CoolCoder44 commited on
Commit
03ea19b
·
verified ·
1 Parent(s): 0df8b8b

a182378a6757d14befcd696b48e7772278bf13d3598c44f747026f53095e45fe

Browse files
Files changed (50) hide show
  1. eesanje/url_47_194_6.txt +5 -0
  2. eesanje/url_47_194_7.txt +8 -0
  3. eesanje/url_47_194_8.txt +4 -0
  4. eesanje/url_47_194_9.txt +7 -0
  5. eesanje/url_47_195_1.txt +9 -0
  6. eesanje/url_47_195_10.txt +8 -0
  7. eesanje/url_47_195_11.txt +9 -0
  8. eesanje/url_47_195_12.txt +8 -0
  9. eesanje/url_47_195_2.txt +12 -0
  10. eesanje/url_47_195_3.txt +7 -0
  11. eesanje/url_47_195_4.txt +5 -0
  12. eesanje/url_47_195_5.txt +6 -0
  13. eesanje/url_47_195_6.txt +7 -0
  14. eesanje/url_47_195_7.txt +8 -0
  15. eesanje/url_47_195_8.txt +8 -0
  16. eesanje/url_47_195_9.txt +7 -0
  17. eesanje/url_47_196_1.txt +8 -0
  18. eesanje/url_47_196_10.txt +5 -0
  19. eesanje/url_47_196_11.txt +5 -0
  20. eesanje/url_47_196_12.txt +7 -0
  21. eesanje/url_47_196_2.txt +6 -0
  22. eesanje/url_47_196_3.txt +7 -0
  23. eesanje/url_47_196_4.txt +8 -0
  24. eesanje/url_47_196_5.txt +6 -0
  25. eesanje/url_47_196_6.txt +6 -0
  26. eesanje/url_47_196_7.txt +8 -0
  27. eesanje/url_47_196_8.txt +9 -0
  28. eesanje/url_47_196_9.txt +7 -0
  29. eesanje/url_47_197_1.txt +8 -0
  30. eesanje/url_47_197_10.txt +6 -0
  31. eesanje/url_47_197_11.txt +6 -0
  32. eesanje/url_47_197_12.txt +6 -0
  33. eesanje/url_47_197_2.txt +6 -0
  34. eesanje/url_47_197_3.txt +6 -0
  35. eesanje/url_47_197_4.txt +9 -0
  36. eesanje/url_47_197_5.txt +8 -0
  37. eesanje/url_47_197_6.txt +9 -0
  38. eesanje/url_47_197_7.txt +6 -0
  39. eesanje/url_47_197_8.txt +6 -0
  40. eesanje/url_47_197_9.txt +5 -0
  41. eesanje/url_47_198_1.txt +6 -0
  42. eesanje/url_47_198_10.txt +6 -0
  43. eesanje/url_47_198_11.txt +6 -0
  44. eesanje/url_47_198_12.txt +8 -0
  45. eesanje/url_47_198_2.txt +7 -0
  46. eesanje/url_47_198_3.txt +7 -0
  47. eesanje/url_47_198_4.txt +7 -0
  48. eesanje/url_47_198_5.txt +8 -0
  49. eesanje/url_47_198_6.txt +6 -0
  50. eesanje/url_47_198_7.txt +6 -0
eesanje/url_47_194_6.txt ADDED
@@ -0,0 +1,5 @@
 
 
 
 
 
 
1
+ ಜ.17ರಂದು ರಾಮ್‍ಲಲ್ಲಾ ವಿಗ್ರಹ ವೀಕ್ಷಣೆಗೆ ಅವಕಾಶ
2
+ ಆಯೋಧ್ಯ,ಜ.9- ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಲಾಗಿರುವ ರಾಮ್‍ಲಲ್ಲಾ ಹೊಸ ವಿಗ್ರಹದ ದರ್ಶನ ಭಕ್ತರಿಗೆ ಲಭಿಸಬೇಕು ಎಂಬ ಉದ್ದೇಶದಿಂದ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜ.17 ರಂದು ನಿಗದಿಪಡಿಸಿದ್ದ ಮೆರವಣಿಗೆಯನ್ನು ರದ್ದುಗೊಳಿಸಲಾಗಿದೆ.
3
+ ಮೆರವಣಿಗೆ ಬದಲಾಗಿ, ಅದೇ ದಿನ ರಾಮ ಜನ್ಮಭೂಮಿಯ ಆವರಣದೊಳಗೆ ಹೊಸ ವಿಗ್ರಹದ ದರ್ಶನವನ್ನು ಟ್ರಸ್ಟ್ ಏರ್ಪಡಿಸಲಿದೆ ಎಂದು ಟ್ರಸ್ಟ್‍ನ ಹಿರಿಯ ಕಾರ್ಯನಿರ್ವಹಣಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‍ನ ಅಧಿಕಾರಿಗಳು ಕಾಶಿಯ ಆಚಾರ್ಯರು ಮತ್ತು ಹಿರಿಯ ಆಡಳಿತಾಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
4
+ ಮಧ್ಯಪ್ರದೇಶದಲ್ಲಿ ಕೋಮುಗಲಭೆ, ಮೂರು ಪ್ರದೇಶಗಳಲ್ಲಿ ನಿಷೇದಾಜ್ಞೆ
5
+ ಅಯೋಧ್ಯೆ ಜಿಲ್ಲಾಡಳಿತದ ಪ್ರಕಾರ, ನಗರದಲ್ಲಿ ರಾಮಲಲ್ಲಾನ ಹೊಸ ವಿಗ್ರಹವನ್ನು ತೆಗೆದಾಗ ಅದರ ದರ್ಶನಕ್ಕೆ ಭಕ್ತರು ಮತ್ತು ಯಾತ್ರಿಕರು ಧಾವಿಸುವುದರಿಂದ ಜನಸಂದಣಿಯನ್ನು ನಿಯಂತ್ರಿಸುವುದು ಕಷ್ಟಕರವಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.
eesanje/url_47_194_7.txt ADDED
@@ -0,0 +1,8 @@
 
 
 
 
 
 
 
 
 
1
+ ಗೋವಾದಲ್ಲಿ ಮಗನನ್ನು ಕೊಂದು ಪರಾರಿಯಾಗುತ್ತಿದ್ದ ಸ್ಟಾರ್ಟ್ಅಪ್ ಸಿಇಒ ಚಿತ್ರದುರ್ಗದಲ್ಲಿ ಸೆರೆ
2
+ ಪಣಜಿ ,ಜ.9- ಗೋವಾದ ಹೋಟೆಲ್‍ನಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಕೊಲೆ ಮಾಡಿ ಬೆಂಗಳೂರಿಗೆ ಪರಾರಿಯಾಗುತ್ತಿದ್ದ ಸ್ಟಾರ್ಟ್‍ಅಪ್‍ನ ಸಿಇಒ ಅವರನ್ನು ಚಿತ್ರದುರ್ಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರು ಮೂಲದ ಕೃತಕ ಬುದ್ದಿಮತ್ತೆ ಸ್ಟಾರ್ಟ್‍ಅಪ್‍ನ ಸಿಇಒ ಸುಚನಾ ಸೇಠ್(39) ಬಂಧಿತ ಆರೋಪಿಯಾಗಿದ್ದಾರೆ.
3
+ ಸುಚನಾ ಸೇಠ್ ಅವರು ಹೋಟೆಲ್‍ನಿಂದ ಹೊರಬಂದ ನಂತರ ಕೊಠಡಿಯನ್ನು ಸ್ವಚ್ಛಗೊಳಿಸುತ್ತಿದ್ದ ಹೋಟೆಲ್ ಸಿಬ್ಬಂದಿಯೊಬ್ಬರು ಹಾಳೆಯಲ್ಲಿ ರಕ್ತದ ಕಲೆಗಳನ್ನು ಗಮನಿಸಿದ ನಂತರ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರು ಮೂಲದ ಎಐ ಸ್ಟಾರ್ಟ್‍ಅಪ್‍ನ ಸಿಇಒ ನಿನ್ನೆ ತನ್ನ ನಾಲ್ಕು ವರ್ಷದ ಮಗನನ್ನು ಗೋವಾದ ಹೋಟೆಲ್‍ನಲ್ಲಿ ಕೊಲೆ ಮಾಡಿ ಶವವನ್ನು ಬ್ಯಾಗ್‍ನಲ್ಲಿ ತುಂಬಿ ಟ್ಯಾಕ್ಸಿಯಲ್ಲಿ ಪರಾರಿಯಾಗುತ್ತಿದ್ದಾಗ ಕರ್ನಾಟಕ ಪೊಲೀಸರು ಚಿತ್ರದುರ್ಗದಿಂದ ಅವರನ್ನು ಬಂಧಿಸಿದ್ದಾರೆ.
4
+ ಕೊಲೆ ಆರೋಪಿ ಸೆಠ್ ತನ್ನ ಮಗನೊಂದಿಗೆ ಜ. 6 ರಂದು ಉತ್ತರ ಗೋವಾದ ಸಿಂಕ್ವೆರಿಮ್‍ನಲ್ಲಿರುವ ಹೋಟೆಲ್‍ಗೆ ಚೆಕ್ ಇನ್ ಮಾಡಿದ್ದರು. ಆಕೆ ಚೆಕ್‍ಔಟ್ ಮಾಡಿದಾಗ ಕೊಠಡಿಯನ್ನು ಸ್ವಚ್ಛಗೊಳಿಸುತ್ತಿದ್ದ ಹೋಟೆಲ್ ಸಿಬ್ಬಂದಿ, ಹಾಳೆಗಳ ಮೇಲೆ ರಕ್ತದ ಕಲೆಗಳನ್ನು ಗಮನಿಸಿದ ನಂತರ ಹೊಟೆಲ್ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
5
+ ತ್ರಿಪುರಾದ ಧಲೈನಲ್ಲಿ ಉಗ್ರ ಬಿಎಸ್‍ಎಪ್ ಮುಂದೆ ಶರಣಾಗತಿ
6
+ ಪೊಲೀಸರ ಪ್ರಕಾರ, ಸೇಠ್ ತನ್ನ ಮಗನನ್ನು ಹರಿತವಾದ ಆಯುಧದಿಂದ ಕೊಂದು ನಂತರ, ತಾನು ರಸ್ತೆಯಲ್ಲಿ ಪ್ರಯಾಣಿಸಬೇಕೆಂದು ಒತ್ತಾಯಿಸಿ ಬೆಂಗಳೂರಿಗೆ ಹಿಂತಿರುಗಲು ಟ್ಯಾಕ್ಸಿ ವ್ಯವಸ್ಥೆ ಮಾಡುವಂತೆ ಹೋಟೆಲ್ ಆಡಳಿತ ಮಂಡಳಿಯನ್ನು ಕೇಳಿಕೊಂಡಿದ್ದರು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆಕೆ ಹೋಟೆಲ್‍ನಿಂದ ಒಬ್ಬಳೇ ಚೆಕ್ ಔಟ್ ಮಾಡಿದ್ದಾಳೆಂದು ತಿಳಿದುಬಂದಿದೆ.
7
+ ಆರಂಭದಲ್ಲಿ ಆಕೆ ತನ್ನ ಮಗನನ್ನು ದಕ್ಷಿಣ ಗೋವಾದಲ್ಲಿ ಸಂಬಂಧಿಕರೊಬ್ಬರ ಬಳಿ ಬಿಟ್ಟು ಹೋಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಳು, ಆದರೆ ಕಥೆಯನ್ನು ನಂಬದೆ ನಾವು ಕ್ಯಾಬ್ ಡ್ರೈವರ್‍ಗೆ ಕರೆ ಮಾಡಿ ಹತ್ತಿರದ ಪೊಲೀಸ್ ಠಾಣೆಗೆ ವರದಿ ಮಾಡಲು ಹೇಳಿದೆವು. ಬೆಂಗಳೂರಿಗೆ ತೆರಳುತ್ತಿದ್ದಾಗ ಚಿತ್ರದುರ್ಗ ಜಿಲ್ಲೆಯಲ್ಲಿ ಕರ್ನಾಟಕ ಪೊಲೀಸರ ಸಹಾಯದಿಂದ ಆಕೆಯನ್ನು ಬಂಧಿಸಲಾಯಿತು ಎಂದು ಕ್ಯಾಲಂಗುಟ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
8
+ ವಿಚಾರಣೆಗಾಗಿ ಮಹಿಳೆಯನ್ನು ವಶಕ್ಕೆ ಪಡೆಯಲು ಕಲಾಂಗುಟೆ ಪೊಲೀಸರ ತಂಡ ಕರ್ನಾಟಕಕ್ಕೆ ತೆರಳಿದೆ. ಅಪರಾಧದ ಉದ್ದೇಶವನ್ನು ಪೊಲೀಸರು ಇನ್ನೂ ಪತ್ತೆ ಮಾಡಿಲ್ಲ ಎಂದು ತಿಳಿದುಬಂದಿದೆ.
eesanje/url_47_194_8.txt ADDED
@@ -0,0 +1,4 @@
 
 
 
 
 
1
+ ಗಾಢ ಮಂಜಿನಿಂದಾಗಿ ಕಾರು ಟ್ರಕ್‍ಗೆ ಡಿಕ್ಕಿ, ಇಬ್ಬರು ಪೊಲೀಸರು ಬಲಿ
2
+ ನವದೆಹಲಿ, ಜ 9 (ಪಿಟಿಐ) ಹರಿಯಾಣದ ಸೋನಿಪತ್ ಜಿಲ್ಲೆಯ ಕುಂಡಲಿ ಗಡಿಯ ಬಳಿ ಗಾಢ ಮಂಜಿನಿಂದಾಗಿ ಕಾರು ಟ್ರಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ದೆಹಲಿ ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
3
+ ರಾತ್ರಿ 11.30ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಲಿಪಶುಗಳನ್ನು ವಾಯುವ್ಯ ಜಿಲ್ಲೆಯ ವಿಶೇಷ ಸಿಬ್ಬಂದಿಯ ಇನ್ಸ್‍ಪೆಕ್ಟರ್ ದಿನೇಶ್ ಬೇನಿವಾಲ್ ಮತ್ತು ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾದ ಎಟಿಒ ಇನ್‍ಸ್ಪೆಕ್ಟರ್ ರಣವೀರ್ ಎಂದು ಗುರುತಿಸಲಾಗಿದೆ. ಅವರು ವೈಯಕ್ತಿಕ ಕಾರಿನಲ್ಲಿ ತಮ್ಮ ಸೋನಿಪತ್ ಮನೆಗಳಿಗೆ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹರಿಯಾಣದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
4
+ ಇವರು ಸಂಚರಿಸುತ್ತಿದ್ದ ಕಾರು ನಿಲುಗಡೆ ಮಾಡಿದ ಟ್ರಕ್‍ಗೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
eesanje/url_47_194_9.txt ADDED
@@ -0,0 +1,7 @@
 
 
 
 
 
 
 
 
1
+ ಮಧ್ಯಪ್ರದೇಶದಲ್ಲಿ ಕೋಮುಗಲಭೆ, ಮೂರು ಪ್ರದೇಶಗಳಲ್ಲಿ ನಿಷೇದಾಜ್ಞೆ
2
+ ಶಾಜಾಪುರ, ಜ 9 (ಪಿಟಿಐ) ಧಾರ್ಮಿಕ ಮೆರವಣಿಗೆಯಲ್ಲಿ ಭಾಗವಹಿಸಿದ್ದವರ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಶಾಜಾಪುರ ನಗರದ ಮೂರು ಪ್ರದೇಶಗಳಲ್ಲಿ ಸಿಆರ್‌ಪಿಸಿ ಸೆಕ್ಷನ್ 144 ರ ಅಡಿಯಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದೆ.
3
+ ನಿನ್ನೆ ಸಂಜೆ ಮಗರಿಯಾ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದು, ಈ ಪ್ರದೇಶದಲ್ಲಿ ಸೂಕ್ತ ಭದ್ರತೆಯನ್ನು ನಿಯೋಜಿಸಲಾಗಿದೆ ಮತ್ತು ಈ ಸಂಬಂಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಾಜಾಪುರ ಕಲೆಕ್ಟರ್ ರಿಜು ಬಫ್ನಾ ಅವರು ಎಕ್ಸ್ ಪೋಸ್ಟ್‍ನಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್‍ನ (ಸಿಆರ್‍ಪಿಸಿ) ಸೆಕ್ಷನ್ 144 ಅನ್ನು ಮೂರು ಪ್ರದೇಶಗಳಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.
4
+ ತ್ರಿಪುರಾದ ಧಲೈನಲ್ಲಿ ಉಗ್ರ ಬಿಎಸ್‍ಎಪ್ ಮುಂದೆ ಶರಣಾಗತಿ
5
+ ಪ್ರಥಮ ಮಾಹಿತಿ ವರದಿಯ ಪ್ರಕಾರ, ನಿನ್ನೆ ರಾತ್ರಿ 8.30 ರ ಸುಮಾರಿಗೆ ಮಸೀದಿ ಬಳಿ ನಾಗ್-ನಾಗಿನ್ ರಸ್ತೆಯಲ್ಲಿ ಏಳು-ಎಂಟು ಜನರು ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದ ಮೊದಲು ಸಾಮಾನ್ಯ ಸಂಜೆ ಮೆರವಣಿಗೆಯನ್ನು ನಡೆಸುತ್ತಿದ್ದಾಗ ಜನರ ಗುಂಪನ್ನು ತಡೆದರು. ಮೆರವಣಿಗೆಯ ಭಾಗವಾಗಿದ್ದ ಮೋಹಿತ್ ರಾಥೋಡ್ ಎಂಬುವರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
6
+ ವಿವಾದದ ಕೇಂದ್ರ ಬಿಂದುವಾಗಿರುವ ಮಗರಿಯಾ, ಕಚ್ಚಿವಾಡ ಮತ್ತು ಲಾಲ್‍ಪುರಗಳಲ್ಲಿ ನಿಷೇದಾಜ್ಞೆ ವಿಧಿಸಲಾಗಿದ್ದು ಸಾರ್ವಜನಿಕರು ಸಹಕರಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ. ಸದ್ಯ ಪರಿಸ್ಥಿತಿ ಶಾಂತವಾಗಿದ್ದು, ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದರು.
7
+ ಆ ಪ್ರದೇಶದಿಂದ ಮೆರವಣಿಗೆಯನ್ನು ಹೊರಕ್ಕೆ ತೆಗೆದುಕೊಳ್ಳದಂತೆ ವ್ಯಕ್ತಿಗಳು ಅವರಿಗೆ ಹೇಳಿದರು ಮತ್ತು ನಂತರ ಜನರ ಗುಂಪು ಅಲ್ಲಿ ಜಮಾಯಿಸಿತು ಎಂದು ಎಫ್‍ಐಆರ್‍ನಲ್ಲಿ ತಿಳಿಸಲಾಗಿದೆ.
eesanje/url_47_195_1.txt ADDED
@@ -0,0 +1,9 @@
 
 
 
 
 
 
 
 
 
 
1
+ ದೇಶದ ಮೊದಲ ಬುಲೆಟ್ ರೈಲು ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣ
2
+ ಅಹಮದಾಬಾದ್, ಜ.8: ಗುಜರಾತ್-ಮಹಾರಾಷ್ಟ್ರ ನಡುವಿನ ಬುಲೆಟ್ ರೈಲು ಯೋಜನೆಗೆ 100 ಪ್ರತಿಶತ ಭೂಸ್ವಾಧೀನವನ್ನು ಪೂರ್ಣಗೊಳಿಸಿದೆ ಎಂದು ರಾಷ್ಟ್ರೀಯ ಹೈಸ್ಪೀಡ್ ರೈಲ್ ಕಾಪೆರ್ರೇಷನ್ ಲಿಮಿಟೆಡ್ ಹೇಳಿದೆ. ಮುಂಬೈ-ಅಹಮದಾಬಾದ್ ನಡುವಿನ ರೈಲು ಕಾರಿಡಾರ್‍ಗಾಗಿ ಭೂಸ್ವಾಧೀನ ಪೂರ್ಣಗೊಂಡಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಎಕ್ಸ್‍ನಲ್ಲಿ ಖುಷಿ ಹಂಚಿಕೊಂಡಿದ್ದಾರೆ, ಯೋಜನೆಗೆ ಅಗತ್ಯವಿರುವ ಸಂಪೂರ್ಣ 1389.49 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
3
+ ಜನಪ್ರೀಯತೆ ಗಳಿಸಿರುವ ಮುಂಬೈ ಮತ್ತು ಅಹಮದಾಬಾದ್ ನಡುವೆ ಹೈಸ್ಪೀಡ್ ರೈಲು ಮಾರ್ಗವನ್ನು ನಿರ್ಮಿಸುವ ಸಿವಿಲ್ ಗುತ್ತಿಗೆಗಳನ್ನು ಗುಜರಾತ್ ಮತ್ತು ಮಹಾರಾಷ್ಟ್ರಕ್ಕೆ ನೀಡಲಾಗಿದೆ, 120.4 ಕಿಮೀ ಗರ್ಡರ್‍ಗಳನ್ನು ಪ್ರಾರಂಭಿಸಲಾಗಿದೆ ಮತ್ತು 271 ಕಿಮೀ ಪಿಯರ್ ಕಾಸ್ಟಿಂಗ್ ಪೂರ್ಣಗೊಂಡಿದೆ ಎಂದು ಎನ್‍ಎಚ್‍ಎಸ್‍ಆರ್‍ಸಿಎಲ್ ತಿಳಿಸಿದೆ.
4
+ ಜಪಾನಿನ ಶಿಂಕನ್‍ಸೆನ್‍ನಲ್ಲಿ ಬಳಸಿದಂತೆ ಕಾರಿಡಾರ್ ಟ್ರ್ಯಾಕ್ ಸಿಸ್ಟಮ್‍ಗಾಗಿ ಮೊದಲ ಬಲವರ್ತಧಿ ಕಾಂಕ್ರೀಟ್ ಟ್ರ್ಯಾಕ್ ಬೆಡ್ ಅನ್ನು ಹಾಕುವ ಕಾರ್ಯ ಸೂರತ್ ಮತ್ತು ಆನಂದ್‍ನಲ್ಲಿ ಪ್ರಾರಂಭವಾಗಿದೆ. ಇದು ಮೊದಲ ಬಾರಿಗೆ ಎ- ಸ್ಲ್ಯಾಬ್ ಬ್ಯಾಲೆಸ್ಟ್‍ಲೆಸ್ ಟ್ರ್ಯಾಕ್ ಸಿಸ್ಟಮ್ ಅನ್ನು ಭಾರತದಲ್ಲಿ ಬಳಸಲಾಗುತ್ತಿದೆ ಎಂದು ತಿಳಿಸಿದೆ. ಗುಜರಾತ್‍ನ ವಲ್ಸಾದ್ ಜಿಲ್ಲೆಯ ಜರೋಲಿ ಗ್ರಾಮದ ಬಳಿ 350 ಮೀಟರ್ ಉದ್ದ ಮತ್ತು 12.6 ಮೀಟರ್ ವ್ಯಾಸದ ಮೊದಲ ಪರ್ವತ ಸುರಂಗವನ್ನು ಕೇವಲ 10 ತಿಂಗಳಲ್ಲಿ ಪೂರ್ಣಗೊಳಿಸುವುದರೊಂದಿಗೆ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದೆ ಎಂದು ಹೇಳಿದೆ.
5
+ ಜೆಟ್ ಲ್ಯಾಗ್ ಪಾರ್ಟಿ ಪ್ರಕರಣ : ನಟ ದರ್ಶನ್ ಸೇರಿ ಹಲವರಿಗೆ ನೋಟಿಸ್
6
+ ಮೊದಲ ಉಕ್ಕಿನ ಸೇತುವೆ, 70 ಮೀಟರ್ ವ್ಯಾಪಿಸಿರುವ ಮತ್ತು 673 ಒಖಿ ತೂಕವನ್ನು ಸೂರತ್‍ನಲ್ಲಿ ಓಊ 53 ಗೆ ಅಡ್ಡಲಾಗಿ ನಿರ್ಮಿಸಲಾಗಿದೆ ಮತ್ತು 28 ರಲ್ಲಿ 16 ಅಂತಹ ಸೇತುವೆಗಳು ತಯಾರಿಕೆಯ ವಿವಿಧ ಹಂತಗಳಲ್ಲಿವೆ ಎಂದು ಅದು ಹೇಳಿದೆ.
7
+ ಕಾರಿಡಾರ್‍ನಲ್ಲಿ 24 ರಲ್ಲಿ ಆರು ನದಿಗಳ ಮೇಲೆ ಸೇತುವೆ ನಿರ್ಮಾಣ ಪೂರ್ಣಗೊಂಡಿದೆ, ಪಾರ್ (ವಲ್ಸಾದ್ ಜಿಲ್ಲೆ), ಪೂರ್ಣ (ನವಸಾರಿ ಜಿಲ್ಲೆ), ಮಿಂಧೋಲಾ (ನವಸಾರಿ ಜಿಲ್ಲೆ), ಅಂಬಿಕಾ (ನವಸಾರಿ ಜಿಲ್ಲೆ), ಔರಂಗ (ವಲ್ಸಾದ್ ಜಿಲ್ಲೆ) ಮತ್ತು ವೆಂಗನಿಯಾ ( ನವಸಾರಿ ಜಿಲ್ಲೆ)ಎಂದು ಹೇಳಿದೆ.
8
+ ನರ್ಮದಾ, ತಪತಿ, ಮಾಹಿ ಮತ್ತು ಸಬರಮತಿ ನದಿಗಳ ಮೇಲೆ ಸೇತುವೆ ಕಾಮಗಾರಿ ನಡೆಯುತ್ತಿದೆ ಸಂಚಾರ ವೇಳೆ ರೈಲು ಮತ್ತು ಸಿವಿಲ್ ರಚನೆಗಳಿಂದ ಉಂಟಾಗುವ ಶಬ್ದವನ್ನು ತಗ್ಗಿಸಲು ವಾಯಡಕ್ಟ್‍ನ ಎರಡೂ ಬದಿಗಳಲ್ಲಿ ಶಬ್ದ ತಡೆಗಳನ್ನು ನಿರ್ಮಿಸಲಾಗುತ್ತಿದೆ.
9
+ ಮಹಾರಾಷ್ಟ್ರದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮತ್ತು ಶಿಲ್ಪಾಟಾ ನಡುವಿನ 21 ಕಿಮೀ ಉದ���ದದ ಸುರಂಗದ ಭಾಗವಾಗಿರುವ ಭಾರತದ ಮೊದಲ 7 ಕಿಮೀ ಸಾಗರದೊಳಗಿನ ರೈಲು ಸಂಚಾರಕ್ಕಾಗಿ ಕೆಲಸ ಪ್ರಾರಂಭವಾಗಿದೆ ಮತ್ತು ಮುಂಬೈ ಎಚ್‍ಎಸ್‍ಆರ್ ನಿಲ್ದಾಣದ ನಿರ್ಮಾಣಕ್ಕಾಗಿ ಉತ್ಖನನ ಕಾರ್ಯಗಳು ಪ್ರಾರಂಭವಾಗಿದೆ ಎಂದು ಅದು ಹೇಳಿದೆ.
eesanje/url_47_195_10.txt ADDED
@@ -0,0 +1,8 @@
 
 
 
 
 
 
 
 
 
1
+ ಸೂರ್ಯನ ಗುರಿ ತಲುಪಿದ ಆದಿತ್ಯ ಎಲ್-1, ಇಸ್ರೋ ಮತ್ತೊಂದು ಮೈಲಿಗಲ್ಲು
2
+ ನವದೆಹಲಿ,ಜ.6- ಇಡೀ ವಿಶ್ವವೇ ಕಾತುರದಿಂದ ಎದುರು ನೋಡುತ್ತಿರುವ ಸೂರ್ಯ ನಮಸ್ಕಾರ ಆದಿತ್ಯ ಎಲ್-1 ಉಪಗ್ರಹ ಇಂದು ಸಂಜೆ 4 ಗಂಟೆಗೆ ಲ್ಯಾಂಗ್ರೇಜಿಯನ್ ಬಿಂದು-1 ರ ಗುರಿ ತಲುಪುವ ಮೂಲಕ ಇತಿಹಾಸ ನಿರ್ಮಾಣವಾಗುವ ನಿರೀಕ್ಷೆಗಳಿವೆ. ಕಳೆದ ಸೆ.2 ರಂದು ಪಿಎಸ್‍ಎಲ್‍ವಿ ರಾಕೆಟ್‍ನೊಂದಿಗೆ ಉಡಾವಣೆಗೊಂಡಿದ್ದ ಆದಿತ್ಯ ಎಲ್-1 ಸೂರ್ಯ ಅಧ್ಯಯನದ ವೈಜ್ಞಾನಿಕ ಉಪಗ್ರಹ ಈವರೆಗೂ 15 ಲಕ್ಷ ಕಿ.ಮೀ. ದೂರ ಪ್ರಯಾಣಿಸಿ ಅಂತಿಮವಾಗಿ ತನ್ನ ಗಮ್ಯ ತಲುಪುವ ಕ್ಷಣಗಳಿಗಾಗಿ ವಿಶ್ವಾದ್ಯಂತ ಕಾತುರದ ಕ್ಷಣಗಳು ಎದುರಾಗಿವೆ.
3
+ ಆದಿತ್ಯ ಎಲ್-1 ಗುರಿ ತಲುಪುವ ಬಗ್ಗೆ ಇಸ್ರೊ ಸಂಸ್ಥೆ ಅಧಿಕೃತವಾಗಿ ಇನ್ನೂ ಯಾವುದೇ ಪ್ರಕಟಣೆ ನೀಡಿಲ್ಲ. ಆದರೆ ಬಾಹ್ಯಾಕಾಶ ವಿಚಾರಗಳ ಕುರಿತು ಕಾಲಕಾಲಕ್ಕೆ ಮಾಹಿತಿ ನೀಡುವ ಇಸ್ರೊ ಇನ್ಸೈಟ್ ಎಂಬ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಆದಿತ್ಯ ಎಲ್-1 ಬಗ್ಗೆ ಮಾಹಿತಿ ಪ್ರಕಟಿಸಲಾಗಿದೆ. ನಾನು ಆಲೊಆರ್ಬಿಟ್‍ನತ್ತ ಹೋಗುತ್ತಿದ್ದೇನೆ. ನೀವು ಕೇಳಿದ್ದು ನಿಜ. ಸಂಜೆ 4 ಗಂಟೆಗೆ ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆ ಲ್ಯಾಂಗ್ರೇಜಿಯನ್ ಬಿಂದುವಿನಲ್ಲಿ ಪ್ರತಿಷ್ಠಾಪನೆಯಾಗಲಿದೆ. ಇದಕ್ಕಾಗಿ ಇಸ್ರೊ ಅಂತಿಮ ಸಿದ್ಧತೆಯನ್ನು ಮಾಡಿಕೊಂಡಿದೆ ಎಂದು ತಿಳಿಸಲಾಗಿದೆ.
4
+ ಆದಿತ್ಯ ಎಲ್-1 ಇಸ್ರೊದ ಬಹು ನಿರೀಕ್ಷಿತ ಹಾಗೂ ಮಹತ್ವಾಕಾಂಕ್ಷೆಯ ಗಗನಯಾನವಾಗಿದೆ. 7 ವೈಜ್ಞಾನಿಕ ಪ್ಲೇ ಲೋಡ್‍ಗಳನ್ನ ಒಳಗೊಂಡಿರುವ ಉಪಗ್ರಹ ಸೂರ್ಯನ ಪ್ರಭಾಗೋಲ (ಫೋಟೋಸ್ಪೇರ್), ವರ್ಣಗೋಲ (ಕ್ರೋಮಾಸ್ಪೇರ್) ಸೂರ್ಯನ ಹೊರ ಮೇಲ್ಮೈ ಅನ್ನು ಅಧ್ಯಯನ ನಡೆಸಲಿದೆ. ಲಕ್ಷಾಂತರ ಕಿ.ಮೀ. ದೂರದಲ್ಲಿರುವ ಎಲ್-1 ಬಿಂದು ಸೂರ್ಯನ ನಿರಂತರ ಅಧ್ಯಯನಕ್ಕೆ ಸೂಕ್ತ ತಾಣವಾಗಿದೆ. ಗ್ರಹಣ ಸೂರ್ಯಾಸ್ತ ಮುಕ್ತ ಬಿಂದುವಿನಲ್ಲಿ ಪ್ರತಿಷ್ಠಾಪನೆಗೊಳ್ಳುವ ಆದಿತ್ಯ ಎಲ್-1 ವರ್ಷಪೂರ್ತಿ ಮತ್ತು ದಿನದ 24 ಗಂಟೆ ಕಾಲ ಸೂರ್ಯ ಅಧ್ಯಯನ ನಡೆಸಲಿದೆ.
5
+ ದೇವೇಗೌಡರ ಶಾಪವನ್ನು ಆಶೀರ್ವಾದ ಎಂದೇ ಸ್ವೀಕರಿಸಿದ್ದೇನೆ : ಸಿಎಂ ಸಿದ್ದರಾಮಯ್ಯ
6
+ ಇದರಿಂದಾಗಿ ಈವರೆಗೂ ವಿಶ್ವದ ಯಾವುದೇ ದೇಶದ ವಿಜ್ಞಾನಿಗಳು ಸಾಸದ ಯಶಸ್ಸನ್ನು ಭಾರತೀಯ ವಿಜ್ಞಾನಿಗಳು ಸಾಕಾರಗೊಳಿಸುವ ನಿರೀಕ್ಷೆಗಳಿವೆ. ಈವರೆಗಿನ ಮಾಹಿತಿ ಪ್ರಕಾರ ಪ್ರತಿ 11 ವರ್ಷಕ್ಕೊಮ್ಮೆ ಸೂರ್ಯನಲ್ಲಿನ ಚಟುವಟಿಕೆಗಳು ಬಿರುಸು ಪಡೆದುಕೊಳ್ಳಲಿವೆ. ಬೆಂಕಿಯ ಉಂಡೆಯಾಗಿರುವ ಸೂರ್ಯನಿಂದ ಈ ವೇಳೆ ಕಣ ಪ್ರವಾಹ, ವಿಕಿರಣಗಳು, ಸೌರ ಜ್ವಾಲೆಗಳು ಚಿಮ್ಮಲಿವೆ. ಅವುಗಳ ಪರಿಣಾಮ ಭೂಮಿಯ ಮೇಲ್ಮೈಯನ್ನು ಸುತ್ತುವರೆದಿರುವ ಕಾಂತೀಯ ಕ್ಷೇತ್ರಗಳ ಮೇಲಾಗಲಿದೆ.
7
+ ಆರೋಗ್ಯದಲ್ಲಿ ಏರುಪೇರು, ಹವಾಮಾನ ಬದಲಾವಣೆ, ಇಂಟರ್‍ನೆಟ್ ಸೇರಿದಂತೆ ಹಲವು ಸಂಪರ್ಕ ವ್ಯವಸ್ಥೆಗಳಿಗೆ ಅಡಚಣೆ, ವಿದ್ಯುತ್ ಸರಬರಾಜು ಮತ್ತು ಉತ್ಪಾದನಾ ಗ್ರಿಡ್‍ಗಳಿಗೆ ಹಾನಿ ಸೇರಿದಂತೆ ಹಲವು ರೀತಿಯ ಸಮಸ್��ೆಗಳಾಗಲಿವೆ. ಬಾಹ್ಯಾಕಾಶದಲ್ಲಿ ಪ್ರಯಾಣಿಸುವ ಗಗನಯಾತ್ರಿಗಳಿಗೂ ಇದರಿಂದ ತೊಂದರೆಯಾಗುವ ಸಾಧ್ಯತೆಯಿದೆ. ಸೂರ್ಯನಿಂದ ಯಾವ ಕ್ಷಣದಲ್ಲಿ ಸೌರಜ್ವಾಲೆ ಹೊರಹೊಮ್ಮಲಿದೆ, ಅದರ ತೀವ್ರತೆ ಎಷ್ಟು ಎಂಬ ಮಾಹಿತಿಯನ್ನು ಕರಾರುವಕ್ಕಾಗಿ ಪಡೆದುಕೊಂಡಿದ್ದಾದರೆ ಆಗಬಹುದಾದ ಅಪಾಯಗಳನ್ನು ತಪ್ಪಿಸಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಆದಿತ್ಯ ಎಲ್-1 ಸೂರ್ಯ ಶಿಕಾರಿ ಇಸ್ರೊದ ಜಾಗತಿಕ ಸಾಧನದ ಮೈಲಿಗಲ್ಲು ಎಂದೇ ಪರಿಭಾವಿಸಲಾಗಿದೆ.
8
+ ಸೂರ್ಯ ಶಿಕಾರಿಯಿಂದ ದೊರೆಯುವ ವೈಜ್ಞಾನಿಕ ದತ್ತಾಂಶಗಳನ್ನು ಭಾರತ ಇಡೀ ವಿಶ್ವದೊಂದಿಗೆ ಹಂಚಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಈ ಮೊದಲು ಚಂದ್ರಯಾನ-1,2,3, ಮಂಗಳಯಾನ, ಮೆಗಾಟ್ರಾಫಿಕ್, ಅಸ್ಟ್ರೋಸ್ಯಾಟ್ ಸೇರಿದಂತೆ ಇನ್ನಿತರ ಯಾನಗಳು ಯಶಸ್ವಿಯಾಗಿವೆ. ಅವುಗಳ ಮೂಲಕ ರವಾನಿಸಲಾದ ವೈಜ್ಞಾನಿಕ ಉಪಕರಣಗಳಿಂದ ಲಭ್ಯವಾದ ದತ್ತಾಂಶವನ್ನು ಇಸ್ರೊ ವಿವಿಧ ದೇಶಗಳ ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ಹಂಚಿಕೊಂಡಿತ್ತು. ಇಂದು ಸಂಜೆ ಆದಿತ್ಯ ಎಲ್-1 ಲ್ಯಾಂಗ್ರೇಜಿಯನ್ ಗಮ್ಯ ತಲುಪುವ ಕಾರ್ಯಾಚರಣೆಯು ಯಶಸ್ವಿಯಾಗಲಿದೆ. ಅದರಿಂದ ದೊರೆಯುವ ಅಮೂಲ್ಯ ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
eesanje/url_47_195_11.txt ADDED
@@ -0,0 +1,9 @@
 
 
 
 
 
 
 
 
 
 
1
+ ಮಹದೇವ ಆ್ಯಪ್ ಆನ್‍ಲೈನ್ ಬೆಟ್ಟಿಂಗ್ ಪ್ರಕರಣದ ಹೊಸ ಚಾರ್ಜ್‍ಶೀಟ್ ಸಲ್ಲಿಕೆ
2
+ ರಾಯ್‍ಪುರ,ಜ.6- ಮಹಾದೇವ್ ಆನ್‍ಲೈನ್ ಬುಕ್ ಆಪ್ ಮೂಲಕ ಅಕ್ರಮ ಬೆಟ್ಟಿಂಗ್ ಮತ್ತು ಗೇಮಿಂಗ್‍ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯಲ್ಲಿ ಜಾರಿ ನಿರ್ದೇಶನಾಲಯವು ರಾಯ್‍ಪುರದ ವಿಶೇಷ ನ್ಯಾಯಾಲಯಕ್ಕೆ ಹೊಸ ಚಾರ್ಜ್‍ಶೀಟ್ ಸಲ್ಲಿಸಿದೆ. ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯವು ಛತ್ತೀಸ್‍ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಹೆಸರನ್ನು ಒಳಗೊಂಡಂತೆ 6 ಮಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ. ಇತರ ಐವರು ಆರೋಪಿಗಳನ್ನು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿದ್ದು, ವಿವಾದಾತ್ಮಕ ಬೆಟ್ಟಿಂಗ್ ಆಪ್ ಹಗರಣದ ಮೇಲೆ ಬೆಳಕು ಚೆಲ್ಲಿದೆ.
3
+ ದೋಷಾರೋಪ ಪಟ್ಟಿಯಲ್ಲಿ ಬಘೇಲ್ ಜತೆಗೆ ಶುಭಂ ಸೋನಿ, ಅಮಿತ್ ಕುಮಾರ್ ಅಗರ್ವಾಲ್, ರೋಹಿತ್ ಗುಲಾಟಿ, ಭೀಮ್ ಸಿಂಗ್ ಮತ್ತು ಅಸೀಮ್ ದಾಸ್ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಮಹದೇವ್ ಬೆಟ್ಟಿಂಗ್ ಆಪ್‍ನ ಪ್ರವರ್ತಕರ ಕೊರಿಯರ್ ಆಗಿ ಕೆಲಸ ಮಾಡುತ್ತಿದ್ದ ಅಸೀಮ್ ದಾಸ್ ಅವರನ್ನು ಇತ್ತೀಚೆಗೆ ಬಂಧಿಸಲಾಗಿದ್ದು, ಅವರ ನಿವೇಶನದಿಂದ ಸುಮಾರು 5.39 ಕೋಟಿ ರೂ. ವಶಪಡಿಸಿಕೊಂಡಿರುವ ಬಗ್ಗೆ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ.
4
+ ಸುಮಾರು 1,700-1,800 ಪುಟಗಳ ಹೊಸ ಚಾರ್ಜ್‍ಶೀಟ್‍ನ್ನು ಜನವರಿ 1ರಂದು ಸಲ್ಲಿಸಲಾಗಿದ್ದು, ನಗದು ಕೊರಿಯರ್ ಆಸಿಮ್ ದಾಸ್, ಪೊಲೀಸ್ ಪೇದೆ ಭೀಮ್ ಸಿಂಗ್ ಯಾದವ್, ಆ್ಯಪ್‍ಗೆ ಸಂಪರ್ಕ ಹೊಂದಿದ ಪ್ರಮುಖ ಕಾರ್ಯನಿರ್ವಾಹಕ ಶುಭಂ ಸೋನಿ ಸೇರಿದಂತೆ ಐವರು ಆರೋಪಿಗಳನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
5
+ ಆಪ್‍ನ ಇಬ್ಬರು ಪ್ರಮುಖ ಪ್ರವರ್ತಕರಾದ ರವಿ ಉಪ್ಪಲ್ ಮತ್ತು ಸೌರಭ್ ಚಂದ್ರಕರ್ ಅವರ ಗಡೀಪಾರು ಅಥವಾ ಹಸ್ತಾಂತರವನ್ನು ಪಡೆಯಲು ಫೆಡರಲ್ ಏಜೆನ್ಸಿಯು ಈ ಎರಡನೇ ಪ್ರಾಸಿಕ್ಯೂಷನ್ ದೂರನ್ನು (ಚಾರ್ಜ್‍ಶೀಟ್) ದುಬೈನಲ್ಲಿರುವ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇಡಿ ಆದೇಶದ ಮೇರೆಗೆ ಇಂಟರ್ಪೋಲ್ ರೆಡ್ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಇಬ್ಬರನ್ನು ಇತ್ತೀಚೆಗೆ ದುಬೈನಲ್ಲಿ ಬಂಧಿಸಲಾಗಿತ್ತು. ಸಂಸ್ಥೆಯು ಮೊದಲ ಚಾರ್ಜ್‍ಶೀಟ್‍ನ ವಿಷಯಗಳನ್ನು ಯುಎಇ ಅಧಿಕಾರಿಗಳೊಂದಿಗೆ ಹಂಚಿಕೊಂಡಿದೆ. ಅದರ ಆಧಾರದ ಮೇಲೆ ಇಂಟರ್ಪೋಲ್ ರೆಡ್ ನೋಟಿಸ್ (ಆರೆನ್) ಹೊರಡಿಸಲು ಇಬ್ಬರ ವಿರುದ್ಧ ಜಾಮೀನು ರಹಿತ ವಾರಂಟ್ ಅನ್ನು ಪಡೆದುಕೊಂಡಿದೆ.
6
+ ಪಡಿತರ ವಿತರಣೆ ಹಗರಣದಲ್ಲಿ ಟಿಎಂಸಿ ನಾಯಕ ಶಂಕರ್ ಅಧ್ಯಾ ಅರೆಸ್ಟ್
7
+ ವಶಪಡಿಸಿಕೊಂಡ ಹಣವನ್ನು ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಛತ್ತೀಸ್ಗಢದ ಮಾಜಿ ಸಿಎಂ ಭೂಪೇಶ್ ಬಘೇಲ್‍ಗೆ ಕಳುಹಿಸಲಾಗಿದೆ ಎಂದು ಅಸೀಮ್ ದಾಸ್ ವಿಚಾರಣೆಯ ಸಮಯದಲ್ಲಿ ಬಹಿರಂಗಪಡಿ ಸಿದ್ದಾರೆ. ಇತ್ತೀಚಿನ ವಿಧಾನಸಭೆ ಚುನಾವಣೆಗೂ ಮುನ್ನ ಈ ವಹಿವಾಟು ನಡೆದಿದೆ ಎನ್ನಲಾಗಿದೆ. ಮಹಾದೇವ್ ಬೆಟ್ಟ���ಂಗ್ ಆಪ್‍ನ ಪ್ರವರ್ತಕರು ಭೂಪೇಶ್ ಬಘೇಲ್ಗೆ ಒಟ್ಟು 508 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಲಾಯ ತನಿಖೆ ವೇಳೆ ಗೊತ್ತಾಗಿತ್ತು. ರಾಜ್ಯದಲ್ಲಿ ಚುನಾವಣಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಲು ಭೂಪೇಶ್ ಬಘೇಲ್ಗೆ ಹಣವನ್ನು ಕಳುಹಿಸಲಾಗಿದೆ ಎಂದು ಚಾರ್ಜ್‍ಶೀಟ್‍ನಲ್ಲಿ ಪ್ರತಿಪಾದಿಸಲಾಗಿದೆ.
8
+ ಏನಿದು ಮಹದೇವ್ ಬೆಟ್ಟಿಂಗ್ ಆಪ್ ಹಗರಣ?:ಮಹದೇವ್ ಆನ್‍ಲೈನ್ ಆಪ್ ಪ್ರವರ್ತಕರು 5,000 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಬಹಿರಂಗಪಡಿಸಿದೆ. ಆ್ಯಪ್ ಸ್ಕಿಲ್ ಗೇಮ್‍ಗಳ ಹೆಸರಿನಲ್ಲಿ ಭಾರತದಲ್ಲಿ ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್‍ಗಳನ್ನು ನಡೆಸುತ್ತಿದೆ.
9
+ ಆ್ಯಯಪ್ ಕಂಪನಿಯು ವೆಬ್‍ಸೈಟ್‍ಗಳಲ್ಲಿ ಸಂಪರ್ಕ ಸಂಖ್ಯೆಯ ಜಾಹೀರಾತು ನೀಡಿ, ಹಣ ಠೇವಣಿ ಮಾಡಲು ಲೇಸರ್247 ಡಾಟ್ ಕಾಮ್‍ನಂತಹ ಪ್ಲಾಟ್‍ಫಾರ್ಮ್‍ಗಳನ್ನು ಬಳಸುವಂತೆ ಬಳಕೆದಾರರಿಗೆ ಸೂಚಿಸುತ್ತದೆ. ಈ ಆ್ಯಪ್ ಪ್ರವರ್ತಕರು ಛತ್ತೀಸ್‍ಗಡ ಮಾಜಿ ಸಿಎಂಗೆ ಹಣ ಕಳುಹಿಸಿಕೊಟ್ಟಿರುವುದನ್ನು ಜಾರಿ ನಿರ್ದೇಶನಾಲಯ ಬಯಲಿಗೆಳೆದಿತ್ತು.
eesanje/url_47_195_12.txt ADDED
@@ -0,0 +1,8 @@
 
 
 
 
 
 
 
 
 
1
+ ಪಡಿತರ ವಿತರಣೆ ಹಗರಣದಲ್ಲಿ ಟಿಎಂಸಿ ನಾಯಕ ಶಂಕರ್ ಅಧ್ಯಾ ಅರೆಸ್ಟ್
2
+ ಕೋಲ್ಕತ್ತಾ,ಜ.6- ಪಡಿತರ ವಿತರಣೆ ಹಗರಣದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಶಂಕರ್ ಅಧ್ಯಾ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಆವರಣದಲ್ಲಿ ಇಡಿ ವ್ಯಾಪಕ ಶೋಧ ನಡೆಸಿದ ನಂತರ ಬಂಗಾಂವ್ ಪುರಸಭೆಯ ಮಾಜಿ ಅಧ್ಯಕ್ಷ ಶಂಕರ್ ಅಧ್ಯಾ ಅವರನ್ನು ಬಂಧಿಸಲಾಗಿದೆ.
3
+ ತನಿಖೆಯ ಸಂದರ್ಭದಲ್ಲಿ ತನಿಖಾ ಸಂಸ್ಥೆ ಅಧಿಕಾರಿಗಳಿಗೆ ಸಹಕರಿಸಿದ ಹೊರತಾಗಿಯೂ ತನ್ನ ಪತಿಯನ್ನು ಬಂಧಿಸಲಾಗಿದೆ ಎಂದು ಅವರ ಪತ್ನಿ ಜ್ಯೋತ್ಸ್ನಾ ಆಧ್ಯ ಹೇಳಿದ್ದಾರೆ. ನಿನ್ನೆಯಿಂದ ಇಡಿ ತಂಡ ಶಂಕರ್ ಆದ್ಯಾ ಮನೆ ಮೇಲೆ ದಾಳಿ ನಡೆಸುತ್ತಿತ್ತು. ಸದ್ಯ ನಾಯಕ ಶಂಕರ್ ಅವರನ್ನು ಬಂಧಿಸಿ ಕೋಲ್ಕತ್ತಾದ ಇಡಿ ಕೇಂದ್ರ ಕಚೇರಿಗೆ ಕರೆತಂದು ವಿಚಾರಣೆ ನಡೆಸುತ್ತಿದೆ.
4
+ ಶಂಕರ್ ಆಧ್ಯಾ ಅವರ ಮನೆ ಮತ್ತು ಅತ್ತೆಯ ಮನೆ ಮೇಲೂ ನಿನ್ನೆ ದಾಳಿ ನಡೆದಿದೆ. ಟಿಎಂಸಿ ಮುಖಂಡರ ಮನೆಯಲ್ಲಿ ಎಂಟೂವರೆ ಲಕ್ಷ ರೂಪಾಯಿ ಹಾಗೂ ಹಲವು ಮಹತ್ವದ ದಾಖಲೆಗಳು ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ. ಬಂಧನದ ವೇಳೆ ಇಡಿ ತಂಡದ ಮೇಲೂ ದಾಳಿ ನಡೆಸಲಾಗಿತ್ತು. ಶಂಕರ್ ಅವರನ್ನು ಬಂಧಿಸಲು ಆಗಮಿಸಿದಾಗ, ಟಿಎಂಸಿ ನಾಯಕನ ಬೆಂಬಲಿಗರು ಇಡಿ ಅಧಿಕಾರಿಗಳನ್ನು ತಡೆಯಲು ಪ್ರಯತ್ನಿಸಿದರು ಮತ್ತು ಅವರ ವಾಹನವನ್ನು ಇಟ್ಟಿಗೆ ಮತ್ತು ಕಲ್ಲುಗಳಿಂದ ತೂರಿದ್ದರು. ಸಿಆರ್ ಪಿಎಫ್ ಯೋಧರ ಸಹಾಯದಿಂದ ಇಡಿ ಶಂಕರನನ್ನು ಬಂಧಿಸಿದ್ದು, ಇದೀಗ ಟಿಎಂಸಿ ನಾಯಕನನ್ನು ಕೋಲ್ಕತ್ತಾಕ್ಕೆ ಕರೆತರಲಾಗಿದೆ.
5
+ ಇವಿಎಂ, ವಿವಿಪ್ಯಾಟ್‍ಗಳ ಕುರಿತ ಆರೋಪಗಳನ್ನು ತಳ್ಳಿಹಾಕಿದ ಚುನಾವಣಾ ಆಯೋಗ
6
+ ಇದಕ್ಕೂ ಮುನ್ನ ಶಹಜಹಾನ್ ಶೇಕ್ ಮನೆ ಮೇಲೆ ದಾಳಿ ನಡೆಸಲು ತೆರಳಿದ್ದ ಇಡಿ ತಂಡ ಶುಕ್ರವಾರ ದಾಳಿ ನಡೆಸಿತ್ತು. ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ಶುಕ್ರವಾರ ನಡೆದ ದಾಳಿಯ ವೇಳೆ ಗುಂಪು ದಾಳಿಯಲ್ಲಿ ತನ್ನ ಅಧಿಕಾರಿಗಳಿಗೆ ಗಂಭೀರ ಗಾಯಗಳಾಗಿವೆ ಮತ್ತು ಮೊಬೈಲ್ ಫೋನ್ಗಳು ಮತ್ತು ವ್ಯಾಲೆಟ್ಗಳಂತಹ ವಸ್ತುಗಳನ್ನು ಲೂಟಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ () ತಿಳಿಸಿದೆ. ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲು ಸ್ಥಳೀಯ ಪೊಲೀಸರಿಗೆ ದೂರು ನೀಡಿರುವುದಾಗಿ ಫೆಡರಲ್ ಏಜೆನ್ಸಿ ತಿಳಿಸಿದೆ.
7
+ ದಾಳಿ ಯಾವಾಗ ನಡೆಯಿತು?:ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿದಂತೆ ಉತ್ತರ 24 ಪರಗಣದ ಸಂದೇಶಖಾಲಿಯಲ್ಲಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಶೇಖ್ ಷಹಜಹಾನ್ ಅವರ ನಿವಾಸವನ್ನು ಶೋಸಲು ಹೋದಾಗ ಇಡಿ ತಂಡ ದಾಳಿ ನಡೆಸಿದೆ. ಇಡಿ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾಗ ಗುಂಪು (ಶೇಖ್ ಮತ್ತು ಅವರ ಸಹಚರರಿಂದ ಪ್ರಚೋದಿತವಾಗಿದೆ ಎಂದು ಶಂಕಿಸಲಾಗಿದೆ) ದಾಳಿ ಮಾಡಿದೆ ಎಂದು ಸಂಸ್ಥೆ ಹೇಳಿದೆ.
8
+ ಗುಂಪು ಇಡಿ ಅಧಿಕಾರಿಗಳನ್ನು ಕೊಲ್ಲುವ ಉದ್ದೇಶದಿಂದ ಅವ���ತ್ತ ಸಾಗುತ್ತಿದ್ದಾಗ ಮೂವರು ಅಧಿಕಾರಿಗಳಿಗೆ ಗಂಭೀರ ಗಾಯಗಳಾಗಿವೆ. ಫೆಡರಲ್ ಏಜೆನ್ಸಿಯು ಇತರ ಅಧಿಕಾರಿಗಳು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಹುಡುಕದೆ ಸ್ಥಳದಿಂದ ಪಲಾಯನ ಮಾಡಬೇಕಾಯಿತು ಎಂದು ಹೇಳಿದರು, ಏಕೆಂದರೆ ಜನಸಮೂಹವು ತುಂಬಾ ಹಿಂಸಾತ್ಮಕದಿಂದ ಕೂಡಿತ್ತು. ತಮ್ಮ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವುದನ್ನು ತಡೆಯಲು ಅಧಿಕಾರಿಗಳನ್ನು ಬೆನ್ನಟ್ಟಿದ್ದರು.
eesanje/url_47_195_2.txt ADDED
@@ -0,0 +1,12 @@
 
 
 
 
 
 
 
 
 
 
 
 
 
1
+ ಬಿಲ್ಕಿಸ್‍ಬಾನು ಪ್ರಕರಣ : ಗುಜರಾತ್ ಸರ್ಕಾರಕ್ಕೆ ಸುಪ್ರೀಂನಲ್ಲಿ ಮುಖಭಂಗ
2
+ ನವದೆಹಲಿ,ಜ.8- 2002ರ ಗೋದ್ರಾ ಗಲಭೆ ಸಂದರ್ಭದಲ್ಲಿ ಬಿಲ್ಕಿಸ್‍ಬಾನು ಅತ್ಯಾಚಾರ ಪ್ರಕರಣದಲ್ಲಿ 11 ಆರೋಪಿಗಳನ್ನು ಅವಧಿಪೂರ್ವ ಮುನ್ನ ಬಿಡುಗಡೆ ಮಾಡಿದ್ದ ಗುಜರಾತ್ ಸರ್ಕಾರದ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ನ್ಯಾಯಾಲಯದ ಈ ತೀರ್ಪಿನಿಂದಾಗ ಗುಜರಾತ್ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದ್ದು, ಅವಧಿಗೂ ಪೂರ್ವ ಬಿಡುಗಡೆಯಾಗಿದ್ದ 11 ಆರೋಪಿಗಳು ಈಗ ಪುನಃ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.
3
+ ಗುಜರಾತ್ ಸರ್ಕಾರದ ನಿರ್ಧಾರ ಪ್ರಶ್ನಿಸಿ ಬಿಲ್ಕಿಸ್ ಬಾನು ಹೊರತಾಗಿ ತೃಣಮೂಲ ಕಾಂಗ್ರೆಸ್ ಪಕ್ಷದ ಮಹುವಾ ಮೊಯಿತ್ರಾ, ಸಿಪಿಐ(ಎಂ) ಪಾಲಿಟ್ ಬ್ಯುರೋ ಸದಸ್ಯೆ ಸುಭಾಷಿಣಿ ಅಲಿ, ಪತ್ರಕರ್ತೆ ರೇವತಿ ಲೌಲ್ ಹಾಗೂ ಲಕ್ನೋ ವಿವಿಯ ಮಾಜಿ ಉಪಕುಲಪತಿ ರೂಪ್ ರೇಖಾ ವರ್ಮಾ ಸಹಿತ ಹಲವರು ಗುಜರಾತ್ ಸರ್ಕಾರದ ಕ್ರಮ ಪ್ರಶ್ನಿಸಿ ಸುಪ್ರೀಂಕೋರ್ಟ್‍ನ ಕದ ತಟ್ಟಿದ್ದರು.
4
+ ಕಳೆದ ವರ್ಷ ಅಕ್ಟೋಬರ್‍ನಲ್ಲಿ 11 ದಿನಗಳ ಕಾಲ ಅರ್ಜಿಗಳ ವಿಚಾರಣೆ ನಡೆಸಿ ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು. ಎರಡು ಕಡೆಯ ವಾದ ಆಲಿಸಿದ್ದ ನ್ಯಾಯಾಲಯ ತೀರ್ಪನ್ನು ಸೋಮವಾರಕ್ಕೆ ಕಾಯ್ದಿರಿಸಿತ್ತು. ತೀರ್ಪನ್ನು ಪ್ರಕಟಿಸಿದ ಸುಪ್ರಿಂಕೋರ್ಟ್‍ನ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಹಾಗೂ ಉಜ್ವಲ್ ಭುಯಾನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಗುಜರಾತ್ ಸರ್ಕಾರ ತೆಗೆದುಕೊಂಡ ತೀರ್ಮಾನ ಸಮರ್ಥವಾಗಿಲ್ಲ. ಇದೊಂದು ವಂಚನೆ ಕಾಯ್ದೆ ಎಂದು ತನ್ನ ಆದೇಶದಲ್ಲಿ ಖಾರವಾಗಿಯೇ ಹೇಳಿದೆ.
5
+ ಯಶ್ ಕಟೌಟ್ ಕಟ್ಟುವಾಗ ವಿದ್ಯುತ್ ತಗುಲಿ ಮೂವರು ಅಭಿಮಾನಿಗಳ ಸಾವು
6
+ ಅಲ್ಲದೆ ಅರ್ಜಿದಾರರಲ್ಲಿ ಒಬ್ಬರಾಗಿದ್ದ ಬಿಲ್ಕಿಸ್‍ಬಾನು ಸಲ್ಲಿಸಿರುವ ಅರ್ಜಿಯು ಮಾನ್ಯವಾಗಿದ್ದು, ವಿಚಾರಣೆ ಮುಂದುವರೆಯುತ್ತದೆ ಎಂದು ಹೇಳಿದ ನ್ಯಾಯಾಲಯ, ಅಪರಾಧಿಗಳ ಶೀಘ್ರ ಬಿಡುಗಡೆ ಕುರಿತು ಆದೇಶವನ್ನು ಹೊರಡಿಸಲು ಗುಜರಾತ್ ಸರ್ಕಾರಕ್ಕೆ ಅಧಿಕಾರವಿಲ್ಲ. ಏಕೆಂದರೆ ಈ ಪ್ರಕರಣದ ವಿಚಾರಣೆ ನಡೆದಿದ್ದು ಮಹಾರಾಷ್ಟ್ರದಲ್ಲಿ. ಹಾಗಾಗಿ ಇಲ್ಲಿನ ಸರ್ಕಾರಕ್ಕೆ ಮಾತ್ರ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಇದೆ. ಈ ಬಿಡುಗಡೆ ಆದೇಶದಲ್ಲಿ ಸಾಮಥ್ರ್ಯದ ಕೊರತೆ ಇದೆ. ಆ ಕಾರಣದಿಂದ ಈ ಬಿಡುಗಡೆ ಆದೇಶವನ್ನು ರದ್ದುಗೊಳಿಸುತ್ತೇವೆ ಎಂದು ಹೇಳಿತು.
7
+ 1992ರ ಶಿಕ್ಷೆ ಕಡಿತ (ರೆಮಿಷನ್) ನೀತಿಯಾನುಸಾರ ಗುಜರಾತ್ ಸರ್ಕಾರ ಅಪರಾಧಿಗಳನ್ನು ಬಿಡುಗಡೆಗೊಳಿಸಿತ್ತು. ಆದರೆ ಈ ಕಾನೂನಿನ ಸ್ಥಾನದಲ್ಲಿ 2014ರಲ್ಲಿ ಜಾರಿಗೊಳಿಸಲಾದ ಕಾನೂನಿನ ಪ್ರಕಾರ ದೊಡ್ಡ ಶಿಕ್ಷೆ ಎದುರಿಸುವ ಪ್ರಕರಣಗಳಲ್ಲಿ ಶಿಕ್ಷೆ ಕಡಿತಗೊಳಿಸುವುದನ್ನು ನಿಷೇಧಿಸಲಾಗಿದೆ. ಈ 11 ಮಂದಿಗೆ 2008ರಲ್ಲಿ ಶಿಕ್ಷೆ ವಿಧಿಸಲಾಗಿದ್ದರಿಂದ 1992 ರ ನೀತಿ ಅವರಿಗೆ ಅನ್ವಯಿಸುತ್ತದೆ ಎಂದು ಗುಜರಾತ್ ಸರ್ಕಾರದ ಪರ ವಾದಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಹೇಳಿದ್ದರು.
8
+ ಪ್ರಕರಣದ ಹಿನ್ನಲೆ:2022ರ ಸ್ವಾತಂತ್ರ್ಯ ದಿನದಂದು ಗುಜರಾತ್ ಸರ್ಕಾರವು 11 ಅಪರಾಧಿಗಳನ್ನು ಬಿಡುಗಡೆ ಮಾಡಿತ್ತು. ಈ ಆದೇಶವು ವಿರೋಧ ಪಕ್ಷ ಹಾಗೂ ಸಾರ್ವಜನಿಕರ ಖಂಡನೆ ಹಾಗೂ ಆಕ್ರೋಶಕ್ಕೆ ಗುರಿಯಾಗಿತ್ತು.ಅಪರಾಧಿಗಳ ಬಿಡುಗಡೆ ವೇಳೆ ಅವರಿಗೆ ಅದ್ಧೂರಿ ಸ್ವಾಗತವನ್ನು ನೀಡಲಾಗಿತ್ತು. ಅಪರಾಧಿಗಳ ಜತೆಗೆ ಬಿಜೆಪಿ ಸಂಸದರು, ಶಾಸಕರು, ವೇದಿಕೆಯನ್ನು ಹಂಚಿಕೊಂಡಿದ್ದರು.
9
+ ಈ ಸುದ್ದಿಯು ಭಾರೀ ಸದ್ದು ಮಾಡಿತ್ತು. ಇನ್ನು ಈ ಅಪರಾಗಳಲ್ಲಿ ಒಬ್ಬರಾದ ರಾಧೇಶ್ಯಾಮ್ ಶಾ ಅವರು ವಕೀಲಿ ವೃತ್ತಿಯನ್ನು ಪ್ರಾರಂಭಿಸಿದ್ದರು, ಇದನ್ನು ಸುಪ್ರೀಂಕೋರ್ಟ್‍ನ ಗಮನಕ್ಕೆ ತರಲಾಗಿತ್ತು. 2022ರ ಆಗಸ್ಟ್‍ನಲ್ಲಿ ದೋಷಿಗಳ ಬಿಡುಗಡೆಗೆ ನಿರ್ಧಾರ ಕೈಗೊಂಡ ಪ್ರಕ್ರಿಯೆಗಳನ್ನು ಒಳಗೊಂಡ ಮೂಲ ಕಡತಗಳನ್ನು ಸಲ್ಲಿಸುವಂತೆ ನ್ಯಾಯಾಲಯ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತ್ತು.
10
+ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಮನೆ ಸೇರಿ 10 ಕಡೆ ಇಡಿ ದಾಳಿ
11
+ ಅಪರಾಧಿಗಳನ್ನು ಬಿಡುಗಡೆಗೊಳಿಸಲಾಗುವುದು ಎಂಬ ಕುರಿತು ತಮಗೂ ಮಾಹಿತಿ ನೀಡಲಾಗಿರಲಿಲ್ಲ ಎಂದು ಸಂತ್ರಸ್ತೆ ಬಿಲ್ಕಿಸ್ ಬಾನು ಹೇಳಿದ್ದರು. ಗುಜರಾತ್‍ನಲ್ಲಿ 2002ರಲ್ಲಿ ನಡೆದ ಕೋಮು ಗಲಭೆಗಳ ವೇಳೆ ತಪ್ಪಿಸಿಕೊಳ್ಳುವ ಸಂದರ್ಭ ಆಗ 21 ವರ್ಷದವರಾಗಿದ್ದ ಹಾಗೂ ಐದು ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆಕೆಯ ಮೂರು ವರ್ಷದ ಪುತ್ರಿ ಸಹಿತ ಏಳು ಕುಟುಂಬ ಸದಸ್ಯರನ್ನೂ ಹತ್ಯೆಗೈಯ್ಯಲಾಗಿತ್ತು.
12
+ ಆರೋಪಿಗಳು:ರಾಧೇಶ್ಯಾಮ್ ಷಾ, ಜಸ್ವಂತ್ ಚತುರ್ಭಾಯಿ ನಾಯ್, ಕೇಶುಭಾಯಿ ವದನಿಯಾ, ಬಕಾಭಾಯಿ ವಡಾನಿಯಾ, ರಾಜೀಭಾಯಿ ಸೋನಿ, ರಮೇಶಭಾಯಿ ಚೌಹಾಣ್, ಶೈಲೇಶಭಾಯ್ ಭಟ್, ಬಿಪಿನ್ ಚಂದ್ರ ಜೋಶಿ, ಗೋವಿಂದಭಾಯ್ ನಾಯ್, ಮಿತೇಶ್ ಭಟ್, ಪ್ರದೀಪ್ ಮೋಯಾ ಅವರಿಗೆ ಜೀವಾವ ಶಿಕ್ಷೆ ವಿಧಿಸಲಾಗಿದೆ.
eesanje/url_47_195_3.txt ADDED
@@ -0,0 +1,7 @@
 
 
 
 
 
 
 
 
1
+ ಛತ್ತೀಸ್‍ಗಢದಲ್ಲಿ ಬಿಜೆಪಿ ನಾಯಕನ ಭೀಕರ ಹತ್ಯೆ
2
+ ಕಂಕೇರ್,ಜ.8- ಛತ್ತೀಸ್‍ಗಢದ ಕಂಕೇರ್ ಜಿಲ್ಲೆಯಲ್ಲಿ ಬಿಜೆಪಿ ಮುಖಂಡರೊಬ್ಬರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಅಪರಿಚಿತರ ಗುಂಡಿನ ದಾಳಿಗೆ ಬಲಿಯಾದ ಬಿಜೆಪಿ ಮುಖಂಡರನ್ನು ಅಸೀಮ್ ರಾಯ್ ಎಂದು ಗುರುತಿಸಲಾಗಿದೆ. ಪಖಂಜೂರ್ ಪಟ್ಟಣದ ಪುರಾಣ ಬಜಾರ್ ಪ್ರದೇಶದಲ್ಲಿ ರಾತ್ರಿ 8.30 ರ ಸುಮಾರಿಗೆ ಅಸೀಮ್ ರೈ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
3
+ ಪಾಖಂಜೂರು ನಗರ ಪಂಚಾಯತ್ ಮಾಜಿ ಅಧ್ಯಕ್ಷ ರಾಯ್ (50) ಹಾಲಿ ಕಾಪೆರ್ರೇಟರ್ ಮತ್ತು ಆಡಳಿತಾರೂಢ ಬಿಜೆಪಿಯ ಕಂಕೇರ್ ಜಿಲ್ಲೆ ಘಟಕದ ಉಪಾಧ್ಯಕ್ಷರಾಗಿದ್ದರು. ಪ್ರತ್ಯಕ್ಷದರ್ಶಿಗಳ ಪ್ರಕಾರ ರಾಯ್ ಇದ್ದಕ್ಕಿದ್ದಂತೆ ವಾಹನದಿಂದ ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
4
+ ಭಾರತೀಯ ಮೂಲದ ಸಚಿವರ ವಿರುದ್ಧದ ಭ್ರಷ್ಟಾಚಾರ ಆರೋಪ ಆತಂಕಕಾರಿ: ಲೀ
5
+ ಮೃತದೇಹದ ಪ್ರಾಥಮಿಕ ಪರೀಕ್ಷೆಯಲ್ಲಿ ರೈ ಅವರ ತಲೆಗೆ ಗುಂಡು ಬಿದ್ದಿರುವುದನ್ನು ವೈದ್ಯರು ದೃಢಪಡಿಸಿದ್ದು, ಶವಪರೀಕ್ಷೆಯ ನಂತರ ಈ ಬಗ್ಗೆ ವಿವರವಾದ ವರದಿ ಲಭ್ಯವಾಗಲಿದೆ ಎಂದು ಅವರು ಹೇಳಿದರು.
6
+ ಪ್ರಾಥಮಿಕವಾಗಿ, ಸಾಂದರ್ಭಿಕ ಪುರಾವೆಗಳು ಬಲಿಪಶುವನ್ನು ಪೈಪೋಟಿ ಅಥವಾ ವೈಯಕ್ತಿಕ ಸೇಡಿನ ಮೇಲೆ ಗುಂಡು ಹಾರಿಸಿರಬಹುದು ಎಂದು ಸೂಚಿಸುತ್ತದೆ. ನಾವು ಎಲ್ಲಾ ಸಂಭಾವ್ಯ ಕೋನಗಳ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಮಹಾನಿರೀಕ್ಷಕ (ಬಸ್ತರ್ ರೇಂಜ) ಸುಂದರರಾಜ್ ಪಿ ಪಿಟಿಐಗೆ ತಿಳಿಸಿದರು.
7
+ 2014 ರಲ್ಲಿ, ರಾಯ್ ಅವರ ಮೇಲೆ ಇಬ್ಬರು ವ್ಯಕ್ತಿಗಳು ಇದೇ ರೀತಿಯ ದಾಳಿ ನಡೆಸಿದ್ದರು ಆಗ ಅವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದರು, ನಂತರ ಅರೋಪಿಗಳನ್ನು ಬಂಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
eesanje/url_47_195_4.txt ADDED
@@ -0,0 +1,5 @@
 
 
 
 
 
 
1
+ ಭಾರಿ ಮಳೆಗೆ ತತ್ತರಿಸಿದ ಚೆನ್ನೈ, ಪುದುಚೇರಿ
2
+ ಚೆನ್ನೈ, ಜ 8 (ಪಿಟಿಐ) – ಪುದುಚೇರಿ ಹಾಗೂ ತಮಿಳುನಾಡಿನ ಕೆಲವು ಭಾಗಗಳಲ್ಲಿ ರಾತ್ರಿಯಿಡೀ ಮಳೆ ಸುರಿದಿದ್ದು, ವಿವಿಧ ಜಿಲ್ಲೆಗಳಲ್ಲಿ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ಚೆನ್ನೈ ಮತ್ತು ನೆರೆಯ ಚೆಂಗಲ್ಪಟ್ಟು ಮತ್ತು ಕಾಂಚೀಪುರಂ, ಜೊತೆಗೆ ವಿಲ್ಲುಪುರಂ, ಕಲ್ಲಕುರಿಚಿ, ಕಡಲೂರು, ನಾಗಪಟ್ಟಿಣಂ ಮತ್ತು ತಿರುವಾರೂರ್ ಭಾಗದಲ್ಲಿ ಭಾರಿ ಮಳೆಯಾಗಿದೆ. ಚೆಂಗಲ್ಪಟ್ಟು, ರಾಣಿಪೇಟ್, ವೆಲ್ಲೂರು ಮತ್ತು ಕಲ್ಲಕುರಿಚಿ ಸೇರಿದಂತೆ ಜಿಲ್ಲೆಗಳಲ್ಲಿ ಶಾಲೆಗಳಿಗೆ ಒಂದು ದಿನದ ರಜೆ ಘೋಷಿಸಲಾಗಿದೆ. ನಾಗಪಟ್ಟಣಂ ಜಿಲ್ಲಾಡಳಿತವು ನಾಗಪಟ್ಟಣಂ ಮತ್ತು ಕೀಲ್ವೇಲೂರ್ ವೃತ್ತಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.
3
+ ನಿನ್ನೆ ಬೆಳಿಗ್ಗೆ 8.30ರಿಂದ ಇಂದು ಮುಂಜಾನೆ 5.30ರ ಅವಧಿಯಲ್ಲಿ ಜಿಲ್ಲೆಯಲ್ಲಿ ಗರಿಷ್ಠ 167 ಮಿ.ಮೀ ಮಳೆಯಾಗಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರ ತಿಳಿಸಿದೆ. ಈ ಅವಯಲ್ಲಿ ಕಾರೈಕ್ಕಲ್ (ಪುದುಚೇರಿ ಯುಟಿ) 122 ಮಿ.ಮೀ.ಪುದುಚೇರಿ, ಜನವರಿ 8 (ಪಿಟಿಐ) ಕಳೆದ 24 ಗಂಟೆಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಪುದುಚೇರಿಯಲ್ಲಿ ಸಹಜ ಜೀವನ ಅಸ್ತವ್ಯಸ್ತಗೊಂಡಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
4
+ ಭಾರತೀಯ ಮೂಲದ ಸಚಿವರ ವಿರುದ್ಧದ ಭ್ರಷ್ಟಾಚಾರ ಆರೋಪ ಆತಂಕಕಾರಿ: ಲೀ
5
+ ಕೇಂದ್ರಾಡಳಿತ ಪ್ರದೇಶದಲ್ಲಿ ಸೋಮವಾರ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಎನ.ರಂಗಸಾಮಿ ಘೋಷಿಸಿದ್ದಾರೆ. ಏತನ್ಮಧ್ಯೆ, ನೈಋತ್ಯ ಬಂಗಾಳಕೊಲ್ಲಿಯಲ್ಲಿ ಪೂರ್ವ ವಾಯುಭಾರ ಕುಸಿತದಿಂದಾಗಿ ಭಾರೀ ಮಳೆಯಾಗುತ್ತಿರುವ ಕಾರಣ ಮೀನುಗಾರರು ಸಮುದ್ರಕ್ಕೆ ಇಳಿಯಲಿಲ್ಲ. ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಕೇಂದ್ರಾಡಳಿತ ಪ್ರದೇಶದ ಹಲವು ಭಾಗಗಳಲ್ಲಿ ಬೆಳೆದ ಬೆಳೆ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.
eesanje/url_47_195_5.txt ADDED
@@ -0,0 +1,6 @@
 
 
 
 
 
 
 
1
+ ಇಡಿ ಅಧಿಕಾರಿಗಳ ಮೇಲಿನ ದಾಳಿಯ ವರದಿ ಕೇಳಿದ ರಾಜ್ಯಪಾಲರು
2
+ ಕೋಲ್ಕತ್ತಾ, ಜ 8 (ಪಿಟಿಐ) : ಟಿಎಂಸಿ ನಾಯಕ ಸಹಜಹಾನ್ ಶೇಖ್ ಅವರ ಮನೆ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳ ಮೇಲೆ ಗುಂಪು ದಾಳಿಗೆ ಪ್ರತಿಕ್ರಿಯೆಯಾಗಿ ತೆಗೆದುಕೊಂಡ ಕ್ರಮಗಳ ಕುರಿತು ಪಶ್ಚಿಮ ಬಂಗಾಳ ರಾಜ್ಯಪಾಲ ಸಿ ವಿ ಆನಂದ ಬೋಸ್ ರಾಜ್ಯ ಸರ್ಕಾರದಿಂದ ವರದಿ ಕೇಳಿದ್ದಾರೆ.
3
+ ಶೇಖ್ ಅವರನ್ನು ಏಕೆ ಬಂಧಿಸಿಲ್ಲ ಎಂಬುದನ್ನು ವಿವರಿಸುವ ವರದಿಯನ್ನು ನೀಡುವಂತೆ ಮತ್ತು ಅವರು ಇನ್ನೂ ಭಾರತದಲ್ಲಿದ್ದಾರೆಯೇ ಎಂದು ಸ್ಪಷ್ಟಪಡಿಸುವಂತೆ ಬೋಸ್ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ. ರಾಜ್ಯಪಾಲರು ಪಶ್ಚಿಮ ಬಂಗಾಳ ಸರ್ಕಾರವನ್ನು ಕಾನೂನು ಮತ್ತು ಸುವ್ಯವಸ್ಥೆಯ ಯಂತ್ರಗಳ ವೈಫಲ್ಯಕ್ಕೆ ಹೊಣೆಗಾರರನ್ನು ಹೊಣೆಗಾರರನ್ನಾಗಿ ಮಾಡಬೇಕು ಮತ್ತು ಅವರ ಕರ್ತವ್ಯಗಳನ್ನು ನಿರ್ಲಕ್ಷಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.
4
+ ಭಾರತೀಯ ಮೂಲದ ಸಚಿವರ ವಿರುದ್ಧದ ಭ್ರಷ್ಟಾಚಾರ ಆರೋಪ ಆತಂಕಕಾರಿ: ಲೀ
5
+ ಬೋಸ್ ಅವರು ಸಿಆರ್‍ಪಿಎಫ್ ಮತ್ತು ಇಡಿ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು, ಈ ಸಂದರ್ಭದಲ್ಲಿ ಅವರು ಶೇಖ್‍ನನ್ನು ಬಂಧಿಸುವಲ್ಲಿ ಪೊಲೀಸರ ವೈಫಲ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.
6
+ ಜ 5 ರಂದು ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‍ಖಾಲಿಯಲ್ಲಿ ಜನಸಮೂಹದಿಂದ ತನ್ನ ಮೂವರು ಅಧಿಕಾರಿಗಳು ಗಾಯಗೊಂಡ ಮತ್ತು ಹಲವಾರು ವಾಹನಗಳಿಗೆ ಹಾನಿಯಾದ ಘಟನೆಯ ನಂತರ ಶೇಖ್ ದೇಶದಿಂದ ಪಲಾಯನ ಮಾಡಬಹುದೆಂಬ ಆತಂಕದಿಂದಾಗಿ ಇಡಿ ಲುಕ್‍ಔಟ್ ನೋಟಿಸ್ ಜಾರಿ ಮಾಡಿದೆ.
eesanje/url_47_195_6.txt ADDED
@@ -0,0 +1,7 @@
 
 
 
 
 
 
 
 
1
+ ದೀದಿ ಟೀಕಿಸಿದ್ದ ಮಾಳವಿಯಾ ವಿರುದ್ಧ ದೂರು ದಾಖಲು
2
+ ಕೋಲ್ಕತ್ತಾ, ಜ 8 (ಪಿಟಿಐ) ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಿಜೆಪಿ ನಾಯಕ ಅಮಿತ್ ಮಾಳವಿಯಾ ವಿರುದ್ಧ ಟಿಎಂಸಿಯ ಹಿರಿಯ ನಾಯಕಿ ಚಂದ್ರಿಮಾ ಭಟ್ಟಾಚಾರ್ಯ ಪೊಲೀಸ್ ದೂರು ದಾಖಲಿಸಿದ್ದಾರೆ.
3
+ ಜಾರಿ ನಿರ್ದೇಶನಾಲಯದ ಸರಗಳ್ಳರ ಮೇಲಿನ ಹಲ್ಲೇ ಪ್ರಕರಣದ ಪ್ರಮುಖ ಆರೋಪಿ ಟಿಎಂಸಿ ನಾಯಕ ಸಹಜಹಾನ್ ಶೇಖ್ ತಲೆಮರೆಸಿಕೊಂಡಿದ್ದು, ಮಮತಾ ಬ್ಯಾನರ್ಜಿಯ ಪೋಷಣೆಯಿಂದಾಗಿ ಕಾನೂನು ಜಾರಿ ಸಂಸ್ಥೆಗಳ ಹಿಡಿತದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮಾಳವೀಯ ಅವರು ಎಕ್ಸ್‍ನಲ್ಲಿ ಮಾಡಿದ ಪೋಸ್ಟ್‍ಗೆ ಪ್ರತಿಕ್ರಿಯೆಯಾಗಿ ಭಟ್ಟಾಚಾರ್ಯ ಅವರು ದೂರಿದ್ದಾರೆ.
4
+ ಸರ್ಕಾರಕ್ಕೆ ಅಧಿಕಾರದ ಮದವೇರಿದೆ : ಬೊಮ್ಮಾಯಿ
5
+ ಸಂದೇಶ್‍ಖಾಲಿಯ ಡಾನ್ ಎಂದು ಹೇಳಿಕೊಂಡಿದ್ದ ಷಾಜಹಾನ್ ತಲೆಮರೆಸಿಕೊಂಡಿದ್ದಾನೆ. ಪಶ್ಚಿಮ ಬಂಗಾಳದ ಗೃಹ ಸಚಿವರೂ ಆಗಿರುವ ಮಮತಾ ಬ್ಯಾನರ್ಜಿ ಅವರ ಆಶ್ರಯವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಮಾಳವಿಯಾ ಅವರ ಪೋಸ್ಟ್‍ನ ಒಂದು ಭಾಗವನ್ನು ಎಕ್ಸ್‍ನಲ್ಲಿ ಓದಲಾಗಿದೆ.
6
+ ಮುಖ್ಯಮಂತ್ರಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಮಾಳವಿಯಾ ವಿರುದ್ಧ ನಾವು ದೂರು ದಾಖಲಿಸಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಒತ್ತಾಯಿಸಿದ್ದೇವೆ ಎಂದು ರಾಜ್ಯ ಸಚಿವರೂ ಆಗಿರುವ ಭಟ್ಟಾಚಾರ್ಯ ಸುದ್ದಿಗಾರರಿಗೆ ತಿಳಿಸಿದರು.
7
+ ಏತನ್ಮಧ್ಯೆ, ಸತ್ಯವನ್ನು ಮೌನಗೊಳಿಸಲು ಪೊಲೀಸರನ್ನು ಬಳಸಿಕೊಳ್ಳಲು ಟಿಎಂಸಿ ಪ್ರಯತ್ನಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಟೀಕಿಸಿದೆ.ಅಮಿತ್ ಮಾಳವಿಯಾ ಹೇಳಿದ್ದೆಲ್ಲವೂ ಸಂಪೂರ್ಣ ಸತ್ಯ. ಟಿಎಂಸಿ ಸರ್ಕಾರವೇ ಕ್ರಿಮಿನಲ್‍ಗಳನ್ನು ರಕ್ಷಿಸುತ್ತಿದೆ ಮತ್ತು ಈ ಪ್ರವೃತ್ತಿಯು ರಾಜ್ಯದಲ್ಲಿ ಕಾನೂನುಬಾಹಿರತೆಗೆ ಕಾರಣವಾಗಿದೆ ಎಂದು ಬಿಜೆಪಿ ನಾಯಕ ರಾಹುಲ್ ಸಿನ್ಹಾ ಹೇಳಿದ್ದಾರೆ.
eesanje/url_47_195_7.txt ADDED
@@ -0,0 +1,8 @@
 
 
 
 
 
 
 
 
 
1
+ ಸೀತೆಗಾಗಿ ತಯಾರಾಯ್ತು ವಿಶೇಷ ಸೀರೆ
2
+ ಸೂರತ್, ಜ.8 (ಪಿಟಿಐ) – ದೇಶದ ಪ್ರಮುಖ ಜವಳಿ ಕೇಂದ್ರವಾಗಿರುವ ಗುಜರಾತ್‍ನ ಸೂರತ್ ನಗರದಲ್ಲಿ ತಯಾರಾದ ವಿಶೇಷ ಸೀರೆಯನ್ನು ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಮೂರ್ತಿ ಪ್ರತಿಷ್ಠಾಪನೆ ಸಮಾರಂಭಕ್ಕೆ ಕಳುಹಿಸಲಾಗುವುದು.
3
+ ಶ್ರೀರಾಮನ ಚಿತ್ರಗಳು ಮತ್ತು ಅದರ ಮೇಲೆ ಅಯೋಧ್ಯೆ ದೇವಾಲಯವನ್ನು ಮುದ್ರಿಸಲಾಗಿದೆ, ಇದು ರಾಮನ ಪತ್ನಿ ಸೀತೆಗೆ ಮೀಸಲಾಗಿದೆ, ಇದನ್ನು ಮಾ ಜಾನಕಿ ಎಂದು ಪೂಜನೀಯವಾಗಿ ಕರೆಯಲಾಗುತ್ತದೆ ಮತ್ತು ಮೊದಲ ತುಂಡನ್ನು ಇಲ್ಲಿನ ದೇವಸ್ಥಾನಕ್ಕೆ ಅರ್ಪಿಸಲಾಯಿತು ಎಂದು ಉದ್ಯಮಿ ಲಲಿತ್ ಶರ್ಮಾ ಹೇಳಿದ್ದಾರೆ.
4
+ ಶರ್ಮಾ ಅವರೊಂದಿಗೆ ಸಮಾಲೋಚಿಸಿ ಸೀರೆಯನ್ನು ಸಿದ್ಧಪಡಿಸಿದ ಜವಳಿ ಉದ್ಯಮಿ ರಾಕೇಶ್ ಜೈನ್, ಈ ಬಟ್ಟೆಯು ಮಾ ಜಾನಕಿಗೆ ಮೀಸಲಾಗಿದೆ ಮತ್ತು ಉತ್ತರ ಪ್ರದೇಶದ ಅಯೋಧ್ಯೆ ನಗರದಲ್ಲಿರುವ ದೇವಾಲಯಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.
5
+ ಶರ್ಮಾ ಸೀರೆ ಕಳುಹಿಸಲು ಯಾವುದೇ ದಿನಾಂಕವನ್ನು ನಿರ್ದಿಷ್ಟಪಡಿಸಿಲ್ಲ, ಆದರೆ ಜನವರಿ 22 ರ ಮೊದಲು ಅದು ಅಯೋಧ್ಯೆಗೆ ತಲುಪುತ್ತದೆ ಎಂದು ಹೇಳಿದರು. ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಭೌತಿಕವಾಗಿ ಇರಲು ಸಾಧ್ಯವಾಗದ ಭಕ್ತರು ತಮ್ಮದೇ ಆದ ರೀತಿಯಲ್ಲಿ ಧಾರ್ಮಿಕ ಕಾರ್ಯಕ್ರಮದೊಂದಿಗೆ ಸಂಪರ್ಕ ಸಾಧಿಸಲು ಬಯಸುವ ಕಾರಣ ಈ ವ್ಯಾಯಾಮವನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
6
+ ಹಲವು ವರ್ಷಗಳ ನಂತರ ಅಯೋಧ್ಯೆ ದೇವಸ್ಥಾನದಲ್ಲಿ ಭಗವಾನ್ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲಿರುವ ಕಾರಣ ಪ್ರಪಂಚದಾದ್ಯಂತ ಸಂತೋಷವಿದೆ. ಮಾ ಜಾನಕಿ ಮತ್ತು ಭಗವಾನ್ ಹನುಮಾನ್ ಅತ್ಯಂತ ಸಂತೋಷದಾಯಕರು ಎಂದು ಶರ್ಮಾ ಹೇಳಿದರು.
7
+ 8 ರಾಜ್ಯಗಳಿಗೆ ಕಾಂಗ್ರೆಸ್ ಚುನಾವಣಾ ಸಮಿತಿ ರಚನೆ
8
+ ನಾವು ಭಗವಾನ್ ರಾಮನ ಚಿತ್ರಗಳು ಮತ್ತು ಅದರ ಮೇಲೆ ಅಯೋಧ್ಯೆ ದೇವಸ್ಥಾನವನ್ನು ಮುದ್ರಿಸಿದ ವಿಶೇಷ ಸೀರೆಯನ್ನು ಸಿದ್ಧಪಡಿಸಿದ್ದೇವೆ. ನಾವು ಅದನ್ನು ಮಾ ಜಾನಕಿಗೆ ಇಲ್ಲಿನ ದೇವಸ್ಥಾನದಲ್ಲಿ ಅರ್ಪಿಸಿದ್ದೇವೆ. ಸೀರೆಯನ್ನು ಅಯೋಧ್ಯೆಯ ರಾಮ ಮಂದಿರಕ್ಕೆ ಕಳುಹಿಸಲಾಗುವುದು ಎಂದು ಅವರು ಹೇಳಿದರು. ಅವರಿಗೆ ಮನವಿ ಬಂದರೆ, ಮಾ ಜಾನಕಿ ನೆಲೆಸಿರುವ ಶ್ರೀರಾಮನ ಎಲ್ಲಾ ದೇವಾಲಯಗಳಿಗೆ ಸೀರೆಯನ್ನು ಉಚಿತವಾಗಿ ಕಳುಹಿಸುತ್ತೇವೆ ಎಂದು ಶರ್ಮಾ ತಿಳಿಸಿದ್ದಾರೆ.
eesanje/url_47_195_8.txt ADDED
@@ -0,0 +1,8 @@
 
 
 
 
 
 
 
 
 
1
+ ಮೋದಿ ಟೀಕಿಸಿದ ಮಾಲ್ಡೀವ್ಸ್‌ಗೆ ತಿಳಿ ಹೇಳಿದ ಭಾರತ
2
+ ನವದೆಹಲಿ, ಜ 8 (ಪಿಟಿಐ) ಮಾಲ್ಡೀವ್ಸ್‌ನ ಹಲವಾರು ಸಚಿವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಟೀಕೆಗಳ ಬಗ್ಗೆ ಇಂದು ಭಾರತಕ್ಕೆ ಮಾಲ್ಡೀವ್ಸ್ ರಾಯಭಾರಿಯನ್ನು ವಿದೇಶಾಂಗ ಸಚಿವಾಲಯಕ್ಕೆ ಕರೆಸಲಾಯಿತು ಮತ್ತು ತೀವ್ರ ಕಳವಳವನ್ನು ವ್ಯಕ್ತಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
3
+ #| , ' . ' ' .../Dxsj3nkNvw
4
+ ಮೋದಿ ವಿರುದ್ಧ ಅವಹೇಳನಕಾರಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಮಾಲ್ಡೀವಸ್ ಸರ್ಕಾರ ಮೂವರು ಉಪ ಮಂತ್ರಿಗಳನ್ನು ಅಮಾನತುಗೊಳಿಸಿತ್ತು. ಲಕ್ಷದ್ವೀಪಕ್ಕೆ ಭೇಟಿ ನೀಡಿದ ನಂತರ ಎಕ್ಸ್‍ನಲ್ಲಿ ಮೋದಿ ಅವರು ಮಾಡಿದ ಪೋಸ್ಟ್ ವಿರುದ್ಧ ಮಾಲ್ಡೀವ್ಸ್‍ನ ಮೂವರು ಉಪ ಮಂತ್ರಿಗಳು ಟೀಕಾಪ್ರಹಾರ ನಡೆಸಿದ್ದರು. ಮಾಲ್ಡೀವಿಯನ್ ಮಾಧ್ಯಮ ವರದಿಗಳ ಪ್ರಕಾರ, ಯುವ ಸಚಿವಾಲಯದ ಉಪ ಮಂತ್ರಿಗಳಾದ ಮಲ್ಶಾ ಶರೀಫ್, ಮರಿಯಮ್ ಶಿಯುನಾ ಮತ್ತು ಅಬ್ದುಲ್ಲಾ ಮಹಜೂಮ್ ಮಜಿದ್ ಅವರನ್ನು ತಮ್ಮ ಹುದ್ದೆಗಳ ಮೇಲೆ ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ.
5
+ ನವದೆಹಲಿಯಲ್ಲಿ, ಅಧಿಕೃತ ಮೂಲಗಳು ಮಾಲೆಯಲ್ಲಿರುವ ಭಾರತೀಯ ಹೈಕಮಿಷನ್ ಭಾನುವಾರ ಮಾಲ್ಡೀವಿಯನ್ ವಿದೇಶಾಂಗ ಸಚಿವಾಲಯದೊಂದಿಗೆ ಈ ವಿಷಯವನ್ನು ಬಲವಾಗಿ ಪ್ರಸ್ತಾಪಿಸಿದೆ ಎಂದು ಹೇಳಿದರು. ಮಂತ್ರಿಗಳ ಅವಹೇಳನಕಾರಿ ಹೇಳಿಕೆಗಳು ಭಾರತದಲ್ಲಿ ಫ್ಲಾಕ್ ಅನ್ನು ಸೆಳೆದಿವೆ, ಅನೇಕ ಸೆಲೆಬ್ರಿಟಿಗಳು ಮಾಲ್ಡೀವ್ಸ್‍ಗೆ ಹೋಗುವ ಬದಲು ದೇಶೀಯ ಪ್ರವಾಸಿ ತಾಣಗಳನ್ನು ಅನ್ವೇಷಿಸಲು ಗಿ ನಲ್ಲಿ ಜನರನ್ನು ಒತ್ತಾಯಿಸಿದ್ದಾರೆ.
6
+ 8 ರಾಜ್ಯಗಳಿಗೆ ಕಾಂಗ್ರೆಸ್ ಚುನಾವಣಾ ಸಮಿತಿ ರಚನೆ
7
+ ಕೆಲವು ಭಾರತೀಯರು ಮಾಲ್ಡೀವ್ಸ್‍ಗೆ ತಮ್ಮ ನಿಗದಿತ ಪ್ರವಾಸವನ್ನು ರದ್ದುಗೊಳಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸಾವಿರಾರು ಪೋಸ್ಟ್‍ಗಳು ಹರಿದಾಡುತ್ತಿವೆ. ಮಾಲ್ಡೀವಿಯನ್ ವಿದೇಶಾಂಗ ಸಚಿವಾಲಯವು ವಿದೇಶಿ ನಾಯಕರ ವಿರುದ್ಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅವಹೇಳನಕಾರಿ ಟೀಕೆಗಳು ಸರ್ಕಾರಕ್ಕೆ ತಿಳಿದಿದೆ ಮತ್ತು ವೈಯಕ್ತಿಕ ಅಭಿಪ್ರಾಯಗಳು ಅದರ ಸ್ಥಾನವನ್ನು ಪ್ರತಿನಿಸುವುದಿಲ್ಲ ಎಂದು ಹೇಳಿದೆ.
8
+ ವಿದೇಶಿ ನಾಯಕರು ಮತ್ತು ಉನ್ನತ ಶ್ರೇಣಿಯ ವ್ಯಕ್ತಿಗಳ ವಿರುದ್ಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ಮಾಲ್ಡೀವ್ಸ್ ಸರ್ಕಾರಕ್ಕೆ ತಿಳಿದಿದೆ. ಈ ಅಭಿಪ್ರಾಯಗಳು ವೈಯಕ್ತಿಕ ಮತ್ತು ಮಾಲ್ಡೀವ್ಸ್ ಸರ್ಕಾರದ ಅಭಿಪ್ರಾಯಗಳನ್ನು ಪ್ರತಿನಿಸುವುದಿಲ್ಲ ಎಂದು ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
eesanje/url_47_195_9.txt ADDED
@@ -0,0 +1,7 @@
 
 
 
 
 
 
 
 
1
+ 8 ರಾಜ್ಯಗಳಿಗೆ ಕಾಂಗ್ರೆಸ್ ಚುನಾವಣಾ ಸಮಿತಿ ರಚನೆ
2
+ ನವದೆಹಲಿ, ಜ.7- ಮುಂದಿನ ಲೋಕಸಭೆ ಮಹಾಚುನಾವಣೆಗೆ ತಯಾರಿ ಆರಂಭಿಸಿರುವ ಕಾಂಗ್ರೆಸ್ ರಾಜಸ್ಥಾನ, ಮಧ್ಯಪ್ರದೇಶ, ಕೇರಳ, ಛತ್ತೀಸ್‍ಗಢ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ 8 ರಾಜ್ಯಗಳಿಗೆ ಚುನಾವಣಾ ಸಮಿತಿಗಳನ್ನು ರಚಿಸಿದೆ. ಇದರ ಜೊತೆಗೆ ಮಧ್ಯಪ್ರದೇಶಕ್ಕೆ ರಾಜಕೀಯ ವ್ಯವಹಾರಗಳ ಸಮಿತಿಯನ್ನು ರಚಿಸಲಾಗಿದೆ ಎಂದು ಪಕ್ಷದ ಅಧಿಕೃತ ಘೋಷಣಾ ಪಟ್ಟಿಯಲ್ಲಿ ತಿಳಿಸಲಾಗಿದೆ.ರಾಜಸ್ಥಾನ, ಕೇರಳ, ತೆಲಂಗಾಣ, ಛತ್ತೀಸ್‍ಗಢ, ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ ಮತ್ತು ತ್ರಿಪುರಾ, ಪ್ರದೇಶ ಚುನಾವಣಾ ಸಮಿತಿಗಳು ಮತ್ತು ಮಧ್ಯಪ್ರದೇಶದ ಪ್ರದೇಶ ಚುನಾವಣಾ ಸಮಿತಿ ಮತ್ತು ರಾಜಕೀಯ ವ್ಯವಹಾರಗಳ ಸಮಿತಿಯ ಸಂವಿಧಾನದ ಪ್ರಸ್ತಾವನೆಯನ್ನು ಕಾಂಗ್ರೆಸ್ ಅಧ್ಯಕ್ಷರು ತಕ್ಷಣದಿಂದ ಜಾರಿಗೆ ಬರುವಂತೆ ಹೇಳಿದ್ದಾರೆ.
3
+ ರಾಜಸ್ಥಾನ ಪಿಸಿಸಿ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಸ್ರಾ ಅವರನ್ನು ರಾಜ್ಯದಲ್ಲಿ ಪ್ರದೇಶ ಚುನಾವಣಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.ಸಮಿತಿಯಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್,ಮಹೇಂದ್ರಜೀತ್ ಸಿಂಗ್ ಮಾಳವೀಯ, ಮೋಹನ್ ಪ್ರಕಾಶ್, ಸಿಪಿ ಜೋಶಿ, ಹರೀಶ್ ಚೌಧರಿ, ರಾಮಲಾಲ್ ಜಾಟ್, ಪ್ರಮೋದ್ ಜೈನ್ ಭಯ, ಪ್ರತಾಪ್ ಸಿಂಗ್ ಖಚರಿಯಾವಾಸ್, ಮಮತಾ ಭೂಪೇಶ್, ಭಜನ್ ಲಾಲ್ ಜಾತವ್, ಮುರಾರಿ ಲಾಲ್ ಮೀನಾ, ಅಶೋಕ್ ಚಂದನಾ, ನೀರಜ್ ಡಾಂಗಿ, ಜುಬೇರ್ ಖಾನ್, „ೀರಜ್ ಶರ್ಜಾರ್, ರೋಹಿತ್ ಬೋಹ್ರಾ, ಇಂದ್ರ ಮೀನಾ, ಡುಂಗರ್ ರಾಮ್ ಗೆದರ್, ಶಿಮ್ಲಾ ದೇವಿ ನಾಯಕ್ ಮತ್ತು ಲಲಿತ್ ಯಾದವ್‍ನ ಸದಸ್ಯರಾ ಗಿದ್ದಾರೆ.ಅವರಲ್ಲದೆ, ಯುವ ಕಾಂಗ್ರೆಸ್ ಅಧ್ಯಕ್ಷರು, ಎನ್‍ಎಸ್‍ಯುಐ ಅಧ್ಯಕ್ಷರು, ಸೇವಾದಳದ ಮುಖ್ಯ ಸಂಘಟಕರು ಮತ್ತು ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಸಮಿತಿಯ ಸದಸ್ಯರಾಗಿದ್ದಾರೆ.ಕೆ ಸುಧಾಕರ್ ಅವರನ್ನು ಕೇರಳ ಪ್ರದೇಶ ಚುನಾವಣಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
4
+ ಮುಸಲ್ಮಾನ ಗೂಂಡಾಗಳಿಂದ ನೈತಿಕ ಪೋಲೀಸ್‍ಗಿರಿ : ಈಶ್ವರಪ್ಪ ಆಕ್ರೋಶ
5
+ ಸಮಿತಿಯಲ್ಲಿ ಎ ಕೆ ಆಂಟನಿ, ಕೆ ಸಿ ವೇಣುಗೋಪಾಲ್, ರಮೇಶ್ ಚೆನ್ನಿತ್ತಲ, ವಯಲಾರ್ ರವಿ, ವಿ ಡಿ ಸತೀಶನ್, ಕೆ ಸುರೇಶ್, ಶಶಿ ತರೂರ್, ಮತ್ತು ಮುಲ್ಲಪಲ್ಲಿ ರಾಮಚಂದ್ರನ್ ಸೇರಿದಂತೆ ಹಿರಿಯ ನಾಯಕರು ಇದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರ ನೇತೃತ್ವದ ರಾಜ್ಯ ಪ್ರದೇಶ ಚುನಾವಣಾ ಸಮಿತಿಯ ಅಧ್ಯಕ್ಷರಾಗಿ ಘೋಷಿಸಲಾಯಿತು.
6
+ ಸಮಿತಿಯಲ್ಲಿ ಉಪಮುಖ್ಯಮಂತ್ರಿ ಭಟ್ಟಿವಿಕ್ರಮಾರ್ಕ ಮಲ್ಲು ಸದಸ್ಯರಾಗಿ, ಉತ್ತಮ್ ಕುಮಾರ್ ರೆಡ್ಡಿ ಮತ್ತು ವಿ ಹನುಮಂತ ರಾವ್ ಇದ್ದಾರೆ. ಹಿಮಾಚಲ ಪ್ರದೇಶದಲ್ಲಿ ಪಿಸಿಸಿ ಮುಖ್ಯಸ್ಥೆ ಪ್ರತಿಭಾ ಸಿಂಗ್ ಅವರ ಅಧ್ಯಕ್ಷರಾಗಿ ,ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು, ಉಪ ಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ ಮತ್ತು ಆನಂದ್ ಶರ್ಮಾ, ವಿಪ್ರೋವ್ ಠಾಕೂರ್, ಆಶಾ ಕುಮಾರಿ, ರಾಮ್ ಲಾಲ್ ಠಾಕೂರ್, ಠಾಕೂರ್ ಕೌಲ್ ಸದಸ್ತರಾಗಿದ್ದಾರೆ.
7
+ ಇನ್ನು ಮಧ್ಯಪ್ರದೇಶದ ಪ್ರದೇಶ ಚುನಾವಣಾ ಸಮಿತಿಯ ಮುಖ್ಯಸ್ಥರಾಗಿ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್‍ನೇಮಿಸಲಾಗಿದ್ದು ಜಿತು ಪಟ್ವಾರಿ ,ದಿಗ್ವಿಜಯ ಸಿಂಗ್, ವಿವೇಕ್ ಟಂಖಾ, ಸುರೇಶ್ ಪಚೌರಿ, ಕಾಂತಿಲಾಲ್ ಭೂರಿಯಾ ಮತ್ತು ಸದಸ್ಯರಾಗಿದ್ದಾರೆ.
eesanje/url_47_196_1.txt ADDED
@@ -0,0 +1,8 @@
 
 
 
 
 
 
 
 
 
1
+ ಗಾಯಕಿ ಸ್ವಸ್ತಿ ಮೆಹುಲ್ ರಚಿಸಿರುವ ಭಜನೆಗೆ ಮನಸೋತ ಮೋದಿ
2
+ ನವದೆಹಲಿ,ಜ.6- ಭಗವಾನ್ ಶ್ರೀರಾಮನ ಕುರಿತಂತೆ ಗಾಯಕಿ ಸ್ವಸ್ತಿ ಮೆಹುಲ್ ರಚಿಸಿರುವ ಭಜನೆ ಕೇಳಿದರೆ ಅದು ಧೀರ್ಘಕಾಲ ಕಿವಿಯಲ್ಲಿ ಅನುರಣಿಸುತ್ತದೆ ಮಾತ್ರವಲ್ಲ ರಾಮನ ಹಲವಾರು ಲೀಲೆಗಳನ್ನು ಮನಸ್ಸಿಗೆ ನಾಟುವಂತೆ ಹೇಳಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುಣಗಾನ ಮಾಡಿದ್ದಾರೆ.
3
+ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ದೇಶದೆಲ್ಲೇಡೆ ರಾಮ ನಾಮ ಜಪ ಆರಂಭವಾಗಿರುವ ಬೆನ್ನಲ್ಲೇ ಮೋದಿ ಅವರು ಎಕ್ಸ್‍ನಲ್ಲಿನ ಪೋಸ್ಟ್‍ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. ನೀವು ಒಮ್ಮೆ ಸ್ವಸ್ತಿ ಜೀಯವರ ಈ ಭಜನೆಯನ್ನು ಕೇಳಿದರೆ, ಅದು ದೀರ್ಘಕಾಲದವರೆಗೆ ಕಿವಿಯಲ್ಲಿ ಅನುರಣಿಸುತ್ತದೆ. ಇದು ಕಣ್ಣುಗಳಲ್ಲಿ ಕಣ್ಣೀರು ಮತ್ತು ಮನಸ್ಸನ್ನು ಭಾವನೆಗಳಿಂದ ತುಂಬಿಸುತ್ತದೆ ಎಂದು ಮೋದಿ ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.
4
+ स्वस्ति जी का ये भजन एक बार सुन लें तो लंबे समय तक कानों में गूंजता रहता है। आंखों को आंसुओं से, मन को भावों से भर देता है।#://./0nD3XmAbzk
5
+ ಮೋದಿ ಪೋಸ್ಟ್ ಹಂಚಿಕೊಂಡ ಕೇವಲ ಒಂದು ಗಂಟೆಯಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದು ಸಾಕಷ್ಟು ಜನಪ್ರಿಯತೆಯನ್ನು ಗಳಿಸುತ್ತಿದೆ. ಏತನ್ಮಧ್ಯೆ, ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದ್ದು, ಸಾವಿರಾರು ಗಣ್ಯರು, ಸಮಾಜದ ಎಲ್ಲಾ ವರ್ಗದ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅಯೋಧ್ಯೆಯಲ್ಲಿ ರಾಮ್ ಲಲ್ಲಾ (ಶಿಶು ಭಗವಾನ್ ರಾಮ) ಅವರ ಪ್ರಾಣ-ಪ್ರತಿಷ್ಠಾ (ಪ್ರತಿಷ್ಠಾಪನೆ) ಸಮಾರಂಭದ ವೈದಿಕ ಆಚರಣೆಗಳು ಮುಖ್ಯ ಸಮಾರಂಭದ ಒಂದು ವಾರದ ಮೊದಲು ಅಂದರೆ ಜನವರಿ 16 ರಂದು ಪ್ರಾರಂಭವಾಗುತ್ತವೆ.
6
+ ರಾಜಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ಟಿಕೆಟ್ ಪಡೆಯೋದು ಹೇಗೆ..?
7
+ ವಾರಣಾಸಿಯ ಅರ್ಚಕ ಲಕ್ಷ್ಮೀಕಾಂತ್ ದೀಕ್ಷಿತ್ ಅವರು ಜನವರಿ 22 ರಂದು ರಾಮ್ ಲಲ್ಲಾ ಅವರ ಪ್ರತಿಷ್ಠಾಪನೆಯ ಮುಖ್ಯ ವಿವಿಧಾನಗಳನ್ನು ನಿರ್ವಹಿಸಲಿದ್ದಾರೆ. ಜನವರಿ 14 ರಿಂದ ಜನವರಿ 22 ರವರೆಗೆ ಅಯೋಧ್ಯೆಯು ಅಮೃತ ಮಹೋತ್ಸವವನ್ನು ಆಚರಿಸಲಿದೆ.
8
+ 1008 ಹುಂಡಿ ಮಹಾಯಜ್ಞವೂ ನಡೆಯಲಿದ್ದು, ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ. ಅಯೋಧ್ಯೆಯಲ್ಲಿ ಸಾವಿರಾರು ಭಕ್ತರಿಗೆ ಸ್ಥಳಾವಕಾಶ ಕಲ್ಪಿಸಲು ಹಲವಾರು ಟೆಂಟ್ ಸಿಟಿಗಳನ್ನು ನಿರ್ಮಿಸಲಾಗುತ್ತಿದೆ, ಅವರು ಮಹಾ ಸಮರ್ಪಣೆಗಾಗಿ ಉತ್ತರ ಪ್ರದೇಶದ ದೇವಾಲಯ ಪಟ್ಟಣಕ್ಕೆ ಆಗಮಿಸುವ ನಿರೀಕ್ಷೆಯಿದೆ.
eesanje/url_47_196_10.txt ADDED
@@ -0,0 +1,5 @@
 
 
 
 
 
 
1
+ ಉತ್ತರ ಪ್ರದೇಶ : ವಾಂಟೆಡ್ ಕ್ರಿಮಿನಲ್ ವಿನೋದ್ ಕುಮಾರ್ ಉಪಾಧ್ಯಾಯ ಎನ್‌ಕೌಂಟರ್‌
2
+ ಲಕ್ನೋ, ಜ 5- ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ ಸುಲ್ತಾನ್‍ಪುರ ಜಿಲ್ಲೆಯಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ಅಪರಾಧಿಯೊಬ್ಬ ಹತನಾಗಿದ್ದಾನೆ. ಹಲವಾರು ಕ್ರಿಮಿನಲ್ ಪ್ರಕರಣದಲ್ಲಿ ಬೇಕಾಗಿದ್ದ ಆತನ ಪತ್ತೆಗೆ 1 ಲಕ್ಷ ರೂಪಾಯಿ ಬಹುಮಾನವನ್ನು ಹೊತ್ತದ್ದ ವಿನೋದ್ ಕುಮಾರ್ ಉಪಾಧ್ಯಾಯ ಹತನಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
3
+ ವಿಶೇಷ ಕಾರ್ಯಪಡೆಯೊಂದಿಗಿನ ಎನ್‌ಕೌಂಟರ್‌ನಲ್ಲಿ ಉಪಾಧ್ಯಾಯ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಎಸ್‍ಟಿಎ ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮಿತಾಬ್ ಯಶ್ ತಿಳಿಸಿದ್ದಾರೆ.
4
+ ಮತ್ತೊಮ್ಮೆ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಅದಾನಿ
5
+ ಗೋರಖ್‍ಪುರ, ಬಸ್ತಿ, ಸಂತ ಕಬೀರ್ ನಗರ ಮತ್ತು ಲಕ್ನೋದಲ್ಲಿ ಉಪಾಧ್ಯಾಯ ವಿರುದ್ಧ 35 ಘೋರ ಅಪರಾಧಗಳ ಪ್ರಕರಣಗಳು ದಾಖಲಾಗಿತ್ತು 2023ರ ಸೆಪ್ಟೆಂಬರ್‍ನಲ್ಲಿ ಗೋರಖ್‍ಪುರ ಪೊಲೀಸರು ಆತನ ಸುಳಿವು ನೀಡಿದವರಿಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು ಆತನ ಬಳಿಇದ್ದ ಪಿಸ್ತೂಲು ಸೇರಿ ಹಲವು ಮಾರಕಾಸ ವಶಕ್ಕೆ ಪಡೆಯಲಾಗಿದೆ.
eesanje/url_47_196_11.txt ADDED
@@ -0,0 +1,5 @@
 
 
 
 
 
 
1
+ ಸೇನೆ-ಉಗ್ರರ ನಡುವೆ ಗುಂಡಿನ ಚಕಮಕಿ
2
+ ಶ್ರೀನಗರ,ಜ.5- ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್‍ಕೌಂಟರ್ ನಡೆದಿದೆ. ದಕ್ಷಿಣ ಕಾಶ್ಮೀರ ಜಿಲ್ಲೆಯ ಚೋಟಿಗಾಮ್ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಮುಂಜಾನೆಯೇ ಅಲ್ಲಿ ಶೋಧ ಕಾರ್ಯಚರಣೆ ಅರಂಭಿಸಿತ್ತು.
3
+ ಶೋಪಿಯಾನ್ ಜಿಲ್ಲೆಯ ಚೋಟಿಗಮ್ ಪ್ರದೇಶದಲ್ಲಿ ಇದೀಗ ಎನ್ಕೌಂಟರ್ ಪ್ರಾರಂಭವಾಗಿದೆ. ಶೋಪಿಯಾನ್ ಪೋಲಿಸ್ , ಸೇನೆ ಮತ್ತು ಸಿಆರ್‍ಪಿಎಫ್ ಈ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ತಿಳಿದುಬಂದಿದೆ.
4
+ ಕೇಜ್ರಿವಾಲ್, ಸೂರೆನ್ ಬಂಧನ ಸಾಧ್ಯತೆ : ಪವಾರ್
5
+ ಭದ್ರತಾ ಸಿಬ್ಬಂದಿಗಳು ಉಗ್ರರು ಇದ್ದಾರೆ ಎಂದು ಶಂಕಿಸಲಾದ ಪ್ರದೇಶದಲ್ಲಿ ಶೋಧ ಕಾರ್ಯಚರಣೆ ನಡೆಸುತ್ತಿದ್ದಾಗ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದರು ಇದಕ್ಕೆ ಪ್ರತಿಯಾಗಿ ಸೇನೆ ಪ್ರತಿ ದಾಳಿ ನಡೆಸುತ್ತಿದೆ. ಇಲ್ಲಿಯವರೆಗೆ, ಎರಡೂ ಕಡೆಯಿಂದ ಯಾವುದೇ ಜೀವಹಾನಿಯ ವರದಿಯಾಗಿಲ್ಲ ಎಂದು ಸೇನೆ ತಿಳಿಸಿದೆ.
eesanje/url_47_196_12.txt ADDED
@@ -0,0 +1,7 @@
 
 
 
 
 
 
 
 
1
+ ಮತ್ತೊಮ್ಮೆ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಅದಾನಿ
2
+ ನವದೆಹಲಿ,ಜ.5- ಸುಪ್ರೀಂಕೋರ್ಟ್‍ನಿಂದ ಕ್ಲೀನ್‍ಚಿಟ್ ಪಡೆದ ಕೆಲವೇ ದಿನಗಳಲ್ಲಿ ಅದಾನಿ ಉದ್ಯಮಗಳ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರು ಮತ್ತೆ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮಿದ್ದಾರೆ. ಅಮೆರಿಕ ಮೂಲದ ಹಿಂಡೆನ್‍ಬರ್ಗ್ ರಿಸರ್ಚ್‍ನ ಆರೋಪಗಳಿಗೆ ಸಂಬಂಧಿಸಿದಂತೆ ಸಮೂಹದ ವಿರುದ್ಧ ಯಾವುದೇ ಹೊಸ ತನಿಖೆಗಳ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ ಕೆಲವು ದಿನಗಳ ನಂತರ ಗೌತಮ್ ಅದಾನಿ ಮತ್ತೆ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
3
+ ಬ್ಲೂಮ್‍ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಅದಾನಿಯವರ ನಿವ್ವಳ ಮೌಲ್ಯವು ಒಂದು ದಿನದಲ್ಲಿ 7.7 ಶತಕೋಟಿ 97.6 ಶತಕೋಟಿಗೆ ಏರಿತು, ಇದುವರೆಗೂ ಮುಖೇಶ್ ಅಂಬಾನಿ ಈ ರೇಸಿನಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದರು. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‍ನ ಅಧ್ಯಕ್ಷರಾದ ಅಂಬಾನಿ ಅವರು 97 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಕಡಿಮೆ ಅಂತರದಿಂದ ಹಿಂದುಳಿದಿದ್ದಾರೆ ಎಂದು ಸೂಚ್ಯಂಕ ತೋರಿಸುತ್ತದೆ.
4
+ 1980 ರ ದಶಕದಲ್ಲಿ ವಜ್ರದ ವ್ಯಾಪಾರಿಯಾಗಿ ಪ್ರಾರಂಭವಾದ ಮೊದಲ ತಲೆಮಾರಿನ ವಾಣಿಜ್ಯೋದ್ಯಮಿಯ ಪುನರಾಗಮನವು ಅದಾನಿಯವರ ಬಂದರುಗಳಿಂದ ಅಕಾರದ ಸಮೂಹಕ್ಕೆ ಘಟನಾತ್ಮಕ ವರ್ಷವಾಗಿದೆ. ಹಿಂಡೆನ್‍ಬರ್ಗ್‍ನ ಕಾಪೆರ್ರೇಟ್ ವಂಚನೆಯ ಆರೋಪಗಳನ್ನು ನಿರಾಕರಿಸಿದರೂ, ಅದಾನಿ ಗ್ರೂಪ್ ಕಳೆದ ವರ್ಷ ಒಂದು ಹಂತದಲ್ಲಿ 150 ಶತಕೋಟಿಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿತು ಮತ್ತು ಹೂಡಿಕೆದಾರರು, ಸಾಲದಾತರು, ಸಾಲ ಮರುಪಾವತಿ ಮತ್ತು ನಿಯಂತ್ರಕ ಕಾಳಜಿಗಳನ್ನು ಸಮಾಧಾನಪಡಿಸುವ ಮೂಲಕ ತಿಂಗಳುಗಳನ್ನು ಕಯಬೇಕಾಗಿ ಬಂದಿತ್ತು.
5
+ ಕೇಜ್ರಿವಾಲ್, ಸೂರೆನ್ ಬಂಧನ ಸಾಧ್ಯತೆ : ಪವಾರ್
6
+ ಅದಾನಿ ಗ್ರೂಪ್‍ನ ಷೇರುಗಳು ಈ ವಾರ ಸುಪ್ರಿಂಕೋರ್ಟ್ ಸ್ಥಳೀಯ ಮಾರುಕಟ್ಟೆಗಳ ನಿಯಂತ್ರಕರಿಗೆ ಸಂಘಟಿತ ಕಂಪನಿಯ ತನಿಖೆಯನ್ನು ಮೂರು ತಿಂಗಳೊಳಗೆ ಮುಕ್ತಾಯಗೊಳಿಸುವಂತೆ ಆದೇಶಿಸಿದ ನಂತರ ಮತ್ತು ಹೆಚ್ಚಿನ ತನಿಖೆಗಳ ಅಗತ್ಯವಿಲ್ಲ ಎಂದು ಹೇಳಿದ ನಂತರ, ಅದಾನಿ ಸಮೂಹ ಚೇತರಿಸಿಕೊಂಡಿದೆ.
7
+ ಮುಂದಿನ ದಶಕದಲ್ಲಿ ತನ್ನ ವ್ಯವಹಾರಗಳಾದ್ಯಂತ ಹಸಿರು ಪರಿವರ್ತನೆಗಾಗಿ 100 ಶತಕೋಟಿಯಷ್ಟು ಬಂಡವಾಳ ಹೂಡಿರುವ ಅದಾನಿ, ತನ್ನ ಕಲ್ಲಿದ್ದಲು ವ್ಯಾಪಾರದ ಮೂಲವನ್ನು ಮೀರಿ ಡಾಟಾ ಸೆಂಟರ್‍ಗಳು, ಕೃತಕ ಬುದ್ಧಿಮತ್ತೆ, ನಗರಾಭಿವೃದ್ಧಿ, ವಿಮಾನ ನಿಲ್ದಾಣಗಳು ಮತ್ತು ಮಾಧ್ಯಮಗಳಲ್ಲಿ ತನ್ನ ಸಾಮ್ರಾಜ್ಯವನ್ನು ವೇಗವಾಗಿ ವೈವಿಧ್ಯಗೊಳಿಸಲು ಮುಂದಾಗಿದ್ದಾರೆ.
eesanje/url_47_196_2.txt ADDED
@@ -0,0 +1,6 @@
 
 
 
 
 
 
 
1
+ ಪಿಎಸ್‍ಎಲ್‍ವಿ ಎಕ್ಸ್‌ಪೋಸ್ಯಾಟ್‌ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ : ಇಸ್ರೋ ಮುಖ್ಯಸ್ಥ ಸೋಮನಾಥ್
2
+ ಹೈದರಾಬಾದ್,ಜ.6- ಹೊಸ ವರ್ಷದ ಆರಂಭದಲ್ಲಿ ಉಡಾವಣೆಗೊಂಡ ಪಿಎಸ್‍ಎಲ್‍ವಿ ಎಕ್ಸ್‌ಪೋಸ್ಯಾಟ್‌ ತುಂಬಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಹೇಳಿದ್ದಾರೆ. ಹೈದರಾಬಾದ್‍ನಲ್ಲಿ ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದ (ಜೆಎನ್‍ಟಿಯು) ಘಟಿಕೋತ್ಸವದ ಸಂದರ್ಭದಲ್ಲಿ ಸೋಮನಾಥ್ ಸುದ್ದಿಗಾರರೊಂದಿಗೆ ಮಾತನಾಡಿದರು. ಘಟಿಕೋತ್ಸವದ ಸಮಯದಲ್ಲಿ ಜೆಎನ್‍ಟಿಯು ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ (ಆನರಿಸ್ ಕಾಸಾ) ನೀಡಿ ಗೌರವಿಸಲಾಯಿತು.
3
+ ಪಿಎಸ್‍ಎಲ್‍ವಿ ಎಕ್ಸ್‌ಪೋಸ್ಯಾಟ್‌ ಉಪಗ್ರಹವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅದರ ಎಲ್ಲಾ ಉಪಕರಣಗಳು ಈಗ ನಿಧಾನವಾಗಿ ಸ್ವಿಚ್ ಆನ್ ಮತ್ತು ಕಾರ್ಯನಿರ್ವಹಿಸುತ್ತಿವೆ. ಫಲಿತಾಂಶಗಳ ಬಗ್ಗೆ ನಾವು ಶೀಘ್ರದಲ್ಲೇ ತಿಳಿದುಕೊಳ್ಳುತ್ತೇವೆ ಎಂದು ಅವರು ಹೇಳಿದರು. 2024 ಘಟನಾತ್ಮಕ ವರ್ಷವಾಗಲಿದೆ ಎಂದು ಹೇಳಿದ ಎಸ್ ಸೋಮನಾಥ್ ಅನೇಕ ಉಡಾವಣೆಗಳನ್ನು ಪ್ರಸ್ತಾಪಿಸಲಾಗಿದೆ ಎಂದು ವಿವರಿಸಿದರು.
4
+ 2 ಕೋಟಿಗೆ ದಾವೂದ್ ನಿವೇಶನ ಖರೀದಿಸಿದ ವಕೀಲ
5
+ ಮುಂದಿನ ಉಡಾವಣೆಯು ಜಿಎಸ್‍ಎಲ್‍ವಿ ಉಡಾವಣೆ, ಇನ್ಸಾಟ್ -3ಡಿಎಸ್ ಹವಾಮಾನ ಮತ್ತು ಹವಾಮಾನ ಉಪಗ್ರಹವಾಗಿದ್ದು, ನಮ್ಮ ಚಂಡಮಾರುತಗಳನ್ನು ಪತ್ತೆಹಚ್ಚಲು, ಹವಾಮಾನ, ಮಳೆ, ಅನಾವೃಷ್ಟಿ ಮತ್ತು ಇತರ ಹಲವು ವಿಷಯಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗುವ ಉಪಗ್ರಹವು ಈ ತಿಂಗಳು ಉಡಾವಣೆಯಾಗಲಿದೆ, ಬಹುಶಃ ಇದು ಫೆಬ್ರುವರಿ ಆರಂಭದಲ್ಲಿ ಆಗಬಹುದು ಎಂದು ಅವರು ಮಾಹಿತಿ ನೀಡಿದರು.
6
+ ಗಗನಯಾನ್ ಮಾನವ ಬಾಹ್ಯಾಕಾಶ ಯಾನ ಕಾರ್ಯಕ್ರಮಕ್ಕಾಗಿ ಹಲವು ಉಡಾವಣೆಗಳಿವೆ ಮತ್ತು 2024 ಗಗನಯಾನ ವರ್ಷವಾಗಲಿದೆ ಎಂದು ಅವರು ವಿವರಿಸಿದರು. ಇತರ ಉಡಾವಣೆಗಳಲ್ಲಿ ವಾಣಿಜ್ಯ ಉಡಾವಣೆಗಳು ಮತ್ತು ಜಿಎಸ್‍ಎಲ್ವಿ ಉಡಾವಣೆ ಸೇರಿವೆ ಎಂದು ಅವರು ಹೇಳಿದರು. ಬಾಹ್ಯಾಕಾಶ ಸಂಸ್ಥೆಯ ಚೊಚ್ಚಲ ಸೌರ ಮಿಷನ್ ಆದಿತ್ಯ-ಎಲ್ 1 ನಲ್ಲಿ ಜನವರಿ 6 ರಂದು ಪ್ರದರ್ಶನಗೊಳ್ಳುವ ನಿರ್ಣಾಯಕ ಕುಶಲತೆಯ ಕುರಿತು ಮಾತನಾಡಿದ ಅವರು, ಇಂದು ಸಂಜೆ ನೌಕೆ ತನ್ನ ಕಕ್ಷೆ ಸೇರಲಿದೆ ಎಂದು ತಿಳಿಸಿದರು.
eesanje/url_47_196_3.txt ADDED
@@ -0,0 +1,7 @@
 
 
 
 
 
 
 
 
1
+ ಭೂಕಂಪಪೀಡಿತ ಜಪಾನ್‍ಗೆ ಅಗತ್ಯ ನೆರವು : ಪ್ರಧಾನಿ ಮೋದಿ
2
+ ನವದೆಹಲಿ,ಜ.6- ಜಪಾನ್‍ನಲ್ಲಿ ಸಂಭವಿಸಿದ ಭಾರೀ ಭೂಕಂಪದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರಿಗೆ ಪತ್ರ ಬರೆದು ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಜನವರಿ ಒಂದರಂದು ಜಪಾನ್‍ನಲ್ಲಿ ಸಂಭವಿಸಿದ ದೊಡ್ಡ ಭೂಕಂಪದ ಬಗ್ಗೆ ತಿಳಿದುಕೊಳ್ಳಲು ನಾನು ತೀವ್ರ ದುಃಖ ಮತ್ತು ಕಾಳಜಿಯನ್ನು ಹೊಂದಿದ್ದೇನೆ ಎಂದು ಪ್ರಧಾನಿ ಮೋದಿ ಜಪಾನ್ ಪ್ರಧಾನಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
3
+ ತಮ್ಮ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ, ನಾವು ಜಪಾನ್ ಮತ್ತು ಅದರ ಜನರೊಂದಿಗೆ ವಿಪತ್ತಿಗೆ ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರರಾಗಿ, ಭಾರತವು ಜಪಾನ್‍ನೊಂದಿಗಿನ ತನ್ನ ಸಂಬಂಧವನ್ನು ಗೌರವಿಸುತ್ತದೆ ಮತ್ತು ಈ ಸಮಯದಲ್ಲಿ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಸಿದ್ಧವಾಗಿದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.
4
+ ಮಧ್ಯ ಜಪಾನ್‍ನ ನೋಟೋ ಪೆನಿನ್ಸುಲಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ಸಂಭವಿಸಿದ 7.5 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ 64 ಜನರು ಸಾವನ್ನಪ್ಪಿದ್ದಾರೆ ಎಂದು ಕ್ಯೋಡೋ ನ್ಯೂಸ್ ವರದಿ ಮಾಡಿತ್ತು. ಕಲ್ಲುಮಣ್ಣುಗಳು ಮತ್ತು ಕತ್ತರಿಸಿದ ರಸ್ತೆಗಳು ಭೂಕಂಪ ಪೀಡಿತ ಪ್ರದೇಶಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಇನ್ನೂ ತಡೆಯುತ್ತವೆ.
5
+ ರಾಜಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ಟಿಕೆಟ್ ಪಡೆಯೋದು ಹೇಗೆ..?
6
+ ಇಶಿಕಾವಾ ಪ್ರಾಂತ್ಯದ ವಾಜಿಮಾ ನಗರದಲ್ಲಿ ಭೂಕಂಪವು ರಚನಾತ್ಮಕ ಹಾನಿ ಮತ್ತು ಬೆಂಕಿಯನ್ನು ಉಂಟುಮಾಡಿದೆ. ಆದಾಗ್ಯೂ, ಪ್ರಬಲ ಭೂಕಂಪದಿಂದ ಉಂಟಾದ ದುರಂತದ ಪೂರ್ಣ ಪ್ರಮಾಣದ ಅನಾಹುತಗಳು ತಿಳಿದಿಲ್ಲ.
7
+ ಜಪಾನಿನ ಜನಪ್ರಿಯ ಪ್ರವಾಸಿ ತಾಣವಾದ ಅಸೈಚಿ ಸ್ಟ್ರೀಟ್‍ನ ಸುತ್ತಲೂ ಅಂಗಡಿಗಳು ಮತ್ತು ಮನೆಗಳು ಸೇರಿದಂತೆ ಒಟ್ಟು 200 ಕಟ್ಟಡಗಳು ಸುಟ್ಟುಹೋಗಿವೆ ಎಂದು ವರದಿಯಾಗಿದೆ. ಇಶಿಕಾವಾ ಪ್ರಾಂತ್ಯದ ನೋಟೋ ಪೆನಿನ್ಸುಲಾದಲ್ಲಿ ಸಂಜೆ 4.10 ರ ಸುಮಾರಿಗೆ (ಸ್ಥಳೀಯ ಕಾಲಮಾನ) 10 ಕಿಲೋಮೀಟರ್ (6 ಮೈಲುಗಳು) ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ ಜಿಯೋಲಾಜಿಕಲ್ ಸರ್ವೆ ವರದಿ ಮಾಡಿದೆ.
eesanje/url_47_196_4.txt ADDED
@@ -0,0 +1,8 @@
 
 
 
 
 
 
 
 
 
1
+ ಇವಿಎಂ, ವಿವಿಪ್ಯಾಟ್‍ಗಳ ಕುರಿತ ಆರೋಪಗಳನ್ನು ತಳ್ಳಿಹಾಕಿದ ಚುನಾವಣಾ ಆಯೋಗ
2
+ ನವದೆಹಲಿ,ಜ.6- ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಮತ್ತು ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ಕುರಿತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾಡಿರುವ ಆರೋಪಗಳನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ನಿರಾಕರಿಸಿದೆ.
3
+ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಸಮಸ್ಯೆಯನ್ನು ಚರ್ಚಿಸಲು ಇಂಡಿಯಾ ಒಕ್ಕೂಟದ ನಾಯಕರ ನಿಯೋಗವನ್ನು ಭೇಟಿ ಮಾಡಲು ಅಪಾಯಿಂಟ್‍ಮೆಂಟ್ ಕೋರಿ ಚುನಾವಣಾ ಆಯೋಗಕ್ಕೆ ಜೈರಾಮ್ ರಮೇಶ್ ಪತ್ರ ಬರೆದ ನಂತರ ಆಯೋಗದಿಂದ ಈ ಉತ್ತರ ಬಂದಿದೆ.
4
+ ಕಾಂಗ್ರೆಸ್ ನಾಯಕರಿಗೆ ಪ್ರತಿಕ್ರಿಯಿಸಿದ ಆಯುಕ್ತರು, ಇವಿಎಂನಲ್ಲಿನ ಸಾರ್ವಜನಿಕ ಡೊಮೇನ್‍ನಲ್ಲಿ ಇತ್ತೀಚಿನ ನವೀಕರಿಸಿದ 85 ಪ್ರಶ್ನೆಗಳು ಸೇರಿದಂತೆ ಇವಿಎಂಗಳ ಬಳಕೆಯ ಎಲ್ಲಾ ಸಮಂಜಸವಾದ ಮತ್ತು ಕಾನೂನುಬದ್ಧ ಅಂಶಗಳಿಗೆ ಸಮರ್ಪಕವಾಗಿ ಮತ್ತು ಸಮಗ್ರವಾಗಿ ಉತ್ತರಿಸಲಾಗಿದೆ ಎಂದು ಪ್ರತಿಪಾದಿಸಿದ್ದಾರೆ.
5
+ ರಾಜಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ಟಿಕೆಟ್ ಪಡೆಯೋದು ಹೇಗೆ..?
6
+ ವಿವಿಪಿಎಟಿ ಮತ್ತು ಪೇಪರ್ ಸ್ಲಿಪ್‍ಗಳ ನಿರ್ವಹಣೆಯನ್ನು ನಿಯಂತ್ರಿಸುವ ಚುನಾವಣಾ ನಿಯಮಗಳ 1961 ರ ನಿಯಮ 49ಎ ಮತ್ತು 49ಎಂ ಅನ್ನು ಆಗಸ್ಟ್ 14, 2013 ರಂದು ಐಎನ್‍ಸಿ ಪರಿಚಯಿಸಿತು ಎಂದು ಇಸಿಐ ಹೇಳಿದೆ.
7
+ ಇಂಡಿಯಾ ಒಕ್ಕೂಟದ ಸಭೆಯಲ್ಲಿ ವಿವಿಪ್ಯಾಟ್ ಹಾಗೂ ಇವಿಎಂಗಳ ಬಳಕೆ ಬೇಡ ಎಂದು ನಿರ್ಣಯ ಕೈಗೊಳ್ಳಲಾಗಿತ್ತು. ಮತ್ತು ಈ ಕುರಿತಂತೆ ಚುನಾವಣಾ ಆಯೋಗದೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಲಾಗಿತ್ತು.
8
+ ಹೀಗಾಗಿ ಜೈರಾಮ್ ರಮೇಶ್ ಅವರು ಇಸಿಐಗೆ ಪತ್ರ ಬರೆದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿರುವ ಇವಿಎಂ ಹಾಗೂ ವಿವಿಪ್ಯಾಟ್‍ಗಳ ಬಗ್ಗೆ ಸಂಶಯ ಬಗೆಹರಿಸಿಕೊಳ್ಳುವ ಬಗ್ಗೆ ಚರ್ಚಿಸಲು ಮನವಿ ಮಾಡಿಕೊಳ್ಳಲಾಗಿತ್ತು. ಡಿಸೆಂಬರ್ 19, 2023 ರಂದು ನಡೆದ ಭಾರತೀಯ ಪಕ್ಷಗಳ ನಾಯಕರ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯದ ಆಧಾರದ ಮೇಲೆ ವಿವಿಪಿಎಟಿಗಳ ಬಳಕೆಯ ಕುರಿತು ಚರ್ಚಿಸಲು ಮತ್ತು ಸಲಹೆಗಳನ್ನು ನೀಡಲು ನಿಯೋಗವು ಡಿಸೆಂಬರ್ 20, 2023 ರಂದು ಮತ್ತೊಮ್ಮೆ ಅಪಾಯಿಂಟ್ಮೆಂಟ್ ಕೇಳಿದೆ ಎಂದು ಪತ್ರದಲ್ಲಿ ಸೇರಿಸಲಾಗಿದೆ.
eesanje/url_47_196_5.txt ADDED
@@ -0,0 +1,6 @@
 
 
 
 
 
 
 
1
+ ಪೊಲೀಸ್ ತಂಡದ ಮೇಲೆ ಗುಂಪು ದಾಳಿ, ಎಸ್‍ಐ ಸ್ಥಿತಿ ಗಂಭೀರ
2
+ ಸುರೇಂದ್ರನಗರ, ಜ.6- ಬಂಗಾಳದಲ್ಲಿ ಇಡಿ ಅಧಿಕಾರಿಗಳ ಮೇಲೆ ನಡೆದ ದಾಳಿ ಮಾದರಿಯಲ್ಲೇ ಗುಜರಾತಿನ ಸುರೇಂದ್ರನಗರ ಜಿಲ್ಲೆಯ ಜಿಂಜುವಾಡ ಗ್ರಾಮದಲ್ಲಿ ಪೊಲೀಸ್ ತಂಡದ ಮೇಲೆ ಗುಂಪೊಂದು ಹರಿತವಾದ ಆಯುಧಗಳು ಮತ್ತು ದೊಣ್ಣೆಗಳಿಂದ ಹಲ್ಲೇ ನಡೆಸಿರುವ ಘಟನೆ ವರದಿಯಾಗಿದೆ.
3
+ ಸಬ್ ಇನ್ಸ್‍ಪೆಕ್ಟರ್ ಕೆಸಿ ದಂಗರ್ ಮತ್ತು ಇಬ್ಬರು ಕಾನ್‍ಸ್ಟೆಬಲ್‍ಗಳು ಖಾಸಗಿ ಕಾರಿನಲ್ಲಿ ಜಲಸಿಂಹ್ ಝಾಲಾ ಎಂಬಾತನೊಂದಿಗೆ ಖಾಸಗಿ ಕಾರಿನಲ್ಲಿ ಜಿಂಜುವಾಡಾ ಪೊಲೀಸ್ ಠಾಣೆಗೆ ಹಿಂತಿರುಗುತ್ತಿದ್ದಾಗ ಈ ದಾಳಿ ನಡೆಸಲಾಗಿದೆ. ದಾಳಿ ವೇಳೆ ಪರಾರಿಯಾಗಿದ್ದ ಆರೋಪಿಯನ್ನು ಮತ್ತೆ ಬಂಧಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಜೆಡಿ ಪುರೋಹಿತ್ ತಿಳಿಸಿದ್ದಾರೆ.
4
+ ನೈಸ್ ಯೋಜನೆಗೆ ಸ್ವಾದೀನಪಡಿಸಿಕೊಂಡ ಹೆಚ್ಚುವರಿ ಜಮೀನನ್ನು ರೈತರಿಗೆ ಹಿಂದಿರುಗಿಸಿ : ದೇವೇಗೌಡರು
5
+ ಗುಂಪು ದಾಳಿಯಲ್ಲಿ ದಂಗರ್ ಗಂಭೀರ ಗಾಯಗೊಂಡು ಅಹಮದಾಬಾದ್‍ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಮತ್ತು ಇಬ್ಬರು ಕಾನ್‍ಸ್ಟೆಬಲ್‍ಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅವರು ಹೇಳಿದರು.ಜಿಂಜುವಡಾ ನಿವಾಸಿ ಝಲಾ ಒಬ್ಬ ಭೀಕರ ಅಪರಾ ಮತ್ತು ಗಲಭೆ, ಲೂಟಿ ಮತ್ತು ಹಲ್ಲೇಯಂತಹ ವಿವಿಧ ಅಪರಾಧಗಳಿಗಾಗಿ ಈ ಹಿಂದೆ ಬಂಧಿಸಲ್ಪಟ್ಟಿದ್ದ . ಪಟಾನ್ ಜಿಲ್ಲೇಯಲ್ಲಿ ದಾಖಲಾದ ಕಳ್ಳತನದ ಪ್ರಕರಣದಲ್ಲಿ ಬೇಕಾಗಿದ್ದ ಈತನನ್ನು ಪಟಾನ್ ಪೊಲೀಸರು ಅವನನ್ನು ಹಿಡಿಯಲು ಸಾಧ್ಯವಾಗದ ಕಾರಣ, ಅವರು ಸಹಾಯಕ್ಕಾಗಿ ಜಿಂಜುವಾಡ ಪೊಲೀಸರನ್ನು ವಿನಂತಿಸಿದರು ಎಂದು ಉಪ ಎಸ್ಪಿ ಹೇಳಿದರು.
6
+ ಕ್ರಿಕೆಟ್ ಆಡುತ್ತಿದ್ದಾಗ ಝಾಲಾ ಅವರನ್ನು ಸುಳಿವಿನ ಮೇರೆಗೆ ಬಂಧಿಸಲಾಯಿತು ಆದರೆ ಅವರ ಸಹಚರರೊಬ್ಬರು ಅವರನ್ನು ಬಿಡುಗಡೆ ಮಾಡಲು ಗುಂಪನ್ನು ಒಟ್ಟುಗೂಡಿಸಿದರು ಎಂದು ಪುರೋಹಿತ್ ಹೇಳಿದರು. ಪಿಎಸ್‍ಐ ಮತ್ತು ಅವರ ತಂಡ ಝಾಲಾ ಸಮೇತ ಕಾರಿನಲ್ಲಿ ಜಿಂಜುವಾಡ ಗ್ರಾಮದ ಪ್ರವೇಶ ದ್ವಾರವನ್ನು ತಲುಪಿದಾಗ ಗುಂಪು ಹರಿತವಾದ ಆಯುಧಗಳು ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿದೆ.
eesanje/url_47_196_6.txt ADDED
@@ -0,0 +1,6 @@
 
 
 
 
 
 
 
1
+ 2 ಕೋಟಿಗೆ ದಾವೂದ್ ನಿವೇಶನ ಖರೀದಿಸಿದ ವಕೀಲ
2
+ ಮುಂಬೈ,ಜ.6- ಮಹಾರಾಷ್ಟ್ರದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಒಡೆತನದ ನಿವೇಶನವನ್ನು ನಿನ್ನೆ 2 ಕೋಟಿಗೆ ಖರೀದಿಸಿರುವ ವಕೀಲರೊಬ್ಬರು ಅಲ್ಲಿ ಸನಾತನ ಶಾಲೆ ನಿರ್ಮಿಸುವ ಉದ್ದೇಶ ಹೊಂದಿರುವುದಾಗಿ ಹೇಳಿದ್ದಾರೆ. ಮಾಜಿ ಶಿವಸೇನಾ ನಾಯಕ ಅಜಯ್ ಶ್ರೀವಾಸ್ತವ ಅವರು ಪ್ಲಾಟ್‍ಗಾಗಿ ಇಷ್ಟು ದೊಡ್ಡ ಮೊತ್ತವನ್ನು ಪಾವತಿಸಿದ್ದಾರೆ ಏಕೆಂದರೆ ಸರ್ವೆ ಸಂಖ್ಯೆ ಮತ್ತು ಮೊತ್ತವು ಅವರ ಪರವಾಗಿ ಕೆಲಸ ಮಾಡುವ ಸಂಖ್ಯಾಶಾಸ್ತ್ರದ ಅಂಕಿ ಅಂಶವನ್ನು ಹೊಂದಿದೆಯಂತೆ.
3
+ ನಾನು ಸನಾತನ ಹಿಂದೂ ಮತ್ತು ನಾವು ನಮ್ಮ ಪಂಡಿತ್‍ಜೀ ಅವರನ್ನು ಅನುಸರಿಸುತ್ತೇವೆ. ಸರ್ವೆ ನಂಬರ್ (ಪ್ಲಾಟ್‍ನ) ಮತ್ತು ಮೊತ್ತವು ಸಂಖ್ಯಾಶಾಸ್ತ್ರದ ಪ್ರಕಾರ ನನ್ನ ಪರವಾಗಿ ಹೋಗುವ ಅಂಕಿ ಅಂಶವನ್ನು ಹೊಂದಿದೆ. ಅದನ್ನು ಪರಿವರ್ತಿಸಿದ ನಂತರ ನಾನು ಈ ಪ್ಲಾಟ್‍ನಲ್ಲಿ ಸನಾತನ ಶಾಲೆಯನ್ನು ಪ್ರಾರಂಭಿಸುತ್ತೇನೆ ಎಂದು ಹೇಳಿರುವ ವಾಸ್ತವ ಅವರು ಈ ಹಿಂದೆ ಅದೇ ಗ್ರಾಮದಲ್ಲಿ ಅವರ ಬಾಲ್ಯದ ಮನೆ ಸೇರಿದಂತೆ ಭೂಗತ ಪಾತಕಿಯ ಮೂರು ಆಸ್ತಿಗಳನ್ನು ಖರೀದಿಸಿದ್ದರು.
4
+ ಸಂಸದ ಪ್ರತಾಪ್ ಸಿಂಹ ಸೋದರನ ಪ್ರಕರಣಕ್ಕೆ ಬಿಗ್‍ಟ್ವಿಸ್ಟ್ ಕೊಟ್ಟ ಎಚ್‍ಡಿಕೆ
5
+ ಮಾರ್ಚ್ 2001 ರಲ್ಲಿ ನಡೆದ ಹರಾಜಿನಲ್ಲಿ ಶ್ರೀವಾಸ್ತವ ಮಾತ್ರ ಬಿಡ್‍ದಾರರಾಗಿದ್ದರು, ವಕೀಲರು ಮುಂಬೈನ ನಾಗ್ಪಾಡಾದಲ್ಲಿ ಭಯೋತ್ಪಾದಕನ ಒಡೆತನದ ಎರಡು ಅಂಗಡಿಗಳನ್ನು ಖರೀದಿಸಿದ್ದರು. 2020 ರಲ್ಲಿ ವಕೀಲರು ಭಯೋತ್ಪಾದಕ ಜನಿಸಿದ ಮುಂಬಾಕೆ ಗ್ರಾಮದಲ್ಲಿ ದಾವೂದ್ ಅವರ ಬಾಲ್ಯದ ಮನೆಯನ್ನು ಖರೀದಿಸಿದರು. ದಾಖಲೆಗಳಲ್ಲಿ ಕೆಲವು ವ್ಯತ್ಯಾಸಗಳಿಂದಾಗಿ ಅವರು ಇನ್ನೂ ಬಂಗಲೆಯ ಪತ್ರವನ್ನು ಪಡೆದಿಲ್ಲ. ಈಗ ಆಗಿರುವ ತಪ್ಪುಗಳನ್ನು ಸರಿಪಡಿಸಲಾಗಿದ್ದು, ಶೀಘ್ರವೇ ದಾಖಲೆ ಸಿಗುವ ಭರವಸೆ ಹೊಂದಿದ್ದಾರೆ.
6
+ ನಾನು 2020 ರಲ್ಲಿ ದಾವೂದ್ ಇಬ್ರಾಹಿಂನ ಬಂಗಲೆಗಾಗಿ ಬಿಡ್ ಮಾಡಿದ್ದೇನೆ. ಸನಾತನ ಧರ್ಮ ಪಾಠಶಾಲಾ ಟ್ರಸ್ಟ್ ಅನ್ನು ಸ್ಥಾಪಿಸಲಾಗಿದೆ ಮತ್ತು ಅದನ್ನು ನೋಂದಾಯಿಸಿದ ನಂತರ ನಾನು ಅಲ್ಲಿಯೂ ಸನಾತನ ಶಾಲೆಯನ್ನು ಪ್ರಾರಂಭಿಸುತ್ತೇನೆ ಎಂದು ಅವರು ಹೇಳಿದರು. ದಾವೂದ್ ಇಬ್ರಾಹಿಂ ಒಡೆತನದ ನಾಲ್ಕು ಆಸ್ತಿಗಳ ಹರಾಜು ಪ್ರಕ್ರಿಯೆ ನಿನ್ನೆ ಮುಕ್ತಾಯವಾಗಿದೆ.
eesanje/url_47_196_7.txt ADDED
@@ -0,0 +1,8 @@
 
 
 
 
 
 
 
 
 
1
+ ರಾಜಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ಟಿಕೆಟ್ ಪಡೆಯೋದು ಹೇಗೆ..?
2
+ ನವದೆಹಲಿ,ಜ.6- ನೀವು ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಬೇಕೆ? ಟಿಕೆಟ್ ಬುಕ್ ಮಾಡೋದು ಎಂದು ನಿಮಗೆ ತಿಳಿದಿಲ್ಲವೇ? ಹಾಗಾದರೆ ಇಲ್ಲಿದೆ ನೋಡಿ ಗಣರಾಜ್ಯೋತ್ಸವದ ಪ್ರವೇಶ ಪತ್ರ ಪಡೆಯೋದು ಹೇಗೆ ಅನ್ನೋದು. ಮೊದಲು ನೀವು ಆಮಂತ್ರಣ ನಿರ್ವಹಣಾ ವ್ಯವಸ್ಥೆ (ಐಎಂಎಸ್ ) ಅಥವಾ ರಕ್ಷಣಾ ಸಚಿವಾಲಯದ ಆಮಂತ್ರನ್ ಆನ್‍ಲೈನ್ ಪೋರ್ಟಲ್‍ಗೆ ಭೇಟಿ ನೀಡಿ. ಅದರಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ತದನಂತರ ಅದಕ್ಕೆ ಕಳುಹಿಸಿದ ಒಟಿಪಿ ಒದಗಿಸಿ. ನಿಮ್ಮ ಹೆಸರು, ಹುಟ್ಟಿದ ದಿನಾಂಕ, ವಿಳಾಸ ಮತ್ತು ಕ್ಯಾಪ್ಚಾ ಕೋಡ್‍ನಂತಹ ಇತರ ವಿವರಗಳನ್ನು ಭರ್ತಿ ಮಾಡಿ ಮತ್ತು ನೋಂದಾಯಿಸಿ.
3
+ ನಾಲ್ಕನೆ ಹಂತದಲ್ಲಿ ಈವೆಂಟ್‍ಗಳ ಪಟ್ಟಿಯಿಂದ ಗಣರಾಜ್ಯೋತ್ಸವ ಪರೇಡ್ ಆಯ್ಕೆಮಾಡಿ. ನಂತರ ಐಡಿ ಪ್ರಕಾರವನ್ನು ಆಯ್ಕೆಮಾಡಿ ಮತ್ತು ಮಾನ್ಯವಾದ ಗುರುತಿನ ಪುರಾವೆಯನ್ನು ಅಪ್‍ಲೋಡ್ ಮಾಡಿ. ನಂತರ ಟಿಕೆಟ್‍ಗಾಗಿ ಆನ್‍ಲೈನ್ ಪಾವತಿ ಮಾಡಿ ನಿಮ್ಮ ಟಿಕೆಟ್ ಪಡೆದುಕೊಳ್ಳಬಹುದಾಗಿದೆ.
4
+ ಈ ಬಾರಿಯ 75 ನೇ ಗಣರಾಜ್ಯೋತ್ಸವವನ್ನು ಜ. 26 ರಂದು ರಾಷ್ಟ್ರರಾಜಧಾನಿಯ ರಾಜಪಥದಲ್ಲಿ ಬೃಹತ್ ಮತ್ತು ಪ್ರಭಾವಶಾಲಿ ಮೆರವಣಿಗೆಯೊಂದಿಗೆ ಆಚರಿಸಲಾಗುತ್ತಿದೆ. ಮೆರವಣಿಗೆಯು ವಿಜಯ್ ಚೌಕ್‍ನಿಂದ ಬೆಳಿಗ್ಗೆ 9.30 ಕ್ಕೆ ಪ್ರಾರಂಭವಾಗಿ ಐದು ಕಿಲೋಮೀಟರ್‍ಗಳಷ್ಟು ದೂರ ಸಾಗಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕೊನೆಗೊಳ್ಳುತ್ತದೆ. 1950 ರಲ್ಲಿ ಭಾರತೀಯ ಸಂವಿಧಾನದ ಅಂಗೀಕಾರವನ್ನು ಗುರುತಿಸುವ ಈ ಘಟನೆಯು ಮಹತ್ವದ್ದಾಗಿದೆ.
5
+ ಸಂಸದ ಪ್ರತಾಪ್ ಸಿಂಹ ಸೋದರನ ಪ್ರಕರಣಕ್ಕೆ ಬಿಗ್‍ಟ್ವಿಸ್ಟ್ ಕೊಟ್ಟ ಎಚ್‍ಡಿಕೆ
6
+ ಮೆರವಣಿಗೆಯು ದೇಶದ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸುವುದಲ್ಲದೆ ಅದರ ಶ್ರೀಮಂತ ಸಂಸ್ಕøತಿಯ ಪ್ರತಿಕವಾಗಿರಲಿದೆ. ಅಚ್ಚುಕಟ್ಟಾಗಿ ಸಮವಸ್ತ್ರದಲ್ಲಿರುವ ಸೈನಿಕರು ಒಟ್ಟಿಗೆ ಸಾಗುತ್ತಾರೆ ಮತ್ತು ಶಸ್ತ್ರಸಜ್ಜಿತ ವಾಹನಗಳು ಮತ್ತು ವೈಮಾನಿಕ ಪ್ರದರ್ಶನಗಳು ಇರಲಿವೆ. ಮಿಲಿಟರಿ ಅಂಶವನ್ನು ಮೀರಿ, ಮೆರವಣಿಗೆಯು ವಿವಿಧ ರಾಜ್ಯಗಳ ವರ್ಣರಂಜಿತ ಟ್ಯಾಬ್ಲೋಗಳು ಗಮನ ಸೆಳೆಯಲಿವೆ. ಉತ್ಸಾಹಭರಿತ ನೃತ್ಯ ಪ್ರದರ್ಶನಗಳು, ಜಾನಪದ ಹಾಡುಗಳು ಮತ್ತು ಭಾರತದ ವೈವಿಧ್ಯಮಯ ಪರಂಪರೆಯ ಆಚರಣೆ ಪರೇಡ್‍ನಲ್ಲಿ ವಿಜೃಂಭಿಸಲಿದೆ.
7
+ ಪರೇಡ್ ವೀಕ್ಷಿಸಲು ನಾಡಿನಾದ್ಯಂತ ಜನರು ಸೇರುತ್ತಾರೆ, ಧ್ವಜಗಳನ್ನು ಬೀಸುತ್ತಾರೆ ಮತ್ತು ತಮ್ಮ ದೇಶಪ್ರೇಮವನ್ನು ವ್ಯಕ್ತಪಡಿಸುತ್ತಾರೆ. ಇದು ಪ್ರಾಚೀನ ಕಾಲದಿಂದ ಆಧುನಿಕ ಪ್ರಜಾಪ್ರಭುತ್ವವಾಗುವವರೆಗೆ ಭಾರತದ ಪ್ರಯಾಣ ಮತ್ತು ಉಜ್ವಲ ಭವಿಷ್ಯಕ್ಕಾಗಿ ಅದರ ಬದ್ಧತೆಯನ್ನು ಪ್ರತಿಯೊಬ್ಬರಿಗೂ ನೆನಪಿಸುವ ಗುರಿಯನ್ನು ಹೊಂದಿದೆ.
8
+ ರಾಷ್ಟ್ರಗೀತೆ ನುಡಿಸುವಿಕೆಯು ರಾಷ್ಟ್ರದಾದ್ಯಂತ ಹೆಮ್ಮೆ ಮತ್ತು ಏಕತೆಯ ಭಾವನೆಯನ್ನು ತು��ಬುತ್ತದೆ. ಮುಂಬರುವ 75 ನೇ ಗಣರಾಜ್ಯೋತ್ಸವದ ಪರೇಡ್ ಶಾಶ್ವತವಾದ ಸ್ಮರಣೆಯಾಗಿದೆ ಎಂದು ನಿರೀಕ್ಷಿಸಲಾಗಿದೆ, ಪ್ರತಿಯೊಬ್ಬರಿಗೂ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತು ಬಲಿಷ್ಠ ಭಾರತವನ್ನು ನಿರ್ಮಿಸಲು ಕೊಡುಗೆ ನೀಡಲು ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ. ಅನೇಕ ವ್ಯಕ್ತಿಗಳು ಈ ಅದ್ಭುತ ಘಟನೆಗೆ ಹಾಜರಾಗಲು ಮತ್ತು ವೀಕ್ಷಿಸಲು ಉತ್ಸುಕರಾಗಿರುತ್ತಾರೆ.
eesanje/url_47_196_8.txt ADDED
@@ -0,0 +1,9 @@
 
 
 
 
 
 
 
 
 
 
1
+ ರಾಮಮಂದಿರ ಉದ್ಘಾಟನೆಯಂದು ಮೋದಿ ವಿಶೇಷ ವ್ರತ
2
+ ಅಯೋಧ್ಯೆ,ಜ.5- ಇದೇ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುತ್ತಿದ್ದು, ಈ ಮಹತ್ವದ ದಿನ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ವ್ರತ ಕೈಗೊಂಡಿದ್ದಾರೆ. ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಂದು ಜೊತೆಗೆ ವಿಶೇಷ ಹೋಮ-ಹವನ ಜರುಗಲಿದೆ. ಉದ್ಘಾಟನೆಯ ದಿನ ಪ್ರಧಾನಿ ಮೋದಿ ಅವರು ಉಪವಾಸ ಕೈಗೊಳ್ಳಲಿದ್ದು, ಅದೊಂದು ದಿನ ಏನೂ ತಿನ್ನುವುದು ಬೇಡ ಎಂದು ಮೋದಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.
3
+ ಮೋದಿಯವರು ಅಪ್ಪಟ ದೈವ ಭಕ್ತರು. ಅವರು ಉಪವಾಸ ಮಾಡುವುದು ಇದೇ ಮೊದಲೇನಲ್ಲ. ಪ್ರತಿ ವರ್ಷ ನವರಾತ್ರಿಯಂದು ಮೋದಿ ತಪ್ಪದೇ ಉಪವಾಸ ಮಾಡುತ್ತಾರೆ. ಚೈತ್ರ ನವರಾತ್ರಿಯ ಶುಭ ಸಂದರ್ಭದಲ್ಲಿ 9 ದಿನಗಳ ಉಪವಾಸ ಮಾಡುತ್ತಿದ್ದರು.
4
+ ಒಂಬತ್ತು ದಿನಗಳ ಉಪವಾಸದ ಸಮಯದಲ್ಲಿ ಪ್ರಧಾನಿ ಮೋದಿ ಅವರು ಸಂಜೆ ವೇಳೆ ಒಂದು ಹಣ್ಣನ್ನು ನಿಂಬೆ ರಸದೊಂದಿಗೆ ಸೇವಿಸುತ್ತಿದ್ದರು. ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳ ಸೇವನೆಯನ್ನು ಕೈಬಿಟ್ಟಿದ್ದರು. ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದ ವಿವಿಧಾನಗಳು ಜನವರಿ 16ರಿಂದ ಪ್ರಾರಂಭವಾಗಿದೆ. ಜನವರಿ 22ರಂದು ದೇವಾಲಯದ ಉದ್ಘಾಟನೆಯು ಪ್ರಧಾನಿ ಮೋದಿ ಮೊದಲು ಪ್ರತಿಜ್ಞೆ ಸ್ವೀಕರಿಸಿ ದೇಶಕ್ಕೆ ಸಮರ್ಪಿಸುವುದರೊಂದಿಗೆ ಪ್ರಾರಂಭವಾಗಲಿದೆ. ನಂತರ ಅವರು ರಾಮಲಲ್ಲಾರ ಷೋಡಶೋಪಚಾರ ಪೂಜೆ ಮಾಡುತ್ತಾರೆ.
5
+ 15 ಮಂದಿ ಭಾರತೀಯರಿದ್ದ ಹಡಗು ಸೊಮಾಲಿಯಾ ಕರಾವಳಿಯಲ್ಲಿ ಅಪಹರಣ
6
+ ರಾಮಮಂದಿರ ಉದ್ಘಾಟನೆಗೂ ಮೊದಲು ಅಂದರೆ ಜ.16ರಂದು ಮೋದಿಯವರ ಸಂಕಲ್ಪ ಅಕ್ಷಿತ ಅಯೋಧ್ಯೆಗೆ ಕೊಂಡೊಯ್ಯಲಾಗುತ್ತದೆ. ಅಕ್ಷತೆ ಬಂದ 7 ದಿನಗಳ ಬಳಿಕ ಆಚರಣೆ ಪ್ರಾರಂಭವಾಗುತ್ತದೆ. ಇದೇ ವೇಳೆ ನಾಲ್ಕು ವೇದಗಳ ಎಲ್ಲ ಶಾಖೆಗಳ ಭಕ್ತಿ, ಯಾಗ ನಡೆಯುತ್ತದೆ.
7
+ ರಾಮಮಂದಿರ ಉದ್ಘಾಟನೆಯ ಮುನ್ನಾ ದಿನ ಜ.21ರಂದು ಮೋದಿ ಅಯೋಧ್ಯೆಗೆ ತೆರಳಲಿದ್ದಾರೆ. ಮರುದಿನ ಜ.22ರಂದು ಬೆಳಗ್ಗೆ ಸರಯು ನದಿಯಲ್ಲಿ ಪುಣ್ಯ ಸ್ನಾನ ಮಾಡಲಿದ್ದಾರೆ. ಸಂಪ್ರದಾಯದ ಪ್ರಕಾರ ಪ್ರಾಣ ಪ್ರತಿಷ್ಠೆಯ ದಿನದಂದು ಮೋದಿ ಉಪವಾಸ ಮಾಡುತ್ತಾರೆ ಎಂದು ಮೂಲಗಳು ತಿಳಿಸಿವೆ.
8
+ ಭಗವಾನ್ ಹನುಮಂತನು ಅಯೋಧ್ಯೆಯ ರಾಜನಾಗಿ ಕುಳಿತಿದ್ದಾನೆ ಎಂಬ ನಂಬಿಕೆ ಇದೆ. ಹನುಮನ ಅನುಮತಿಯಿಲ್ಲದೆ ಇಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಈ ನಂಬಿಕೆಯಿಂದಾಗಿ ಪ್ರಧಾನಿಯವರು ಮೊದಲು ಹನುಮಾನ್‍ಗರ್ಹಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಅನುಮತಿ ಪಡೆದು ನಂತರ ರಾಮ ಜನ್ಮಭೂಮಿಗೆ ತೆರಳಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪಿಸುತ್ತಾರೆ ಎನ್ನಲಾಗಿದೆ.
9
+ ವಾಲ್ಮೀಕಿ ರಾಮಾಯಣದಲ್ಲಿಯೂ ಸಹ ಶ್ರೀರಾಮನು ಸಾಕೇತ್ ಧಾಮಕ್ಕೆ ಹೋಗುವ ಮೊದಲು ಹನುಮಂತನಿಗೆ ಪಟ್ಟಾಭಿಷೇಕ ಮಾಡಿದನೆಂದು ಉಲ್ಲೇಖಿಸಲಾಗಿದೆ.
eesanje/url_47_196_9.txt ADDED
@@ -0,0 +1,7 @@
 
 
 
 
 
 
 
 
1
+ ಉತ್ತರ ಪ್ರದೇಶದ ಸರ್ಕಾರಿ ಬಸ್‍ಗಳಲ್ಲಿ ರಾಮ ಭಜನೆ
2
+ ಲಕ್ನೋ,ಜ.5- ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಜ.22ರ ವರೆಗೆ ಸರ್ಕಾರಿ ಬಸ್‍ಗಳಲ್ಲಿ ರಾಮ ಭಜನೆಗಳನ್ನು ಪ್ರಸಾರ ಮಾಡಲು ಸೂಚಿಸಲಾಗಿದೆ. ಉತ್ತರ ಪ್ರದೇಶದ ಸಾರಿಗೆ ಇಲಾಖೆಯು ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಯುಪಿಎಸ್‍ಆರ್ಟಿಸಿ) ಬಸ್‍ಗಳಲ್ಲಿ ಜನವರಿ 22ರವರೆಗೆ ರಾಮ ಭಜನೆ ಪ್ರಸಾರ ಮಾಡಲು ಸೂಚನೆ ನೀಡಿದೆ.
3
+ ಈ ಸಂಬಂಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆಯಲ್ಲಿನ ಮಹಾಮಸ್ತಕಾಭಿಷೇಕ ಸಮಾರಂಭದ ಬಗ್ಗೆ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ್ದು, ಜನವರಿ 14 ರಿಂದ ಅಯೋಧ್ಯೆಯ ದೇವಾಲಯಗಳಲ್ಲಿ ಭಜನೆ, ರಾಮಾಯಣ ಮತ್ತು ರಾಮಚರಿತಮಾನಗಳ ಪಠಣ ಮತ್ತು ಸುಂದರಕಾಂಡದಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ದೇಶನ ನೀಡಿದ್ದಾರೆ.
4
+ ಜನವರಿ 22ಕ್ಕಾಗಿ ಸಾರಿಗೆ ಇಲಾಖೆ ಸಿದ್ಧಪಡಿಸಿರುವ ಕ್ರಿಯಾ ಯೋಜನೆಯ ಪ್ರಕಾರ, ಎಲ್ಲಾ ಪ್ರಯಾಣಿಕ ವಾಹನಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಶುಚಿತ್ವ ಇರಬೇಕು. ಪ್ರಯಾಣಿಕರಲ್ಲಿ ಭಕ್ತಿ ಭಾವ ಮೂಡಿಸಲು ಬಸ್‍ಗಳಲ್ಲಿ ರಾಮ ಭಜನೆಗಳನ್ನು ಪ್ರಸಾರ ಮಾಡಬೇಕು.
5
+ ಅಮೃತ್‍ಸರದಲ್ಲಿ ಪತ್ತೆಯಾಯ್ತು ಡ್ರಗ್ಸ್ ದಂಧೆ
6
+ ಬಸ್ ಚಾಲಕರಿಂದ ಸುರಕ್ಷಿತ ಚಾಲನೆ, ಸಂಚಾರ ನಿಯಮಗಳ ಅನುಸರಣೆ, ಪ್ರಯಾಣಿಕರೊಂದಿಗೆ ಸರಿಯಾದ ನಡವಳಿಕೆ, ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸುವುದು, ಶುಚಿತ್ವ ಕಾಪಾಡುವುದು, ನಿಗದಿತ ದರಕ್ಕಿಂತ ಹೆಚ್ಚಿನ ಶುಲ್ಕ ವಿಧಿಸದೇ ಇರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.
7
+ ಲಕ್ನೋ ಮತ್ತು ಅಯೋಧ್ಯೆ, ಗೋರಖ್ಪುರ ಮತ್ತು ಅಯೋಧ್ಯೆ, ಸುಲ್ತಾನ್ಪುರ ಮತ್ತು ಅಯೋಧ್ಯೆ ನಡುವೆ ಪ್ರಯಾಣಿಸುವ ಪ್ರವಾಸಿಗರಿಗೆ ಸಹಾಯ ಮಾಡಲು ಸಾರಿಗೆ ಇಲಾಖೆಯು ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಿದೆ.
eesanje/url_47_197_1.txt ADDED
@@ -0,0 +1,8 @@
 
 
 
 
 
 
 
 
 
1
+ ನಾಳೆ ಸಂಜೆ ನಿಗದಿತ ಕಕ್ಷೆ ಸೇರಲಿದೆ ಆದಿತ್ಯ-ಎಲ್1 ನೌಕೆ
2
+ ನವದೆಹಲಿ,ಜ.5- ದೇಶದ ಮೊದಲ ಬಾಹ್ಯಾಕಾಶ-ಆಧಾರಿತ ಸೌರ ನೌಕೆ ಆದಿತ್ಯ-ಎಲ್ 1 ಉಪಗ್ರಹ ನಾಳೆ ಸಂಜೆ 4 ಗಂಟೆಗೆ ಸರಿಯಾಗಿ ತನ್ನ ಗಮ್ಯಸ್ಥಾನದ ಕಕ್ಷೆಯನ್ನು ತಲುಪಲಿದೆ. ಕಳೆದ ವರ್ಷ ಸೆಪ್ಟೆಂಬರ್ 2 ರಂದು ಪ್ರಾರಂಭವಾದ ಅದರ 126 ದಿನಗಳ ಪ್ರಯಾಣದಲ್ಲಿ, ಇದು ತನ್ನ ಕರ್ಮಭೂಮಿ ಅಥವಾ ಕ್ರಿಯೆಯ ಭೂಮಿ ಯನ್ನು ತಲುಪಲು ಸಕ್ರ್ಯೂಟ್ ಮಾರ್ಗದಲ್ಲಿ ಸಾಗಿದಾಗ ಸುಮಾರು 3.7 ಮಿಲಿಯನ್ ಕಿಲೋಮೀಟರ್‍ಗಳನ್ನು ಕ್ರಮಿಸಿದೆ.
3
+ ಆದಿತ್ಯ ಆರೋಗ್ಯವಾಗಿದೆ ಮತ್ತು ಸೂರ್ಯನ ಸಂಪೂರ್ಣ ಡಿಸ್ಕ್‍ನ ಸುಂದರವಾದ ಚಿತ್ರಗಳನ್ನು ಸೆರೆ ಹಿಡಿದು ವೈಜ್ಞಾನಿಕ ಫಲಿತಾಂಶಗಳನ್ನು ರವಾನಿಸಲು ಈಗಾಗಲೇ ಆರಂಭಿಸಿದೆ ಎಂದು ಇಸ್ರೋ ಹೇಳಿದೆ. ಆದಿತ್ಯನ ಮನೆಯು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಹಾಲೋ-ಆಧಿಕಾರದ ಕಕ್ಷೆಯಲ್ಲಿದೆ. ಭೂಮಿಗಿಂತ ಸೂರ್ಯನಿಗೆ ಹತ್ತಿರವಾಗಿದ್ದರೂ, ಕಕ್ಷೆಯು ಇನ್ನೂ ದೂರದಲ್ಲಿದೆ, ಏಕೆಂದರೆ ಸೂರ್ಯನು ನಮ್ಮಿಂದ ಸುಮಾರು 150 ಮಿಲಿಯನ್ ಕಿಲೋಮೀಟರ್ ದೂರದಲ್ಲಿದೆ.
4
+ ಲಾಗ್ರಾಂಜಿಯನ್ ಪಾಯಿಂಟ-1 ಎಂದು ಕರೆಯಲ್ಪಡುವ ಅದರ ಅಂತಿಮ ದೃಷ್ಟಿಕೋನದಿಂದ, 1,475 ಕಿಲೋಗ್ರಾಂಗಳಷ್ಟು ಆದಿತ್ಯ-ಎಲ1 ಉಪಗ್ರಹವು ನಮ್ಮ ಸೌರವ್ಯೂಹದ ನಕ್ಷತ್ರವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ವೈಜ್ಞಾನಿಕ ಪ್ರಯೋಗಗಳನ್ನು ನಡೆಸುತ್ತದೆ ಅದು ಒಂದು ನಿಗೂಢವಾಗಿ ಉಳಿದಿದೆ ಎಂದು ಇಸ್ರೋ ಹೇಳಿದೆ.
5
+ ಚೀನಾಕ್ಕಿಂತ ಭಾರತದ ಹೂಡಿಕೆ ಗಮನಾರ್ಹ : ವಿಶ್ವಸಂಸ್ಥೆ
6
+ ವೀಕ್ಷಣಾಲಯವು ಸೂರ್ಯನ ನಿರಂತರ ನೋಟವನ್ನು ಹೊಂದಿರುತ್ತದೆ ಮತ್ತು ಬಾಹ್ಯಾಕಾಶ ಹವಾಮಾನವನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ಇದು ಸೌರ ಚಂಡಮಾರುತಗಳ ಮುನ್ಸೂಚನೆ ಮತ್ತು ಎಚ್ಚರಿಕೆ ವೇದಿಕೆಯಂತೆ ಕಾರ್ಯನಿರ್ವಹಿಸುತ್ತದೆ ಎಂದು ಬೆಂಗಳೂರಿನ ಯು.ಆರ್.ರಾವ್ ಉಪಗ್ರಹ ಕೇಂದ್ರದ ಆದಿತ್ಯ-ಎಲ್ 1 ಉಪಗ್ರಹದ ಯೋಜನಾ ನಿರ್ದೇಶಕ ನಿಗರ್ ಶಾಜಿ ಹೇಳಿದ್ದಾರೆ. ಸೌರ ಚಂಡಮಾರುತವು ಸೂರ್ಯನ ಮೇಲೆ ದೊಡ್ಡ ಪ್ರಮಾಣದ ಕಾಂತೀಯ ಸೋಟವಾಗಿದೆ, ಇದು ಇಡೀ ಸೌರವ್ಯೂಹದ ಮೇಲೆ ಪರಿಣಾಮ ಬೀರುತ್ತದೆ.
7
+ ಆದಿತ್ಯ-ಎಲ್ 1 ಸೂರ್ಯನನ್ನು ನಿರಂತರವಾಗಿ ನೋಡುವುದರಿಂದ, ಇದು ಭೂಮಿಯ ಮೇಲೆ ಸನ್ನಿಹಿತವಾದ ಸೌರ ವಿದ್ಯುತ್ಕಾಂತೀಯ ಪರಿಣಾಮಗಳ ಬಗ್ಗೆ ನಮಗೆ ಎಚ್ಚರಿಕೆ ನೀಡುತ್ತದೆ ಮತ್ತು ನಮ್ಮ ಉಪಗ್ರಹಗಳು ಮತ್ತು ಇತರ ವಿದ್ಯುತ್ ವಿದ್ಯುತ್ ಮತ್ತು ಸಂವಹನ ಜಾಲಗಳನ್ನು ಅಡ್ಡಿಪಡಿಸದಂತೆ ರಕ್ಷಿಸುತ್ತದೆ.
8
+ ಇದು ಅವುಗಳನ್ನು ನಿರ್ವಹಿಸುವ ಮೂಲಕ ಸಾಮಾನ್ಯ ಕಾರ್ಯಾಚರಣೆಯನ್ನು ಮುಂದುವರಿಸಲು ಸಹಾಯ ಮಾಡುತ್ತದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ತಿಳಿಸಿದ್ದಾರೆ. ಭಾರತವು ಬಾಹ್ಯಾಕಾಶದಲ್ಲಿ 50,000 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಹೊಂದಿದೆ, 50 ಕ್ಕೂ ಹೆಚ್ಚು ಕಾರ್ಯಾಚರಣಾ ಉಪಗ್ರಹಗಳು ಸೂರ್ಯನ ಪರಿಣಾಮ��ಳಿಂದ ರಕ್ಷಿಸಬೇಕಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
eesanje/url_47_197_10.txt ADDED
@@ -0,0 +1,6 @@
 
 
 
 
 
 
 
1
+ ಇಡಿ ದಾಳಿ ವೇಳೆ 5ಕೋಟಿ ನಗದು, ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳು ಪತ್ತೆ
2
+ ಚಂಡೀಗಢ, ಜ 5 (ಪಿಟಿಐ) ಮಾಜಿ ಐಎನ್‍ಎಲ್‍ಡಿ ಶಾಸಕ ದಿಲ್‍ಬಾಗ್ ಸಿಂಗ್ ಮತ್ತು ಅವರ ಸಹಚರರ ವಿರುದ್ಧ ಜಾರಿ ನಿರ್ದೇಶನಾಲಯ ನಡೆಸಿದ ಶೋಧದ ವೇಳೆ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳು, ಸುಮಾರು 300 ಕಾಟ್ರಿಡ್ಜ್‍ಗಳು, 5 ಕೋಟಿ ರೂಪಾಯಿ ನಗದು ಮತ್ತು 100 ಕ್ಕೂ ಹೆಚ್ಚು ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
3
+ ಹರಿಯಾಣದ ಯಮುನಾನಗರ ಜಿಲ್ಲೆಯಲ್ಲಿ ನಡೆದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದ ಭಾಗವಾಗಿ ಕೇಂದ್ರೀಯ ಸಂಸ್ಥೆ ನಿನ್ನೆ ಮಾಜಿ ಶಾಸಕ ಮತ್ತು ಸೋನಿಪತ್‍ನ ಕಾಂಗ್ರೆಸ್ ಶಾಸಕ ಸುರೇಂದರ್ ಪನ್ವಾರ್ ವಿರುದ್ಧ ದಾಳಿ ನಡೆಸಿತ್ತು. ಸಿಂಗ್ ಅವರಿಗೆ ಸಂಬಂಧಿಸಿದ ನಿವೇಶನಗಳಿಂದ ಸುಮಾರು 5 ಕೋಟಿ ರೂಪಾಯಿ ನಗದು, ಅಕ್ರಮ ವಿದೇಶಿ ನಿರ್ಮಿತ ಆಯುಧಗಳು, ಸುಮಾರು 300 ಕಾಟ್ರ್ರಿಡ್ಜ್‍ಗಳು, 100 ಕ್ಕೂ ಹೆಚ್ಚು ಮದ್ಯದ ಬಾಟಲಿಗಳು, 4ರಿಂದ 5 ಕೆಜಿ ಚಿನ್ನ ಮತ್ತು ಭಾರತ ಮತ್ತು ವಿದೇಶಗಳಲ್ಲಿನ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಲವೆಡೆ ಶೋಧ ಕಾರ್ಯ ಮುಂದುವರಿದಿದೆ ಎಂದು ಮೂಲಗಳ ಉಲ್ಲೇಖಿಸಿವೆ.
4
+ ಲಕ್ಷ್ಮೀ ಹೆಬ್ಬಾಳ್ಕರ್​​ಗೆ ರಾಮ ಮಂದಿರ ಉದ್ಘಾಟನೆ ಆಮಂತ್ರಣ
5
+ ಯಮುನಾನಗರ, ಸೋನಿಪತ್, ಮೊಹಾಲಿ, ಫರಿದಾಬಾದ್, ಚಂಡೀಗಢ ಮತ್ತು ಕರ್ನಾಲ್‍ನಲ್ಲಿ ಇಬ್ಬರು ರಾಜಕಾರಣಿಗಳು ಮತ್ತು ಸಂಬಂಧಿತ ಘಟಕಗಳ ಸುಮಾರು 20 ಸ್ಥಳಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‍ಎ) ಯ ನಿಬಂಧನೆಗಳ ಅಡಿಯಲ್ಲಿ ಈ ದಾಳಿಗಳನ್ನು ನಡೆಸಲಾಗಿತ್ತು. ಸಿಂಗ್ ಅವರು ಯಮುನಾನಗರದ ಭಾರತೀಯ ರಾಷ್ಟ್ರೀಯ ಲೋಕದಳದ ಮಾಜಿ ಶಾಸಕರಾಗಿದ್ದಾರೆ.
6
+ ಲೀಸ್ ಅವಧಿ ಮತ್ತು ನ್ಯಾಯಾಲಯದ ಆದೇಶದ ನಂತರವೂ ಯಮುನಾನಗರ ಮತ್ತು ಸಮೀಪದ ಜಿಲ್ಲೆಗಳಲ್ಲಿ ಈ ಹಿಂದೆ ನಡೆದಿರುವ ಬಂಡೆಗಳು, ಜಲ್ಲಿಕಲ್ಲು ಮತ್ತು ಮರಳು ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಲು ಹರಿಯಾಣ ಪೊಲೀಸರು ದಾಖಲಿಸಿದ ಹಲವಾರು ಎಫ್‍ಐಆರ್‍ಗಳಿಂದ ಹಣ ವರ್ಗಾವಣೆ ಪ್ರಕರಣವು ಉದ್ಭವಿಸಿದೆ.
eesanje/url_47_197_11.txt ADDED
@@ -0,0 +1,6 @@
 
 
 
 
 
 
 
1
+ 2024 ರಲ್ಲಿ 4 ಗ್ರಹಣಗಳು: ಆದರೆ ಭಾರತದಲ್ಲಿ ಗೋಚರವಿಲ್ಲ
2
+ ಇಂದೋರ್, ಜ. 4- ಈ ವರ್ಷ 2024 ರಲ್ಲಿ ಒಂದು ಸಂಪೂರ್ಣ ಸೂರ್ಯಗ್ರಹಣ ಸೇರಿದಂತೆ ನಾಲ್ಕು ಗ್ರಹಣಗಳು ಸಂಭವಿಸಲಿವೆ, ಆದರೆ ಅವುಗಳಲ್ಲಿ ಯಾವುದೂ ಭಾರತದಿಂದ ಗೋಚರಿಸುವುದಿಲ್ಲ ಎಂದು ಮಧ್ಯ ಪ್ರದೇಶದ ಉಜ್ಜಯಿನಿ ನಗರದ ಜಿವಾಜಿ ವೀಕ್ಷಣಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
3
+ ಪ್ರಸ್ತುತ 2024 ರಲ್ಲಿ ಗ್ರಹಣಗಳ ಸರಣಿಯು ಮಾರ್ಚ್ 25 ರಂದು ಪೆನಂಬ್ರಾಲ್ ಚಂದ್ರಗ್ರಹಣದೊಂದಿಗೆ ಪ್ರಾರಂಭವಾಗುತ್ತದೆ ಎಂದು ವೀಕ್ಷಣಾಲಯದ ಅಧಿಕ್ಷಕ ಡಾ ರಾಜೇಂದ್ರಪ್ರಕಾಶ್ ಗುಪ್ತಾ ತಿಳಿಸಿದ್ದಾರೆ.ಸೂರ್ಯ, ಭೂಮಿ ಮತ್ತು ಚಂದ್ರ ಬಹುತೇಕ ಸರಳ ರೇಖೆಯಲ್ಲಿ ಒಟ್ಟುಗೂಡಿದಾಗ ಪೆನಂಬ್ರಾಲ್ ಚಂದ್ರ ಗ್ರಹಣ ಸಂಭವಿಸುತ್ತದೆ. ವರ್ಷದ ಈ ಮೊದಲ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ ಏಕೆಂದರೆ ಈ ಖಗೋಳ ಘಟನೆಯ ಸಮಯದಲ್ಲಿ ಅದು ದೇಶದಲ್ಲಿ ಹಗಲಿನ ಸಮಯವಾಗಿರುತ್ತದೆ ಎಂದು ಅವರು ಹೇಳಿದರು.
4
+ ಲಕ್ಷದ್ವೀಪದಲ್ಲಿ ಪ್ರಧಾನಿ ಮೋದಿ ಸ್ನೋರ್ಕೆಲಿಂಗ್: ಸಮುದ್ರ ತಟದಲ್ಲಿ ನಡಿಗೆ
5
+ ಏಪ್ರಿಲ್ 8 ಮತ್ತು 9 ರ ಮಧ್ಯರಾತ್ರಿಯಲ್ಲಿ ಸಂಪೂರ್ಣ ಸೂರ್ಯಗ್ರಹಣ ಸಂಭವಿಸುತ್ತದೆ ,ಸೆ.18ರ ಬೆಳಗ್ಗೆ ಸಂಭವಿಸಲಿರುವ ಭಾಗಶಃ ಚಂದ್ರಗ್ರಹಣ ಭಾರತದಲ್ಲಿಯೂ ಗೋಚರಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.ಅಕ್ಟೋಬರ್ 2 ಮತ್ತು 3 ರ ಮಧ್ಯರಾತ್ರಿಯಲ್ಲಿ ಸಂಭವಿಸುವ ವಾರ್ಷಿಕ ಸೂರ್ಯಗ್ರಹಣದ ದೃಷ್ಟಿಯಿಂದ ದೇಶದ ಖಗೋಳಶಾಸದ ಉತ್ಸಾಹಿಗಳು ಮತ್ತು ಆಕಾಶ ನೋಡುವವರು ವಂಚಿತರಾಗುತ್ತಾರೆ ಎಂದು ಅವರು ಹೇಳಿದರು.
6
+ ವಾರ್ಷಿಕ ಸೂರ್ಯಗ್ರಹಣವು 7 ನಿಮಿಷ ಮತ್ತು 21 ಸೆಕೆಂಡುಗಳ ಕಾಲ ಇರುತ್ತದೆ ಮತ್ತು ಅದರ ಉತ್ತುಂಗದಲ್ಲಿ, ಸೂರ್ಯನ ಶೇಕಡಾ 93 ರಷ್ಟು ಆವರಿಸುತ್ತದೆ, ಇದರಿಂದಾಗಿ ಅದು ಭೂಮಿಯಿಂದ ಹೊಳೆಯುವ ಕಂಕಣದಂತೆ ಗೋಚರಿಸುತ್ತದೆ ಎಂದು ಅವರು ಹೇಳಿದರು. ಕಳೆದ 2023 ರಲ್ಲಿ ಸೂರ್ಯಗ್ರಹಣ, ಚಂದ್ರಗ್ರಹಣ ಭಾಗಶಃ ಕಣಿಸಿತ್ತು.
eesanje/url_47_197_12.txt ADDED
@@ -0,0 +1,6 @@
 
 
 
 
 
 
 
1
+ ಲಕ್ಷದ್ವೀಪದಲ್ಲಿ ಪ್ರಧಾನಿ ಮೋದಿ ಸ್ನೋರ್ಕೆಲಿಂಗ್: ಸಮುದ್ರ ತಟದಲ್ಲಿ ನಡಿಗೆ
2
+ ಲಕ್ಷದ್ವೀಪ, ಜ.4- ಸಾಹಸಿಯನ್ನು ಸ್ವೀಕರಿಸಲು ಬಯಸುವವರಿಗೆ ಲಕ್ಷದ್ವೀಪವು ನಿಮ್ಮ ಪಟ್ಟಿಯಲ್ಲಿರಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ. ಲಕ್ಷದ್ವೀಪಕ್ಕೆ ಭೇಟಿ ನೀಡಿ ಆದ ಅನುಭವಗಳನ್ನು ಹಂಚಿಕೊಂಡಿರುವ ಅವರು, ನನ್ನ ವಾಸ್ತವ್ಯದ ಸಮಯದಲ್ಲಿ ನಾನು ಸ್ಪೀಡ್‍ಬೋಟ್‍ನಲ್ಲಿ ಪ್ರಯಾಣಿಸಿದ್ದು ಮತ್ತು ಸಮುದ್ರದಾಳದಲ್ಲಿ ಪ್ರಯಾಣಿಸಿದ್ದು ರೋಮಾಂಚನಕಾರಿಯಾಗಿತ್ತು. ಸಾಹಸಪ್ರಿಯರಿಗೆ ಇದು ಹೇಳಿ ಮಾಡಿಸಿದ ಪ್ರವಾಸಿ ತಾಣ ಎಂದು ಮೋದಿ ಮನದಾಳದ ಮಾತುಗಳನ್ನಾಡಿದ್ದಾರೆ.
3
+ ದೇಶದ ಅತ್ಯಂತ ಚಿಕ್ಕ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪಕ್ಕೆ ಪ್ರಧಾನಿ ಭೇಟಿ ನೀಡಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಈ ಸಂದರ್ಭದಲ್ಲಿ ಹಲವು ಸಾಹಸಮಯ ಕ್ರೀಡೆಗಳಲ್ಲೂ ಭಾಗಿಯಾಗಿ ತಮ್ಮ ಕ್ಯಾಮೆರಾದಲ್ಲಿ ಸಮುದ್ರದಾಳದಲ್ಲಿರುವ ಹವಳಗಳು, ಬಣ್ಣ ಬಣ್ಣದ ಮೀನುಗಳನ್ನು ಸೆರೆಹಿಡಿದು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
4
+ ಸಾಹಸ ಪ್ರಿಯರಾದರೆ ನೀವು ಖಂಡಿತ ಲಕ್ಷದ್ವೀಪಕ್ಕೆ ಬರಬೇಕು, ವಾಸ್ತವ್ಯ ಹೂಡಬೇಕು. ಸ್ನಾರ್ಕೆಲಿಂಗ್ ಸೇರಿದಂತೆ ಇಲ್ಲಿನ ಅಪರೂಪದ ಕ್ರೀಡೆ ಹಾಗೂ ಪ್ರವಾಸಿ ಸೌಲಭ್ಯಗಳನ್ನು ಪಡೆಯಬೇಕು ಎಂದು ಹೇಳಿದರು.
5
+ , – – .../1uG3rLnSY4
6
+ ರಮಣೀಯ ಸೌಂದರ್ಯದ ಜತೆಗೆ ಲಕ್ಷದ್ವೀಪದ ಪ್ರಶಾಂತತೆಯೂ ಮೋಡಿ ಮಾಡುತ್ತದೆ. ನಾನು ಇದೇ ಸಂದರ್ಭದಲ್ಲಿ ದೇಶದ 140 ಕೋಟಿ ಭಾರತೀಯರ ಕಲ್ಯಾಣಕ್ಕೆ ಇನ್ನಷ್ಟು ಶ್ರಮಿಸಬೇಕೆಂಬ ದೃಢ ನಿರ್ಧಾರ ಮೂಡಿತು ಮತ್ತು ಅದರ ಪ್ರತಿಬಿಂಬವೂ ನನ್ನ ಮುಂದೆ ಹಾದು ಹೋಯಿತು ಎಂದು ಹೇಳಿದ್ದಾರೆ.ಸಮುದ್ರ ತಟದಲ್ಲಿ ಬೆಳಗಿನ ನಡಿಗೆಯೂ ಕೂಡ ಅದ್ವಿತೀಯ ಅನುಭವ ನೀಡಿದೆ. ನನ್ನ ಈ ಪ್ರವಾಸ ಎಂದೆಂದಿಗೂ ಮರೆಯಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.
eesanje/url_47_197_2.txt ADDED
@@ -0,0 +1,6 @@
 
 
 
 
 
 
 
1
+ ಅಮೃತ್‍ಸರದಲ್ಲಿ ಪತ್ತೆಯಾಯ್ತು ಡ್ರಗ್ಸ್ ದಂಧೆ
2
+ ಅಮೃತಸರ,ಜ.5- ಪಾಕಿಸ್ತಾನ ಮೂಲದ ಕಳ್ಳಸಾಗಣೆದಾರರು ನಡೆಸುತ್ತಿದ್ದ ಗಡಿಯಾಚೆಗಿನ ಮಾದಕವಸ್ತು ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ದಂಧೆಯನ್ನು ಅಮೃತಸರದಲ್ಲಿ ಭೇದಿಸಲಾಗಿದ್ದು, 2 ಕೆಜಿ ಐಸ್ ಡ್ರಗ್ (ಮೆಥಾಂಫೆಟಮೈನ್) ವಶಪಡಿಸಿಕೊಂಡು ಪ್ರಮುಖ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
3
+ ಬಂಧಿತ ಕಳ್ಳಸಾಗಾಣಿಕೆದಾರನನ್ನು ಅಮೃತಸರದ ಗಗ್ಗರ್ಮಲ್ ಗ್ರಾಮದ ನಿವಾಸಿ ಸಿಮ್ರಂಜಿತ್ ಸಿಂಗ್ ಅಲಿಯಾಸ್ ಸಿಮರ್ ಮಾನ್ ಎಂದು ಗುರುತಿಸಲಾಗಿದೆ. ಐಸ್ ಡ್ರಗ್ಸ್‍ನ ರವಾನೆಯನ್ನು ವಶಪಡಿಸಿಕೊಳ್ಳುವುದರ ಜೊತೆಗೆ, ಪೊಲೀಸ್ ತಂಡಗಳು ಆತನ ಬಳಿಯಿಂದ ಐದು ಜೀವಂತ ಕಾಟ್ರಿಡ್ಜ್‍ಗಳ ಜೊತೆಗೆ ಹೆಚ್ಚು ಅತ್ಯಾಧುನಿಕ 30-ಬೋರ್ ಚೈನೀಸ್ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿವೆ ಎಂದು ಪಂಜಾಬ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
4
+ ಚೀನಾಕ್ಕಿಂತ ಭಾರತದ ಹೂಡಿಕೆ ಗಮನಾರ್ಹ : ವಿಶ್ವಸಂಸ್ಥೆ
5
+ ಬಂಧಿತ ಆರೋಪಿ ಪಾಕಿಸ್ತಾನ ಮೂಲದ ಸ್ಮಗ್ಲರ್‍ಗಳಾದ ಪಠಾಣ್ ಮತ್ತು ಅಮೇರ್ ಅವರೊಂದಿಗೆ ನೇರವಾಗಿ ಸಂಪರ್ಕ ಹೊಂದಿದ್ದು, ಅವರಿಗೆ ಡ್ರೋನ್ ಮೂಲಕ ಐಸ್ ಡ್ರಗಸ್ ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ.
6
+ ಹೆಚ್ಚಿನ ವಿವರಗಳನ್ನು ಹಂಚಿಕೊಂಡ ಅಮೃತಸರದ ಪೊಲೀಸ್ ಕಮಿಷನರ್ ಗುರ್‍ಪ್ರೀತ್ ಸಿಂಗ್ ಭುಲ್ಲರ್ ಅವರು , ರಾಜ್ಯದಲ್ಲಿ ಪಾಕ್ ಮೂಲದ ಕಳ್ಳಸಾಗಾಣಿಕೆದಾರರಿಂದ ಹೆಚ್ಚಿನ ಪ್ರಮಾಣದ ಐಸ್ ಡ್ರಗ್ ಮತ್ತು ಶಸ್ತ್ರಾಸ್ತ್ರಗಳ ಸಾಗಣೆಯ ಪ್ರಯತ್ನದ ಬಗ್ಗೆ ವಿಶ್ವಾಸಾರ್ಹ ಮಾಹಿತಿಯ ನಂತರ, ಪೊಲೀಸ್ ತಂಡಗಳು ಚೆಹರ್ತಾದಲ್ಲಿ ವ್ಯಾಪಕ ಕಾರ್ಯಾಚರಣೆಯನ್ನು ನಡೆಸಿವೆ ಎಂದು ತಿಳಿಸಿದ್ದಾರೆ.
eesanje/url_47_197_3.txt ADDED
@@ -0,0 +1,6 @@
 
 
 
 
 
 
 
1
+ ಕೇಜ್ರಿವಾಲ್, ಸೂರೆನ್ ಬಂಧನ ಸಾಧ್ಯತೆ : ಪವಾರ್
2
+ ಶಿರಡಿ,ಜ.5- ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದರೂ ಅಚ್ಚರಿ ಪಡುವಂತಿಲ್ಲ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ತಿಳಿಸಿದ್ದಾರೆ. ಒಂದೇ ರೀತಿಯ ರಾಜಕೀಯ ದೃಷ್ಟಿಕೋನವನ್ನು ಹೊಂದಿರದವರನ್ನು ನಿರುತ್ಸಾಹಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವೂ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
3
+ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೂ ಕೇಂದ್ರ ತನಿಖಾ ಸಂಸ್ಥೆಯಿಂದ ಸಮನ್ಸ್ ಕಳುಹಿಸಲಾಗಿದೆ ಮತ್ತು ಅವರನ್ನೂ ಬಂಧಿಸಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಕಳೆದ 10 ವರ್ಷಗಳಲ್ಲಿ, ಜನರು ಕೇಜ್ರಿವಾಲ್ ಅವರನ್ನು ಅಧಿಕಾರಕ್ಕೆ ತರಲು ಮತ ಹಾಕಿದ್ದಾರೆ ಎಂದು ಹೇಳಿದ ಪವಾರ್, ಆಮ್ ಆದ್ಮಿ ಪಕ್ಷದ ಮಂತ್ರಿಗಳನ್ನು ಜೈಲಿಗೆ ಹಾಕಲಾಗಿದೆ ಮತ್ತು ಅವರನ್ನು ಬಂಧಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
4
+ ಅಧೀನ ಅಧಿಕಾರಿಗೆ ಕಿರುಕುಳ ನೀಡಿದ ಜಡ್ಜ್ ಅಮಾನತು
5
+ ಅವರಿಗೆ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ದೇಶದ ರಾಜಧಾನಿಯ ಮುಖ್ಯಮಂತ್ರಿ. ದೆಹಲಿಯಲ್ಲಿರುವ ಪ್ರತಿಯೊಬ್ಬರಿಗೂ ಅವರು ಕ್ಲೀನ್ ಇಮೇಜ್ ಹೊಂದಿರುವ ಸರಳ ವ್ಯಕ್ತಿ ಎಂದು ತಿಳಿದಿದ್ದಾರೆ. ಅವರನ್ನು ಬಂಧಿಸಿದರೆ ಆಶ್ಚರ್ಯವೇನಿಲ್ಲ ಎಂದು ಪವಾರ್ ಹೇಳಿದ್ದಾರೆ.
6
+ ಇದರರ್ಥ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಒಂದೇ ರೀತಿಯ ರಾಜಕೀಯ ದೃಷ್ಟಿಕೋನಗಳನ್ನು ಹೊಂದಿರದವರನ್ನು ನಿರುತ್ಸಾಹಗೊಳಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಪವಾರ್ ಆರೋಪಿಸಿದ್ದಾರೆ.
eesanje/url_47_197_4.txt ADDED
@@ -0,0 +1,9 @@
 
 
 
 
 
 
 
 
 
 
1
+ ‘ಜೈ ಓಬಿಸಿ’ ಅಭಿಯಾನ ಆರಂಭಿಸಿದ ಚಂದ್ರಬಾಬು ನಾಯ್ಡು
2
+ ಗುಂಟೂರು,ಜ.5- ತೆಲುಗು ದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರು ತಮ್ಮ ಪಕ್ಷದ ಕೇಂದ್ರ ಕಚೇರಿಯಲ್ಲಿ ಜೈ ಓಬಿಸಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಆರ್ಥಿಕ ಮತ್ತು ರಾಜಕೀಯ ಸಬಲೀಕರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಬದ್ಧರಾಗಿರುವುದರಿಂದ ಜೈ ಓಬಿಸಿ ಅಭಿಯಾನ ಆರಂಭಿಸಲಾಗಿದೆ ಎಂದು ಅವರು ಹೇಳಿದ್ದಾರೆ.
3
+ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಬೆಂಬಲದಿಂದ ತಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಹಾಗೂ ಆಡಳಿತಾರೂಢ ವೈಎಸ್‍ಆರ್ ಕಾಂಗ್ರೆಸ್ ಪಕ್ಷಕ್ಕೆ (ವೈಎಸ್‍ಆರ್‍ಸಿಪಿ) ಹೀನಾಯ ಸೋಲು ಕಾಣಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‍ಆರ್‍ಸಿಪಿ) ಆಡಳಿತದಲ್ಲಿ ಹಿಂದುಳಿದ ವರ್ಗಗಳು (ಬಿಸಿಗಳು) ಎದುರಿಸಿದ ಅನ್ಯಾಯಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
4
+ ಅಧೀನ ಅಧಿಕಾರಿಗೆ ಕಿರುಕುಳ ನೀಡಿದ ಜಡ್ಜ್ ಅಮಾನತು
5
+ ವೈಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರದಿಂದ ವಂಚನೆಗೊಳಗಾದ ಹಿಂದುಳಿದ ವರ್ಗಗಳಿಗೆ ಟಿಡಿಪಿ ಐತಿಹಾಸಿಕ ಕಾರ್ಯಕ್ರಮವನ್ನು ಪ್ರಾರಂಭಿಸಿದೆ ಎಂದು ಬಿಡುಗಡೆಯ ಸಂದರ್ಭದಲ್ಲಿ ನಾಯ್ಡು ಹೇಳಿದರು. ಎಸ್‍ಆರ್‍ಸಿಪಿಗಿಂತ ಟಿಡಿಪಿಯು ಓಬಿಸಿ ಸಮುದಾಯದ ಹೆಚ್ಚಿನ ನಾಯಕರನ್ನು ಹೊಂದಿದೆ ಎಂದು ಅವರು ತಿಳಿಸಿದರು.
6
+ ಟಿಡಿಪಿಯು ಹಿಂದುಳಿದ ವರ್ಗದ ನಾಯಕತ್ವವನ್ನು ಪೋಷಿಸುವ ಕಾರ್ಖಾನೆ ಮತ್ತು ವಿಶ್ವವಿದ್ಯಾಲಯವಾಗಿದೆ ಎಂದು ನಾಯ್ಡು ಒತ್ತಿ ಹೇಳಿದರು. ಜಗನ್ ಸರ್ಕಾರ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಶೇ.34 ರಿಂದ ಶೇ.24 ಕ್ಕೆ ಇಳಿಸಿದ್ದು, ಕಳೆದ ಐದು ವರ್ಷಗಳಲ್ಲಿ ಉದ್ಯೋಗ ನಷ್ಟ ವಾಗಿದೆ ಎಂದು ಆರೋಪಿಸಿದರು.
7
+ ಪ್ರತಿ ವರ್ಷ 75,000 ಕೋಟಿ ಖರ್ಚು ಮಾಡುವುದಾಗಿ ಹೇಳುತ್ತಿದ್ದರೂ ಪ್ರಸ್ತುತ ಆಂಧ್ರ ಸಿಎಂ ಓಬಿಸಿಗಳಿಗೆ ಒಂದು ರೂಪಾಯಿ ಖರ್ಚು ಮಾಡಿಲ್ಲ ಎಂದು ಟಿಡಿಪಿ ಮುಖ್ಯಸ್ಥರು ಟೀಕಿಸಿದರು. ಸಿಎಂ ಜಗನ್ ರೆಡ್ಡಿ ಅವರು ಬಿಸಿಯೂಟಕ್ಕೆ ನೀಡಿದ್ದ ಭರವಸೆಗಳನ್ನು ಅನುಷ್ಠಾನಕ್ಕೆ ತರಲು ವಿಫಲರಾದ ಅವರಿಗೆ ಬಿಸಿ ಅಧಿಕಾರ ಯಾತ್ರೆ ಮಾಡುವ ಹಕ್ಕು ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.
8
+ ಇಡಿ ದಾಳಿ ವೇಳೆ 5ಕೋಟಿ ನಗದು, ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳು ಪತ್ತೆ
9
+ ಅಮರಾವತಿ ಆಂಧ್ರಪ್ರದೇಶದ ಏಕೈಕ ರಾಜಧಾನಿಯಾಗಿದ್ದು, ಅದನ್ನು ಟಿಡಿಪಿ ನಿರ್ಮಿಸಲಿದೆ ಎಂದು ಘೋಷಿಸಿದ ನಾಯ್ಡು, ಮುಖ್ಯಮಂತ್ರಿ ಒಡೆತನದ ಸಾಕ್ಷಿ ಪತ್ರಿಕೆ ಮತ್ತು ಟಿವಿ ಹೊರತುಪಡಿಸಿ ಜಗನ್ ರೆಡ್ಡಿ ಸರ್ಕಾರದಿಂದ ರಾಜ್ಯದಲ್ಲಿ ಯಾರಿಗೂ ಲಾಭವಿಲ್ಲ ಎಂದು ಹೇಳಿದರು.
eesanje/url_47_197_5.txt ADDED
@@ -0,0 +1,8 @@
 
 
 
 
 
 
 
 
 
1
+ ರಾಹುಲ್ ಯಾತ್ರೆಗೆ ಜನ ಬರುತ್ತಾರೆ, ಮತ ಬರಲ್ಲ : ಅಜ್ಮಲ್
2
+ ಬಾರ್ಪೇಟಾ, ಜ.5- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ್ ನ್ಯಾಯ ಯಾತ್ರೆ ಆರಂಭಿಸುತ್ತಾರೆ, ಯಾತ್ರೆಯಲ್ಲಿ ಜನ ಸೇರುತ್ತಾರೆ ಆದರೆ ಜನರು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಮತ ಹಾಕುವುದಿಲ್ಲ ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಪ್ರತಿಪಾದಿಸಿದ್ದಾರೆ.
3
+ ರಾಹುಲ್ ಗಾಂಧಿ ನೆಹರು ಕುಟುಂಬದ ಮಗ, ಅವರು ಯಾವುದೇ ಸ್ಥಳಕ್ಕೆ ಹೋದಾಗ, ಜನರು ಅಲ್ಲಿ ಸೇರುತ್ತಾರೆ ಮತ್ತು ಜನರು ಅವರನ್ನು ಹೀರೋ ಎಂದು ನೋಡುತ್ತಾರೆ. ಆದರೆ ಜನರು ಅವರಿಗೆ ಮತ್ತು ಕಾಂಗ್ರೆಸ್‍ಗೆ ಮತ ಹಾಕುವುದಿಲ್ಲ. ಅದು ಕೆಲಸ ಮಾಡುವುದಿಲ್ಲ ಎಂದು ಅವರು ಅಸ್ಸಾಂನ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರಿಗೆ ಈ ವಿಚಾರ ತಿಳಿಸಿದರು.
4
+ ರಾಹುಲ್ ಗಾಂಧಿ ಜ. 14 ರಂದು ಮಣಿಪುರದಿಂದ ಭಾರತ ನ್ಯಾಯ ಯಾತ್ರೆ ಆರಂಭಿಸಲಿದ್ದಾರೆ. ಬದ್ರುದ್ದೀನ್ ಅಜ್ಮಲ್ ಅವರು, ಈ ಹಿಂದೆ, ಅವರು (ರಾಹುಲ್ ಗಾಂಧಿ) ದೇಶದ ಶೇಕಡಾ 50 ರಷ್ಟು ಪ್ರವಾಸ ಮಾಡಿದ್ದು ಉತ್ತಮವಾಗಿತ್ತು ಆದರೆ ಫಲಿತಾಂಶ ಏನಾಗಿತ್ತು ಎಂದು ನಿಮಗೆಲ್ಲಾ ಗೊತ್ತೆ ಇದೆ ಎಂದಿದ್ದಾರೆ.
5
+ ಮತ್ತೊಂದೆಡೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍ಗೆ ಇಡಿ ನೋಟೀಸ್ ಜಾರಿ ಮಾಡುತ್ತಿರುವ ಕುರಿತು ಮಾತನಾಡಿದ ಅವರು, ಮೋದಿ ಜಿ ಒತ್ತಡವನ್ನು ಸೃಷ್ಟಿಸಲು ಹೊಸ ಮಾರ್ಗವನ್ನು ಹುಡುಕುತ್ತಿಲ್ಲ ಮತ್ತು ಅವರು ಕೇಜ್ರಿವಾಲ ಹಾಗೂ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅವರನ್ನು ಜೈಲಿಗೆ ಹಾಕುತ್ತಾರೆ ಎಂದು ಅವರು ತಿಳಿಸಿದರು.
6
+ ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿದ ಆಯೋಗ
7
+ ಇದು ಇಂಡಿಯಾ ಮೈತ್ರಿಕೂಟಕ್ಕೆ ಅಪಾಯವಾಗಿದೆ. ನೀವು ಸುಮ್ಮನೆ ಕುಳಿತುಕೊಳ್ಳದಿದ್ದರೆ ನಾವು ಎಲ್ಲರನ್ನೂ ಒಂದೊಂದಾಗಿ ಇಡಿಗೆ ಒಪ್ಪಿಸುತ್ತೇವೆ. ಅವರು ಸಾಧ್ಯವಾದಷ್ಟು ಜನರನ್ನು ಹೆದರಿಸಲು ಪ್ರಯತ್ನಿಸುತ್ತಾರೆ ಎಂದು ಅಜ್ಮಲ್ ಹೇಳಿದರು.ಕಾಂಗ್ರೆಸ್‍ನ ಭಾರತ್ ನ್ಯಾಯ್ ಯಾತ್ರೆಯ ಘೋಷಣೆಯ ನಂತರ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಯಾತ್ರೆಯ ಉದ್ದೇಶ ಸಬ್ಕೆ ಲಿಯೇ ನ್ಯಾಯ (ಎಲ್ಲರಿಗೂ ನ್ಯಾಯ) ಎಂದು ಹೇಳಿದ್ದಾರೆ.
8
+ ಈ ಯಾತ್ರೆ ಜನವರಿ 14 ರಂದು ಇಂಫಾಲ್‍ನಿಂದ ಪ್ರಾರಂಭವಾಗಿ ಮಾರ್ಚ್ 20 ರಂದು ಮುಂಬೈನಲ್ಲಿ ಕೊನೆಗೊಳ್ಳಲಿದೆ. ಈ ಯಾತ್ರೆಯು 14 ರಾಜ್ಯಗಳು ಮತ್ತು 85 ಜಿಲ್ಲೆಗಳನ್ನು ಒಳಗೊಂಡಿದೆ. ಇದು ಮಣಿಪುರ, ನಾಗಾಲ್ಯಾಂಡ್ , ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್ ಮುಂತಾದ ರಾಜ್ಯಗಳನ್ನು ಒಳಗೊಂಡಿದೆ. ಒಡಿಶಾ, ಛತ್ತೀಸ್‍ಗಢ, ಉತ್ತರ ಪ್ರದೇಶ, ಸಂಸದ, ರಾಜಸ್ಥಾನ, ಗುಜರಾತ್ ಮತ್ತು ಅಂತಿಮವಾಗಿ ಮಹಾರಾಷ್ಟ್ರ ಆಗಿರಲಿದೆ ಎಂದು ವೇಣುಗೋಪಾಲ್ ತಿಳಿಸಿದ್ದಾರೆ.
eesanje/url_47_197_6.txt ADDED
@@ -0,0 +1,9 @@
 
 
 
 
 
 
 
 
 
 
1
+ ವಾರದಲ್ಲಿ 70 ಗಂಟೆ ಕೆಲಸ ಮಾಡುವ ತಮ್ಮ ನಿಲುವು ಸಮರ್ಥಿಸಿಕೊಂಡ ನಾರಾಯಣಮೂರ್ತಿ
2
+ ನವದೆಹಲಿ,ಜ.5- ವಾರದಲ್ಲಿ 70 ಗಂಟೆಗಳ ಕೆಲಸ ಮಾಡುವಂತೆ ನಾನು ನೀಡಿದ್ದ ಸಲಹೆಯನ್ನು ನನ್ನ ಪಾಶ್ಚಿಮಾತ್ಯ ಸ್ನೇಹಿತರು ಹಾಗೂ ಕೆಲವು ಅನಿವಾಸಿ ಭಾರತೀಯರು ಒಪ್ಪಿದ್ದಾರೆ ಎಂದು ಇನೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ತಿಳಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ದೇಶದ ವಿದ್ಯಾವಂತ ಜನಸಂಖ್ಯೆಯು ಅತ್ಯಂತ ಕಷ್ಟಪಟ್ಟು ಕೆಲಸ ಮಾಡುವ ಅದೃಷ್ಟಕ್ಕೆ ಒಗ್ಗಿ ಹೋಗಿದ್ದಾರೆ ಎಂದು ಹೇಳಿದ್ದಾರೆ.
3
+ ವಾರದಲ್ಲಿ 70 ಗಂಟೆಗಳ ಕಾಲ ಕೆಲಸ ಮಾಡುವಂತೆ ನೀಡಿರುವ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿರುವ ಅವರು, ರೈತರು ಮತ್ತು ಕಾರ್ಖಾನೆಯ ಕೆಲಸಗಾರರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಮತ್ತು ಹೆಚ್ಚಿನ ಜನರು ದೈಹಿಕವಾಗಿ ಬೇಡಿಕೆಯಿರುವ ವೃತ್ತಿಗಳನ್ನು ತೆಗೆದುಕೊಳ್ಳುವುದರಿಂದ ಕಠಿಣ ಪರಿಶ್ರಮವು ಭಾರತದಲ್ಲಿ ಸಾಮಾನ್ಯವಾಗಿದೆ ಎಂದಿದ್ದಾರೆ.
4
+ ಆದ್ದರಿಂದ, ನಮ್ಮಂತಹವರು ಹೆಚ್ಚಿನ ರಿಯಾಯಿತಿಯಲ್ಲಿ ಶಿಕ್ಷಣವನ್ನು ಪಡೆದವರು, ಈ ಎಲ್ಲಾ ಶಿಕ್ಷಣಕ್ಕಾಗಿ ಸರ್ಕಾರದ ಸಹಾಯಧನಕ್ಕೆ ಧನ್ಯವಾದಗಳು, ಭಾರತದ ಕಡಿಮೆ ಅದೃಷ್ಟವಂತ ನಾಗರಿಕರು ಅತ್ಯಂತ ಕಷ್ಟಪಟ್ಟು ಕೆಲಸ ಮಾಡಲು ಋಣಿಯಾಗಿದ್ದೇವೆ ಎಂದು ಅವರು ಹೇಳಿದರು. ಮೂರ್ತಿ ಅವರು ತಮ್ಮ ಸಲಹೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾದ ಹಿನ್ನಡೆಯನ್ನು ಸ್ವೀಕರಿಸಿದರೂ, ಬಹಳಷ್ಟು ಒಳ್ಳೆಯ ಜನರು ಮತ್ತು ಅನಿವಾಸಿ ಭಾರತೀಯರು ನನ್ನೆ ಹೇಳಿಕೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
5
+ ಇಡಿ ದಾಳಿ ವೇಳೆ 5ಕೋಟಿ ನಗದು, ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳು ಪತ್ತೆ
6
+ ನಾನು ಅದನ್ನು ಈ ರೀತಿ ತರ್ಕಬದ್ಧಗೊಳಿಸಿದ್ದೇನೆ. ನನ್ನ ಕ್ಷೇತ್ರದಲ್ಲಿ ನನಗಿಂತ ಹೆಚ್ಚು ಉತ್ತಮವಾಗಿರುವ ಯಾರಾದರೂ ನನ್ನ ಕ್ಷೇತ್ರದಲ್ಲಿ ಅಗತ್ಯವಿಲ್ಲದಿದ್ದರೆ, ನಾನು ಅವರನ್ನು ಗೌರವಿಸುತ್ತೇನೆ, ನಾನು ಅವರನ್ನು ಕರೆಯುತ್ತೇನೆ ಮತ್ತು ನಾನು ಇದನ್ನು ಹೇಳುವುದರಲ್ಲಿ ಎಲ್ಲಿ ತಪ್ಪಾಗಿದೆ ಎಂದು ನೀವು ಭಾವಿಸುತ್ತೀರಿ ಎಂದು ಅವರು ಪ್ರಶ್ನಿಸಿದ್ದಾರೆ.
7
+ ನನ್ನ ಬಹಳಷ್ಟು ಪಾಶ್ಚಿಮಾತ್ಯ ಸ್ನೇಹಿತರು, ಬಹಳಷ್ಟು ಎನ್‍ಆರ್‍ಐಗಳು, ಭಾರತದಲ್ಲಿ ಬಹಳಷ್ಟು ಒಳ್ಳೆಯ ಜನರು ಸಲಹೆಯನ್ನು ಕೇಳಿ ಸಂತೋಪಪಟ್ಟಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ನನ್ನ ಪತ್ನಿ ಸುಧಾಮೂರ್ತಿ ಅವರು ಕುಟಂಬಕ್ಕೆ ವಾರದಲ್ಲಿ 70 ಗಂಟೆ ಕೆಲಸ ಮಾಡುತ್ತಾರೆ ಒಟ್ಟಾರೆ ಅವರು ವಾರದಲ್ಲಿ 90 ಗಂಟೆಗಳಷ್ಟು ಕಾಲ ನಿಯಮಿತವಾಗಿ ಕೆಲಸ ಮಾಡುವುದನ್ನು ರೂಢಿಸಿಕೊಂಡಿದ್ದಾರೆ ಎಂದು ಮೂರ್ತಿ ಹೇಳಿದ್ದಾರೆ.
8
+ ನಾನು ಆರೂವರೆ ದಿನ (ಕೆಲಸಕ್ಕೆ) ಹೋಗುತ್ತಿದ್ದೆ, ಎಲೆಕ್ಟ್ರಾನಿಕ್ಸ್ ಸಿಟಿಯಲ್ಲೂ ಸಹ, ನಾನು ಆರೂವರೆ ದಿನ ಕೆಲಸ ಮಾಡುತ್ತಿದ್ದೆ. ಮತ್ತು ಪ್ರತಿದಿನ ನಾನು ಬೆಳಿಗ್ಗೆ 6 ಗಂಟೆಗೆ ಮನೆ���ಿಂದ ಹೊರಡುತ್ತಿದ್ದೆ. ನಾನು 6.20 ಕ್ಕೆ ಕಚೇರಿ ತಲುಪುತ್ತಿದ್ದ ಮತ್ತು ನಾನು ಸಂಜೆ ಸುಮಾರು 8.15 ಇಲ್ಲವೇ 8.30 ಕ್ಕೆ ಅಲ್ಲಿಂದ ಹೊರಡುತ್ತೇನೆ ಎಂದು ಅವರು ಹೇಳಿದರು.
9
+ ಕಳೆದ ವರ್ಷ ಅಕ್ಟೋಬರ್‍ನಲ್ಲಿ, ಇನೋಸಿಸ್ ಸಂಸ್ಥಾಪಕರು ಭಾರತದಲ್ಲಿ ಯುವಕರಿಗೆ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡುವಂತೆ ಮನವಿ ಮಾಡಿದ್ದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.
eesanje/url_47_197_7.txt ADDED
@@ -0,0 +1,6 @@
 
 
 
 
 
 
 
1
+ ಅಧೀನ ಅಧಿಕಾರಿಗೆ ಕಿರುಕುಳ ನೀಡಿದ ಜಡ್ಜ್ ಅಮಾನತು
2
+ ನೈನಿತಾಲ್, ಜ 5 (ಪಿಟಿಐ) ಅಧೀನ ಅಧಿಕಾರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ರುದ್ರಪ್ರಯಾಗದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾೀಧಿಶರು ಮತ್ತು ಹೈಕೋರ್ಟ್‍ನ ಮಾಜಿ ರಿಜಿಸ್ಟ್ರಾರ್ (ವಿಜಿಲೆನ್ಸ್) ಅನುಜ್ ಕುಮಾರ್ ಸಂಗಲ್ ಅವರನ್ನು ಉತ್ತರಾಖಂಡ ಹೈಕೋರ್ಟ್ ಅಮಾನತುಗೊಳಿಸಿದೆ.
3
+ ಸಂಗಲ್ ಅವರ ನಿವಾಸದಲ್ಲಿ ನೇಮಕಗೊಂಡ ನಾಲ್ಕನೆ ವರ್ಗದ ಉದ್ಯೋಗಿಯನ್ನು ನಿಂದಿಸುವ ಮೂಲಕ ಕಿರುಕುಳ ನೀಡಿದ ಆರೋಪವಿದೆ ಮತ್ತು ಸೇವೆಯಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಲಾಗಿತ್ತು. ಇದು ಅಧಿಕಾರಿ ವಿಷ ಸೇವಿಸಲು ಕಾರಣವಾಯಿತು ಎಂದು ರಿಜಿಸ್ಟ್ರಾರ್ ಜನರಲ್ ಆಶಿಶ್ ನೈತಾನಿ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
4
+ ಇಡಿ ದಾಳಿ ವೇಳೆ 5ಕೋಟಿ ನಗದು, ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳು ಪತ್ತೆ
5
+ ಹೈಕೋರ್ಟ್‍ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನೋಜ್ ತಿವಾರಿ ಅವರ ಸೂಚನೆ ಮೇರೆಗೆ ಹೊರಡಿಸಿರುವ ಆದೇಶದಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರುದ್ರಪ್ರಯಾಗ ಅವರ ವಿರುದ್ಧದ ಆರೋಪಗಳ ಕುರಿತು ಶಿಸ್ತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ. ಉತ್ತರಾಖಂಡ ಸರ್ಕಾರಿ ನೌಕರರ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು 2003ರ ನಿಯಮ 7ರ ಅಡಿಯಲ್ಲಿ ಅವರ ವಿರುದ್ಧ ನಿಯಮಿತ ವಿಚಾರಣೆಯನ್ನು ಪ್ರಾರಂಭಿಸಲಾಗುವುದು.
6
+ ಅಧೀನ ಅಧಿಕಾರಿಗೆ ಕಿರುಕುಳ ನೀಡುವುದು ಮತ್ತು ಅವರನ್ನು ಸೇವೆಯಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕುವುದು ಅಮಾನವೀಯ ನಡವಳಿಕೆ ಮತ್ತು ನ್ಯಾಯಾಂಗ ಅಧಿಕಾರಿಗೆ ಹೊಂದಿಕೆಯಾಗುವುದಿಲ್ಲ ಮತ್ತು ಆದೇಶದ ಪ್ರಕಾರ ಉತ್ತರಾಖಂಡ ಸರ್ಕಾರಿ ನೌಕರರ ನಡವಳಿಕೆ ನಿಯಮಗಳಿಗೆ ವಿರುದ್ಧವಾಗಿದೆ.
eesanje/url_47_197_8.txt ADDED
@@ -0,0 +1,6 @@
 
 
 
 
 
 
 
1
+ ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿದ ಆಯೋಗ
2
+ ನವದೆಹಲಿ, ಜ 5 (ಪಿಟಿಐ) ಮುಂದಿನ ವಾರ ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಭೇಟಿ ನೀಡುವ ಮೂಲಕ ಚುನಾವಣಾ ಆಯೋಗವು (ಇಸಿ) ಲೋಕಸಭೆ ಚುನಾವಣೆಗೆ ರಾಜ್ಯಗಳ ಸಿದ್ಧತೆಯನ್ನು ಪರಿಶೀಲಿಸಲು ಪ್ರಾರಂಭಿಸಲಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದ ಮತ್ತು ಚುನಾವಣಾ ಆಯುಕ್ತರಾದ ಅನುಪ್ ಚಂದ್ರ ಪಾಂಡೆ ಮತ್ತು ಅರುಣ್ ಗೋಯೆಲ್ ಅವರನ್ನೊಳಗೊಂಡ ಆಯೋಗವು ಜ 7 ಮತ್ತು 10 ರ ನಡುವೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಇರಲಿದೆ.
3
+ ಭೇಟಿಗೂ ಮುನ್ನ, ಉಪ ಚುನಾವಣಾ ಆಯುಕ್ತರು ಜ 6 ರಂದು ಎರಡು ರಾಜ್ಯಗಳಲ್ಲಿ ಸಿದ್ಧತೆಗಳ ಬಗ್ಗೆ ಸಂಪೂರ್ಣ ಆಯೋಗಕ್ಕೆ ಮಾಹಿತಿ ನೀಡಲಿದ್ದಾರೆ.ಉಪಚುನಾವಣಾ ಆಯುಕ್ತರು ಬಹುತೇಕ ಎಲ್ಲ ರಾಜ್ಯಗಳಿಗೆ ಭೇಟಿ ನೀಡಿ ಲೋಕಸಭಾ ಚುನಾವಣೆಯ ಸಿದ್ಧತೆಯ ಮೇಲ್ವಿಚಾರಣೆ ನಡೆಸಿದ್ದಾರೆ.
4
+ ಲಕ್ಷ್ಮೀ ಹೆಬ್ಬಾಳ್ಕರ್​​ಗೆ ರಾಮ ಮಂದಿರ ಉದ್ಘಾಟನೆ ಆಮಂತ್ರಣ
5
+ ರಾಜಕೀಯ ಪಕ್ಷಗಳು, ಹಿರಿಯ ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳು ಮತ್ತು ಅದರ ನೆಲದ ಚುನಾವಣಾ ಯಂತ್ರಗಳನ್ನು ಭೇಟಿ ಮಾಡಲು ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗಳಿಗೆ ಮುಂಚಿತವಾಗಿ ರಾಜ್ಯಗಳ ಪ್ರವಾಸ ಮಾಡುವುದು ಚುನಾವಣಾ ಆಯೋಗಕ್ಕೆ ಸಾಮಾನ್ಯವಾಗಿದೆ.
6
+ ಆದಾಗ್ಯೂ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಭೇಟಿ ನೀಡಲಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಇದು ಇತ್ತೀಚೆಗೆ ವಿಧಾನಸಭಾ ಚುನಾವಣೆ ನಡೆದ ರಾಜ್ಯಗಳನ್ನು ಬಿಟ್ಟುಬಿಡಬಹುದು. 2019 ರಲ್ಲಿ, ಲೋಕಸಭೆ ಚುನಾವಣೆಯನ್ನು ಮಾರ್ಚ್ 10 ರಂದು ಘೋಷಿಸಲಾಗಿತ್ತು ಮತ್ತು ಏಪ್ರಿಲ್ 11 ರಿಂದ ಮೇ 19 ರವರೆಗೆ ಏಳು ಹಂತಗಳಲ್ಲಿ ನಡೆಸಲಾಯಿತು. ಮತ ಎಣಿಕೆ ಕಾರ್ಯ ಮೇ 23 ರಂದು ನಡೆಸಲಾಗಿತ್ತು.
eesanje/url_47_197_9.txt ADDED
@@ -0,0 +1,5 @@
 
 
 
 
 
 
1
+ ಇನ್ನು ಜೀವಂತವಾಗಿದೆ ಬಾಲ್ಯ ವಿವಾಹ
2
+ ಥಾಣೆ, ಜ. 5 (ಪಿಟಿಐ) ಹನ್ನೇರಡು ವರ್ಷದ ಬಾಲಕಿಯನ್ನು ಮದುವೆಯಾಗಿ, ಪದೇ ಪದೇ ಅತ್ಯಾಚಾರವೆಸಗಿ ಆಕೆಯನ್ನು ಗರ್ಭಿಣಿಯನ್ನಾಗಿ ಮಾಡಿದ ಆರೋಪದ ಮೇಲೆ 29 ವರ್ಷದ ಯುವಕನ ವಿರುದ್ಧ ನವಿ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
3
+ ದೇಶದಲ್ಲಿ ಕಾನೂನು ಬಾಹಿರವಾದ ಈ ಬಾಲ್ಯವಿವಾಹ ಸುಮಾರು ಆರು ತಿಂಗಳ ಹಿಂದೆ ನಡೆದಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆ ವ್ಯಕ್ತಿ ಪದೇ ಪದೇ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಗರ್ಭವತಿಯನ್ನಾಗಿಸಿದ್ದಾನೆ. ಪುರುಷ ಮತ್ತು ಅಪ್ರಾಪ್ತ ಇಬ್ಬರೂ ಮೂಲತಃ ಮಹಾರಾಷ್ಟ್ರದ ಸತಾರಾ ಜಿಲ್ಲೆಯವರು ಎಂದು ಅವರು ತಿಳಿಸಿದ್ದಾರೆ.
4
+ ಲಕ್ಷ್ಮೀ ಹೆಬ್ಬಾಳ್ಕರ್​​ಗೆ ರಾಮ ಮಂದಿರ ಉದ್ಘಾಟನೆ ಆಮಂತ್ರಣ
5
+ ನಿನ್ನೆ ನಡೆಸಿದ ಸಮೀಕ್ಷೆಯಲ್ಲಿ, ಪನ್ವೇಲ್‍ನ ಸ್ಥಳೀಯ ವೈದ್ಯರಿಗೆ ಬಾಲಕಿ ನಾಲ್ಕು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ), ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಖಂಡೇಶ್ವರ ಪೊಲೀಸ್ ಠಾಣೆಯ ಠಾಣಾಕಾರಿ ತಿಳಿಸಿದ್ದಾರೆ.
eesanje/url_47_198_1.txt ADDED
@@ -0,0 +1,6 @@
 
 
 
 
 
 
 
1
+ 75 ವರ್ಷದ ನಂತರ ಕಾಶ್ಮೀರ ಗಡಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ
2
+ ಶ್ರೀನಗರ, ಜ.4- ಸ್ವಾತಂತ್ರ್ಯ ಭಾರತದ 75 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ಕೆರಾನ್ ವಲಯದ ಗಡಿ ನಿಯಂತ್ರಣ ರೇಖೆಯ ಹಳ್ಳಿಗಳಿಗೆ ಬುಧವಾರ ಮೊದಲ ಬಾರಿಗೆ ವಿದ್ಯುತ್ ನೀಡಲಾಗಿದೆ.ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಕುಪ್ವಾರ ಜಿಲ್ಲೆಯ ಕೆರಾನ್ ಪ್ರದೇಶದ ಕುಂಡಿಯಾನ್ ಮತ್ತು ಪತ್ರೂಗ್ರಾಮಗಳ ನಿವಾಸಿಗಳಿಗೆ 75 ವರ್ಷಗಳಲ್ಲಿ ಮೊದಲ ಬಾರಿಗೆ ವಿದ್ಯುತ್ ದೀಪಗಳು ಬೆಳಗಿದ್ದು, ಇದರಿಂದ ಜನರು ಸಂಭ್ರಮಿಸಿದ್ದಾರೆ.
3
+ ಸಮೃದ್ಧ್ ಸೀಮಾ ಯೋಜನೆ ಅಡಿಯಲ್ಲಿ ಸ್ಥಾಪಿಸಲಾದ ಎರಡು 250-ಕೆವಿ ಉಪ-ಕೇಂದ್ರಗಳನ್ನು ಕಾಶ್ಮೀರದ ವಿಭಾಗೀಯ ಆಯುಕ್ತ ವಿ ಕೆ ಭಿದುರಿ ಅವರು ಉದ್ಘಾಟಿಸಿದ್ದು, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಕೇಂದ್ರ ಸರ್ಕಾರಕ್ಕೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
4
+ ಬಿಜೆಪಿ ಹಿಂದೂಗಳಿಗೆ ಅಪಮಾನ ಮಾಡುತ್ತಿದೆ : ಸಚಿವ ರಾಜಣ್ಣ
5
+ ವಿದ್ಯುತ್ ದೀಪಗಳು ಅವರ ಮನೆಗಳನ್ನು ಬೆಳಗಿಸಿದಂತೆ ಎಲ್ಲರ ಹರ್ಷೋದ್ಗಾರ ಮುಗಿಲು ಮುಟ್ಟಿದೆ. ನಮ್ಮ ಹಳ್ಳಿಗೂ ವಿದ್ಯುತ್ ಸಂಪರ್ಕ ಸಿಗುತ್ತದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ನಾವು ಚಕಿತಗೊಂಡಿದ್ದೇವು. ಸದಾ ಗುಂಡಿನ ಸದ್ದು ಕೇಳುತ್ತ ಬಹುತೇಕ ಸಮಯ ಮಂದ ಬೆಳಕಿನಲ್ಲಿ ನಾವು ವಾಸಿಸುತ್ತಿದ್ದೇವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ನಮಗೂ ನಾಗರಿಕ ಸೇವೆ ಸಿಕ್ಕ ಖುಷಿ ಉಂಟಾಗಿ ಎಂದು ಗ್ರಾಮಸ್ಥರು ಹೇಳಿದ್ದಾರೆ.
6
+ ಕಾಶ್ಮೀರ ವಿದ್ಯುತ್ ಸರಬರಾಜು ಮಂಡಳಿ (ಕೆಪಿಡಿಸಿಎಲ್) ಎಲೆಕ್ಟ್ರಿಕ್ ವಿಭಾಗ, ಕುಪ್ವಾರದಿಂದ ಎರಡು ತಿಂಗಳಲ್ಲಿ ವಿದ್ಯುದ್ದೀಕರಣ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.
eesanje/url_47_198_10.txt ADDED
@@ -0,0 +1,6 @@
 
 
 
 
 
 
 
1
+ ಕಾಂಗ್ರೆಸ್‍ಗೆ ಸೇರ್ಪಡೆಗೊಂಡ ವೈ ಎಸ್ ಶರ್ಮಿಳಾ
2
+ ನವದೆಹಲಿ, ಜ 4 (ಪಿಟಿಐ) ವೈಎಎಸ್‍ಆರ್ ತೆಲಂಗಾಣ ಪಕ್ಷದ ಸಂಸ್ಥಾಪಕಿ ವೈ ಎಸ್ ಶರ್ಮಿಳಾ ಅವರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ತಡರಾತ್ರಿ ರಾಷ್ಟ್ರ ರಾಜಧಾನಿಗೆ ಆಗಮಿಸಿರುವ ಶರ್ಮಿಳಾ ಅವರು ಇಂದು ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಭೇಟಿಯಾಗಿ ನಂತರ ಪಕ್ಷಕ್ಕೆ ಸೇರ್ಪಡೆಗೊಂಡರು.
3
+ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ, ಶರ್ಮಿಳಾ ಅವರು ಕಾಂಗ್ರೆಸ್‍ಗೆ ಸೇರುತ್ತೀರಾ ಎಂದು ಕೇಳಿದಾಗ, ಅವರು ಸುದ್ದಿಗಾರರಿಗೆ ಹೌದು, ಹಾಗೆ ತೋರುತ್ತಿದೆ ಎಂದು ಹೇಳಿದ ಅವರು ನಂತರ ಎಐಸಿಸಿ ಕಚೇರಿಗೆ ತೆರಳಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಹೈದರಾಬಾದ್‍ನಲ್ಲಿ ಮಂಗಳವಾರ ನಡೆದ ಪಕ್ಷದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶರ್ಮಿಳಾ, ನಾನು ಮತ್ತು ಇತರ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್‍ನ ಉನ್ನತ ನಾಯಕರನ್ನು ಭೇಟಿ ಮಾಡಿ ದೆಹಲಿಯಲ್ಲಿ ನಿರ್ಣಾಯಕ ಘೋಷಣೆ ಮಾಡಲಿದ್ದೇವೆ ಎಂದು ಘೋಷಿಸಿದ್ದರು.
4
+ ಶರ್ಮಿಳಾ ಅವರು ಅವಿಭಜಿತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ವೈ ಎಸ್ ರಾಜಶೇಖರ ರೆಡ್ಡಿ ಅವರ ಪುತ್ರಿ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರ ಕಿರಿಯ ಸಹೋದರಿ.ವೈಎಸ್‍ಆರ್‍ಟಿಪಿಯನ್ನು ಕಾಂಗ್ರೆಸ್‍ನೊಂದಿಗೆ ವಿಲೀನಗೊಳಿಸಿದ ನಂತರ ಅವರಿಗೆ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‍ನಲ್ಲಿ ಸ್ಥಾನ ನೀಡಬಹುದು.
5
+ ಪ್ರಾಣಿಗಳ ಕೊಬ್ಬಿನಿಂದ ತಯಾರಾಗುತ್ತೆ ತುಪ್ಪ..!
6
+ ಕೆ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‍ಎಸ್‍ನ ಭ್ರಷ್ಟ ಮತ್ತು ಜನವಿರೋಧಿ ಆಡಳಿತವನ್ನು ಕೊನೆಗೊಳಿಸಲು ತೆಲಂಗಾಣದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಶರ್ಮಿಳಾ ಕಾಂಗ್ರೆಸ್‍ಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದರು.
eesanje/url_47_198_11.txt ADDED
@@ -0,0 +1,6 @@
 
 
 
 
 
 
 
1
+ ಪ್ರಾಣಿಗಳ ಕೊಬ್ಬಿನಿಂದ ತಯಾರಾಗುತ್ತೆ ತುಪ್ಪ..!
2
+ ಥಾಣೆ, ಜ 4 (ಪಿಟಿಐ) ನೀವು ಮಾರುಕಟ್ಟೆಗಳಲ್ಲಿ ಖರೀದಿಸಿ ಬಾಯಿ ಚಪ್ಪರಿಸಿಕೊಂಡು ತಿನ್ನುವ ತುಪ್ಪವನ್ನು ಹೇಗೆ ತಯಾರಿಸುತ್ತಾರೆ ಎಂದು ನಿಮಗೆ ತಿಳಿದಿದೆಯೇ ಇಲ್ಲದಿದ್ದರೆ ಈ ವರದಿ ನೋಡಿ. ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಮುಚ್ಚಿದ ಕಸಾಯಿಖಾನೆಯೊಂದರ ಮೇಲೆ ನಾಗರಿಕ ಅಧಿಕಾರಿಗಳು ದಾಳಿ ನಡೆಸಿ ಪ್ರಾಣಿಗಳ ದೇಹದ ಭಾಗಗಳಿಂದ ತುಪ್ಪ ತಯಾರಿಸುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.
3
+ ಭಿವಂಡಿ ಪಟ್ಟಣದ ಈದ್ಗಾ ರಸ್ತೆಯಲ್ಲಿರುವ ಕಸಾಯಿಖಾನೆ ಮೇಲೆ ದಾಳಿ ನಡೆಸಿದಾಗ ಪ್ರಾಣಿಗಳ ದೇಹದ ಕೊಬ್ಬು ಬಳಸಿ ತುಪ್ಪ ತಯಾರಿಸುತ್ತಿರುವುದು ಬೆಳಕಿಗೆ ಬಂದಿದೆ. ಮಾರುಕಟ್ಟೆಯಲ್ಲಿ ಉತ್ಪನ್ನವನ್ನು ಸರಬರಾಜು ಮಾಡಲು ಪ್ರಾಣಿಗಳ ದೇಹದ ಭಾಗಗಳಿಂದ ತುಪ್ಪವನ್ನು ರಹಸ್ಯವಾಗಿ ಉತ್ಪಾದಿಸುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದು ಭಿವಂಡಿ ನಿಜಾಂಪುರ್ ಮುನ್ಸಿಪಲ್ ಕಾಪೆರ್ರೇಶನ್‍ನ (ಬಿಎನ್‍ಎಂಸಿ) ವಿಪತ್ತು ನಿರ್ವಹಣಾ ಅಧಿಕಾರಿ ಸಾಕಿಬ್ ಕರ್ಭೆ ಪಿಟಿಐಗೆ ತಿಳಿಸಿದ್ದಾರೆ.
4
+ ದ್ವಿತೀಯ ಟೆಸ್ಟ್: ದಕ್ಷಿಣ ಆಫ್ರಿಕಾವನ್ನು 55 ರನ್‌ಗೆ ಆಲೌಟ್ ಮಾಡಿದ ಭಾರತ
5
+ ಅಕ್ರಮವಾಗಿ ಉತ್ಪಾದಿಸಿದ ಹತ್ತು ಟಿನ್ ತುಪ್ಪ, ಆರು ದೊಡ್ಡ ಪಾತ್ರೆಗಳು ಮತ್ತು ಉತ್ಪಾದನಾ ಪ್ರಕ್ರಿಯೆಯಲ್ಲಿ ಬಳಸಲಾದ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಅಧಿಕಾರಿಗಳು ತುಪ್ಪ ಉತ್ಪಾದಕರನ್ನು ಬಂಧಿಸುವ ಮೊದಲು ಕಸಾಯಿಖಾನೆಯಲ್ಲಿದ್ದ ವ್ಯಕ್ತಿಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ಅಧಿಕಾರಿ ತಿಳಿಸಿದ್ದಾರೆ.
6
+ ಪಟ್ಟಣದಲ್ಲಿ ಅಕ್ರಮವಾಗಿ ನಡೆಯುತ್ತಿರುವ ವಿವಿಧ ಕಸಾಯಿಖಾನೆಗಳ ವಿರುದ್ಧ ಬಿಎನ್‍ಎಂಸಿ ಆಯುಕ್ತ ಅಜಯ್ ವೈದ್ಯ ದೂರು ಸ್ವೀಕರಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
eesanje/url_47_198_12.txt ADDED
@@ -0,0 +1,8 @@
 
 
 
 
 
 
 
 
 
1
+ ರಾಮಮಂದಿರಕ್ಕೆ ಬಿಗಿ ಭದ್ರತೆಗೆ ವಿಶೇಷ ಪೊಲೀಸ್ ಪಡೆ ನಿಯೋಜನೆ
2
+ ಲಕ್ನೋ,ಜ.3- ಅಯೋಧ್ಯೆಯ ರಾಮಮಂದಿರದ ಭದ್ರತೆಯ ಉಸ್ತುವಾರಿಯನ್ನು ಉತ್ತರಪ್ರದೇಶ ಪೊಲೀಸರಿಗೆ ವಹಿಸಲಾಗಿದ್ದು, ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ನಂತರವೂ ದೇವಾಲಯದ ಆವರಣದಲ್ಲಿ ವಿಶೇಷ ಪೊಲೀಸ್ ಕಾರ್ಯಪಡೆಯನ್ನು ಸಂಪೂರ್ಣವಾಗಿ ನಿಯೋಜಿಸಲಾಗುತ್ತಿದೆ.
3
+ ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೂ ಮುನ್ನ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ಸಂಕೀರ್ಣದ ಭದ್ರತೆಯ ಜವಾಬ್ದಾರಿಯನ್ನು ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ ಸಂಪೂರ್ಣವಾಗಿ ವಹಿಸಿಕೊಳ್ಳಲಿದೆ.
4
+ ಉತ್ತರಪ್ರದೇಶ ಪೊಲೀಸರ ಈ ವಿಶೇಷ ಕಾರ್ಯಪಡೆಯು ಸಿಆರ್‍ಪಿಎಫ್‍ನಿಂದ ಈ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ. ಇಲ್ಲಿಯವರೆಗೆ ಸುಪ್ರೀಂಕೋರ್ಟ್‍ನ ಸೂಚನೆಗಳ ಮೇರೆಗೆ ಪ್ರದೇಶವನ್ನು ರಕ್ಷಿಸಲಾಗುತ್ತಿತ್ತು.1992ರಲ್ಲಿ ಬಾಬರಿ ಕಟ್ಟಡವನ್ನು ಧ್ವಂಸಗೊಳಿಸಿದ ನಂತರ ಸುಪ್ರೀಂಕೋರ್ಟ್ ಆದೇಶದಂತೆ ರಾಮ ಜನ್ಮಭೂಮಿ ಸ್ಥಳದಲ್ಲಿ ಸಿಆರ್‍ಎಫ್‍ನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
5
+ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಜನವರಿ 22 ರಂದು ನಡೆಯಲಿದೆ. ರಾಮ್‍ಲಲ್ಲಾನ ಪವಿತ್ರೀಕರಣದ ನಂತರ, ಯುಪಿ ವಿಶೇಷ ಭದ್ರತಾ ಪಡೆ (ಎಸ್‍ಎಸ್‍ಎಫ್) ದೇವಾಲಯದಲ್ಲಿ ಸಮಗ್ರ ಭದ್ರತೆಯನ್ನು ಒದಗಿಸಲು ಪ್ರಾರಂಭಿಸುತ್ತದೆ. ವಾಸ್ತವವಾಗಿ ರಾಮಜನ್ಮಭೂಮಿ ಸ್ಥಳದಲ್ಲಿ ಸಿಆರ್‍ಪಿಎಫ್ ಇಲ್ಲಿಯವರೆಗೂ ಭದ್ರತೆಯನ್ನು ಒದಗಿಸುತ್ತಿದೆ. ರಾಮ್‍ಲಲ್ಲಾ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಪಿಎಸಿ ಮತ್ತು ಎಸ್‍ಎಸ್‍ಎಫ್ ಜೊತೆಗೆ ದೇವಾಲಯದ ಸಂಕೀರ್ಣದ ಭದ್ರತೆಯಲ್ಲಿ ನಿಯೋಜನೆಗೊಳ್ಳುವ ನಿರೀಕ್ಷೆಯಿದೆ.
6
+ ಹಿಂದೂ ಕಾರ್ಯಕರ್ತರ ಬಂಧನ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
7
+ ಆದಾಗ್ಯೂ, ಯುಪಿ ವಿಶೇಷ ಕಾರ್ಯಪಡೆಯು ಎಲ್ಲ ರೀತಿಯಲ್ಲೂ ತರಬೇತಿ ಪಡೆದಿದೆ ಮತ್ತು ಹೊಸದಾಗಿ ನಿರ್ಮಿಸಲಾದ ದೇವಾಲಯದ ಸಂಕೀರ್ಣದ ಭದ್ರತೆ ಸೇರಿದಂತೆ ಎಲ್ಲಾ ಭದ್ರತಾ ಕರ್ತವ್ಯಗಳನ್ನು ನಿರ್ವಹಿಸಲು ಸಾಕಷ್ಟು ತರಬೇತಿ ಪಡೆದು ಸಜ್ಜುಗೊಂಡಿದೆ.
8
+ ಜುಲೈ 2005ರಲ್ಲಿ ಸಿಆರ್‍ಪಿಎಫ್‍ನ ಐವರು ಭಯೋತ್ಪಾದಕರನ್ನು ಕೊಲ್ಲುವ ಮೂಲಕ ರಾಮ ಜನ್ಮಭೂಮಿ ಜಾಗದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿದೆ ಎಂಬುವುದು ಉಲ್ಲೇಖನೀಯ.2019ರಲ್ಲಿ ಸುಪ್ರೀಂಕೋರ್ಟ್ ಒಂದು ಶತಮಾನಕ್ಕೂ ಹೆಚ್ಚು ಹಳೆಯ ರಾಮಮಂದಿರ-ಬಾಬರಿ ಮಸೀದಿ ವಿವಾದವನ್ನು ಇತ್ಯರ್ಥಪಡಿಸುವ ಐತಿಹಾಸಿಕ ತೀರ್ಪು ನೀಡಿತ್ತು. ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣವನ್ನು ಸುಪ್ರೀಂಕೋರ್ಟ್ ಬೆಂಬಲಿಸಿತಲ್ಲದೆ ವಿವಾದಿತ ಸ್ಥಳದಲ್ಲೇ ರಾಮಮಂದಿರ ನಿರ್ಮಿಸಲಾಗುವುದು, ಮಸೀದಿ ನಿರ್ಮಾಣಕ್ಕೆ ಸರ್ಕಾರದಿಂದ ಐದು ಎಕರೆ ಪರ್ಯಾಯ ಜಾಗವನ್ನು ನೀಡಲಾಗುವುದು ಎಂದು ತೀರ್ಪು ನೀಡಿತ್ತು.
eesanje/url_47_198_2.txt ADDED
@@ -0,0 +1,7 @@
 
 
 
 
 
 
 
 
1
+ ಜಾಕ್ವೆಲಿನ್ -ಸುಕೇಶ್ ಜತೆಗಿನ ವಾಟ್ಸಾಫ್ ಸಂಭಾಷಣೆ ಬಹಿರಂಗ
2
+ ನವದೆಹಲಿ, ಜ.4- ಇನ್ನೂರು ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಯಾಗಿರುವ ಸುಕೇಶ್ ಚಂದ್ರಶೇಖರ್ ಅವರು ತಮ್ಮ ಮತ್ತು ನಟಿ ಜಾಕ್ವೆಲಿನ್ ಫರ್ನಾಂಡೀಸ್ ನಡುವಿನ ಹಳೆಯ ವಾಟ್ಸಾಪ್ ಸಂಭಾಷಣೆಗಳನ್ನು ಹಂಚಿಕೊಂಡಿದ್ದಾರೆ.
3
+ ತಮ್ಮ ಮತ್ತು ನಟಿ ಜಾಕ್ವೆಲಿನ್ ಫರ್ನಾಂಡೀಸ್ ನಡುವಿನ ಹತ್ತಾರು ಸೋರಿಕೆಯಾದ ವಾಟ್ಸಾಪ್ ಸಂದೇಶಗಳು ನಕಲಿ ಮತ್ತು ಪ್ರಕರಣದ ಆರೋಪಿಯಾಗಿರುವ ನಟಿ ತಮ್ಮ ಚಾಟ್‍ಗಳನ್ನು ಸಂವೇದನಾಶೀಲ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸುಕೇಶ್ ಆರೋಪಿಸಿದ ಕೆಲವು ದಿನಗಳ ನಂತರ ಇದು ಬಂದಿದೆ.
4
+ ನೀವು ಈಗ ನೋಡುತ್ತಿರುವ ಚಾಟ್ 2021 ರಲ್ಲಿ ಆ ದಿನಗಳಲ್ಲಿ ಒಂದಾಗಿದೆ, ಅಲ್ಲಿ ನಾನು ಮತ್ತು ಜಾಕಿ ತಪ್ಪು ತಿಳುವಳಿಕೆಯನ್ನು ಹೊಂದಿದ್ದೆವು ಮತ್ತು ನಂತರ, ಚಾಟ್‍ನಲ್ಲಿ, ಯಾವುದೇ ರೀತಿಯ ತಪ್ಪು ತಿಳುವಳಿಕೆಯನ್ನು ಲೆಕ್ಕಿಸದೆ ಅವಳು ಕ್ಷಮೆ ಮತ್ತು ಅವಳ ಪ್ರೀತಿಯನ್ನು ಕೇಳುತ್ತಿರುವುದನ್ನು ನೀವು ನೋಡಬಹುದು ಎಂದು ವಂಚಕ ಹೇಳಿಕೊಂಡಿದ್ದಾನೆ.
5
+ ಹಮಾಸ್ ಉಗ್ರರು ಎಲ್ಲೇ ಇದ್ದರೂ ಬಿಡಲ್ಲ: ಇಸ್ರೇಲ್ ಘೋಷಣೆ
6
+ ನಾನು ಎಂದೆಂದಿಗೂ ನಿಮ್ಮವನೇ… ಲವ್ ಬೊಟ್ಟಾ ಬೊಮ್ಮ ಎಂದು ಫೆರ್ನಾಂಡಿಸ್ ಬರೆದದ್ದು ಎಂದು ಹೇಳುವ ಕೈಬರಹದ ಕಾರ್ಡ್ ಅನ್ನು ಸಹ ವ್ಯಕ್ತಿ ಹಂಚಿಕೊಂಡಿದ್ದಾರೆ. ಇದು ಕೇವಲ ಟೀಸರ್ ಎಂದು ಅವರು ಹೇಳಿಕೊಂಡಿರುವ ಸುಕೇಶ್ ತಮ್ಮ ಬಳಿ ಇರುವ ನೂರಾರು ಚಾಟ್‍ಗಳು ಮತ್ತು ಧ್ವನಿ ರೆಕಾರ್ಡಿಂಗ್‍ಗಳು, ವೀಡಿಯೊ ಚಾಟ್‍ಗಳು ತನಿಖಾ ಸಂಸ್ಥೆಗೆ ಬಹಿರಂಗಗೊಳ್ಳುತ್ತವೆ ಎಂದು ಹೇಳಿದ್ದಾರೆ.
7
+ 200 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಅನೇಕ ಸತ್ಯಗಳನ್ನು ಮುಚ್ಚಿಟ್ಟಿದ್ದಾರೆ ಎಂದು ಹೇಳಿರುವ ಸುಕೇಶ್, ಈ ಚಾಟ್‍ಗಳು ಮತ್ತು ಕೈಬರಹದ ಕಾರ್ಡ್‍ನ ಸತ್ಯಾಸತ್ಯತೆ ಜಾರಿ ನಿರ್ದೇಶನಾಲಯದಲ್ಲಿ ಸಾಕಷ್ಟು ಲಭ್ಯವಿದೆ ಮತ್ತು ಅವರು ಅದನ್ನು ಪರಿಶೀಲಿಸಿದ್ದಾರೆ ಎಂದು ಹೇಳಿದ್ದಾರೆ.
eesanje/url_47_198_3.txt ADDED
@@ -0,0 +1,7 @@
 
 
 
 
 
 
 
 
1
+ ಕಾಂಗ್ರೆಸ್‍ನ ಆತ್ಮ ಹಿಂದೂ; ಶಿವಸೇನೆ
2
+ ಮುಂಬೈ,ಜ.4- ಕಾಂಗ್ರೆಸ್‍ನ ಆತ್ಮ ಹಿಂದೂ ಎಂದು ಒತ್ತಿಹೇಳಿರುವ ಶಿವಸೇನೆ (ಯುಬಿಟಿ) ಬಣದ ಮುಖಂಡರು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ವಿಶೇಷ ಆಹ್ವಾನ ಪಡೆದಿದ್ದರೆ ಅಯೋಧ್ಯೆಯ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭಕ್ಕೆ ಆ ಪಕ್ಷದ ನಾಯಕರು ಹಾಜರಾಗಬೇಕು ಎಂದು ಕೇಳಿಕೊಂಡಿದೆ.ಉದ್ಧವ್ ಠಾಕ್ರೆ ನೇತೃತ್ವದ ಪಕ್ಷವು ಮಹಾ ವಿಕಾಸ್ ಅಘಾಡಿಯಲ್ಲಿ ಕಾಂಗ್ರೆಸ್‍ನ ಮಿತ್ರಪಕ್ಷವಾಗಿದೆ ಮತ್ತು ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷವಾಗಿದೆ.
3
+ ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಶಿವಸೇನೆ (ಯುಬಿಟಿ) ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ ಮತ್ತು ಆ ಸಮಯದಲ್ಲಿ ಪ್ರಧಾನಿ ಆ ಪಕ್ಷದವರಾಗಿದ್ದರೆ ಬಾಬ್ರಿ ಮಸೀದಿಯನ್ನು ಉರುಳಿಸುತ್ತಿರಲಿಲ್ಲ ಎಂದು ಬರೆದುಕೊಂಡಿದೆ. ಡಿಸೆಂಬರ್ 1992 ರಲ್ಲಿ ಬಾಬ್ರಿ ಮಸೀದಿ ನೆಲಸಮ ಮಾಡಿದಾಗ ಕಾಂಗ್ರೆಸ್ ಪಕ್ಷದ ಪಿ ವಿ ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ದರು.
4
+ ರಾಮ ಮಂದಿರ ಶಂಕುಸ್ಥಾಪನೆ ಸಮಾರಂಭಕ್ಕೆ ಕಾಂಗ್ರೆಸ್‍ಗೆ ಯಾವುದೇ ವಿಶೇಷ ಆಹ್ವಾನ ಬಂದಿದ್ದರೆ ಅದು (ನಾಯಕರು) ಅಯೋಧ್ಯೆಗೆ ಹೋಗಬೇಕು. ಅದರಲ್ಲಿ ತಪ್ಪೇನಿದೆ? ಸಂಪಾದಕೀಯ ಕೇಳಿದೆ.
5
+ ಹಮಾಸ್ ಉಗ್ರರು ಎಲ್ಲೇ ಇದ್ದರೂ ಬಿಡಲ್ಲ: ಇಸ್ರೇಲ್ ಘೋಷಣೆ
6
+ ಜನವರಿ 22 ರಂದು ನಡೆಯಲಿರುವ ಮಹಾಮಸ್ತಕಾಭಿಷೇಕ ಸಮಾರಂಭಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಆಹ್ವಾನಿಸಲಾಗಿದೆ. ಖರ್ಗೆ ಮತ್ತು ಸೋನಿಯಾ ಗಾಂಧಿ ಅವರು ಕಾರ್ಯಕ್ರಮಕ್ಕೆ ಸೂಕ್ತ ಸಮಯದಲ್ಲಿ ಹಾಜರಾಗುವ ಬಗ್ಗೆ ನಿರ್ಧರಿಸುವುದಾಗಿ ಕಾಂಗ್ರೆಸ್ ಶುಕ್ರವಾರ ಹೇಳಿದೆ. ಲೋಕಸಭೆಯ ಕಾಂಗ್ರೆಸ್ ನಾಯಕ ಅೀಧಿರ್ ರಂಜನ್ ಚೌಧರಿ ಅವರನ್ನೂ ಆಹ್ವಾನಿಸಲಾಗಿದೆ. ಕಾಂಗ್ರೆಸ್‍ನ ಆತ್ಮ ಹಿಂದೂ. ಅದರಲ್ಲಿ ಮುಚ್ಚಿಡಲು ಏನೂ ಇಲ್ಲ ಎಂದು ಬರೆದುಕೊಳ್ಳಲಾಗಿದೆ.
7
+ ಆ ಪಕ್ಷ ಹೇಳಿಕೊಂಡಂತೆ ಬಿಜೆಪಿ ಹಿಂದುತ್ವದ ವೀಕ್ಷಕ ಎಂದು ಹೇಳುವುದು ತಪ್ಪು. ಹಿಂದೂ ಸಂಸ್ಕøತಿಯ ಬೆಳವಣಿಗೆಗೆ ಕಾಂಗ್ರೆಸ್ ಸಮಾನ ಕೊಡುಗೆ ನೀಡಿದೆ ಎಂದು ಅದು ಹೇಳಿದೆ. ಕಾಂಗ್ರೆಸ್ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ಎಂದಿಗೂ ವಿರೋಧಿಸಲಿಲ್ಲ. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದರು. ರಾಜೀವ್ ಗಾಂಧಿಯವರ ಸೂಚನೆಯ ಮೇರೆಗೆ ದೂರದರ್ಶನದಲ್ಲಿ ಪ್ರಸಿದ್ಧ ಧಾರಾವಾಹಿ ರಾಮಾಯಣವನ್ನು ಪ್ರಸಾರ ಮಾಡಲಾಯಿತು ಸಂಪಾದಕಿಯದಲ್ಲಿ ಬರೆದುಕೊಳ್ಳಲಾಗಿದೆ.
eesanje/url_47_198_4.txt ADDED
@@ -0,0 +1,7 @@
 
 
 
 
 
 
 
 
1
+ ಬ್ಲಾಕ್‍ಮೇಲೆ ಮಾಡಿದ ಮಾಜಿ ಮಾಡೆಲ್ ಹತ್ಯೆ
2
+ ಗುರುಗ್ರಾಮ್,ಜ.4- ಹರಿಯಾಣದ ಗುರುಗ್ರಾಮ್‍ನಲ್ಲಿ 27 ವರ್ಷದ ಮಹಿಳೆಯೊಬ್ಬರನ್ನು ಹತ್ಯೆಗೈದ ಆರೋಪದ ಪ್ರಕರಣದಲ್ಲಿ ಕನಿಷ್ಠ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಗೀಡಾದ ಮಹಿಳೆಯನ್ನು ಪಂಜಾಬ್‍ನ ಮಾಜಿ ಮಾಡೆಲ್ ದಿವ್ಯಾ ಪಹುಜಾ ಎಂದು ಗುರುತಿಸಲಾಗಿದ್ದು, ಕೊಲೆ ನಡೆದ ಹೋಟೆಲ್‍ನ ಮಾಲೀಕರಾಗಿರುವ ಅಭಿಜೀತ್ ಸಿಂಗ್ ಕೊಲೆ ಆರೋಪಿ ಎಂದು ಹೇಳಲಾಗಿದೆ.
3
+ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳು ಶವವನ್ನು ಹೋಟೆಲ್‍ನಿಂದ ಕಾರಿನವರೆಗೆ ಎಳೆದೊಯ್ದಿರುವುದು ಪತ್ತೆಯಾಗಿದೆ. ದಿವ್ಯಾ (27) ಎಂಬ ಬಾಲಕಿ ಹೊಟೇಲ್ ಮಾಲೀಕ ಅಭಿಜೀತ್ ಎಂಬಾತನ ಜತೆ ಹೋಗಿದ್ದಳು ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ. ಪೊಲೀಸರು ಹೊಟೇಲ್‍ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಪರಾಧ ಬಯಲಾಗಿದೆ ಎಂದು ಎಸ್‍ಪಿ ಮುಖೇಶ್ ಕುಮಾರ್ ಹೇಳಿದ್ದಾರೆ.
4
+ ರಾಮ ಮಂದಿರಕ್ಕೆ ಬಾಂಬ್ ಬೆದರಿಕೆ ಹಾಕಿದ್ದ ಇಬ್ಬರ ಬಂಧನ
5
+ ಪಹುಜಾ ಅವರು ಅಶ್ಲೀಲ ಚಿತ್ರಗಳನ್ನು ಇಟ್ಟುಕೊಡು ಬ್ಲ್ಯಾಕ್‍ಮೇಲ್ ಮಾಡಿ ಹಣ ವಸೂಲಿ ಮಾಡಿದ್ದಾಳೆ ಎಂಬ ಕೋಪದಲ್ಲಿ ಹೋಟೆಲ್ ಮಾಲೀಕರು ಗುಂಡು ಹಾರಿಸಿ ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
6
+ ಪ್ರಮುಖ ಶಂಕಿತ ಅಭಿಜೀತ್ ಸಿಂಗ್ ಮತ್ತು ಇತರ ಇಬ್ಬರು ಸಹಚರರು ಎನ್ನಲಾದ ಹೇಮರಾಜ್ ಮತ್ತು ಓಂಪ್ರಕಾಶ್ ಸೇರಿದಂತೆ ಮೂವರನ್ನು ಗುರುಗ್ರಾಮ್ ಅಪರಾಧ ವಿಭಾಗದ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಆರೋಪಿಗಳನ್ನು ಅಭಿಜೀತ್ ಸಿಂಗ್ (56), ಹೇಮರಾಜ್ (28) ಮತ್ತು ಓಂಪ್ರಕಾಶ್ (23) ಎಂದು ಗುರುತಿಸಲಾಗಿದೆ ಎಂದು ಗುರುಗ್ರಾಮ್ ಪೊಲೀಸರು ತಿಳಿಸಿದ್ದಾರೆ.
7
+ ಪೊಲೀಸ್ ಠಾಣೆ ಸೆಕ್ಟರ್ -14, ಗುರುಗ್ರಾಮ್‍ನಲ್ಲಿ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಅಪರಾಧ ತಂಡವು ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಏತನ್ಮಧ್ಯೆ, ದಿವ್ಯಾ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಅಭಿಜೀತ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
eesanje/url_47_198_5.txt ADDED
@@ -0,0 +1,8 @@
 
 
 
 
 
 
 
 
 
1
+ ರಾಮ ಮಂದಿರಕ್ಕೆ ಬಾಂಬ್ ಬೆದರಿಕೆ ಹಾಕಿದ್ದ ಇಬ್ಬರ ಬಂಧನ
2
+ ಲಖನೌ,ಜ.4- ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಹಾಗೂ ಅಯೋಧ್ಯೆಯ ರಾಮ ಮಂದಿರಕ್ಕೆ ಬಾಂಬ್ ಬೆದರಿಕೆ ಹಾಕಿದ್ದ ಇಬ್ಬರನ್ನು ಬಂಧಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಹಿತಿ ನೀಡಿದ್ದಾರೆ. ಗೊಂಡಾದ ಕತ್ರಾ ನಿವಾಸಿಗಳಾದ ತಾಹರ್ ಸಿಂಗ್ ಮತ್ತು ಓಂ ಪ್ರಕಾಶ್ ಮಿಶ್ರಾ ಅವರನ್ನು ಎಸ್‌ಟಿಎಫ್ ಬಂಧಿಸಿದೆ. ಆರೋಪಿಯಿಂದ ಎರಡು ಮೊಬೈಲ್, ಮೇಲ್ ಐಡಿ, ಎರಡು ವೈ-ಫೈ ರೂಟರ್ ಮತ್ತು ಸಿಸಿಟಿವಿ ಡಿವಿಆರ್ ವಶಪಡಿಸಿಕೊಳ್ಳಲಾಗಿದೆ.
3
+ ಇಬ್ಬರನ್ನು ಪೊಲೀಸ್ ಠಾಣೆ ವಿಭೂತಿ ಬ್ಲಾಕ್ ಗೋಮತಿ ನಗರ ಪ್ರದೇಶದಲ್ಲಿ ಬಂಧಿಸಲಾಗಿದೆ. ಭಾರತೀಯ ಕಿಸಾನ್ ಮಂಚ್ನ ರಾಷ್ಟ್ರೀಯ ಅಧ್ಯಕ್ಷ ದೇವೇಂದ್ರ ತಿವಾರಿ ಅವರಿಗೆ ಬೆದರಿಕೆ ಮೇಲ್ ಬಂದಿದ್ದು, ಅದರಲ್ಲಿ ಈ ಬೆದರಿಕೆಯನ್ನು ಹಾಕಲಾಗಿತ್ತು. ಎಸ್‍ಟಿಎಫ್ ಮುಖ್ಯಸ್ಥ ಅಮಿತಾಬ್ ಯಶ್, ಯೋಗಿ ಆದಿತ್ಯನಾಥ್, ಅಯೋಧ್ಯೆ ರಾಮ ಮಂದಿರಕ್ಕೆ ಬಾಂಬ್ ಹಾಕಿ ಸೋಟಿಸುವುದಾಗಿ ಟ್ವಿಟರ್‍ನಲ್ಲಿ ಈ ಇಬ್ಬರೂ ಬೆದರಿಕೆ ಹಾಕಿದ್ದರು. alamansarikhan608gmail.’ ಮತ್ತು ‘zubairkhanisi199gmail.’ ಎಂಬ ಹೆಸರಿನ ಟ್ವಿಟರ್ ಖಾತೆಯ ಪೋಸ್ಟ್‍ನಲ್ಲಿ ಬೆದರಿಕೆ ಹಾಕಿದ್ದರು.
4
+ ಮ್ಯಾನ್ಮಾರ್ ಸೇನೆಯ ಹೇಲಿಕಾಫ್ಟರ್ ಹೊಡೆದುರುಳಿಸಿದ ಬಂಡುಕೋರರು
5
+ alamansarikhan608gmail.’ ಮತ್ತು ‘zubairkhanisi199gmail.’ ಇಮೇಲ್ ಐಡಿಗಳನ್ನು ಬೆದರಿಕೆ ಪೋಸ್ಟ್‍ಗಳನ್ನು ಕಳುಹಿಸಲು ಬಳಸಲಾಗಿದೆ ಎಂದು ಆರಂಭಿಕ ತನಿಖೆ ಬಹಿರಂಗಪಡಿಸಿದೆ ಎಂದು ಎಎಸ್‌ಟಿಎಫ್ಅಧಿಕಾರಿಗಳು ಹೇಳಿದ್ದಾರೆ. ಇಮೇಲ್ ಐಡಿಗಳ ತಾಂತ್ರಿಕ ವಿಶ್ಲೇಷಣೆಯ ನಂತರ, ತಾಹರ್ ಸಿಂಗ್ ಇಮೇಲ್ ಖಾತೆಗಳನ್ನು ರಚಿಸಿದ್ದಾರೆ ಮತ್ತು ಓಂಪ್ರಕಾಶ್ ಮಿಶ್ರಾ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.
6
+ ಸಿಂಗ್ ಮತ್ತು ಮಿಶ್ರಾ ಇಬ್ಬರೂ ಗೊಂಡಾ ನಿವಾಸಿಗಳಾಗಿದ್ದು, ಅರೆವೈದ್ಯಕೀಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಎಸ್‌ಟಿಎಫ್ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದೆ ಎಂದು ಅದು ಹೇಳಿದೆ. ಸಾಮಾಜಿಕ ಮಾಧ್ಯಮದಲ್ಲಿ ದ್ವೇಷಪೂರಿತ ಕಾಮೆಂಟ್‍ಗಳನ್ನು ಪೋಸ್ಟ್ ಮಾಡುವ ಮೂಲಕ ಬಾಬರಿ ಮಸೀದಿ ಧ್ವಂಸಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಮಕ್ರಾನಿ ಆರೋಪಿಸಿದ್ದಾರೆ.
7
+ ಬಾಬರಿ ಮಸೀದಿ ಧ್ವಂಸಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಹಲವು ಆಕ್ಷೇಪಾರ್ಹ ಪೋಸ್ಟ್‍ಗಳು ಮತ್ತು ಸ್ಕ್ರೀನ್ಶಾಟ್‍ಗಳು ಮಕ್ರಾನಿ ಅವರ ಮೊಬೈಲ್ ಫೋನ್‍ನಿಂದ ಹಂಚಿಕೊಳ್ಳಲ್ಪಟ್ಟಿರುವುದು ಕಂಡುಬಂದಿದೆ ಎಂದು ಹೇಳಿಕೆ ತಿಳಿಸಿದೆ.
8
+ ಎಟಿಎಸ್ ಆರೋಪಿಗಳ ವಿರುದ್ಧ ಸೆಕ್ಷನ್ 153-ಎ (ಧರ್ಮದ ಆಧಾರದ ಮೇಲೆ ಎರಡು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 505 (2) (ಎರಡು ವರ್ಗಗಳ ನಡುವೆ ದ್ವೇ��� ಮತ್ತು ದ್ವೇಷವನ್ನು ಉತ್ತೇಜಿಸುವ ಹೇಳಿಕೆಗಳನ್ನು ನೀಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದೆ.
eesanje/url_47_198_6.txt ADDED
@@ -0,0 +1,6 @@
 
 
 
 
 
 
 
1
+ ಕೇಜ್ರಿವಾಲ್ ನಡೆ ಟೀಕಿಸಿದ ಬಿಜೆಪಿ
2
+ ನವದೆಹಲಿ, ಜ 4 (ಪಿಟಿಐ) ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿಯಿಂದ ಮೂರನೇ ಬಾರಿಗೆ ಸಮನ್ಸ್‍ಗೆ ದೆಹಲಿ ಮುಖ್ಯಮಂತ್ರಿ ತಪ್ಪಿಸಿಕೊಂಡ ನಂತರ ಅರವಿಂದ್ ಕೇಜ್ರಿವಾಲ್ ಅವರು ತನಿಖೆಯಿಂದ ಓಡಿಹೋಗುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
3
+ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿರುವ ಎಎಪಿ ನಾಯಕ ಕೇಜ್ರಿವಾಲ್ ಅವರು, ರಾಜ್ಯಸಭಾ ಚುನಾವಣೆ, ಗಣರಾಜ್ಯೋತ್ಸವದ ಸಿದ್ಧತೆಗಳು ಮತ್ತು ತನಿಖಾ ಸಂಸ್ಥೆಯ ಕೆಲ ವಿಧಾನಗಳ ಅನುಮಾನದಿಂದಾಗಿ ಅದರ ಮುಂದೆ ಹಾಜರಾಗದಿರಲು ಕಾರಣವೆಂದು ಉಲ್ಲೇಖಿಸಿದ್ದಾರೆ.
4
+ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‍ದೇವ ಅವರು, ಆಮ್ ಆದ್ಮಿ ಪಕ್ಷದ ನಾಯಕರು ತಮ್ಮ ಸಿಎಂ ಯಾವಾಗ ಬೇಕಾದರೂ ಬಂಧನಕ್ಕೊಳಗಾಗಬಹುದು ಎಂದು ಗಲಾಟೆ ಮಾಡುತ್ತಿದ್ದಾರೆ. ಅವರು ಕಳ್ಳತನ ಮತ್ತು ಭ್ರಷ್ಟಾಚಾರ ಮಾಡಿದ್ದಾರೆ ಮತ್ತು ಈಗ ಅವರು ಗಲಾಟೆ ಮಾಡಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.
5
+ ಕೇಜ್ರಿಗೆ ನಾಲ್ಕನೆ ಸಮನ್ಸ್ ಜಾರಿ ಸಾಧ್ಯತೆ
6
+ ತನಿಖಾ ಸಂಸ್ಥೆ ನಿಮಗೆ ಸಾಕ್ಷಿ ಹೇಳಲು ಅವಕಾಶ ನೀಡಿದೆ, ಆದರೆ ನೀವು ಓಡಿಹೋಗಿ ಪರಾರಿಯಾದವರಂತೆ ವರ್ತಿಸುತ್ತಿದ್ದೀರಿ ಎಂದು ಸಚ್‍ದೇವ ಆಕ್ರೋಶ ಹೊರ ಹಾಕಿದ್ದಾರೆ.
eesanje/url_47_198_7.txt ADDED
@@ -0,0 +1,6 @@
 
 
 
 
 
 
 
1
+ ಕೇಜ್ರಿಗೆ ನಾಲ್ಕನೆ ಸಮನ್ಸ್ ಜಾರಿ ಸಾಧ್ಯತೆ
2
+ ನವದೆಹಲಿ, ಜ. 4 (ಪಿಟಿಐ) ವಿಚಾರಣೆಗೆ ಹಾಜರಾಗಲು ನಿರಾಕರಿಸಿದ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕಳುಹಿಸಿರುವ ಉತ್ತರವನ್ನು ಜಾರಿ ನಿರ್ದೇಶನಾಲಯ ಪರಿಶೀಲಿಸುತ್ತಿದೆ ಮತ್ತು ಆಪಾದಿತ ಅಬಕಾರಿ ನೀತಿ ಪ್ರಕರಣದಲ್ಲಿ ಮತ್ತೊಮ್ಮೆ ಅವರಿಗೆ ನಾಲ್ಕನೇ ಸಮನ್ಸ್ ನೀಡಬಹುದು ಎಂದು ಮೂಲಗಳು ತಿಳಿಸಿವೆ.
3
+ ಕೇಜ್ರಿವಾಲ್ ಅವರು ಮೂರನೇ ಬಾರಿಗೆ ಇಡಿ ಮುಂದೆ ಹಾಜರಿಗೆ ನಿರಾಕರಿಸಿದರು, ಏಜೆನ್ಸಿಯ ಬಹಿರಂಗಪಡಿಸದಿರುವ ಮತ್ತು ಪ್ರತಿಕ್ರಿಯಿಸದ ವಿಧಾನ ಕಾನೂನಿನ ಪರೀಕ್ಷೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದರು. ಪ್ರಕರಣದ ತನಿಖಾಕಾಧಿರಿಗೆ ಕೇಜ್ರಿವಾಲ್ ಅವರು ಕಳುಹಿಸಿರುವ ಐದು ಪುಟಗಳ ಉತ್ತರವನ್ನು ಇಡಿ ಪ್ರಸ್ತುತ ಪರಿಶೀಲಿಸುತ್ತಿದೆ ಮತ್ತು ಸಮನ್ಸ್ ಅನ್ನು ಅಕ್ರಮ ಎಂದು ಕರೆದ ಆರೋಪವನ್ನು ತಿರಸ್ಕರಿಸಬಹುದು ಎಂದು ಮೂಲಗಳು ತಿಳಿಸಿವೆ.
4
+ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‍ಎ) ನಿಬಂಧನೆಗಳ ಪ್ರಕಾರ ಏಜೆನ್ಸಿಯು ಕೇಜ್ರಿವಾಲ್‍ಗೆ ನಾಲ್ಕನೇ ಸಮನ್ಸ್ ನೀಡಬಹುದು ಎಂದು ಅಂದಾಜಿಸಲಾಗಿದೆ. ಈ ಹಿಂದೆ 2023 ರಲ್ಲಿ ನವೆಂಬರ್ 2 ಮತ್ತು ಡಿಸೆಂಬರ್ 21 ರಂದು ಮತ್ತು ಈ ವರ್ಷದ ಜನವರಿ 3 ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ಜಾರಿ ಮಾಡಿತ್ತು.
5
+ ಹೊಸ ವರ್ಷದ ಸವಾಲುಗಳನ್ನು ಎದುರಿಸಲು ಭಾರತ ಶಕ್ತವಾಗಿದೆ: ಜೈಶಂಕರ್
6
+ ಎಎಪಿ ನಾಯಕ ಅತಿಶಿ ಮತ್ತು ಇತರ ಕೆಲವು ಪಕ್ಷದ ಮುಖಂಡರು ಎಕ್ಸ್ ನಲ್ಲಿ ಕೇಜ್ರಿವಾಲ್ ಅವರ ನಿವಾಸದ ಮೇಲೆ ಇಡಿ ದಾಳಿ ನಡೆಸಿ ಅವರನ್ನು ಬಂಧಿಸಬಹುದು ಎಂದು ಪೋಸ್ಟ್ ಮಾಡಿದ್ದಾರೆ. ಮದ್ಯದ ವ್ಯಾಪಾರಿಗಳಿಗೆ ಪರವಾನಗಿ ನೀಡಲು ದೆಹಲಿ ಸರ್ಕಾರದ 2021-22 ರ ಅಬಕಾರಿ ನೀತಿಯು ಕಾರ್ಟೆಲೈಸೇಶನ್‍ಗೆ ಅವಕಾಶ ಮಾಡಿಕೊಟ್ಟಿದೆ ಮತ್ತು ಅದಕ್ಕಾಗಿ ಲಂಚವನ್ನು ಪಾವತಿಸಿದ ಕೆಲವು ಡೀಲರ್‍ಗಳಿಗೆ ಒಲವು ನೀಡಿದೆ ಎಂದು ಆರೋಪಿಸಲಾಗಿದೆ, ಇದನ್ನು ಎಎಪಿ ಪದೇ ಪದೇ ನಿರಾಕರಿಸಿದೆ.