ತರಣಾಧಿಕಾರಿಗಳು ರೈತರ ತಾಲ್ಲೂಕುಗಳಿಗೆ ಭೇಟಿ ನೀಡಿ, ಕ್ಷೇತ್ರ ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರಗಳ ಮೂಲಕ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
eesanje/url_46_292_11.txt ADDED
@@ -0,0 +1,6 @@
 
 
 
 
 
 
 
1
+ 31 ಸಾವಿರ ರೈತರ 167 ಕೋಟಿ ಸಾಲಮನ್ನಾಗೆ ಪ್ರಸ್ತಾವನೆ ; ಕೆ.ಎನ್.ರಾಜಣ್ಣ
2
+ ಬೆಂಗಳೂರು,ಡಿ.9- ಕಳೆದ ಐದು ವರ್ಷಗಳ ಹಿಂದೆ ಜಾರಿಗೊಳಿಸಲಾದ ಒಂದು ಲಕ್ಷ ರೂ.ಗಳ ಸಾಲಮನ್ನಾ ಯೋಜನೆಯ ಸೌಲಭ್ಯವನ್ನು ರಾಜ್ಯದ 17.35 ಲಕ್ಷ ರೈತರು ಪಡೆದುಕೊಂಡಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನಪುಟ್ಟಣ್ಣಯ್ಯ ಅವರ ಪ್ರಶ್ನೆಗೆ ಲಿಖಿತ ಮಾಹಿತಿ ನೀಡಿರುವ ಅವರು, 2018 ರಲ್ಲಿ ಒಂದು ಲಕ್ಷ ರೂ.ಗಳವರೆಗೆ ಬೆಳೆಸಾಲವನ್ನು ಮನ್ನಾ ಮಾಡಲು ನಿರ್ಧರಿಸಲಾಯಿತು. ಆ ಬಳಿಕ ಈವರೆಗೂ ಬೇರೆ ಯಾವ ಸಾಲಮನ್ನಾ ಯೋಜನೆಗಳೂ ಜಾರಿಯಾಗಿಲ್ಲ ಎಂದಿದ್ದಾರೆ.
3
+ ದೇಶದ ಆರ್ಥಿಕತೆ ವೃದ್ದಿಯಿಂದ ಉತ್ತಮ ಭವಿಷ್ಯ : ಮೋದಿ
4
+ 2018 ರಲ್ಲಿ ಜಾರಿಯಾದ ಯೋಜನೆಯ ಪೈಕಿ ಸಹಕಾರ ಸಂಘಗಳು, ಭೂಮಾಪನ ಕಂದಾಯ ವ್ಯವಸ್ಥೆ, ಭೂ ದಾಖಲೆಗಳ ಇಲಾಖೆ ಅಭಿವೃದ್ಧಿಪಡಿಸಿದ ಸಾಲತಂತ್ರಾಂಶದಲ್ಲಿ 19.07 ಲಕ್ಷ ರೈತರ ಮಾಹಿತಿಯನ್ನು ಅಳವಡಿಸಲಾಯಿತು. ಅದರಲ್ಲಿ ಅರ್ಹತೆ ಹೊಂದದಿರುವ 1.57 ಲಕ್ಷ ರೈತರನ್ನು ತಂತ್ರಾಂಶದಿಂದ ತಿರಸ್ಕರಿಸಲಾಯಿತು. ಬಾಕಿ ಉಳಿದ 17.50 ಲಕ್ಷ ರೈತರ ಪೈಕಿ ಎಲ್ಲಾ ಷರತ್ತುಗಳನ್ನೂ ಪೂರೈಸಿರುವ 17.32 ಲಕ್ಷ ರೈತರಿಗೆ 8,154.98 ಕೋಟಿ ರೂ. ಸಾಲಮನ್ನಾ ಮಾಡಲು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಿಂದ ಹಸಿರು ಪಟ್ಟಿ ನೀಡಲಾಯಿತು.
5
+ ಸರ್ಕಾರ 17.06 ಲಕ್ಷ ರೈತರಿಗೆ 7,987.47 ಕೋಟಿ ರೂ.ಗಳನ್ನು ಉಳಿತಾಯ ಖಾತೆಗೆ ಬಿಡುಗಡೆ ಮಾಡಿ ಸಾಲಮನ್ನಾ ಸೌಲಭ್ಯವನ್ನು ದೊರಕಿಸಿದೆ ಎಂದು ವಿವರಿಸಿದ್ದಾರೆ. ಸಾಲಮನ್ನಾ ತಂತ್ರಾಂಶದಲ್ಲಿ ಅರ್ಹತೆ ಹೊಂದಿ 2020-21 ನೇ ಸಾಲಿನಲ್ಲಿ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯು ಹಸಿರು ಪಟ್ಟಿ ನೀಡಿದ 31 ಸಾವಿರ ರೈತರಿಗೆ 167.51 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಅಲ್ಲಿ ಅಂಗೀಕಾರಗೊಂಡ ಬಳಿಕ ಸಾಲಮನ್ನಾದ ಅನುದಾನವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
6
+ ಕೆಲವು ಡಿಸಿಸಿ ಬ್ಯಾಂಕ್‍ಗಳ ವ್ಯಾಪ್ತಿಯಲ್ಲಿ ಬರುವ ಸಹಕಾರ ಸಂಘಗಗಳಲ್ಲಿ ಸಾಲಮನ್ನಾ ಆಗಿರುವ ರೈತರಿಗೆ ಪುನಃ ಸಾಲ ನೀಡದೇ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ.
eesanje/url_46_292_12.txt ADDED
@@ -0,0 +1,5 @@
 
 
 
 
 
 
1
+ ಲೀಲಾವತಿ ಅವರಿಗೆ ರಾಷ್ಟ್ರ ಮಟ್ಟದ ಪುರಸ್ಕಾರ ಸಿಗದಿರುವುದಕ್ಕೆ ಬೇಸರವಿದೆ : ಸಿದ್ದರಾಮಯ್ಯ
2
+ ಬೆಂಗಳೂರು,ಡಿ.9- ಕನ್ನಡದ ಹಿರಿಯ ನಟಿ ಲೀಲಾವತಿ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ಲೀಲಾವತಿ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಮಾತನಾಡಿದ ಅವರು, 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಲೀಲಾವತಿಯವರು ತಮ್ಮ ನೈಜ ಅಭಿನಯದ ಮೂಲಕ ಹೆಸರು ಮಾಡಿದವರು. ಕನ್ನಡ, ತೆಲುಗು, ಮಲೆಯಾಳಂ ಸೇರಿದಂತೆ ಬಹು ಭಾಷಾ ಚಿತ್ರಗಳಲ್ಲಿ ನಟಿಸುವ ಮೂಲಕ ದಕ್ಷಿಣ ಭಾರತದಲ್ಲಿ ಹೆಸರು ಮಾಡಿದ್ದರು ಎಂದರು.
3
+ ಮೆರವಣಿಗೆ ವೇಳೆ ಗೋಡೆ ಕುಸಿದು ಮಗು ಸೇರಿ 7 ಮಹಿಳೆಯರ ಸಾವು
4
+ ಲೀಲಾವತಿಯವರ ಈ ಸಾಧನೆಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕಾರ ಸಿಗದೆ ಇರುವುದು ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದರು. ನನ್ನ ವಿದ್ಯಾರ್ಥಿ ಜೀವನದ 60-70ರ ದಶಕದಲ್ಲಿ ಡಾ.ರಾಜ್‍ಕುಮಾರ್ ಮತ್ತು ಲೀಲಾವತಿ ಜೋಡಿಯ ಚಿತ್ರಗಳನ್ನು ನೋಡುತ್ತಿದ್ದೆ. ನೈಜ ಮತ್ತು ಮನೋಜ್ಞ ನಟನೆಯಿಂದ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರು ಎಂದು ಸ್ಮರಿಸಿದರು.
5
+ ರಂಗಭೂಮಿಯಿಂದ ಸಿನಿಮಾದವರೆಗೆ ಬೆಳೆದಿದ್ದ ಅವರು, ಜೀವರಾಶಿಗಳನ್ನು ತುಂಬ ಇಷ್ಟಪಡುತ್ತಿದ್ದರು. ನೆಲಮಂಗಲದ ಬಳಿ ಜಮೀನು ಖರೀದಿಸಿ ರೈತಾಪಿ ಮಹಿಳೆಯಾಗಿ ಜಮೀನಿನಲ್ಲಿ ಹಣ್ಣು, ತರಕಾರಿಗಳನ್ನು ಬೆಳೆದು ಬಂದ ಹಣವನ್ನು ಸಾಮಾಜಿಕ ಸೇವೆಗಳಲ್ಲಿ ತೊಡಗಿಸುತ್ತಿದ್ದರು. ಇದು ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದರು. ಅವರ ಸಾವು ತುಂಬ ದುಃಖ ತಂದಿದೆ. ಪುತ್ರ ವಿನೋದ್‍ರಾಜ್ ಮತ್ತು ಅವರ ಅಭಿಮಾನಿಗಳಿಗೆ ಭಗವಂತ ದುಃಖಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುವೆ ಎಂದು ಹೇಳಿದರು.
eesanje/url_46_292_2.txt ADDED
@@ -0,0 +1,14 @@
 
 
 
 
 
 
 
 
 
 
 
 
 
 
 
1
+ ನಾಳೆಯಿಂದ ಮತ್ತಷ್ಟು ರಂಗೇರಲಿದೆ ಬೆಳಗಾವಿ ಅಧಿವೇಶನ
2
+ ಬೆಂಗಳೂರು,ಡಿ.10- ಬೆಳಗಾವಿಯ ಸುವರ್ಣಸೌಧದಲ್ಲಿ ನಾಳೆಯಿಂದ ಮರು ಆರಂಭಗೊಳ್ಳುತ್ತಿರುವ ಅಧಿವೇಶನ ಮತ್ತಷ್ಟು ಕಾವೇರಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಜಿದ್ದಾಜಿದ್ದಿಗೆ ವೇದಿಕೆಯಾಗುವ ಸಾಧ್ಯತೆ ಇದೆ. ಡಿ.4ರಿಂದ 8ರವರೆಗೆ ನಡೆದ ಮೊದಲ ವಾರದ ಅವೇಶನ ಅಷ್ಟೇನೂ ಬಲಪ್ರದವಾಗಿಲ್ಲ. ಮೊದಲ ದಿನ ಸಂತಾಪದ ನಂತರ ಸರಳ ಕಾರ್ಯಕಲಾಪಗಳು ನಡೆದಿವೆ.
3
+ ಪ್ರಶ್ನೋತ್ತರ, ಶೂನ್ಯವೇಳೆಗಳು ಎಂದಿನಂತೆ ನಡೆದರೆ ರಾಜ್ಯದ ಬರ ಪರಿಸ್ಥಿತಿಯ ಬಗ್ಗೆ ಬುಧವಾರದಿಂದ ಚರ್ಚೆ ಶುರುವಾಗಿದೆ. ಸುಮಾರು 20ಕ್ಕೂ ಹೆಚ್ಚು ಶಾಸಕರು ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಸೋಮವಾರ ಸರ್ಕಾರದ ವತಿಯಿಂದ ಬರ ನಿರ್ವಹಣೆಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಮುಖ್ಯಮಂತ್ರಿಗಳು ಉತ್ತರಿಸಲಿದ್ದಾರೆ. ಅದರ ನಂತರ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆ ಆರಂಭವಾಗುವ ನಿರೀಕ್ಷೆಯಿದೆ.
4
+ ವಾರಾಂತ್ಯದ ಕೊನೆಯ ದಿನ ಮೂರು ವಿಧೇಯಕಗಳಿಗೆ ಅಂಗೀಕಾರ ಪಡೆದುಕೊಳ್ಳಲು ಸರ್ಕಾರ ಮುಂದಾಗಿತ್ತು. ಆದರೆ ವಿರೋಧ ಪಕ್ಷದ ನಾಯಕರು ಅದಕ್ಕೆ ಅಡ್ಡಿಪಡಿಸಿದರು. ಸೋಮವಾರ ವಿಧೇಯಕಗಳ ಅಂಗೀಕಾರಕ್ಕೆ ಸಹಕರಿಸುತ್ತೇವೆ ಎಂದು ವಿರೋಧ ಪಕ್ಷದ ನಾಯಕರು ಭರವಸೆ ನೀಡಿದ್ದಾರೆ. ಮೊದಲ ವಾರದ ಕಲಾಪದಲ್ಲಿ ಪ್ರಮುಖವಾಗಿ ಚರ್ಚೆಯಾದ ಎರಡು ವಿಚಾರಗಳೆಂದರೆ ಹುಬ್ಬಳ್ಳಿಯ ಮೌಲ್ವಿಗಳ ಸಮಾವೇಶದಲ್ಲಿ ಅಲ್ಪಸಂಖ್ಯಾತರ ಅಭಿವೃದ್ದಿಗೆ 10 ಸಾವಿರ ಕೋಟಿ ರೂ. ಅನುದಾನ ನೀಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಭರವಸೆ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು.
5
+ ಮಂಗಳವಾರ ಇಡೀ ದಿನ ಇದೇ ವಿಚಾರವಾಗಿಯೇ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದಗಳು ನಡೆದಿತ್ತು. ಆನಂತರ ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತರಾದ ಪೃಥ್ವಿ ಸಿಂಗ್ ಮೇಲೆ ನಡೆದ ಹಲ್ಲೆ ಹಾಗೂ ಮತ್ತೊಬ್ಬ ನಗರಸೇವಕರ ಮೇಲೆ ನಡೆದ ಪೊಲೀಸ್ ದೌರ್ಜನ್ಯದ ವಿರುದ್ದ ಬಿಜೆಪಿ ಆಕ್ರೋಶಭರಿತ ವಾಗ್ದಾಳಿ ನಡೆಸಿತು. ಇಡೀ ದಿನ ಇದೇ ವಿಚಾರವಾಗಿ ಕಲಾಪ ವ್ಯರ್ಥವಾಯಿತು. ಮೊದಲ ದಿನ ಸಂತಾಪಕ್ಕೆ ಸಮಯ ಮೀಸಲಾದರೆ ಮತೆರಡು ದಿನ ರಾಜಕೀಯ ಅಜೆಂಡಾಗಳಿಗೆ ಅಮೂಲ್ಯ ಸಮಯ ಕಳೆದು ಹೋಯಿತು. ಉಳಿದೆರಡು ದಿನಗಳಲ್ಲಿ ಬರದ ಕುರಿತು ಚರ್ಚೆಗಳಾಗಿವೆ.
6
+ ಈ ನಡುವೆ ತೆಂಗು ಮತ್ತು ಕೊಬ್ಬರಿ ಬೆಲೆ ಕುಸಿತದ ಬಗ್ಗೆಯೂ ಚರ್ಚೆಯಾಯಿತು. ಆದರೆ ಮೊದಲು ಯಾರು ಚರ್ಚೆ ಮಾಡಬೇಕು ಎಂಬ ವಿಚಾರವೇ ಎರಡುಮೂರು ಗಂಟೆಗಳ ಕಾಲಹರಣಕ್ಕೆ ಕಾರಣವಾಯಿತು. ಬರದ ಮೇಲಿನ ಚರ್ಚೆಯಲ್ಲಿ ಕೆಲವು ಶಾಸಕರು ಅಮೂಲ್ಯ ಸಲಹೆಸೂಚನೆಗಳು ನೀಡಿದ್ದರು. ಆದರೆ ಬಹುತೇಕರು ಚರ್ಚೆಯಲ್ಲಿ ಕಾಟಾಚಾರಕ್ಕೆ ಎಂಬಂತೆ ಭಾಗವಹಿಸಿದ್ದರು.
7
+ ಹೇಳಿದ್ದೇ ಹೇಳುವುದು, ಅನಗತ್ಯವಾದ ವಿಷಯಗಳನ್ನು ಪ್ರಸ್ತಾಪಿಸುವುದು ಕಂಡುಬಂತು. ಈ ನಡುವೆ ಪ್ರಮುಖ ವಿರೋಧ ಪಕ್ಷದವಾದ ಬಿಜೆಪಿಯಲ್ಲಿನ ���ಡಕುಗಳು ಸರ್ಕಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದವು. ಕಾಂಗ್ರೆಸ್ ವಿರುದ್ಧ ಹೋರಾಟ ಎಂಬ ಸಂದರ್ಭ ಬಂದರೆ ಬಿಜೆಪಿಯ ಎಲ್ಲ ಶಾಸಕರು ಎದ್ದು ನಿಂತು ಅಬ್ಬರಿಸುವುದು ಸಾಮಾನ್ಯ. ಆದರೆ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ದೌರ್ಜನ್ಯ ವಿಷಯವಾಗಿ ಸುದೀರ್ಘ ಚರ್ಚೆಗಳಾಗಿದ್ದು, ಸರ್ಕಾರದ ಪರವಾಗಿ ಉತ್ತರಿಸಿದ್ದ ಗೃಹ ಸಚಿವ ಪರಮೇಶ್ವರ್, ತನಿಖೆ ಪ್ರಗತಿಯಲ್ಲಿದೆ. ಅದರ ವರದಿ ಬಂದನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.
8
+ ಪೃಥ್ವಿ ಸಿಂಗ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್‍ನ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರನ್ನು ಬಂಸಬೇಕೆಂಬ ಬಿಜೆಪಿಯ ಬೇಡಿಕೆಗೆ ಸರ್ಕಾರ ಸೊಪ್ಪು ಹಾಕಲಿಲ್ಲ. ಈ ವಿಚಾರವಾಗಿ ಬಿಜೆಪಿಯ ಒಂದು ಬಣ ಧರಣಿ ನಡೆಸಿ ಸರ್ಕಾರದ ಮೇಲೆ ಒತ್ತಡ ಹಾಕುಬೇಕು ಎಂಬ ನಿಲುವು ಹೊಂದಿತ್ತು. ಆದರೆ ಉತ್ತರ ಕರ್ನಾಟಕ ಭಾಗದ ಚರ್ಚೆಗಳಿಗೆ ಬೆಳಗಾವಿಯ ಅಧಿವೇಶನದಲ್ಲಿ ಆದ್ಯತೆ ದೊರೆಯಬೇಕು. ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ಮುಖ್ಯವಾಗಿಟ್ಟುಕೊಂಡು ಧರಣಿ ನಡೆಸಿ ಸಮಯ ವ್ಯರ್ಥ ಮಾಡುವುದಾದರೆ ತಾವು ಬಿಜೆಪಿ ನಾಯಕರ ವಿರುದ್ಧವೇ ಹೋರಾಟ ನಡೆಸುವುದಾಗಿ ಅದೇ ಪಕ್ಷದ ಬಂಡಾಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.
9
+ ಭಾರತ-ಪ್ಯಾಲೇಸ್ತೀನ್‍ ದೀರ್ಘಕಾಲದ ಸಂಬಂಧ ಮುಂದುವರೆಯಲಿದೆ : ಜೈಶಂಕರ್
10
+ ಇದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರಿಗೆ ಪೀಕಲಾಟಕ್ಕೆ ತಂದಿಟ್ಟಿತ್ತು. ಬಿಜೆಪಿಯ ಒಂದು ಬಣದ ನಿರ್ಧಾರದ ಪ್ರಕಾರ ಕಾಂಗ್ರೆಸ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರನ್ನು ಬಂಸುವಂತೆ ಒತ್ತಡ ಹೇರಿ ಧರಣಿ ಮಾಡಬೇಕಿತ್ತು. ಧರಣಿ ಮಾಡಿದರೆ ಯತ್ನಾಳ್ ಅವರು ಪಕ್ಷದ ನಾಯಕರ ವಿರುದ್ಧ ಹೋರಾಟಕ್ಕಿಳಿದಿರೆ ಸದನದಲ್ಲಿ ಬಿಜೆಪಿಯಲ್ಲಿ ನಗೆಪಾಟಲಿಗೆ ಈಡಾಗುತ್ತದೆ ಎಂಬ ಗೊಂದಲದಿಂದಾಗಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರೊಂದಿಗೆ ಚರ್ಚಿಸಿ ವಿಪಕ್ಷ ನಾಯಕ ಆರ್.ಅಶೋಕ್ ಸಭಾತ್ಯಾಗ ಮಾಡುವ ನಿರ್ಣಯ ಕೈಗೊಂಡಿದ್ದರು.
11
+ ಸಭಾತ್ಯಾಗ ಮಾಡುವುದಾಗಿ ಹೇಳಿ ಹೊರನಡೆಯುತ್ತಿದ್ದಂತೆ ಬಿಜೆಪಿಯ ಎಸ್.ಆರ್.ವಿಶ್ವನಾಥ್ ಸೇರಿದಂತೆ ಹಲವು ಶಾಸಕರು ಆರ್.ಅಶೋಕ್ ವಿರುದ್ದ ಆಕ್ರೋಶ ವ್ಯಕ್ತಪಡಿಸಲಾರಂಭಿಸಿದರು. ಸರ್ಕಾರದ ಜೊತೆ ಹೊಂದಾಣಿಕೆ ಮಾಡಿಕೊಂಡು ಆರ್.ಅಶೋಕ್ ಗಹನವಾದ ವಿಚಾರವೊಂದನ್ನು ಕೈ ಚೆಲ್ಲಿದ್ದಾರೆ. ಧರಣಿ ನಡೆಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಅವಕಾಶವಿತ್ತು ಎಂದು ಕೂಗಾಡುತ್ತಿದ್ದ ದೃಶ್ಯ ಕಂಡುಬಂದಿತ್ತು.
12
+ ಒಂದು ಹಂತದಲ್ಲಿ ತಮ್ಮ ಬೆಂಬಲಿಗರಾದ ನಗರ ಸೇವಕರೊಬ್ಬರ ಮೇಲಿನ ಹಲ್ಲೆಯನ್ನು ಖಂಡಿಸಿ ಬಿಜೆಪಿಯ ಶಾಸಕ ಅಭಯ ಪಾಟೀಲ್ ಏಕಾಂಗಿಯಾಗಿ ಧರಣಿ ನಡೆಸಿದ್ದರು. ಬಿಜೆಪಿಯ ಎಲ್ಲ ಶಾಸಕರು ಹೊರಗಿದ್ದರೆ ಅಭಯ ಪಾಟೀಲ್ ಮಾತ್ರ ಧರಣಿಯಲ್ಲಿದ್ದರು. ಕೊನೆಗೆ ಗೃಹಸಚಿವ ಪರಮೇಶ್ವರ್ ಅವರೇ ಸಮಾಧಾನದ ಮಾತುಗಳನ್ನಾಡಿ ಧರಣಿಯಿಂದ ಹಿಂದೆ ಸರಿಯುವಂತೆ ಮಾಡಿದರು.
13
+ ಮುಖ್ಯಮಂತ್ರಿಯವರ ಅಲ್ಪಸಂಖ್ಯಾತರಿಗೆ ಅನುದಾನ ನೀಡುವ ಹೇಳಿಕೆ ವಿರೋಧಿಸಿ ನಡೆದ ಚರ್ಚೆಯ ಬಳಿಕ ಬಿಜೆಪಿ ಸಭಾತ್ಯಾಗ ಮಾಡಿದಾಗ ಅದೇ ಪಕ್ಷದ ಶಾಸಕ ಎಸ್.ಟಿ.ಸೋಮಶೇಖರ್, ಸದನದಲ್ಲೇ ಕುಳಿತು ಸ್ವಪಕ್ಷೀಯರಿಗೆ ಸೆಡ್ಡು ಹೊಡೆದಿದ್ದರು.
14
+ ಬಿಜೆಪಿಯಲ್ಲಿನ ಈ ವೈಪರೀತ್ಯಗಳು ಕಾಂಗ್ರೆಸ್ ಸರ್ಕಾರಕ್ಕೆ ಅನುಕೂಲ ಮಾಡಿಕೊಟ್ಟಿವೆ. ಬಹುಶಃ ನಾಳೆ ನಡೆಯುವ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ಆನೆ ಬಲದೊಂದಿಗೆ ಮುಗಿಬೀಳುವ ನಿರೀಕ್ಷೆಗಳಿವೆ.
eesanje/url_46_292_3.txt ADDED
@@ -0,0 +1,7 @@
 
 
 
 
 
 
 
 
1
+ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ, ಉಜಿರೆಯಿಂದ ಪಾದಯಾತ್ರೆ
2
+ ಬೆಳ್ತಂಗಡಿ, ಡಿ.9- ಹೃದಯ ಪರಿವರ್ತನೆ ಯಿಂದ ಅದ್ಭುತ ಪ್ರಗತಿ ಸಾಧ್ಯವಾಗುತ್ತದೆ. ಎಲ್ಲರನ್ನೂ ಜಯಿಸಿ ಸರ್ವರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.ಲಕ್ಷದೀಪೋತ್ಸವ ಸಂದರ್ಭದಲ್ಲಿ ಶಿವನಾಮ ಸ್ಮರಣೆಯೊಂದಿಗೆ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಬಂದ ಹತ್ತು ಸಾವಿರಕ್ಕೂ ಹೆಚ್ಚು ಭಕ್ತರನ್ನು ಅಭಿನಂದಿಸಿ ಮಾತನಾಡಿದರು.
3
+ ನಾವು ಎಲ್ಲರಲ್ಲಿಯೂ ಒಳ್ಳೆಯತನ ಕಾಣಬೇಕು. ದೋಷ ಹುಡುಕಬಾರದು. ಯಾವಾಗಲೂ ಕೆಟ್ಟ ಯೋಚನೆ ಮಾಡದೆ ಸದಾಶಯದೊಂದಿಗೆ ಸತ್ಕಾರ್ಯಗಳನ್ನೇ ಮಾಡಿದರೆ ಲೋಕಕಲ್ಯಾಣವಾಗುತ್ತದೆ. ಎಲ್ಲರಲ್ಲಿಯೂ ಪರಸ್ಪರ ಪ್ರೀತಿ-ವಿಶ್ವಾಸ, ನಂಬಿಕೆ ಮತ್ತು ಗೌರವ ಬೆಳೆಯುತ್ತದೆ. ದೇವರು ನನಗೆ ಕೊಟ್ಟ ಎಲ್ಲಾ ಅವಕಾಶ ಮತ್ತು ಸಂಪತ್ತನ್ನು ಬಳಸಿ ಸತ್ಕಾರ್ಯಗಳನ್ನೇ ಮಾಡಿದ್ದೇನೆ. ಅಗಾಧ ಸಂಪತ್ತಿಗಿಂತ ಸತ್ಕಾರ್ಯಕ್ಕೆ ಮೌಲ್ಯ ಜಾಸ್ತಿ. ಎಲ್ಲರೂ ಸೇರಿ ಜೊತೆಯಾಗಿ ಸತ್ಕಾರ್ಯಗಳನ್ನೇ ಮಾಡೋಣ ಎಂದು ಅವರು ಕಿವಿಮಾತು ಹೇಳಿದರು.
4
+ ಧರ್ಮಸ್ಥಳದ ಬಗ್ಗೆ ಯಾವುದೇ ಅನುಮಾನ, ಸಂಶಯ ಬೇಡ. ನೇರವಾಗಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದು ಅವರು ಸಲಹೆ ನೀಡಿದರು. ಸಂಸದರ ನಿಯಿಂದ ತನಗೆ ಮಂಜೂರಾದ ಎರಡೂವರೆ ಕೋಟಿ ರೂ. ಅನುದಾನವನ್ನು ಬೀದರ್ ಜಿಲ್ಲೆಗೆ ನೀಡಿದ್ದು, ಅಲ್ಲಿ ಇದರಿಂದಾಗಿ ಕ್ಷೀರ ಕ್ರಾಂತಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಪಾದಯಾತ್ರೆ ಮೂಲಕ ಎಲ್ಲರೂ ನಿಮ್ಮ ಪ್ರೀತಿ-ವಿಶ್ವಾಸ, ಗೌರವ, ಭಕ್ತಿ ಮತ್ತು ಸಂತೋಷವನ್ನು ವ್ಯಕ್ತಪಡಿಸಿರುವಿರಿ. ಇದರಿಂದ ನನ್ನಲ್ಲಿ ತೃಪ್ತಿ, ಸಂತೋಷ ಮತ್ತು ಧನ್ಯತಾಭಾವ ಮೂಡಿಬಂದಿದೆ ಎಂದರು.
5
+ 31 ಸಾವಿರ ರೈತರ 167 ಕೋಟಿ ಸಾಲಮನ್ನಾಗೆ ಪ್ರಸ್ತಾವನೆ ; ಕೆ.ಎನ್.ರಾಜಣ್ಣ
6
+ ಪಾದಯಾತ್ರಿಗಳ ಭೀಷ್ಮ ಪ್ರತಿಜ್ಞೆ: ಪಾದಯಾತ್ರಿಗಳೆಲ್ಲ ಸಂಘಟನೆ ಮೂಲಕ ಸತ್ಯ, ಧರ್ಮ, ನ್ಯಾಯ ಮತ್ತು ನೀತಿಗಾಗಿ ತಾವೆಲ್ಲರೂ ಧರ್ಮಸ್ಥಳದ ಜೊತೆ ಹಾಗೂ ಧರ್ಮಾಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಜೊತೆ ಸದಾ ಇದ್ದೇವೆ ಎಂದು ಸಾಮೂಹಿಕವಾಗಿ ದೃಢಸಂಕಲ್ಪದೊಂದಿಗೆ ಭೀಷ್ಮ ಪ್ರತಿಜ್ಞೆ ಮಾಡಿದರು.
7
+ ಹೇಮಾವತಿ ವಿ.ಹೆಗ್ಗಡೆ, ಶ್ರದ್ಧಾ ಅಮಿತ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ನಿಶ್ಚಲ್ ಕುಮಾರ್, ಸೋನಿಯವರ್ಮ, ಪೂರನ್ವರ್ಮ, ಶರತ್ ಕೃಷ್ಣ ಪಡ್ವೆಟ್ನಾಯ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ್ ಸಿಂಹ ನಾಯಕ್, ಎಸ್‍ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ.ಎಸ್. ಸತೀಶ್ ಚಂದ್ರ, ಪ್ರಾಂಶುಪಾಲ ಕುಮಾರ ಹೆಗ್ಡೆ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ.ಎಚ್. ಮಂಜುನಾಥ್, ಸಿರಿ ಗ್ರಾಮೋದ್ಯೋಗ ಸಂಸ್ಥೆ ಆಡಳಿತ ನಿರ್ದೇಶಕ ಕೆ.ಎನ್. ಜನಾರ್ಧನ್, ಎಸ್‍ಡಿಎಂ ಆಸ್ಪತ್ರೆ ನಿರ್ದೇಶಕ ಎಂ. ಜನಾರ್ಧನ್, ಸಿಒಒ ಅನಿ���್ ಕುಮಾರ್, ವಕೀಲ ಬಿ.ಕೆ. ಧನಂಜಯ ರಾವ್ , ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಶ್ರೀನಿವಾಸ ರಾವ್ ಮತ್ತಿತರರು ಉಪಸ್ಥಿತರಿದ್ದರು.
eesanje/url_46_292_4.txt ADDED
@@ -0,0 +1,6 @@
 
 
 
 
 
 
 
1
+ ಹಂಗಾಮಿ ಸ್ಪೀಕರ್ ಆಗಿ ಅಕ್ಬರುದ್ದೀನ್ ಓವೈಸಿ ನೇಮಕ, ಪ್ರಮಾಣವಚನ ಬಹಿಷ್ಕರಿಸಿದ ಬಿಜೆಪಿ
2
+ ಹೈದರಾಬಾದ್, ಡಿ.9- ತೆಲಂಗಾಣ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಅಧಿಕಾರ ವಹಿಸಿಕೊಂಡ ಮರುಕ್ಷಣವೇ ಹಂಗಾಮಿ ಸ್ಪೀಕರ್ ಆಯ್ಕೆ ಭಾರೀ ವಿವಾದ ಸೃಷ್ಟಿಯಾಗಿದೆ. ಕಾಂಗ್ರೆಸ್ ಬಹುಮತ ಗಳಿಸಿದ್ದರೂ ಎಐಂಐಎಂ ಶಾಸಕ ಅಕ್ಬರುದ್ದೀನ್ ಓವೈಸಿ ಅವರನ್ನು ರಾಜ್ಯ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ರಾಜ್ಯ ಸರ್ಕಾರ ಶಿಫಾರಸು ಮಾಡಿರುವುದನ್ನು ಖಂಡಿಸಿ ತೆಲಂಗಾಣ ಬಿಜೆಪಿ ಭಾರೀ ಪ್ರತಿಭಟನೆ ನಡೆಸಿದೆ.
3
+ ವಿಧಾನಸಭೆಯಲ್ಲಿಂದು ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ ನಡೆಯುತ್ತಿದ್ದು, ಇದನ್ನು ಬಿಜೆಪಿಯಿಂದ ಆಯ್ಕೆಯಾಗಿರುವ ಎಂಟೂ ಶಾಸಕರು ಬಹಿಷ್ಕರಿಸಿದ್ದಾರೆ. ನಾನು ಹೊಸ ಸ್ಪೀಕರ್ ಆಯ್ಕೆಯಾಗುವವರೆಗೂ ಶಾಸಕನಾಗಿ ವಿಧಾನಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವುದಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಟಿ.ರಾಜಾಸಿಂಗ್ ಹೇಳಿದ್ದಾರೆ.
4
+ ಬೆಂಗಳೂರು ಸೇರಿ ದೇಶದ 40ಕ್ಕೂ ಹೆಚ್ಚು ಕಡೆ ಎನ್‍ಐಎ ದಾಳಿ
5
+ ಸದಾ ಭಾರತ ವಿರೋಧಿ ಹೇಳಿಕೆಗಳನ್ನು ನೀಡುವ ಓವೈಸಿ ಅವರ ಕುಟುಂಬದವರನ್ನು ಓಲೈಸಲು ಕಾಂಗ್ರೆಸ್ ಈ ಲಾಬಿ ಮಾಡಿದೆ. ಅಕ್ಬರುದ್ದೀನ್ ಓವೈಸಿ ಅವರನ್ನು ಹಂಗಾಮಿ ಸ್ಪೀಕರ್ ಮಾಡಿರುವುದನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಜನತೆಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದ್ದಾರೆ.
6
+ ಹಿಂದೂ ವಿರೋಧಿ ಹೇಳಿಕೆ ನೀಡಿ ಸಂವಿಧಾನಕ್ಕೆ ಅಪಚಾರ ಮಾಡಿರುವವರನ್ನು ಈ ಸ್ಥಾನದಲ್ಲಿ ಕೂರಿಸುವುದು ಸರಿಯಲ್ಲ. ಈ ಬಗ್ಗೆ ನಾನು ಜನರ ಬಳಿಗೆ ಹೋಗುತ್ತೇನೆ ಎಂದು ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿಯಾಗಿ ಸ್ರ್ಪಧಿಸಿದ್ದ ರೇವಂತ್ ರೆಡ್ಡಿ ಹಾಗೂ ಮಾಜಿ ಸಿಎಂ ಚಂದ್ರಶೇಖರ್ ರಾವ್ ಅವರನ್ನು ಮಣಿಸಿ ಗೆದ್ದಿರುವ ಟಿ.ರಾಜಾಸಿಂಗ್ ಹೇಳಿದ್ದಾರೆ.
eesanje/url_46_292_5.txt ADDED
@@ -0,0 +1,8 @@
 
 
 
 
 
 
 
 
 
1
+ ವಿದ್ಯುತ್ ಖರೀದಿಗೆ 1997 ಕೋಟಿ ರೂ. ಬಳಕೆ : ಕೆ.ಜೆ.ಜಾರ್ಜ್
2
+ ಬೆಂಗಳೂರು, ಡಿ.9- ತಡೆರಹಿತ ವಿದ್ಯುತ್ ಸರಬರಾಜು ತಡೆಗಾಗಿ ಕಳೆದ ವರ್ಷ 476.61 ಕೋಟಿ ರೂ.ಗಳನ್ನು ವೆಚ್ಚ ಮಾಡಿ ವಿದ್ಯುತ್ ಖರೀದಿಸಲಾಗಿದ್ದು, ಈ ವರ್ಷ ಅಕ್ಟೋಬರ್ ವೇಳೆಗೆ 1997.29 ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
3
+ ರಾಯಭಾಗ ಕ್ಷೇತ್ರದ ಶಾಸಕ ದುರ್ಯೋಧನ ಐಹೊಳೆ ಮಹಾಲಿಂಗಪ್ಪ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, 2022-23ರಲ್ಲಿ 37 ಸಾವಿರ ಮಿಲಿಯನ್ ಯುನಿಟ್ ಮತ್ತು 2023-24 ನೇ ಸಾಲಿನ ಏಪ್ರಿಲ್‍ನಿಂದ ಸೆಪ್ಟೆಂಬರ್ ಅಂತ್ಯದವರೆಗೆ ವಿವಿಧ ಮೂಲಗಳಿಂದ 46,847.42 ಮಿಲಿಯನ್ ಯುನಿಟ್ ವಿದ್ಯುತ್ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ.
4
+ ರಾಜ್ಯಸರ್ಕಾರ ನೇರವಾಗಿ ಇತರ ರಾಜ್ಯಗಳಿಂದಾಗಲಿ ಅಥವಾ ಖಾಸಗಿ ಕಂಪನಿಗಳಿಂದಾಗಲಿ ವಿದ್ಯುತ್ ಖರೀದಿಸುವುದಿಲ್ಲ. ಆದರೆ ವಿವಿಧ ವಿದ್ಯುತ್ ವಿನಿಮಯ ಕೇಂದ್ರಗಳ ಮೂಲಕ ಖರೀದಿಸಲಾಗುತ್ತದೆ. ಅದರ ಪ್ರಕಾರ, ಈ ವರ್ಷ ಐಇಎಕ್ಸ್ ವಿನಿಮಯ ಕೇಂದ್ರದಿಂದ ಪ್ರತಿ ಯುನಿಟ್‍ಗೆ 6.81 ಪೈಸೆಯಂತೆ 1544.52 ಮಿಲಿಯನ್ ಯುನಿಟ್‍ಗಳನ್ನು 1036.12 ಕೋಟಿ ರೂ. ವೆಚ್ಚ ಮಾಡಿ ಖರೀದಿಸಲಾಗಿದೆ.
5
+ ಲೀಲಾವತಿ ಅವರ ಅಂತಿಮ ದರ್ಶನ ಪಡೆದ ಗಣ್ಯರು, ಸಾರ್ವಜನಿಕರು
6
+ ಟಿಎಕ್ಸ್‍ಐಎಲ್ ಸಂಸ್ಥೆಯಿಂದ ಯುನಿಟ್‍ಗೆ 7.58 ರೂ.ನಂತೆ 69.20 ಕೋಟಿ ಖರ್ಚು ಮಾಡಿ 91.31 ಮಿಲಿಯನ್ ಯುನಿಟ್, ಎಚ್‍ಪಿಎಕ್ಸ್ ವಿನಿಮಯ ಕೇಂದ್ರದಿಂದ ಪ್ರತಿ ಯುನಿಟ್‍ಗೆ 7.63 ರೂ.ನಂತೆ 91.97 ಕೋಟಿ ವೆಚ್ಚ ಮಾಡಿ 120.50 ಮಿಲಿಯನ್ ಯುನಿಟ್ ಅನ್ನು ಖರೀದಿಸಲಾಗಿದೆ. ಒಟ್ಟು 1756.33 ಮಿಲಿಯನ್ ಯುನಿಟ್‍ಗೆ 1197.29 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಒಟ್ಟಾರೆ ಸರಾಸರಿ ಯುನಿಟ್‍ನ ದರ 6.82 ರೂ.ಗಳು ಎಂದು ತಿಳಿಸಿದ್ದಾರೆ.
7
+ ಕಳೆದ ವರ್ಷ 476.61 ಕೋಟಿಗಳನ್ನು ಬಳಕೆ ಮಾಡಿ 589.14 ಮಿಲಿಯನ್ ಯುನಿಟ್‍ಗಳನ್ನು ಖರೀದಿಸಲಾಗಿತ್ತು. ಪ್ರತಿ ಯುನಿಟ್‍ಗೆ 8.09 ರೂ. ಸರಾಸರಿ ದರ ನೀಡಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ. ಪಂಜಾಬ್ ಹಾಗೂ ಉತ್ತರ ಪ್ರದೇಶಗಳ ರಾಜ್ಯಗಳಿಂದ ವಿದ್ಯುತ್ ವಿನಿಮಯ ಆಧಾರದ ಮೇಲೆ ಪ್ರತಿದಿನ 8.9 ಮಿಲಿಯನ್ ಯುನಿಟ್‍ಗಳನ್ನು ಪಡೆದುಕೊಳ್ಳಲಾಗುತ್ತಿದೆ. ರೈತರ ಕೃಷಿ ಪಂಪ್‍ಸೆಟ್‍ಗಳಿಗೆ 7 ಗಂಟೆ ಕಾಲ ತ್ರಿ ಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
8
+ 2023-24 ನೇ ಸಾಲಿಗೆ 89112 ವಿದ್ಯುತ್ ಬೇಡಿಕೆಯಾಗಬಹುದು ಎಂಬ ಅಂದಾಜಿದೆ. ದಿನವಹಿ ಸರಾಸರಿ ಬೇಡಿಕೆಯ ಪರಿಮಾಣ ಏಪ್ರಿಲ್‍ನಿಂದ ಸೆಪ್ಟೆಂಬರ್ ನಡುವೆ 245.20 ಮಿಲಿಯನ್ ಯುನಿಟ್‍ಗಳಾಗಿವೆ. ಬರಗಾಲದ ಹಿನ್ನೆಲೆಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
eesanje/url_46_292_6.txt ADDED
@@ -0,0 +1,6 @@
 
 
 
 
 
 
 
1
+ ಯತ್ನಾಳ್‍ಗೆ ತಾಕತ್ತಿದ್ದರೆ ಎನ್‍ಐಎ ತನಿಖೆ ನಡೆಸಲಿ : ಎಂ.ಬಿ.ಪಾಟೀಲ್
2
+ ಬೆಂಗಳೂರು, ಡಿ.9- ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಾಕತ್ತಿದ್ದರೆ ಧಾರ್ಮಿಕ ಮುಖಂಡರಾದ ತನ್ವಿರ್ ಅಸ್ಮಿ ಅವರ ವಿರುದ್ಧ ಎನ್‍ಐಎ ತನಿಖೆ ನಡೆಸಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
3
+ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನಡೆದ ಮೌಲ್ವಿಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಅದರ ಬಳಿಕ ಯತ್ನಾಳ್ ಆರೋಪ ಮಾಡಿ ಸಮಾವೇಶದಲ್ಲಿದ್ದ ವಿಜಯಪುರ ಮೂಲದವರಾದ ತನ್ವೀರ್ ಅಸ್ಮಿಗೆ ಐಸಿಸ್ ಉಗ್ರರ ನಂಟಿದೆ ಎಂದು ಆರೋಪಿಸಿದ್ದಾರೆ.
4
+ ಕೇಂದ್ರದಲ್ಲಿ ಬಿಜೆಪಿಯ ಸರ್ಕಾರವಿದೆ. ಬಸನಗೌಡ ಯತ್ನಾಳ್ ಅವರು ಎನ್‍ಐಎ ಮೂಲಕ ತನಿಖೆ ಮಾಡಿಸಿ ತಮ್ಮ ಆರೋಪವನ್ನು ಸಾಬೀತುಪಡಿಸಬೇಕು ಎಂದರು. ತಾವು ಯಾವುದೇ ತನಿಖೆಗಾದರೂ ಸಿದ್ಧ ಎಂದು ತನ್ವೀರ್ ಅಸ್ಮಿ ಹೇಳಿದ್ದಾರೆ. ತಮ್ಮ ಮೇಲಿನ ಆರೋಪ ಸಾಬೀತಾದರೆ ದೇಶ ತೊರೆಯುವುದಾಗಿ ಸವಾಲು ಹಾಕಿದ್ದಾರೆ. ಒಂದು ವೇಳೆ ಆರೋಪ ಸಾಬೀತುಪಡಿಸುವಲ್ಲಿ ಯತ್ನಾಳ್ ವಿಫಲರಾದರೆ ಯಾವ ಕ್ರಮಕ್ಕೆ ಒಳಗಾಗುತ್ತಾರೆ ಎಂದು ಸ್ಪಷ್ಟಪಡಿಸಬೇಕು ಎಂದು ಸವಾಲು ಹಾಕಿದರು.
5
+ ಕೋಟಿ ಕೋಟಿ ಹಣ ಪತ್ತೆಯಾದ ಕಾಂಗ್ರೆಸ್ ಸಂಸದನ ಬಂಧನಕ್ಕೆ ಮರಾಂಡಿ ಒತ್ತಾಯ
6
+ ಉಗ್ರಗಾಮಿಗಳ ವಿಚಾರ ಬರುತ್ತಿದ್ದಂತೆ ರಾಷ್ಟ್ರೀಯ ತನಿಖಾ ದಳ ಸ್ವಯಂ ವಿಚಾರಣೆಗೆ ಧಾವಿಸಲಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಪರ್ಕಗಳಿರುವುದರಿಂದ ಉಗ್ರಗಾಮಿಗಳ ವಿಚಾರವನ್ನು ರಾಜ್ಯದ ಪೊಲೀಸರು ತನಿಖೆ ಮಾಡಲಾಗುವುದಿಲ್ಲ. ಯತ್ನಾಳ್ ಅವರು ಮೊದಲು ದೆಹಲಿಗೆ ಹೋಗಿ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಎನ್‍ಐಎ ತನಿಖೆಗೆ ಒತ್ತಾಯಿಸಬೇಕು ಎಂದು ಆಗ್ರಹಿಸಿದರು.
eesanje/url_46_292_7.txt ADDED
@@ -0,0 +1,7 @@
 
 
 
 
 
 
 
 
1
+ ಎಪಿಎಂಸಿ ಕಾಯ್ದೆಯ ಮರುಸ್ಥಾಪನೆಗೆ ಕ್ರಮ
2
+ ಬೆಂಗಳೂರು,ಡಿ.9- ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರಗಳ ವಿಧೇಯಕದ ತಿದ್ದುಪಡಿಯ ಬಳಿಕ ರಾಜ್ಯದ ಎಪಿಎಂಸಿಗಳು ಆದಾಯದ ಕೊರತೆ ಅನುಭವಿಸುತ್ತಿದ್ದು, ಅದನ್ನು ಹಿಂದಿನಂತೆ ಸರಿಪಡಿಸಲು ರೂಪಿಸಲಾಗಿರುವ ವಿಧೇಯಕ ಸದನ ಸಮಿತಿಯ ಪರಿಶೀಲನೆಗೆ ಒಳಪಡುತ್ತದೆ ಎಂದು ಕೃಷಿ ಇಲಾಖೆ ಸಚಿವ ಶಿವಾನಂದ ಎಸ್.ಪಾಟೀಲ್ ತಿಳಿಸಿದ್ದಾರೆ.
3
+ ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಅವರು ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರಗಳ ವಿಧೇಯಕ ತಿದ್ದುಪಡಿಯಿಂದ 145 ಎಪಿಎಂಸಿಗಳು ಅನಾಥವಾಗಿರುವುದು ಸರ್ಕಾರದ ಗಮನದಲ್ಲಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ನಿಯಂತ್ರಣಾ ಅಧಿಕಾರವನ್ನು ಮಾರುಕಟ್ಟೆ ಪ್ರಾಂಗಣಗಳಿಗೆ ಮಿತಿಗೊಳಿಸಿರುವುದರಿಂದ ರಾಜ್ಯದಲ್ಲಿನ ಬಹಳಷ್ಟು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಆದಾಯದ ಕೊರತೆ ಎದುರಿಸುತ್ತಿದೆ ಎಂದು ತಿಳಿಸಿದ್ದಾರೆ.
4
+ ಕೋಟಿ ಕೋಟಿ ಹಣ ಪತ್ತೆಯಾದ ಕಾಂಗ್ರೆಸ್ ಸಂಸದನ ಬಂಧನಕ್ಕೆ ಮರಾಂಡಿ ಒತ್ತಾಯ
5
+ ರಾಜ್ಯಸರ್ಕಾರವು ಮಾರುಕಟ್ಟೆ ಪ್ರಾಂಗಣಗಳ ಹೊರಗಡೆ ನಡೆಯುವ ವಹಿವಾಟಿನ ಮೇಲೆ ಈ ಮೊದಲಿನಂತೆ ನಿಯಂತ್ರಣ ಹೊಂದುವುದು ರೈತ ಬೆಳೆಗಾರರ ಹಿತದೃಷ್ಟಿಯಿಂದ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ವಿಧಾನಮಂಡಲದಲ್ಲಿ ಮಂಡಿಸಲಾಯಿತು. ವಿಧಾನಸಭೆಯಲ್ಲಿ ಜುಲೈ 17 ರಂದು ಕಾಯ್ದೆ ಅಂಗೀಕಾರಗೊಂಡಿದೆ. ಮಾರನೆಯ ದಿನ ವಿಧಾನಪರಿಷತ್‍ನಲ್ಲಿ ಕಾಯ್ದೆಯ ಕುರಿತು ಚರ್ಚೆಯಾಗಿದೆ.
6
+ ಅಂಗೀಕಾರಗೊಳ್ಳದೆ ಸದನ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಗಿದೆ ಎಂದು ವಿವರಿಸಿದ್ದಾರೆ. ಸದನ ಸಮಿತಿಯು ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ ) ತಿದ್ದುಪಡಿ ವಿಧೇಯಕ -2023 ನ್ನು ಸಮಗ್ರವಾಗಿ ಪರಿಶೀಲಿಸುತ್ತಿದೆ.
7
+ ಶಾಸಕರ ಭವನದಲ್ಲಿ ಅಕ್ಟೋಬರ್ 16 ರಂದು ಮೊದಲ ಸಭೆ ನಡೆಸಿದ್ದರು. ಕೋಲಾರ ಮತ್ತು ಶಿವಮೊಗ್ಗದಲ್ಲಿ ಕ್ರಮವಾಗಿ 2 ಮತ್ತು 3 ನೇ ಸಭೆ ನಡೆಸಲಾಗಿದೆ. ಸದನ ಸಮಿತಿ ವರದಿ ಸಲ್ಲಿಸಬೇಕಿದ್ದು, ಬಳಿಕ ಅದನ್ನು ಪರಿಶೀಲಿಸುವುದಾಗಿ ಸಚಿವರು ತಿಳಿಸಿದ್ದಾರೆ.
eesanje/url_46_292_8.txt ADDED
@@ -0,0 +1,9 @@
 
 
 
 
 
 
 
 
 
 
1
+ 200 ಕೋಟಿ ಹಣ ಜಪ್ತಿ ಬಗ್ಗೆ ಕಾಂಗ್ರೆಸ್ ಏಕೆ ಮಾತಾಡಲ್ಲ..? : ಪ್ರಹ್ಲಾದ ಜೋಶಿ
2
+ ಹುಬ್ಬಳ್ಳಿ, ಡಿ.9- ಜಾರ್ಖಂಡ್‍ನ ಕಾಂಗ್ರೆಸ್ ಸಂಸದ ಧೀರಜ್ ಪ್ರಸಾದ್ ಸಾಹು ಅವರಿಗೆ ಸೇರಿದ್ದು ಎನ್ನಲಾದ ಉದ್ಯಮ ಸಮೂಹ ಸಂಸ್ಥೆ ಮೇಲೆ ಐ.ಟಿ ಅಧಿಕಾರಿಗಳು ದಾಳಿ ನಡೆಸಿದ್ದು, 200 ಕೋಟಿ ಹಣ ಜಪ್ತಿಗೆ ಮಾಡಿದ್ದಾರೆ. ಈ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್‍ನವರು ಯಾಕೆ ಮಾತನಾಡುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
3
+ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಯವರಿಗೆ ಬಹಳ ಹತ್ತಿರದವರು. ರಾಹುಲ್ ಗಾಂಧಿ ಭ್ರಷ್ಟಾಚಾರದ ಹಾಗೂ ಮೊಹಬತ್ ಕಾ ದುಖಾನ್ ಬಗ್ಗೆ ಮಾತನಾಡುತ್ತಾರೆ. ಮೊಹಬತ್ ದುಖಾನ್‍ನಲ್ಲಿ ಮೊದಲು ಸಿಗುವುದು ಭ್ರಷ್ಟಾಚಾರದ ಹಣ. ರಾಹುಲ್ ಗಾಂಧಿ ಈ ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ನವರು ಭ್ರಷ್ಟಾಚಾರದ ಬಗ್ಗೆ ಒಂದು ಶಬ್ಧ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು.
4
+ ಉಚ್ಛಾಟಿತ ಸಂಸದೆ ಮಹುವಾ ಮೊಯಿತ್ರಾ ಅಂತ್ಯತ ಕೀಳಾಗಿ ಹಿಂದೂ ಬಗ್ಗೆ ಮಾತನಾಡುತ್ತಿದ್ದರು ಅಂಥವರಿಗೆ ಈಗ ದ್ರೌಪದಿ ವಸ್ತ್ರಾಪಹರಣದ ಬಗ್ಗೆ ಗೊತ್ತಾಗಿದೆ. ಭಾರತ ಸರ್ಕಾರ ಲಾಗಿನ್ ಖಾತೆ, ಅಧಿಕೃತ ಇ ಮೇಲ್ ನೀಡಿದೆ ಎಂದರು. ಉದ್ಯಮಿ ನೀಡಿದ ಸ್ಕ್ಯಾಪ್ ಬಗ್ಗೆ ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಅದರ ಬೆಲೆ 2.5 ಲಕ್ಷವಾಗಿದೆ. ಇವರು ಇಲ್ಲಿಯವರೆಗೆ ಆದಾಯ ತೆರಿಗೆ ತುಂಬಿದ್ದು, ಕೇವಲ 4 ಲಕ್ಷ ರೂ. ಇಷ್ಟೊಂದು ಹಣ ಎಲ್ಲಿಂದ ಬಂದಿದೆ ಎಂದು ಪ್ರಶ್ನಿಸಿದರು.
5
+ ಕೋಟಿ ಕೋಟಿ ಹಣ ಪತ್ತೆಯಾದ ಕಾಂಗ್ರೆಸ್ ಸಂಸದನ ಬಂಧನಕ್ಕೆ ಮರಾಂಡಿ ಒತ್ತಾಯ
6
+
7
+ ಸದನದಲ್ಲಿ ಕೇಳಿದ 60 ಪ್ರಶ್ನೆಗಳಲ್ಲಿ 45 ಹೆಚ್ಚು ಪ್ರಶ್ನೆಗಳು ಸ್ನೇಹಿತರ ಉದ್ಯಮಕ್ಕೆ ಅನುಕೂಲಕ್ಕೆ ಸಂಬಂಧಿಸಿದಾಗಿದೆ. 36 ಬಾರಿ ದೆಹಲಿಯಿಂದ ಹೊರ ದೇಶಕ್ಕೆ ಪ್ರಯಾಣ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಹಳಷ್ಟು ಅವಕಾಶ ಕೊಡಲಾಗಿತ್ತು ಎಂದು ತಿಳಿಸಿದರು.
8
+ ತೆಲಂಗಾಣದಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ
9
+ ಮೊಯಿತ್ರಾ ಹಾಗೂ ಸಂಸದ ಧಿರಜ್ ಪ್ರಸಾದ್ ಸಾಹು ಭ್ರಷ್ಟಾಚಾರ ಮಾಡಿದ ಹಣ ದೇಶದ ಜನರದಾಗಿದೆ. ಅದನ್ನು ಒಂದು ಪೈಸೆ ಸಹ ನಾವು ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಟ್ವಿಟ್ ಮಾಡಿದ್ದಾರೆ ಎಂದು ಹೇಳಿದರು.
eesanje/url_46_292_9.txt ADDED
@@ -0,0 +1,6 @@
 
 
 
 
 
 
 
1
+ ರಾಮನಗರ, ಕನಕಪುರದಲ್ಲಿ ವೈದ್ಯಕೀಯ ಕಾಲೇಜು
2
+ ಬೆಂಗಳೂರು, ಡಿ.9- ರಾಮನಗರ ಮತ್ತು ಕನಕಪುರ ಎರಡೂ ಕಡೆಗಳಲ್ಲಿ 2024-25 ನೇ ಸಾಲಿನಲ್ಲಿ ಹೊಸದಾಗಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಆಸಕ್ತಿ ಹೊಂದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
3
+ ಶಾಸಕ ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ರಾಜ್ಯದಲ್ಲಿ 24 ಸರ್ಕಾರಿ ಮತ್ತು 46 ಖಾಸಗಿ ವೈದ್ಯಕೀಯ ಕಾಲೇಜುಗಳಿವೆ. ದಾವಣಗೆರೆ, ಉಡುಪಿ, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಬಾಗಲಕೋಟೆ, ದಕ್ಷಿಣ ಕನ್ನಡ, ವಿಜಯನಗರ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಲ್ಲ ಎಂದು ತಿಳಿಸಿದ್ದಾರೆ.
4
+ ಅಸ್ಸಾಮಿ ಮುಸ್ಲಿಮರ ಆರ್ಥಿಕ ಮೌಲ್ಯಮಾಪನಕ್ಕೆ ನಿರ್ಧಾರ
5
+ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಬೇಕೆಂದು ಸರ್ಕಾರದ ನೀತಿಯಾಗಿದೆ. ಪ್ರಸ್ತುತ ವರ್ಷದಲ್ಲಿ ವಿಜಯಪುರ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಿಸುವ ಪ್ರಸ್ತಾವನೆ ಇಲ್ಲ. ಅನುದಾನ ಲಭ್ಯತೆ ಆಧರಿಸಿ ಹಂತಹಂತವಾಗಿ ಜಿಲ್ಲೆಗೊಂದು ಕಾಲೇಜುಗಳನ್ನು ಆರಂಭಿಸಲಾಗುವುದು.
6
+ ಮೆಡಿಕಲ್ ಕಾಲೇಜಿಗೆ 610 ಕೋಟಿ ರೂ. ಅನಾವರ್ಥಕ ವೆಚ್ಚ, 600 ಕೋಟಿ ರೂ. ವಾರ್ಷಿಕ ಆವರ್ತಕ ವೆಚ್ಚದ ಅವಶ್ಯಕತೆಯಿದೆ. ಅನುದಾನದ ಲಭ್ಯತೆ ಆಧರಿಸಿ ಕಾಲೇಜುಗಳನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ.
eesanje/url_46_293_1.txt ADDED
@@ -0,0 +1,8 @@
 
 
 
 
 
 
 
 
 
1
+ ಲೀಲಾವತಿ ಅವರ ಅಂತಿಮ ದರ್ಶನ ಪಡೆದ ಗಣ್ಯರು, ಸಾರ್ವಜನಿಕರು
2
+ ನೆಲಮಂಗಲ,ಡಿ.9- ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ.ಎಂ.ಲೀಲಾವತಿಯವರ ನಿಧನಕ್ಕೆ ನಾಡಿನ ಗಣ್ಯಮಾನ್ಯರು ಕಂಬನಿ ಮಿಡಿದಿದ್ದು, ಚಿತ್ರರಂಗ, ರಾಜಕೀಯ ಕ್ಷೇತ್ರದ ಗಣ್ಯರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆದಿದ್ದಾರೆ.
3
+ ಪಟ್ಟಣದ ಅಂಬೇಡ್ಕರ್ ಮೈದಾನದಲ್ಲಿ ಬೆಳಿಗ್ಗೆ 5.30 ರಿಂದ 10.45 ರವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನೆಲಮಂಗಲ, ಸೋಲದೇವನಹಳ್ಳಿ, ಬೆಂಗಳೂರು, ತುಮಕೂರು ಸೇರಿದಂತೆ ವಿವಿಧ ಭಾಗಗಳಿಂದ ಅಭಿಮಾನಿಗಳು ಹಾಗೂ ಕಲಾವಿದರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.
4
+ ಅವರ ಪುತ್ರ ವಿನೋದ್ ರಾಜ್‍ರ ಒಪ್ಪಿಗೆಯಂತೆ 11 ಗಂಟೆಯಿಂದ 2 ಗಂಟೆವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಬಯಲು ರಂಗಮಂದಿರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮುಖ್ಯಮಂತ್ರಿ ಸಿ.ಎಂ.ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ವಿ.ಸೋಮಣ್ಣ, ಚಿತ್ರರಂಗ ಕಲಾವಿದರಾದ ಸುಧಾರಾಣಿ, ಮಾಳವಿಕ, ಶ್ರೀನಾಥ್, ಉಪೇಂದ್ರ, ಉಮಾಶ್ರೀ, ದ್ವಾರಕೀಶ್ ಸೇರಿದಂತೆ ಅನೇಕ ಗಣ್ಯರು, ಹಿರಿಯ ಕಲಾವಿದರು ಹಾಗೂ ಅಭಿಮಾನಿಗಳು ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದಾರೆ.
5
+ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು ಲೀಲಾವತಿಯವರ ಅಂತಿಮ ದರ್ಶನ ಪಡೆದು ಹಿರಿಯ ನಟಿಗೆ ಅಂತಿಮ ನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ಇವರ ನಿಧನದಿಂದಾಗಿ ಚಿತ್ರರಂಗ ಅಮೂಲ್ಯರತ್ನವೊಂದನ್ನು ಕಳೆದುಕೊಂಡಿದೆ. ಕನ್ನಡ ಸೇರಿದಂತೆ ಇತರೆ ಭಾಷೆ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹುಭಾಷಾ ತಾರೆ ಎನಿಸಿಕೊಂಡಿದ್ದರು. ಅವರ ಸಾಮಾಜಿಕ ಕಾರ್ಯಗಳು ಎಲ್ಲರಿಗೂ ಆದರ್ಶಪ್ರಾಯವಾಗಿವೆ. ಅವರ ನಿಧನದಿಂದ ಕನ್ನಡ ಸಿನಿಮಾ ಲೋಕಕ್ಕೆ ಅಪಾರ ನಷ್ಟವಾಗಿದೆ. ಇವರ ಪುತ್ರ ವಿನೋದ್‍ರಾಜ್ ಅವರಿಗೆ ದುಃಖವನ್ನು ಭರಿಸುವಂತಹ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸಿದರು.
6
+ ನಟ ಉಪೇಂದ್ರ ಲೀಲಾವತಿಯವರ ಅಂತಿಮ ದರ್ಶನ ಪಡೆದು ಮಾತನಾಡಿದ ಅವರು, ಕನ್ನಡ ಚಿತ್ರರಂಗದ ಶ್ರೇಷ್ಠ ನಟಿ ಲೀಲಾವತಿಯವರನ್ನು ಕಳೆದುಕೊಂಡು ಚಿತ್ರರಂಗ ಬಡವಾಗಿದೆ. ಆಸ್ಪತ್ರೆ ಸೇರಿದಂತೆ ಸಾಕಷ್ಟು ಸಮಾಜಸೇವೆ ಮಾಡಿದ್ದಾರೆ. ಅವರ ಅಗಲಿಕೆ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟವಾಗಲಿದೆ ಎಂದು ಕಂಬನಿ ಮಿಡಿದರು.
7
+ ಹಿರಿಯ ನಟ ಅನಂತನಾಗ್ ಲೀಲಾವತಿಯವರ ನಿಧನಕ್ಕೆ ಕಂಬನಿ ಮಿಡಿದರು. ನಾನು ಅವರನ್ನು ಎರಡನೇ ತಾಯಿಯನ್ನಾಗಿ ನೋಡಿದ್ದೇನೆ. ಅದೇ ರೀತಿ ಪ್ರೀತಿ ಗೌರವವನ್ನು ಕೂಡ ಕೊಟ್ಟಿದ್ದೇನೆ. ಅವರು ನನಗೆ ಮೊದಲು ಸಿಕ್ಕಿದ್ದು ನನ್ನ ಸಿನಿಮಾದ ತಾಯಿಯ ಪಾತ್ರದಲ್ಲಿ. ನಂತರ ಸಹೋದರಿಯಾಗಿ ನಟಿಸಿದ್ದಾರೆ. ಇಂದು ಅವರು ನಮ್ಮೊಂದಿಗೆ ಇಲ್ಲದಿರುವುದು ಅರಗಿಸಿಕೊಳ್ಳಲಾಗುತ್ತಿಲ್ಲ ಎಂದರು.
8
+ ಪ್ರಧಾನಿ ನರೇಂದ್ರ ಮೋದಿಯವರೂ ಕೂಡ ಲೀಲಾವತಿಯವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಬಹುಮುಖ ಪ್ರತಿಭೆಯೊಂದಿಗೆ ಬೆಳ್ಳಿಪರದೆಯನ್ನು ಅಲಂಕರಿಸಿದ ಅವರು ವಿವಿಧ ಪಾತ್ರಗಳು ಹಾಗೂ ನಟನೆಯ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಅವರ ಚಿತ್ರಸೇವೆ ನಿಜಕ್ಕೂ ಪ್ರಶಂಸಾರ್ಹ. ಪುತ್ರ, ಕುಟುಂಬ ಹಾಗೂ ಅಭಿಮಾನಿಗಳಿಗೆ ಲೀಲಾವತಿಯ ಅಗಲಿಕೆಗೆ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸಿ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.
eesanje/url_46_293_10.txt ADDED
@@ -0,0 +1,5 @@
 
 
 
 
 
 
1
+ ಯತ್ನಾಳ್ ವಿರುದ್ಧ ಹರಿಹಾಯ್ದ ಪುಟ್ಟರಂಗ ಶೆಟ್ಟಿ
2
+ ಬೆಳಗಾವಿ,ಡಿ.8- ಕಾಂಗ್ರೆಸ್ ಶಾಸಕ ಸಿ.ಪುಟ್ಟರಂಗ ಶೆಟ್ಟಿ ಅವರು ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಸ್ಲಿಂ ಸಮುದಾಯದ ಬಗ್ಗೆ ಯತ್ನಾಳ್ ನೀಡಿರುವ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದರು.
3
+ ಮುಸ್ಲಿಂರನ್ನು ತುಚ್ಛವಾಗಿ ಕಾಣುತ್ತಾ, ಅವರು ವಿರುದ್ಧ ಹೇಳಿಕೆ ನೀಡುತ್ತಾ ಚುನಾವಣೆಯಲ್ಲಿ ಅವರು ಗೆದ್ದಂತಹವರು. ಒಬ್ಬ ರಾಜಕಾರಣಿ ಆದವರು ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಇನ್ನು ಮೌಲ್ವಿಗಳ ಸವಾಲನ್ನು ಯತ್ನಾಳ್ ಸ್ವೀಕರಿಸುತ್ತಾನಾ ಎಂದು ಏಕವಚನದಲ್ಲೇ ಹರಿಹಾಯ್ದಿದರು.
4
+ ಅಮೆರಿಕದಲ್ಲಿ ಭಾರತೀಯ ಮೂಲದ ಹೋಟೆಲ್ ಮಾಲೀಕನ ಹತ್ಯೆ
5
+ ಯತ್ನಾಳ್ ನಾನೇ ಮಹಾನ್ ನಾಯಕ ಎಂಬಂತೆ ಮಾತನಾಡುತ್ತಾರೆ. ಸ್ವಪಕ್ಷೀಯರ ವಿರುದ್ದವೇ ಹೇಳಿಕೆಗಳನ್ನು ನೀಡುತ್ತಾರೆ. ಅವರ ಪಕ್ಷದ ಹೈಕಮಾಂಡ್ ಆಯ್ಕೆಗಳನ್ನು ಒಪ್ಪಲು ತಯಾರಿಲ್ಲ. ಬಿಜೆಪಿಯಲ್ಲಿ ಇಂತಹ ನಾಯಕರನ್ನು ಬೆಳೆಸಿದರೆ ಬಿಜೆಪಿ ಸರ್ವನಾಶವಾಗಲಿದೆ. ಹಾಗಾಗಿ ಬಿಜೆಪಿಯವರು ಯತ್ನಾಳ್‍ನನ್ನು ಪಕ್ಷದಿಂದ ಉಚ್ಛಾಟಿಸಿದರೆ ಒಳ್ಳೆಯದು ಎಂದು ಅವರು ಹೇಳಿದರು.